📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!

    ದುಬೈ ವಿಮಾನ ಪತನ ಯತ್ನದಲ್ಲಿ ಕಾಕ್‌ಪಿಟ್‌ನಲ್ಲೇ ಉಗ್ರನ ದಾಳಿ! 174 ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಇದೀಗ ಇಸ್ರೇಲ್‌ನಿಂದ ಅಪರೂಪದ ಗೌರವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಮಿತ್ ಮಚ್ಚಾರ್ ಅವರನ್ನು ಇಸ್ರೇಲ್‌ನ ಮುಂದಿನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಶೇಷವಾಗಿ ಆಹ್ವಾನಿಸಿ, ಪ್ರಧಾನಿ ಮೋದಿ ಜೊತೆಗೆ ಗೌರವಿಸಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ.

    ದುಬೈ: ಆ ಕ್ಷಣದಲ್ಲಿ ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ಕೇವಲ ಕೆಲವೇ ನಿಮಿಷಗಳ ಅಂತರದಲ್ಲಿತ್ತು. ಸಹ ಪೈಲಟ್‌ನಿಂದಲೇ ಕಾಕ್‌ಪಿಟ್‌ನಲ್ಲಿ ದಾಳಿ ನಡೆದಿದ್ದು, ವಿಮಾನವನ್ನು ಪತನಗೊಳಿಸುವ ಉದ್ದೇಶವಿತ್ತು ಎನ್ನುವ ತನಿಖಾ ಮಾಹಿತಿಯು ಇದೀಗ ಭಾರೀ ಆತಂಕಕ್ಕೆ ಕಾರಣವಾಗಿದೆ. ಆದರೆ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ದಾಳಿಕೋರನನ್ನು ಎದುರಿಸಿ ಕಾಕ್‌ಪಿಟ್‌ನ ನಿಯಂತ್ರಣವನ್ನು ಉಳಿಸಿಕೊಳ್ಳುವ ಮೂಲಕ ನೂರಾರು ಪ್ರಯಾಣಿಕರ ಜೀವ ಕಾಪಾಡಿದರು.

    ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಈ ಘಟನೆ ನಡೆದಿತ್ತು ಎಂದು ವರದಿಯಾಗಿದೆ. ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್ ಹಮ್ಮಾಮಿ, ಪ್ರಾರ್ಥನೆ ಮಾಡುವ ನೆಪದಲ್ಲಿ ಎದ್ದು ನಿಂತು ಕ್ಯಾಪ್ಟನ್ ಮಚ್ಚಾರ್ ಅವರ ಗಮನವನ್ನು ಬೇರೆಡೆ ಸೆಳೆದಿದ್ದಾನೆ. ಬಳಿಕ ಹರಿತಆಯುಧದ ದಾಳಿ ನಡೆಸಿ ಕಾಕ್‌ಪಿಟ್‌ನ ನಿಯಂತ್ರಣ ಪಡೆಯಲು ಯತ್ನಿಸಿದ್ದಾನೆ ಎಂದು ತನಿಖಾ ಮಾಹಿತಿಯಲ್ಲಿ ಹೇಳಲಾಗಿದೆ.

    Also Read  ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ

    ವಿಮಾನ ಪತನಗೊಳಿಸುವುದೇ ಗುರಿ?

    ಯುಎಇ ತನಿಖಾಧಿಕಾರಿಗಳ ಮುಂದೆ ಹಮಾಮ್ ಅಲ್ ಹಮ್ಮಾಮಿ, ವಿಮಾನವನ್ನು ಪತನಗೊಳಿಸುವುದೇ ತನ್ನ ಮೊದಲ ಉದ್ದೇಶವಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ತನ್ನ ಜೀವಕ್ಕೂ ಅಪಾಯವಿದೆ ಎಂಬುದು ತಿಳಿದಿದ್ದರೂ ವಿಮಾನವನ್ನು ಕೆಳಕ್ಕೆ ಬೀಳಿಸುವ ಗುರಿ ಹೊಂದಿದ್ದೆ ಎಂಬ ಹೇಳಿಕೆ ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ತನಿಖೆಯ ಪ್ರಕಾರ, ದಾಳಿಯ ಸಂದರ್ಭದಲ್ಲಿ ಕಾಕ್‌ಪಿಟ್ ಬಾಗಿಲನ್ನು ತೆರೆಯಲು ಕ್ಯಾಪ್ಟನ್ ಮಚ್ಚಾರ್ ಎರಡು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಅವರು ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರಿಗೆ ಕಾಕ್‌ಪಿಟ್‌ಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು.

    ಅಲ್‌ಖೈದಾ ನಂಟಿನ ಆರೋಪ

    ಈ ಘಟನೆಯ ಬೆನ್ನಲ್ಲೇ ಅಲ್‌ಖೈದಾ ಪರ ಬೆಂಬಲಿಗರಿಂದ ಬಂದಿರುವ ಬೆದರಿಕೆ ಸಂದೇಶಗಳು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿವೆ. ವರದಿಗಳ ಪ್ರಕಾರ, ಅಲ್‌ಖೈದಾ ಬೆಂಬಲಿಗರು ತಮ್ಮ ಪ್ರಕಟಣೆಯಲ್ಲಿ ಈ ರೀತಿಯ ದಾಳಿಗಳನ್ನು ಮುಂದುವರಿಸುವ ಬೆದರಿಕೆ ಹಾಕಿದ್ದು, ಅಮೆರಿಕ ಮತ್ತು ಇಸ್ರೇಲ್ ನಾಗರಿಕರು ಪ್ರಯಾಣಿಸುವ ವಿಮಾನಗಳನ್ನು ಗುರಿಯಾಗಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

    Also Read  ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ

    2001ರ ಸೆಪ್ಟೆಂಬರ್ 11ರ ದಾಳಿಯ ಮಾದರಿಯ ದಾಳಿ ನಡೆಸುವ ಬೆದರಿಕೆಯೂ ಪ್ರಕಟಣೆಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಹ ಪೈಲಟ್‌ನ ಉದ್ದೇಶ ಮತ್ತು ಆತನಿಗೆ ಯಾವುದೇ ಉಗ್ರ ಸಂಘಟನೆಯ ಸಂಪರ್ಕವಿತ್ತೇ ಎಂಬ ವಿಚಾರದಲ್ಲಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ.

    ವಿಮಾನ ಸಾವಿರಾರು ಅಡಿ ಎತ್ತರದಲ್ಲಿರುವಾಗ ಕಾಕ್‌ಪಿಟ್‌ನೊಳಗೇ ಸಹ ಪೈಲಟ್ ದಾಳಿ ನಡೆಸಿದ ಪರಿಸ್ಥಿತಿಯನ್ನು ಊಹಿಸಿದರೆ, ಕ್ಯಾಪ್ಟನ್ ಮಚ್ಚಾರ್ ಎದುರಿಸಿದ ಅಪಾಯದ ಮಟ್ಟ ಎಷ್ಟಿತ್ತು ಎಂಬುದು ಅರ್ಥವಾಗುತ್ತದೆ.ಒಂದೆಡೆ ದಾಳಿಕೋರನನ್ನು ಎದುರಿಸಬೇಕು, ಮತ್ತೊಂದೆಡೆ ವಿಮಾನದ ನಿಯಂತ್ರಣ ಕಳೆದುಕೊಳ್ಳಬಾರದು. ಇಂತಹ ಒತ್ತಡದ ಕ್ಷಣದಲ್ಲೂ ಮಚ್ಚಾರ್ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಪ್ರಯಾಣಿಕರ ಜೀವ ಉಳಿಸುವಲ್ಲಿ ನಿರ್ಣಾಯಕವಾಯಿತು.

    ಈ ಘಟನೆಯ ಬಳಿಕ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯಕ್ಕೆ ಭಾರತ ಸೇರಿದಂತೆ ವಿವಿಧ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೇಲ್‌ನಲ್ಲೂ ಅವರನ್ನು ‘ರಿಯಲ್ ಹೀರೋ’ ಎಂದು ಬಣ್ಣಿಸಲಾಗಿದೆ.

    ಇಸ್ರೇಲ್‌ನಿಂದ ವಿಶೇಷ ಗೌರವ

    ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ. 2027ರ ಮೇನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಗೌರವವನ್ನು ಅವರಿಗೆ ನೀಡುವ ಬಗ್ಗೆ ಇಸ್ರೇಲ್ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

    Also Read  ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌

    ಸಾಂಪ್ರದಾಯಿಕವಾಗಿ ಇಸ್ರೇಲಿ ನಾಗರಿಕರಿಗೆ ಸೀಮಿತವಾಗಿದ್ದ ಈ ಗೌರವವನ್ನು ಭಾರತೀಯ ಮೂಲದ ಕ್ಯಾಪ್ಟನ್‌ಗೆ ನೀಡಲಾಗುತ್ತಿರುವುದು ವಿಶೇಷ ಬೆಳವಣಿಗೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.

    ಧೈರ್ಯ ಎಂದರೆ ಇದೇ

    ವಿಮಾನದಲ್ಲಿ ನಡೆದದ್ದು ಕೇವಲ ಇಬ್ಬರು ಪೈಲಟ್‌ಗಳ ನಡುವಿನ ಸಂಘರ್ಷವಲ್ಲ. ಅದು ನೂರಾರು ಜನರ ಬದುಕು ಕೆಲವೇ ಕ್ಷಣಗಳಲ್ಲಿ ಅಪಾಯಕ್ಕೆ ಸಿಲುಕಿದ ಪರಿಸ್ಥಿತಿ. ಅಂತಹ ಸಮಯದಲ್ಲಿ ಭಯಕ್ಕೆ ಮಣಿಯದೆ, ಪರಿಸ್ಥಿತಿಯನ್ನು ನಿಯಂತ್ರಿಸಿ ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯವೇ ಇಂದು ವಿಶ್ವದ ಗಮನ ಸೆಳೆದಿದೆ.

    ಒಬ್ಬ ಪೈಲಟ್‌ನ ತಕ್ಷಣದ ನಿರ್ಧಾರ, ಸ್ಥೈರ್ಯ ಮತ್ತು ಕರ್ತವ್ಯಪ್ರಜ್ಞೆ 174 ಜನರ ಬದುಕನ್ನು ಬದಲಿಸಿತು. ಅದಕ್ಕಾಗಿಯೇ ಈ ಘಟನೆ ಮತ್ತೆ ಮತ್ತೆ ಚರ್ಚೆಯಾಗುತ್ತಿದೆ.

    ##SmithMachar #HamamAlHammami #AlQaeda #Israel #IsraelIndependenceDay #Flydubai #AviationNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಐಡಿ ಇಲ್ಲ ಅಂದ್ರೆ ಎಂಟ್ರಿಯೇ ಇಲ್ಲ! ಎಲ್ಲಿಗೆ…..!?ಯುವಕರ ಭವಿಷ್ಯಕ್ಕಾಗಿ ಖರ್ಗೆಯ ಕಠಿಣ ಎಚ್ಚರಿಕೆ.”
    ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಬೇಡಿಕೆ ಈಡೇರಿಸುವುದು ನಿಮ್ಮ ಸರದಿ  ಎಂದ ಸಿದ್ದರಾಮಯ್ಯ
    ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
    ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!
    ಚಕ್ರಬಡ್ಡಿ ಹೆಸರಿನಲ್ಲಿ ಮಹಿಳೆಗೆ ಕಿರುಕುಳ: ₹9.37 ಲಕ್ಷ ಬಾಕಿ ಎಂದು ಬೆದರಿಕೆ ಆರೋಪ
    80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
    ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ
    ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!
    ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
    ಖಾದರ್‌ ಖಡಕ್ ವಾರ್ನಿಂಗ್ ವೈರಲ್ : ಆದರೆ ಖಡಕ್ ಆಕ್ಷನ್ ಯಾವಾಗ?”ಪ್ರತಿ ಮಳೆಯಲ್ಲೂ ಅದೇ ಕಥೆ: ರಸ್ತೆ ಗುಂಡಿ, ಅಪಘಾತ, ಎಚ್ಚರಿಕೆ, ಜವಾಬ್ದಾರಿ ಹೊತ್ತವರ ಜಾಣ ಮರೆವು!
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
    17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
    “ವಕೀಲರೇ ಎಚ್ಚರ! ಕೋರ್ಟ್‌ನಲ್ಲಿ ನಕಲಿ AI ರೆಫರೆನ್ಸ್ ನೀಡಿದರೆ ಕಠಿಣ ಶಿಸ್ತು ಕ್ರಮ: BCIಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ”
    ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
    ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
    ಬಸ್‌ ಚರಂಡಿಗೆ ಬಿದ್ದರೂ ಪ್ರಯಾಣಿಕರಿಗೆ ಏನೂ ಆಗಲಿಲ್ಲ!ಕಣ್ಣೆದುರೇ ಮಹಾ ಅವಘಡ… ಶ್ರೀಕೃಷ್ಣನೇ ಕಾಪಾಡಿದಂತೆ ಪಾರಾದ ಪ್ರಯಾಣಿಕರು!
    “ಜಾಗತಿಕ ಸವಾಲುಗಳ ನಡುವೆಯೂ ಭಾರತದ GDP ರಾಕೆಟ್ ವೇಗ! 7.8% ಬೆಳವಣಿಗೆಗೆ ವಿಶ್ವವೇ ಬೆರಗು!”
    ಮೋದಿ ಸರ್ಕಾರಕ್ಕೆ ಮತ್ತೊಂದು ಶಾಕ್ …ಕೇಂದ್ರ ಸಚಿವ ಸಂಪುಟಕ್ಕೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ
    Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
    ಬೆಳ್ತಂಗಡಿಯ ಹೆಮ್ಮೆಯ ಪುತ್ರಿ ಉಷಾರಾಣಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕರಾವಳಿಗೆ ಗೌರವದ ಗರಿ!
    TVKಗೆ ಟಕ್ಕರ್? ಅಜಿತ್ ಫ್ಯಾನ್ಸ್‌ TMMK ಎಂಟ್ರಿ!ದಳಪತಿಗೆ ಎದುರಾಗಿ ಅಜಿತ್ ಫ್ಯಾನ್ಸ್‌ ಪಕ್ಷ!