📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?

    ಎಎಪಿ ರಾಷ್ಟ್ರೀಯ ಪಕ್ಷವಾಗಿ ಅತ್ಯಂತ ವೇಗವಾಗಿ ಬೆಳೆದು ಈಗ ಅಷ್ಟೇ ವೇಗವಾಗಿ ಕುಸಿಯುವತ್ತ ಸಾಗುತ್ತಿದೆ. ಜನಸಾಮಾನ್ಯರಿಗೆ ಯಾವ ಸಂಸದನು ಯಾವುದೇ ಪಕ್ಷಕ್ಕೆ ಹೋದರೂ, ಯಾರಿಗೆ ಕೈ ಕೊಟ್ಟರೂ, ಯಾವುದೇ ಪಕ್ಷಕ್ಕೆ ದ್ರೋಹ ಮಾಡಿದರೂ ಅದರಿಂದ ಯಾವುದೇ ನಷ್ಟವಿರುವುದಿಲ್ಲ. ಅದವರಿಗೆ ಇವತ್ತಿನ ದಿನ ಕೇವಲ ಒಂದು ಮನೋರಂಜನೆಯ ವಿಷಯವಾಗಿದೆ. ಯಾರು ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಸೀರಿಯಸ್ ಆಗಿ ತೆಗೆದುಕೊಳ್ಳುವ ಕೆಲವು ವಿಚಾರಗಳಿವೆ. ಅದರ ಬಗ್ಗೆ ಜನರು ಯೋಚನೆಯನ್ನು ಮಾಡುವುದಿಲ್ಲ. ಜನರ ಊಹೆಗೂ ನಿಲುಕದ ವಿಚಾರವದು.  ಕಾಣದ ಕೈಅದನ್ನು ಡಿಸೈಡ್ ಮಾಡುತ್ತದೆ. ಆ ಕಾರಣದ ಕೈ ಮಾಧ್ಯಮವನ್ನೂ ಆಳುತ್ತಿದೆ ಅನ್ನುವುದು ದುರ್ದೈವದ ವಿಚಾರ. ಅವರು ಒಂದೇ ತರಹದ ವಿಚಾರದಲ್ಲೂ, ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೆ ಆಯ್ಕೆ ಮಾಡಿಕೊಳ್ಳುವಂತೆ ಮಾಡುವುದೇ ಆ ಕಾಣದ ಕೈ. ಆ ಕಾಣದ ಕೈ, ದೇಶವನ್ನೂ ಆಳುತ್ತಿದೆಯಾ?

    ಅಮ್ಮಾದ್ಮಿ ಪಕ್ಷದ ರಾಘವ್ ಚಡ್ಡ ಸೇರಿದಂತೆ ಏಳು ಸಂಸದರು ಅಧಿಕೃತವಾಗಿ ಬಿಜೆಪಿಯ ಪಡಸಾಲೆಗೆ ಬಂದು ಸೇರಿದ್ದಾರೆ. ರಾಜಕೀಯವಾಗಿ ಇದೊಂದು ಬಹುದೊಡ್ಡ ಸಕ್ಸಸ್ ಬಿಜೆಪಿಗೆ. ಅದರಲ್ಲೂ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕೊನೆಯ ಹಂತದ ಚುನಾವಣೆ ಮುಂದಿನ ವಾರದಲ್ಲಿ ನಡೆಯಲಿದೆ. ಈ ರಾಜಕೀಯ ಬದಲಾವಣೆಯು ವೆಸ್ಟ್ ಬಂಗಾಲದ ಚುನಾವಣೆಯ ಮೇಲೂ ಸ್ವಲ್ಪಮಟ್ಟಿಗೆ ಪರಿಣಾಮ ಬೀರಲಿದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.

    ಕಳೆದ ಒಂದು ವರ್ಷದಿಂದ ಅಮ್ಮಾದ್ಮಿ ಪಕ್ಷವು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ. ಅರವಿಂದ ಕೇಜ್ರಿವಾಲ್ ಸ್ವತಹ ಜೈಲಿಗೆ ಹೋಗಿ ಬಂದಿದ್ದಾರೆ. ಆ ಪಕ್ಷದ ಪ್ರಮುಖರು ಸಾಲಾಗಿ ಜೈಲಿಗೆ ಹೋಗಿ ಬಂದರು. ಒಟ್ಟಿನಲ್ಲಿ ಸತತ ಹಿನ್ನಡೆಯು ಆಗುತ್ತಿದೆ ಆ ಪಕ್ಷಕ್ಕೆ.

    ನೂರಕ್ಕೆ ನೂರರಷ್ಟು ಈ ಎಲ್ಲಾ ಹಿನ್ನಡೆಯು, ಆ ಪಕ್ಷದ ನಾಯಕರ ದಡ್ಡತನದಿಂದ ಎಷ್ಟಾಗುತ್ತಿದೆಯೋ, ಅಷ್ಟೇ ಪ್ರಮಾಣದಲ್ಲಿ ಕೇಂದ್ರ ಸರ್ಕಾರದ ಆಡಳಿತ ದುರುಪಯೋಗದ ಕಾರಣದಿಂದಲೂ ಆಗುತ್ತಿದೆ. ಇಂತಹ ವಿಚಾರದಲ್ಲಿ ರಾಷ್ಟ್ರದ ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಿತ್ತು. ಆದರೆ ಪ್ರತಿಪಕ್ಷಗಳು ತಮ್ಮ ತಮ್ಮಲ್ಲಿಯೇ ಕಚ್ಚಾಡಿಕೊಳ್ಳುತ್ತಿವೆ. ಪ್ರತಿಪಕ್ಷದೊಳಗಿನ ಈ ಭಿನ್ನತೆಯು, ಆಡಳಿತ ಪಕ್ಷದ ಬಲಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳನ್ನ ಜೊತೆಗೆ ಕರೆದೊಯ್ಯುವ ಕೆಲಸ ಮಾಡಬೇಕಿದ್ದ ಕಾಂಗ್ರೆಸ್ ಕೂಡ ಇಲ್ಲಿ ತರಹೇವಾರಿಯ ತಪ್ಪುಗಳನ್ನು ಮಾಡುವ ಮೂಲಕ ಬಿಜೆಪಿಯನ್ನು ಇನ್ನಷ್ಟು ಬಲಪಡಿಸುತ್ತಿವೆ. ಕಾಂಗ್ರೆಸ್ ಹಂತ ಹಂತವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕಠಿಣ ನಿಲುವು ತಾಳುವುದರಲ್ಲಿ ವಿಫಲವಾಗುತ್ತಿರುವ ಕಾಂಗ್ರೆಸ್ ಎಲ್ಲಾ ಕಡೆಯೂ ತೇಪೆ ಹಾಕಿಕೊಂಡೆ ಹೋಗುತ್ತಿರುವುದ್ರಿಂದಾಗಿ ದುರ್ಬಲಗೊಳ್ಳುತ್ತಿದೆ.

    Also Read  ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 

    ಒಟ್ಟಾರೆಯಾಗಿ ರಾಷ್ಟ್ರದ ಬಹುತೇಕ ಕಡೆ ಬಿಜೆಪಿಯು ಬಲಿಷ್ಠವಾಗುತ್ತಾ ಸಾಗುತ್ತಿದ್ದರೆ, ಪ್ರತಿಪಕ್ಷಗಳು ಬಲ ಕಳೆದುಕೊಳ್ಳುತ್ತಾ ಸಾಗುತ್ತಿದೆ. ಈಗ ಅಮ್ಮಾದ್ಮಿ ಪಕ್ಷದ ಏಳು ಸಂಸದರು ಅಧಿಕೃತವಾಗಿ ಇಂದು ಬಿಜೆಪಿಯ ಪಡಸಾಲೆಗೆ ನಡೆದು ಬಂದಿದ್ದಾರೆ. ಏಳು ಜನರ ಖಾಲಿ ಕುರ್ಚಿಯ ಕಾರಣದಿಂದಾಗಿ, ಪಕ್ಷದ ಸಂಸದರ ಸಂಖ್ಯೆ ಈಗ  ಮೂರಕ್ಕೆ ಕುಸಿದಿದೆ. ಬಿಜೆಪಿಯ ಸಂಸದರ ಸಂಖ್ಯೆ ಏರಿಕೆಯಾಗಿದೆ.

    ಇದು ಬಲದ ವಿಚಾರವೊ, ಎಎಪಿ ಯ ದೌರ್ಬಲ್ಯದ ವಿಚಾರವೋ ಅಲ್ಲ. ಭಾರತದ ದೌರ್ಬಲ್ಯದ ವಿಚಾರ. ಪ್ರಜಾತಂತ್ರದ ದೌರ್ಬಲ್ಯದ ವಿಚಾರ. ನಮ್ಮ ಕಾನೂನು, ಸಂವಿಧಾನವನ್ನು ಅಣಕ ಮಾಡುತ್ತಿರುವ ಕೆಟ್ಟ ರಾಜಕಾರಣದ ವಿಚಾರ. ಇಂತವುಗಳನ್ನು ನೀರೆರೆದು ಪೂಶಿಸುವುದು ಎಷ್ಟರ ಮಟ್ಟಿಗೆ ಸರಿ?

    ಸಂಸದರು ಒಂದು ಪಕ್ಷದ ಲೇಬಲ್ಲಿನಲ್ಲಿ ಆಯ್ಕೆಯಾದ ನಂತರ ಆ ಒಂದು ಪಕ್ಷಕ್ಕೆ ಅವರು ನಿಷ್ಠರಾಗಿರಲ್ಲ ಅಂದ್ರೆ, ಅವರು ದೇಶದ ಜನರಿಗೆ ಎಷ್ಟು ನಿಷ್ಠರಾಗಿರುತ್ತಾರೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಎಲ್ಲವೂ ಕಾನೂನಿನ ವ್ಯಾಪ್ತಿಗೆ ಬರೋದಿಲ್ಲ ನಿಜ, ಆದ್ರೆ ನೈತಿಕತೆಯ ವ್ಯಾಪ್ತಿಗೆ ಬರಬೇಕು ತಾನೆ? ಈಗ ಪಕ್ಷ ತೊರೆದು ಹೋಗಿರುವ ಏಳು ಸಂಸದರಿಗೂ ಆ ನೈತಿಕತೆ ಇಲ್ಲ ಅನ್ನುವುದನ್ನು ಇದು ಎತ್ತಿ ತೋರಿಸುತ್ತಿದೆ. ಅಂತಹ ನೈತಿಕತೆ ಇಲ್ಲದ ಸಂಸದರನ್ನು ಬಿಜೆಪಿ ಯಂತಹ ಬಲಿಷ್ಠ ರಾಷ್ಟ್ರೀಯ ಪಕ್ಷವು, ತನ್ನ ಪಕ್ಷದ ತೆಕ್ಕೆಗೆ ಹೇಗೆ ತೆಗೆದುಕೊಳ್ಳುತ್ತದೆ? ಇದೆಲ್ಲವುದಕ್ಕೂ ಆ ಪಕ್ಷವು ಮುಂದಿನ ದಿನದಲ್ಲಿ ಉತ್ತರ ಕೊಡಬೇಕಾದಂತಹ ಸ್ಥಿತಿಗೆ ಬರುತ್ತದೆ. ಆದರೆ, ದೇಶದ ಮಾಧ್ಯಮಗಳು ಏನು ಮಾಡುತ್ತಿವೆ? ಯಾವ ಆಂಗಲ್ ನಲ್ಲಿ ಚರ್ಚೆಯಾಗಬೇಕಿತ್ತೋ, ಯಾವ ಆಂಗಲ್ ನಲ್ಲಿ ವಿಶ್ಲೇಷಣೆಗೆ ಒಳಪಡಬೇಕಿತ್ತೋ ಅದ್ಯಾವುದೂ ಆಗುತ್ತಿಲ್ಲ. ರಾಘವ್ ಚಡ್ಡ ಇರಲಿ ಇತರ ಪಕ್ಷ ಬದಲಿಸಿದ ಸಂಸದರಿರಲಿ, ಅವರು ಪ್ರತಿನಿಧಿಸಿದ ಪಕ್ಷ ಇಷ್ಟವಾಗಿಲ್ಲ ಅಂದರೆ, ಯಾವ ಮುಲಾಜೂ ಇಲ್ಲದೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಅಥವಾ ಬೇರೆ ಪಕ್ಷದ ಜೊತೆ ಕೈಜೋಡಿಸಿ ಮತ್ತೊಮ್ಮೆ ಸಂಸತ್ತಿಗೆ ಆಯ್ಕೆಯಾಗಿ ಹೋಗಬಹುದಿತ್ತು. ಅದು ರಾಜಮಾರ್ಗವೂ ಹೌದು. ನೈತಿಕ ಮಾರ್ಗವೂ ಹೌದು. ಆದರೆ ರಾಘವ್ ಚಡ್ಡಾ ರಂತಹ ಯುವ ಸಂಸದರು, ಆಯ್ಕೆ ಮಾಡಿಕೊಂಡಂತಹ ಮಾರ್ಗ ರಾಷ್ಟ್ರಕ್ಕೆ ಯಾವ ಸಂದೇಶವನ್ನು ನೀಡುತ್ತದೆ?

    Also Read  ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …

    ನೋ ಡೌಟ್ ರಾಘವ್ ಚಡ್ಡ ಹಾಗೂ ಇತರ ಸಂಸದರು ಬಿಜೆಪಿ ತೆಕ್ಕೆಗೆ ಹೋಗಲು ಯಾವುದೇ ಕಾನೂನಿನ ಅಡೆತಡೆ ಇಲ್ಲ. ಅದಕ್ಕೆ ಬೇಕಾದಂತಹ ಎಲ್ಲಾ ನಿಯಮಗಳು ಅವರ ಪರವಾಗಿದೆ. ಹಾಗಿರುವಾಗ ಅವರು ಪಕ್ಷ ಬದಲಾವಣೆ ಮಾಡುವುದು ತಪ್ಪೇ?

    ಏನೇ ಹೇಳಲಿ, ಒಂದು ಸಂಸದನನ್ನು ಜನರು ಆಯ್ಕೆ ಮಾಡಿರುತ್ತಾರೆ, ಒಂದು ಪಕ್ಷವು ಅವರಿಗೆ ಸ್ಪರ್ಧೆ ಮಾಡಲು ತನ್ನ ವೇದಿಕೆಯನ್ನು ನೀಡಿರುತ್ತದೆ, ಅವರ ಗೆಲುವಿಗಾಗಿ ಒಂದು ಪಕ್ಷದ ಸಾವಿರಾರು ಕಾರ್ಯಕರ್ತರು ಹತ್ತಾರು, ನಾಯಕರುಗಳು ಹಗಲಿರುಳು ಆ ವ್ಯಕ್ತಿಯ ಗೆಲುವಿಗಾಗಿ ಶ್ರಮ ಪಟ್ಟಿರುತ್ತಾರೆ. ಹಾಗಿರುವಾಗ ಅಂತಹ ಸಂಸದ ಅಥವಾ ಯಾವುದೇ ಜನಪ್ರತಿನಿಧಿ ಹೇಗೆ ತನ್ನಿಷ್ಟದಂತೆ ನಡೆದುಕೊಳ್ಳಲು ಸಾಧ್ಯ? ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿದ್ದರೆ ಆತನಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸ್ವಲ್ಪ ಮಟ್ಟಿಗೆ ಜಾಸ್ತಿ ಇದೆ. ಆದ್ರೂ ಆತನ ಗೆಲುವಿಗಾಗಿ ಸಾಕಷ್ಟು ಜನರು ಬೆವರು ಸುರಿಸಿರುತ್ತಾರೆ. ಇದೆಲ್ಲವೂ ಆ ಜನಪ್ರತಿನಿಧಿ ಮನದಲ್ಲಿರಬೇಕು. ಅದಿದ್ದರೆ ಇವತ್ತು ರಾಘವ ಚಡ್ದಾನಂತವರು ನೇರವಾಗಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಮಗ್ಗಲು ಬದಲಾಯಿಸುತ್ತಿರಲಿಲ್ಲ. ಬದಲಿಗೆ ತಮ್ಮ ಸದಸ್ಯತ್ವಕ್ಕೆ  ರಾಜೀನಾಮೆ  ನೀಡಿ ಮತ್ತೊಂದು ಚುನಾವಣೆಯನ್ನು ಎದುರಿಸಿ ಸಂಸತ್ತಿಗೆ ತಲೆಯೆತ್ತಿ ಬರುತ್ತಿದ್ದರು.

    ರಾಘವ ಚಡ್ಡ ಕಳೆದ ಕೆಲವು ದಿನಗಳಿಂದ ಸಮಾಜದ ಮೇಲೆ ವಿಪರೀತ ಕಾಳಜಿ ಇದ್ದವರಂತೆ, ಸಂಸತ್ತಿನಲ್ಲಿ ಅನೇಕ ಶ್ರೀಸಾಮಾನ್ಯರ ಪರವಾದ ವಿಚಾರವಾಗಿ ಪ್ರಶ್ನೆಗಳನ್ನು ಎತ್ತುವ ಮೂಲಕ ಮತ್ತು ಅದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುವುದರ ಮೂಲಕ ಜನಸಾಮಾನ್ಯರಿಂದ ಶಹಬ್ಬಾಸ್ ಪಡೆದಿದ್ದರು. ಆ ವಿಚಾರದ ಹಿಂದೆ ಪಕ್ಷ ಬದಲಾವಣೆಯ ಲೆಕ್ಕಾಚಾರವಿತ್ತು ಅನ್ನುವುದು ಜನಸಾಮಾನ್ಯರಿಗೆ ಗೊತ್ತಾಗಿದ್ದು ಈಗಲೇ ಆದರೂ, ರಾಜಕೀಯ ವಿಶ್ಲೇಷಕರಿಗೆ ಅಂತದೊಂದು ಅನುಮಾನ ಅವತ್ತೆ ಬಂದಿತ್ತು. ಜನಸಾಮಾನ್ಯರ ಬೆಂಬಲ ಇರಲಿ ಎಂಬ ಕಾರಣಕ್ಕೆ, ತಮ್ಮ ಅನೈತಿಕತೆ ಮುಚ್ಚಿ ಹೋಗಲಿ ಎಂಬ ಕಾರಣಕ್ಕೆ ಈ ರೀತಿಯ ಚಾಣಕ್ಯ ನಡೆ ರಾಜೀವ್ ಚಡ್ಡಾ ತೋರಿಸಿದ್ದರಾ ಎಂಬುದು ಈಗ ಚರ್ಚಿತವಾಗುತ್ತಿರುವ ವಿಚಾರ.

    ಅದೇನೇ ಇರಲಿ, ಈಗ ರಾಜೀವ್ ಚಡ್ಡ ಸೇರಿದಂತೆ ಹರ್ಭಜನ್ ಸಿಂಗ್,ರಾಜೇಂದ್ರ ಗುಪ್ತ,ವಿಕ್ರಂ ಸಾನ್ವಿ, ಸ್ವಾತಿ ಮುನಿವಾಲಾ, ಅಶೋಕ್ ಮಿತ್ತಲ್ ಹಾಗೂ ಸಂದೀಪ್ ಪಾಟಕ್ ಈ ಎಲ್ಲಾ ರಾಜ್ಯಸಭಾ ಸದಸ್ಯರು ಬಿಜೆಪಿಯನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ. ರಾಜ್ಯಸಭಾ ಸಭಾಪತಿಗಳಾದ ಪಿ ಬಿ ರಾಧಾಕೃಷ್ಣನ್ ರವರಲ್ಲಿ ಇವರು ಲಿಖಿತವಾಗಿ ಮನವಿಯನ್ನು ಮಾಡಿದ್ದಾರೆ.

    Also Read  ತಿರುಪತಿಗೆ ಹೋದ ಗಂಡ... ಗೋವಾಗೆ ಹೋದ ಯುವಕ...! ಮನೆಗೆ ಬಂದದ್ದು ಶವವಾಗಿ! ಪ್ರವಾಸವೇ ಭಯ ಹುಟ್ಟಿಸುತ್ತಿದೆಯೇ?

    ಅಮ್ಮಾದ್ಮಿ ಪಕ್ಷ,ಸಮಾಜಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದೆಯೋ ಅಥವಾ ಇಲ್ಲವೋ ಅದು ಬೇರೆ ಪ್ರಶ್ನೆ. ಆ ಪಕ್ಷದ ನಾಯಕರಿಂದ ಅವಮಾನಕ್ಕೆ ಒಳಗಾದ ಕಾರಣ ಈ ಸದಸ್ಯರುಗಳು ಪಕ್ಷ ಬದಲಾವಣೆ ಮಾಡುವ ತೀರ್ಮಾನ ಮಾಡಿದರು ಅನ್ನುವುದೂ ಓಕೆ. ಆದರೆ ಇಲ್ಲಿ ಎಲ್ಲಾ ಕಡೆಯೂ ಒಂದು ನೈತಿಕ ಮಾರ್ಗ ಅನ್ನೋದು ಇರಬೇಕಾಗುತ್ತದೆ. ಅವೆಲ್ಲವೂ ಕಾನೂನು ನಿಯಮಗಳ ಅಡಿಯಲ್ಲಿ ಸಾಗದು. ರಾಘವ್ ಚಡ್ಡಾ ಇರಲಿ ಅಥವಾ ಇತರೆ ಆರು ಜನ ಸಂಸದರಿರಲಿ ಅವರಿಗೆ ಈಗಿರುವ ಸ್ಥಾನಮಾನ ಬೇರೆ ಪಕ್ಷದಲ್ಲಿದ್ದರೆ ಸಿಗುತ್ತಿತ್ತಾ? ಸಂಶಯವೇ ಇದೆ. ಬೇರೆ ಪಕ್ಷದಲ್ಲಿ ಅವರು ಕಾಯಬೇಕಾಗಿ ಬರುತ್ತಿತ್ತೇನೋ. ಹಾಗಿರುವಾಗ ಅಮ್ಮಾ ದ್ಮಿ ಯ ಮೂಲಕ ಬಹಳ ಈಸಿಯಾಗಿ ಗೌರವಯುತ ಸ್ಥಾನವನ್ನು  ಗಿಟ್ಟಿಸಿಕೊಂಡು ಈಗ ಸೇಫ್ ಜೋನನ್ನು ಹುಡುಕಿಕೊಳ್ಳುವುದು ತಪ್ಪಲ್ಲ. ಹುಡುಕಿಕೊಂಡ ರೀತಿಯ ಬಗ್ಗೆ ಬೇಸರವಿದೆ. ಬಹುಷ್ಯಹ ರಾಘವ ಚಡ್ಡ, ರಾಜಿನಾಮೆಯನ್ನು ಕೊಟ್ಟು ಬಿಜೆಪಿ ಪಡಸಾಲೆಗೆ ನಡೆದು ಹೋಗಿದ್ದರೆ, ರಿಯಲಿ ಆ ವ್ಯಕ್ತಿ ಹೀರೋ ಆಗುತ್ತಿದ್ದರು. ಆ ಧೈರ್ಯವೂ ಅವರಲ್ಲಿ ಇಲ್ವಾ ಎಂಬ ಅನುಮಾನಕ್ಕೆ ಇವತ್ತು ಕಾರಣವಾಗಿದೆ.  ನಿಜವಾದ ಹೀರೋ ರಾಘವ್ ಚಡ್ಡ  ಅಲ್ಲ ಎಂಬುದಕ್ಕೆ ಅವರ ಈ ಬಣ್ಣ ಬದಲಾಯಿಸುವಿಕೆಯೇ ಸಾಕ್ಷಿ.

    ಕಳೆದ ನಾಲ್ಕೈದು ತಿಂಗಳಿನಿಂದ ಸಂಸತ್ತಿನ ಒಳಗೆ ಹಾಗೂ ಹೊರಗೆ ಎರಡು ಕಡೆ ರಾಘವ ಚಡ್ಡ ವ್ಯಕ್ತಪಡಿಸುತ್ತಿರುವ ಪ್ರತಿಯೊಂದು ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಒಳಗಾಗಿದ್ದವು. ಶ್ರೀಸಾಮಾನ್ಯರನ್ನು  ಆಕರ್ಷಿಸಿದ್ದರು. ಅದೆಲ್ಲವೂ ಈಗ ರಾಜಕೀಯ ತಂತ್ರಗಾರಿಕೆಯ ಭಾಗ ಎಂಬಂತಾಗುತ್ತಿದೆ. ಜನರನ್ನು ರಾಜಕಾರಣವು ಅಥವಾ ನಾಯಕರುಗಳು ಎಷ್ಟು ಫೂಲ್ ಮಾಡುತ್ತಾರೆ ಅನ್ನೋದಕ್ಕೆ ಇವೆಲ್ಲವೂ ಒಂದು ಉದಾಹರಣೆಗಳು ಅಷ್ಟೇ. ಹಾಗಂತ ಇವರ್ಯಾರೂ ಕೆಟ್ಟವರಲ್ಲ, ತಮ್ಮ ರಾಜಕೀಯ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಮಾಡುತ್ತಿರುವ ತಂತ್ರಗಾರಿಕೆಯ ಮೊರೆ ಹೋದವರು. ಆದರೆ ಜನಸಾಮಾನ್ಯರು, ಈ ದೇಶದ ಬುದ್ಧಿಜೀವಿಗಳು, ದೇಶದ ಮಾಧ್ಯಮಗಳು ಇಂತಹ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕಿತ್ತೋ, ಹೇಗೆ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಬೇಕಿತ್ತೋ, ಹಾಗೆ ನಡೆದುಕೊಳ್ಳಲಿಲ್ಲ……. ಮೂರನೇ ಶಕ್ತಿ ಅಂದರೆ, ಕಣ್ಣಿಗೆ ಕಾಣದ ಶಕ್ತಿಯ ಪವರ್ ಅಂದ್ರೆ ಹಾಗೆ ಅಲ್ವಾ?

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …
    Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
    ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
    ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
    ಹೈಕೋರ್ಟ್‌ ಅಂಗಳಕ್ಕೆ ಮೂವರು ಹೊಸ ಮುಖ!ಆ ಮೂವರು ನ್ಯಾಯಾಂಗ ಅಧಿಕಾರಿಗಳು ಯಾರೆಲ್ಲಾ..ಹೇಗೆ ಆಯ್ಕೆ..
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
    ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
    ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತ್ತೊಂದು ಸೌಹಾರ್ದದ ಹೆಜ್ಜೆ
    ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
    ಇನ್‌ಸ್ಟಾಗ್ರಾಮ್ ಬ್ಲಾಕ್ ಆದ ಕ್ಷಣದಿಂದ ಹೊರಬಂತು ರಹಸ್ಯ!
    “ಕುನಾಲ್ ಶಾ ವಾಟ್ಸಾಪ್ ಗ್ಲೋಬಲ್ ಹೆಡ್! ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸಾಲಿಗೆ ಮತ್ತೊಬ್ಬ ಭಾರತೀಯನ ಸೇರ್ಪಡೆ.
    “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
    ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.
    ಗಾಯತ್ರಿ ಶಾಂತೇಗೌಡ ಸಚಿವ ಸ್ಥಾನ ವಿವಾದ: ರಾಜಕೀಯ ಚರ್ಚೆಗೆ ಹೊಸ ತಿರುವು…. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುರುತರ ಆರೋಪ
    ಕರ್ನಾಟಕದಲ್ಲಿ ಹೈ ಅಲರ್ಟ್: ಕರಾವಳಿಯಲ್ಲಿ ಸತತ 4 ದಿನ ಭಾರೀ ಮಳೆ – ಮಕ್ಕಳು, ಮೀನುಗಾರರು ಮತ್ತು ನದಿ ಪಾತ್ರದ ಜನರು ವಿಶೇಷ ಎಚ್ಚರಿಕೆ ವಹಿಸಿ
    ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
    ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
    ಮೀನು ಮಾರುವ ಮಹಿಳೆಯರ ಮೇಲೆ ಹಲ್ಲೆ :ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಭರ್ಜರಿ ಒದೆ
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
    ಬೆಳಗಾವಿ ಮಾಜಿ ಯೋಧನ ಸಾವಿನ ಹಿಂದೆ ಬೆಚ್ಚಿಬೀಳಿಸುವ ಸತ್ಯ ₹2 ಕೋಟಿ ವಿಮೆ..!? ಸಿನೆಮಾವನ್ನೂ ಮೀರಿಸಿದ ಕ್ರೈಂ ಸ್ಟೋರಿ!
    ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
    ಸಹಕಾರ ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಡಿಕೆಶಿ ಜೊತೆ ಸಮಾಲೋಚನೆ
    ‘ಈದ್’ ರಜಾ ತೀರ್ಮಾನ ಕೈಗೊಳ್ಳಲು ಜಿಲ್ಲಾಡಳಿತ ಸಂಜೆ 6.30ರ ವರೆಗೂ ವಿಫಲ!