📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL

    ಸೋಶಿಯಲ್ ಮೀಡಿಯಾದಲ್ಲಿ “ದೇಶದಲ್ಲಿ ಪೆಟ್ರೋಲ್-ಡೀಸೆಲ್ ಕೊರತೆ ಉಂಟಾಗಿದೆ” ಎಂಬ ಸಂದೇಶಗಳು ವೈರಲ್ ಆಗುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಮೂಡಿದೆ. ಆದರೆ ಸರ್ಕಾರಿ ತೈಲ ಕಂಪನಿಗಳು ಈ ಸುದ್ದಿಯನ್ನು ಸ್ಪಷ್ಟವಾಗಿ ತಪ್ಪು ಮತ್ತು ದಾರಿ ತಪ್ಪಿಸುವ ಮಾಹಿತಿ ಎಂದು ಹೇಳಿವೆ.

    ಭಾರತದ ಪ್ರಮುಖ ತೈಲ ಕಂಪನಿಗಳಾದ HPCL, IndianOil ಮತ್ತು BPCL ಸ್ಪಷ್ಟಪಡಿಸಿರುವುದೇನೆಂದರೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು LPG ಇಂಧನದ ಸಮರ್ಪಕ ಸಂಗ್ರಹ ಇದೆ ಮತ್ತು ಸರಬರಾಜು ಸಾಮಾನ್ಯವಾಗಿ ನಡೆಯುತ್ತಿದೆ. ಆದ್ದರಿಂದ ಜನರು ಆತಂಕಪಟ್ಟು ಪೆಟ್ರೋಲ್ ಬಂಕ್‌ಗಳಿಗೆ ದೌಡಾಯಿಸುವ ಅಗತ್ಯವಿಲ್ಲ ಎಂದು ಕಂಪನಿಗಳು ಮನವಿ ಮಾಡಿವೆ.

    HPCL ಅಧಿಕೃತವಾಗಿ ತನ್ನ ಪ್ರಕಟಣೆಯಲ್ಲಿ ,

    “ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಬಗ್ಗೆ ಹರಡುತ್ತಿರುವ ಸಂದೇಶಗಳು ತಪ್ಪು ಮತ್ತು ಆಧಾರರಹಿತ. ದೇಶದಾದ್ಯಂತ ಇಂಧನ ಸರಬರಾಜು ಸಾಮಾನ್ಯವಾಗಿದೆ ಮತ್ತು ಸಾಕಷ್ಟು ಸಂಗ್ರಹ ಲಭ್ಯವಿದೆ. “ ಎಂದು ಹೇಳಿದೆ.

    Also Read  ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!

    ಈಗಾಗಲೇ ಅಧಿಕೃತವಾಗಿ ಎಲ್ಪಿಜಿ ದರ ಹೆಚ್ಚಾಗಿದೆ ಅದನ್ನು ಯಾವ ತೈಲ ಕಂಪನಿಗಳು ಒಪ್ಪಿಕೊಂಡಿಲ್ಲ ಅದರ ಬಗ್ಗೆ ಸ್ಪಷ್ಟನೆಯನ್ನು ನೀಡಿಲ್ಲ. ಜೊತೆಗೆ ಈಗಾಗಲೇ ಬೆಂಗಳೂರು ಸೇರಿದಂತೆ ಅನೇಕ ಕಡೆ , ಹೋಟೆಲ್ ಮಾಲೀಕರು ಅಡುಗೆ ಅನಿಲ ಕೊರತೆಯ ಕಾರಣದಿಂದ ವ್ಯವಹಾರ ಸ್ಥಗಿತಗೊಳಿಸುವುದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಸುಳ್ಳಲ್ಲ. ಆದರೂ ಆ ಯಾವ ವಿಚಾರವನ್ನು ಈ ತೈಲ ಕಂಪನಿಗಳು ಗಮನಿಸದೆ ಕೇವಲ ತಿಪ್ಪೆ ಸಾರಿಸುವ ರೀತಿಯಲ್ಲಿ ಪಕ್ಕನೆ ನೀಡಿ ಮೌನವಹಿಸಿವೆ. ಇದು ಆ ಕಂಪನಿಗಳ ಅಧಿಕೃತ ಹೇಳಿಕೆ ಆಗಿದ್ದರೆ ಮಧ್ಯದಲ್ಲಿ ಯಾರು ಧರ ಹೆಚ್ಚಳ ಮಾಡಿದ್ದಾರೆ ಅನ್ನುವುದನ್ನು ಸರ್ಕಾರ ತನಿಖೆ ನಡೆಸಬೇಕು ಹಾಗೂ ಅನಿಲ ಪುರೋಹಿಕೆಗೆ ಆಗುತ್ತಿರುವ ವ್ಯಕ್ತಿಯದ ಬಗ್ಗೆಯೂ ತನಿಖೆಯಾಗಬೇಕಾಗುತ್ತದೆ.

    ಅದಿರಲಿ ಮದ್ಯಪ್ರಾಚ್ಯದ ಯುದ್ಧದ ಪರಿಣಾಮ ಭಾರತಕ್ಕೆ ಯಾವ ಮಟ್ಟಿಗೆ ಬಿಸಿ ತಟ್ಟುತ್ತದೆ ಅಂತ  ಗಮನಿಸಿದ್ರೆ, ಈಗಾಗಲೇ  lPG ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. ಅಡುಗೆ ಅನಿಲದ ಬೆಲೆ ಸಿಲಿಂಡರ್ ಗೆ 60 ರೂಪಾಯಿ ಹೆಚ್ಚಾಗಿದೆ. ಕಮರ್ಷಿಯಲ್ ಸಿಲೆಂಡರ್ ಬೆಲೆ 300 ರಿಂದ 400 ಹೆಚ್ಚಾಗಿದೆ. ಈ ವ್ಯತ್ಯಯವನ್ನ  ಎಲ್ಲಾ  ಬಳಕೆದಾರರು ಅನುಭವಿಸ್ತಾ ಇದ್ದಾರೆ. ಸರಬುರಾಜು ಕೊರತೆಯಿಂದ ಸಿಲಿಂಡರಗಳ ಪೂರೈಕೆ ಸ್ಥಗಿತಗೊಂಡಿದೆ. 50 ದಿನಗಳಿಗೆ ಆಗುವಷ್ಟು ಮಾತ್ರ ದಾಸ್ತಾನು ಇದೆ ಅಂತ ಭಾರತ ಸರ್ಕಾರ ಹೇಳಿದೆ. ಈಗಾಗ್ಲೇ ಬೆಂಗಳೂರಿನ ಕೆಲವು ಹೋಟೆಲ್ ರೆಸ್ಟೋರೆಂಟ್ ಗಳು ಇಂದು ಮಾರ್ಚ್ 10ರಿಂದ ಎಲ್ಪಿಜಿ ಇಲ್ಲದೇ ಹೋಟೆಲ್  ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಸಿಲಿಂಡರ್ ಅಭಾವ ಉಂಟಾಗಬಹುದು ಅನ್ನುವ ಭಯದಿಂದ ಜನರು ಸಿಲಿಂಡರ್ ದಾಸ್ತಾನಿಗೆ ಮುಗಿಬಿದ್ದಿದ್ದಾರೆ.

    Also Read  ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!

    ಅಷ್ಟೇ ಅಲ್ಲ ಇದರ ಪರಿಣಾಮ, ಪುಣೆಯ ಸ್ಮಶಾನದ ಮೇಲು ಬಿದ್ದಿದೆ. ಗ್ಯಾಸ್ ಮೂಲಕ ಬರ್ನ್ ಮಾಡಲಾಗುತ್ತಿದ್ದ  ಶವಗಳಿಗೆ ಇನ್ನು ವಿದ್ಯುತ್ ಅಥವಾ ಕಟ್ಟಿಗೆಯ ಮೊರೆ ಅನಿವಾರ್ಯ. ಇವತ್ತಿನಿಂದ ಸಿಲೆಂಡರು ಮೂಲಕ ಬರ್ನ್ ಮಾಡುವುದಕ್ಕೆ ತಡೆ ಒಡ್ಡಲಾಗಿದೆ ಎಂಬ ಮಾಹಿತಿ ಬರುತ್ತಿದೆ.

    ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಈ ಬಗ್ಗೆ ಇನ್ನೂ ಹೆಚ್ಚಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಳ ಸಂತೆಯ ಮೂಲಕ ದರ ಹೆಚ್ಚಳ ಮಾಡಿ ಜನರಿಗೆ ತೊಂದರೆ ಕೊಡುವ ಪರಿಪಾಠವಿದೆ. ಈಗಾಗಲೇ ಅದು ಪ್ರಾರಂಭವೂ ಆಗಿದೆ. ಈ ಬಗ್ಗೆ ಖುದ್ದು ಸರ್ಕಾರವೇ ಯಾವುದೇ ಬೆಲೆಯನ್ನು ಹೆಚ್ಚಳ ಮಾಡದಂತೆ ಖಡಕ್ ಆದೇಶ ನೀಡುವುದಷ್ಟೇ ಅಲ್ಲ ಅದು ಪಾಲನೆ ಯಾಗುತ್ತಿದೆಯಾ ಅನ್ನುವುದರ ಮೇಲೆ ಕಟ್ಟು ನಿಟ್ಟಿನ ನಿಗಾ ಇಡುವುದು ಮುಖ್ಯವಾಗುತ್ತದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಹಾರಿದು ಬರುತ್ತಿದೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್‌ಐಎ ಬಲೆಗೆ ಮತ್ತೋರ್ವ ಪ್ರಮುಖ ಆರೋಪಿ; ಬಂಧಿತರ ಸಂಖ್ಯೆ 25ಕ್ಕೆ ಏರಿಕೆ
    ಸರ್ಕಾರಿ ಮಕ್ಕಳ ಶೂ ಕಳಪೆ…!ಸರ್ಕಾರಿ ಯೋಜನೆಗಳಲ್ಲಿ ಗುಣಮಟ್ಟ ಕೊರತೆಗೆ ಪರಿಹಾರವೇ ಇಲ್ವಾ ?
    ಬಾಲಗರ್ಭಿಣಿಯರ ಸಂಖ್ಯೆ 5975….!!
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
    ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    ಅಜ್ಜಿಯ ಚಿನ್ನಕ್ಕೇ ಕನ್ನ! ಮೊಮ್ಮಗ ಅರೆಸ್ಟ್….
    ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
    ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
    ಬೆಳ್ಮಣ್ಣಿನಲ್ಲಿ ಗುಂಡಿನ ಸದ್ದು… ಮಾಜಿ ಸಚಿವರ ಶಿಷ್ಯನ ಭೀಕರ ಹತ್ಯೆ
    ₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
    ಕರಾವಳಿ ಗಣೇಶೋತ್ಸವ ಭರ್ಜರಿ ಸಿದ್ಧತೆ… ಭದ್ರತೆಯ ನಡುವೆ ಭಕ್ತಿ, ಸಂಭ್ರಮ!
    ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ 6 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ
    ಮತದಾನದ ಹಕ್ಕು ಉಳಿಸಿಕೊಳ್ಳಿ: ಎಸ್‌ಐಆರ್ ಗಡುವು ಆಗಸ್ಟ್.17ರವರೆಗೆ ವಿಸ್ತರಣೆ
    ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
    ವೃಷಣಗಳಿಗೆ ₹6 ಕೋಟಿ? ನಾ ರೀಲ್ ನಂಬಿ  16ರ ಬಾಲಕ ಹತ್ಯೆ!ಇದು ₹6 ಕೋಟಿ ಆಸೆಗೆ ನಡೆದ ಭೀಕರ ಕೃತ್ಯ…!
    ಆಪಲ್‌ಗೆ ಭಾರತದಲ್ಲಿ ದೊಡ್ಡ ಕಾನೂನು ಶಾಕ್? App Store ನಿಯಮಗಳ ಮೇಲೆ ಆಪಲ್ vs ಭಾರತ CCI ಜಟಾಪಟಿ 
    ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
    ಬಾಲ್ಯದ ಗೆಳೆಯನ ಬಲೆಗೆ ಬಿದ್ದ ವಾಯುಸೇನೆ ಅಧಿಕಾರಿಯ ಪತ್ನಿ?! ಲೈಂಗಿಕ ಬ್ಲ್ಯಾಕ್‌ಮೇಲ್,’ಕಬೂಲ್ ಹೈ’ ಹೇಳುವಂತೆ ಒತ್ತಾಯ!
    ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
    “ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
    ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಮಚ್ಚು ದಾಳಿ: ಕಾಲೇಜಿಗೆ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಹಲ್ಲೆ; ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
    ದೇಶಾದ್ಯಂತ ಇಂದು ಮೊಬೈಲ್‌ನಲ್ಲಿ ತುರ್ತು ಎಚ್ಚರಿಕೆ ಡ್ರಿಲ್ – ಗಾಬರಿ ಬೇಡ
    ಮಕ್ಕಳಿಗೆ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ
    ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
    ಬಿಡದಿ ಟೌನ್‌ಶಿಪ್‌ಗೆ ಮರುಜೀವ: ವಿಶ್ವದರ್ಜೆಯ ‘ಎಐ ಸಿಟಿ’ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ .. ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ
    “ಅಪ್ಪಾ” ಎಂದು ಕರೆದವನ ಕೈಯಿಂದಲೇ 18 ತಿಂಗಳ ಕಂದಮ್ಮನ ದೇಹದ ಮೇಲೆ 91 ಗಾಯದ ಗುರುತು – ಅಮಾನುಷ ಹತ್ಯೆ!..
    ಪೊಲೀಸ್ ಇಲಾಖೆಯ ಜಯಶ್ರೀ ನೀಡಿದ ದೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು: ವಿಡಿಯೋ ಕಾಲ್ ಪ್ರಕರಣಕ್ಕೆ ಹೊಸ ತಿರುವು