📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!

    SMA ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಎರಡು ವರ್ಷದ ಕಂದಮ್ಮ ಸಾಯಿ ಚಿರಾಗ್‌ನನ್ನು ಬದುಕಿಸಲು, ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು ಅವರು ನಡೆಸಿದ ನಿಸ್ವಾರ್ಥ ಹೋರಾಟ ಮತ್ತು ಇಡೀ ನಾಡಿನ ಜನತೆ ಸ್ಪಂದಿಸಿದ ರೀತಿ ಪ್ರತಿಯೊಬ್ಬರ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡುತ್ತದೆ.

    ಹೆತ್ತವರ ಕಣ್ಣೀರು ಮತ್ತು ಫಯಾಝ್ ಮಾಡೂರು ಅವರ ಪ್ರವೇಶ

    ಎಂಟು ತಿಂಗಳಿನಿಂದ ಮಗುವಿನ ಜೀವ ಉಳಿಸಲು ಪೋಷಕರಾದ ಸಾಯಿ ಭಾರ್ಗವಿ ಹಾಗೂ ಚೇತನ್ ಗೌಡ ಪಡಬಾರದ ಕಷ್ಟ ಪಟ್ಟಿದ್ದರು. ಇಂಡೋನೇಷ್ಯಾದಲ್ಲಿ ನಡೆಯಬೇಕಿದ್ದ ದುಬಾರಿ ಚಿಕಿತ್ಸೆಗೆ ಬರೋಬ್ಬರಿ 2 ಕೋಟಿ ರೂಪಾಯಿ ಅಗತ್ಯವಿತ್ತು. ಮಧ್ಯಮ ವರ್ಗದ ಈ ಪೋಷಕರಿಗೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸುವುದು ಅಸಾಧ್ಯದ ಮಾತಾಗಿತ್ತು. ಕಣ್ಣೆದುರೇ ಮಗು ದಿನ ದಿನವೂ ಸಾವು-ಬದುಕಿನ ನಡುವೆ ಹೋರಾಡುವುದನ್ನು ಕಂಡು ಪೋಷಕರು ಅಸಹಾಯಕರಾಗಿದ್ದಾಗ, ದೇವದೂತರಂತೆ ಎಂಟ್ರಿ ಕೊಟ್ಟವರೇ ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು. ಹೆತ್ತವರ ಕಣ್ಣೀರನ್ನು ಕಂಡ ಫಯಾಝ್, “ನಿಮ್ಮ ಮಗುವನ್ನು ಉಳಿಸುವ ಜವಾಬ್ದಾರಿ ನಮ್ಮದು” ಎಂದು ಧೈರ್ಯ ತುಂಬಿ ಕಣಕ್ಕಿಳಿದರು.

    Also Read  ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು

    40 ದಿನಗಳ ಕಾಲ ದಣಿವರಿಯದ ಹೋರಾಟ

    2 ಕೋಟಿ ರೂಪಾಯಿ ಎಂಬುದು ಸಣ್ಣ ಮೊತ್ತವಲ್ಲದಿದ್ದರೂ ಫಯಾಝ್ ಧೃತಿಗೆಡಲಿಲ್ಲ. ಬಿಸಿಲು, ಮಳೆ ಎನ್ನದೆ ಫಯಾಝ್ ಮತ್ತು ಅವರ ತಂಡದವರು ರಾಜ್ಯದ ಬೇರೆ ಬೇರೆ ನಗರಗಳ ಬೀದಿ ಬೀದಿಗಳಲ್ಲಿ ಸಾರ್ವಜನಿಕ ಜಾಥಾ ನಡೆಸಿ ಪ್ರತಿಯೊಬ್ಬರ ಬಳಿಯೂ ಮಗುವಿನ ಪ್ರಾಣ ಭಿಕ್ಷೆ ಬೇಡುತ್ತಾ ಸಾಗಿದರು. ಇದರೊಂದಿಗೆ ಫೇಸ್‌ಬುಕ್, ವಾಟ್ಸಾಪ್‌ಗಳ ಮೂಲಕ ಮಗುವಿನ ಪರಿಸ್ಥಿತಿಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸಿದರು. ಸತತ 40 ದಿನಗಳ ಕಾಲ ಮನೆ, ಸಂಸಾರವನ್ನು ಮರೆತು ಕೇವಲ ಮಗುವಿನ ಚಿಕಿತ್ಸೆಯ ಹಣ ಸಂಗ್ರಹಿಸುವುದನ್ನೇ ಫಯಾಝ್ ತಮ್ಮ ದೈನಂದಿನ ಧ್ಯೇಯವಾಗಿಸಿಕೊಂಡಿದ್ದರು.

    ನಂಬಲಾಗದ ಪವಾಡ: 2 ಕೋಟಿ ರೂ. ಸಂಗ್ರಹ!

    ಫಯಾಝ್ ಅವರ ನಿಷ್ಕಲ್ಮಶ ಶ್ರಮಕ್ಕೆ ರಾಜ್ಯದ ಜನತೆ ಕೊಟ್ಟ ಕೊಡುಗೆ ಅಸಾನ್ಯವಾದದ್ದು. ದಿನಗೂಲಿ ನೌಕರರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೆ, ಪ್ರತಿಯೊಬ್ಬರೂ ತಮಗೆ ತೋಚಿದ ಸಹಾಯ ಮಾಡಿದರು. ಒಂದು ಜೀವವನ್ನು ಉಳಿಸಲು ಧರ್ಮ, ಜಾತಿಯ ಬೇಲಿಗಳನ್ನು ಬದಿಗೊತ್ತಿ ಇಡೀ ಕರ್ನಾಟಕವೇ ಒಂದಾಗಿ ನಿಂತಿತ್ತು! ಅಂತಿಮವಾಗಿ ಅಂದುಕೊಂಡಂತೆ ಕೇವಲ 40 ದಿನಗಳಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ಮೊತ್ತ ಸಂಗ್ರಹವಾಯಿತು. ಇಷ್ಟೊಂದು ಬೃಹತ್ ಮೊತ್ತ ಇಷ್ಟು ಕಡಿಮೆ ಅವಧಿಯಲ್ಲಿ ಸಂಗ್ರಹವಾಗಿದ್ದು ನಿಜಕ್ಕೂ ನಂಬಲಾಗದ ಮತ್ತು ಇತಿಹಾಸ ಸೃಷ್ಟಿಸಿದ ಘಟನೆಯಾಗಿದೆ.

    Also Read  ಕೊಡಗಿನಲ್ಲಿ ಪ್ರವಾಸಿ ಬಸ್ ಪಲ್ಟಿ20 ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರು; ಜೆಸಿಬಿಯಿಂದ ಬಸ್‌ ರಕ್ಷಣೆ!

    ಕೋಟಿ ಕೋಟಿ ಧನ್ಯವಾದಗಳು

    ಒಬ್ಬ ಅಪರಿಚಿತ ಮಗುವಿಗಾಗಿ ಫಯಾಝ್ ಮಾಡೂರು ಅವರು ತೋರಿದ ಕಾಳಜಿ ಮತ್ತು ನಿಸ್ವಾರ್ಥ ಸೇವೆಗೆ ಇಡೀ ನಾಡು ತಲೆಬಾಗಬೇಕಿದೆ. ತಮಗಿರುವ ಆರ್ಥಿಕ ಸಂಕಷ್ಟಗಳ ನಡುವೆಯೂ, ಮಗುವಿನ ಮುಖ ನೋಡಿ ಕೈಲಾದಷ್ಟು ಸಹಾಯ ಮಾಡಿದ ಪ್ರತಿಯೊಬ್ಬ ಸಹೃದಯಿ ಜನರಿಗೂ ಧನ್ಯವಾದಗಳು. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ, ಜನರ ಒಂದೊಂದು ರೂಪಾಯಿಯೂ ಇಂದು ಮಗುವಿಗೆ ಮರುಜನ್ಮ ನೀಡಿದೆ. ಹಣದ ಕೊರತೆಯಿಂದ ಮಗು ಸತ್ತುಹೋಗಬಹುದು ಎಂಬ ಹೆದರಿಕೆಯಲ್ಲಿದ್ದ ಪೋಷಕರಿಗೆ ಇಂದು ಇಡೀ ನಾಡಿನ ಜನತೆ ಹೊಸ ಭರವಸೆ ನೀಡಿದ್ದಾರೆ. ಮಾನವೀಯತೆ ಎಂದಿಗೂ ಸಾಯುವುದಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

    ##FayazMaduru #SaveSaiChirag #HumanityWins #MangaloreMiracle #KarnatakaUnites

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
    ಬಸ್‌ ಚರಂಡಿಗೆ ಬಿದ್ದರೂ ಪ್ರಯಾಣಿಕರಿಗೆ ಏನೂ ಆಗಲಿಲ್ಲ!ಕಣ್ಣೆದುರೇ ಮಹಾ ಅವಘಡ… ಶ್ರೀಕೃಷ್ಣನೇ ಕಾಪಾಡಿದಂತೆ ಪಾರಾದ ಪ್ರಯಾಣಿಕರು!
    ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
    ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..
    ಶಾಲೆಗಳ ಸುತ್ತ ಜಂಕ್ ಫುಡ್‌ಗೆ ಬ್ರೇಕ್: ಮಕ್ಕಳ ಆರೋಗ್ಯ ರಕ್ಷಣೆಗೆ FDA ಅಲರ್ಟ್!
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    ಸಾಧನೆ ಇಲ್ಲದೆ ಸತ್ತರೆ ಸಾವಿಗೂ ಅಪಮಾನ!
    ದಾವೂದ್ ಇಬ್ರಾಹಿಂನ ಆಪ್ತ. ಸಲೀಂ ಡೋಲಾ ಬಂದನ ವಿದೇಶದಲ್ಲಿ ಅಡಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ
    ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
    ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ ಯಶ್ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ….!
    ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
    ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!
    ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!
    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ಜೂನ್ 30,ಪ್ಲಾಸ್ಟಿಕ್ ನೋಟುಗಳು ಬರುತ್ತಿವೆಯೇ? – ವೈರಲ್ ಸುದ್ದಿಯ ಹಿಂದಿನ ವಿಷಯ
    ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    ಹೀಗೇಕೆ ಅಂದ್ರು ಮೋದೀಜಿ…ವಿದೇಶ ಸುತ್ತಾಟ, ಚಿನ್ನದ ಶಾಪಿಂಗ್‌ಗೆ ‘ನೋ’!
    ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
    ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
    ಮಂಗಳೂರು ಏರ್‌ಪೋರ್ಟ್ ಬಳಿ ಬರ್ತಿದೆ ಲಕ್ಸುರಿ ಇಂಟರ್‌ನ್ಯಾಷನಲ್ ಹೋಟೆಲ್!
    ಇಂದು ಮಂಗಳೂರಲ್ಲಿ ತಲೆಮೇಲೆ ಸುತ್ತು ಹೊಡೆದಂತೆ ಬಾರಿ ಶಬ್ದದೊಂದಿಗೆ ಹೆಲಿಕಾಪ್ಟರ್‌..!ಆಶ್ಚರ್ಯ ಮತ್ತು ಆತಂಕದ ಹಿಂದಿದೆ ಭದ್ರತಾ ‘ಮೆಗಾ ಡ್ರಿಲ್’ ..!ಅಸಲಿ ಕಾರಣವೇನು
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ₹5.85 ಕೋಟಿ ಯೋಜನೆಯ ಜಪ್ಪು ಮಂಗಳಾದೇವಿ ಬಸ್ ಟರ್ಮಿನಲ್ ಉದ್ಘಾಟನೆಗೆ ಎರಡು ಬಾರಿ ಗೌಜಿ ಸಮಾರಂಭ; ಬಸ್ ಸಂಚಾರಕ್ಕೆ ಮಾತ್ರ ಇನ್ನೂ ಮೀನ ಮೇಷ !