📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ

    ಉಡುಪಿಯ ಈಗಿನ ಜಿಲ್ಲಾಡಳಿತವು, ನೇರಾ ನೇರವಾಗಿ ಜನದ್ರೋಹಿ ಆಡಳಿತಕ್ಕೆ ಮುನ್ನುಡಿ ಬರೆದು ಬಿಟ್ಟಿದೆ ಎಂಬ ಗುರುತರ ವಾದಂತಹ ಆರೋಪವನ್ನು ನೊಂದ ಜನರ ಕಡೆಯಿಂದ ಹೊತ್ತು ಕೊಳ್ಳುತ್ತಿದೆ.

             ಕೆಲವೇ ಕೆಲವು ದಿನಗಳ ಹಿಂದೆ,. ಕೊರಗ ಸಮುದಾಯವು ಇದೇ ಜಿಲ್ಲಾಡಳಿತದ ವಿರುದ್ಧ ಹಲವು ದಿನಗಳ ಕಾಲ ಸಮುದಾಯದ ಹೆಂಗಸರು ಮಕ್ಕಳನ್ನು ಕಟ್ಟಿಕೊಂಡು ತಮ್ಮ ಬೇಡಿಕೆಗಾಗಿ ಜಿಲ್ಲಾಡಳಿತದ ಮುಂದೆಯೇ ಮುಷ್ಕರಕ್ಕೆ ಕುಳಿತುಕೊಂಡಿತ್ತು. ಆ ಒಂದು ಮುಷ್ಕರವನ್ನೂ ಸಹ ಜಿಲ್ಲಾಧಿಕಾರಿಗಳ ಸಹಿತ ಜಿಲ್ಲಾಮಟ್ಟದ ಅಧಿಕಾರಿಗಳು ನಿರ್ಲಕ್ಷಿಸಿದ್ದರ ಬಗ್ಗೆ ಆರೋಪಗಳಿದ್ದವು. ಈಗ ಅದಕ್ಕೂ ಗಂಭೀರವಾದಂತಹ ಆರೋಪವು ಜಿಲ್ಲಾಧಿಕಾರಿಗಳ ವಿರುದ್ಧವೇ ಬರುತ್ತಿದೆ ನೋಡಿ.

    ಜಿಲ್ಲಾಡಳಿತವೇ ಆರೋಪವನ್ನು ಹೊತ್ತುಕೊಳ್ಳುತ್ತಿದ್ದರೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಮಾಜಸೇವಕರು ಅನ್ನಿಸಿಕೊಂಡಂತಹ ನಾಯಕರುಗಳು ಏನು ಮಾಡುತ್ತಿದ್ದಾರೆ? ಅವರು ಯಾರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ? ಆ ಬೆಂಬಲದಿಂದ ಅವರು ಮಾಡಿಕೊಳ್ಳುತ್ತಿರುವ ಲಾಭವಾದರೂ ಏನು ಎಂಬ ಪ್ರಶ್ನೆಯು ಈ ಸಂದರ್ಭದಲ್ಲಿ ಎದ್ದೇಳುತ್ತಿದೆ.

    ಎಸ್, ವಿಷಯಕ್ಕೆ ಬರುವ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಹಾಳ ಗ್ರಾಮದ ನಾಗರಮಠ ಎಂಬ ಪುಟ್ಟ ಊರಿನ ಕಣ್ಣೀರ ಕಥೆ ಇದು. ಇಡೀ ಊರಿನ ಮತದಾರರ ಸಂಖ್ಯೆಯು 650ರ ಆಸುಪಾಸು ಇದೆಯಷ್ಟೇ. ಒಟ್ಟೂ k ಜನಸಂಖ್ಯೆ ಹತ್ತಿರ ಹತ್ತಿರ ಸಾವಿರದಷ್ಟು ಇರಬಹುದು. ಈ ನಾಗರಮಠ ವ್ಯಾಪ್ತಿಯಲ್ಲಿ ಸೀತಾನದಿಯ ಕವಲು ನದಿಯೊಂದು ಹರಿದು ಹೋಗುತ್ತದೆ. ಆ ನದಿಯು ಇಲ್ಲಿಯವರೆಗೆ ಊರಿನ ಜೀವನದಿಯಾಗಿತ್ತು, ಆದರಿಗ ಅದೇ ನದಿ ಊರಿನ ಜೀವವನ್ನು ಹಿಂಡುತ್ತಿದೆ. ಊರಿನ ಮೇಲೆ ಇಲ್ಲಿಗಲ್ ವ್ಯವಹಾರಸ್ಥರ ಕಣ್ಣು ಬೀಳುವಂತೆ ಮಾಡಿದೆ.

    ಈ ನದಿಯ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಮರಳು ಮಾಫಿಯಾದವರ ಕಣ್ಣು ಬಿದ್ದಿದೆ. ಹಾಗೆ ಅವರ ಕಣ್ಣು ಬೀಳುತ್ತಿದ್ದಂತೆಯೇ ಇಲ್ಲಿ ಗಣಿಗಾರಿಕೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಇದು ಇಂದು ನಿನ್ನಯ ಕಥೆಯಲ್ಲ. 2022 ರಿಂದ ನಡೆಯುತ್ತಿರುವಂತಹ ನಿರಂತರ ಪ್ರಯತ್ನ. ಊರಿನ ಜನರು ಆವತ್ತಿನಿಂದಲೂ ಇದನ್ನು ವಿರೋಧಿಸಿಕೊಂಡು ಬಂದಿದ್ದಾರೆ, ಹೋರಾಟ ಮಾಡಿಕೊಂಡು ಬಂದಿದ್ದಾರೆ. ಜನರು ಸುಮ್ಮನೆ ಕೂತಿಲ್ಲ, ವೈಜ್ಞಾನಿಕವಾಗಿ ಆದರ ಸಾಧಕ ಬಾದಕದ ಬಗ್ಗೆ  ರಿಪೋರ್ಟನ್ನು ರೆಡಿ ಮಾಡಿಸಿ ಜಿಲ್ಲಾಡಳಿತದ ಮುಂದೆ ಇಟ್ಟಿದ್ದಾರೆ. ಯಾವುದನ್ನೂ ಕಣ್ಣೆತ್ತಿಯೂ ನೋಡದ ಜಿಲ್ಲಾಡಳಿತ, ಕೇವಲ ತೋರುಗಾಣಿಕೆಯ ನಿಯಮಗಳನ್ನು ಕಾಗದ ಮೇಲಷ್ಟೇ   ನಮೂದಿಸಿ ಇಲ್ಲಿಗಲ್ ವ್ಯವಹಾರಕ್ಕೆ ಪೋಲಿಸ್ ರಕ್ಷಣೆಯ ಮೂಲಕ  ಅಸ್ತು ನೀಡಿದೆ.

    ಎರಡು ಮೂರು ಬಸ್, ರಿಸರ್ವ್ ಪೊಲೀಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ರಕ್ಷಣೆಯೊಂದಿಗೆ,  ಈ ಕವಲು ನದಿಯಿಂದ ಅನಾರೋಗ್ಯಕರವಾಗಿ ಮರಳನ್ನು ಬಲವಂತವಾಗಿ ತೆಗೆಯುತ್ತಿದ್ದಾರೆ. ಅದರ ಪರಿಣಾಮ ಊರಿನ ಸಿಹಿ ನೀರಿನ ಬಾವಿಗಳಲ್ಲಿ ಉಪ್ಪು ನೀರು ಬರಲಾರಂಬಿಸಿದೆ. ಈ ಭಾಗದ ಕೃಷಿ ಭೂಮಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದ್ಯಾವುದರ ಬಗ್ಗೆಯೂ ಕಿಂಚಿತ್ತೂ  ಯೋಚಿಸದ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬಕಾಸುರರ ಜೊತೆ ಕುಳಿತು ಇಲ್ಲಿನ ಸಂಪತ್ತನ್ನು  ಅನಾರೋಗ್ಯಕರವಾಗಿ ಲೂಟಿ ಹೊಡೆಯಲು ಪಕ್ಕಾ ಪ್ಲಾನ್ ಮಾಡಿಕೊಂಡೆ ಬಂದಿವೆ ಎನ್ನುವುದು ಊರಿನವರ ಆರೋಪ ಹಾಗೂ ನೋವಿನ ನುಡಿ.

    Also Read  ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!

    ಈ ಹಿಂದೆ ಸ್ಥಳೀಯ ಶಾಸಕರು ಹಾಗೂ ಸಂಸದರು ಊರಿನ ನಾಗರಿಕರ ಪರವಾಗಿ ಮಾತನಾಡುತ್ತಿದ್ದವರು, ಈಗ ಏಕಾಏಕಿಯಾಗಿ ಜಿಲ್ಲಾಡಳಿತದ ಪರವಾಗಿ ಮಾತನಾಡುತ್ತಾ, ಈ ಹಿಂದೆ ತಾವೇ ಖುದ್ದಾಗಿ ಆಗಮಿಸಿ ಸ್ಥಳವನ್ನು ಪರಿಶೀಲಿಸಿ ಕೊಟ್ಟ ಹೇಳಿಕೆಗೆ ವಿರುದ್ಧವಾಗಿ ನಿಂತಿದ್ದಾರೆ ಅಂದರೆ ಅವರು ಸಂತುಷ್ಟರಾಗಿದ್ದಾರೆ ಅಂತ ತಾನೇ ಅರ್ಥ?

    ನಮಗೆ ಈ ಭೂಮಿ ಬಿಟ್ಟು ಬೇರೆ ಗತಿ ಇಲ್ಲ, ಇಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡೆ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ನಮ್ಮ ಊರಿನಲ್ಲಿ ಮರಳು ತೆಗೆಯಬೇಕೆಂದರೆ ಅದಕ್ಕೆ ಹೊರಗಿನವರು ಯಾಕೆ ಬೇಕು? ಆರೋಗ್ಯಕರವಾದ ರೀತಿಯಲ್ಲಿ, ಕೃಷಿ ಭೂಮಿಗೆ ತೊಂದರೆಯಾಗದ ರೀತಿಯಲ್ಲಿ, ನದಿ ಪಾತ್ರದ ಬೌಂಡರಿಗಳು ಬದಲಾಗದ ರೀತಿಯಲ್ಲಿ, ನಿಯಮಗಳನ್ನು ಮೀರದೆ ಮರಳನ್ನು ತೆಗೆಯಲು ಅವಕಾಶ ನಮ್ಮವರಿಗೇ ಕೊಡಬಹುದಿತ್ತು. ಆದರೆ ಊರಿನವರಿಗೆ ಅವಕಾಶ ಕೊಡದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುಳ್ಳು ವರದಿಗಳನ್ನು ನೀಡಿ ಮೂವರಿಗೆ ಇಲ್ಲಿ ಮರಳು ತೆಗೆಯಲು ಅಧಿಕೃತವಾಗಿ ಪರ್ಮಿಷನ್ ನೀಡಿದೆ. ಕುಶಾಲ್ ಕುಮಾರ್ ಎಂಬ ವ್ಯಕ್ತಿಗೆ, ಅರ್ಜುನ್ ನಾಯ್ರಿ ಹಾಗೂ ನಿತಿನ್ ರೈ ಎಂಬವರಿಗೂ ಮತ್ತೊಬ್ಬರ ಹೆಸರು ಇನ್ನಷ್ಟೇ ಗೊತ್ತಾಗಬೇಕು. ಒಟ್ಟಿನಲ್ಲಿ ಮೂರು ಟೀಮಿಗೆ ಇಲ್ಲಿ ಮರಳು ತೆಗೆಯಲು ಪರ್ಮಿಷನ್ ನೀಡಿದೆ. ಎರಡು ತಂಡವು ಈಗ ಇಲ್ಲಿ ಪೊಲೀಸ್ ರಚನೆಯೊಂದಿಗೆ ಮರಳು ತೆಗೆಯುವ ಕೆಲಸವನ್ನು ಪ್ರಾರಂಭಿಸಿದೆ.  ಇಲ್ಲಿನ

    ಈ ನದಿಯ ಅಳತೆ 1400 ಮೀಟರ್ ಇದೆ. ಹಾಗೆಯೇ ಇಲ್ಲಿ ವೆಂಟೆಡ್ ಡ್ಯಾಮ್ ಕೂಡ ಇದೆ. ಡ್ಯಾಮಿನಿಂದ 250 m ಬಿಟ್ಟು ಮರಳು ತೆಗೆಯಬೇಕು ಎಂಬ ನಿಯಮವಿದೆ. ಅಂದರೆ 1150 ಮೀಟರ್ ಆಯಿತು. ಈ ಸಾವಿರದ 1150 ಮೀಟರ್ ನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು, ಬರೋಬ್ಬರಿ ಒಂದುವರೆ ಲಕ್ಷ ಟನ್ ಮರಳು ತೆಗೆಯಲು ಪರ್ಮಿಷನ್ ನೀಡುತ್ತದೆ, ಇಷ್ಟು ಮರಳು ಅಲ್ಲಿ ತೆಗೆಯಲು ಸಾಧ್ಯವಾ? ಅಷ್ಟು ಮರಳು ತೆಗೆಯಬೇಕು ಎಂದರೆ ನದಿಯ ಆಳ ಎಷ್ಟು ಹೆಚ್ಚಾಗಬಹುದು ಎಂದು ನೀವೇ ಊಹಿಸಿ.

    Also Read  ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!

    ಎಂಐಟಿಯ ಪ್ರೊಫೆಸರ್ ಉದಯ ನಾಯಕ್ ಈ ವಿಚಾರದಲ್ಲಿ ತಜ್ಞರಾಗಿದ್ದಾರೆ. ಅವರನ್ನು ಹೊರ ರಾಜ್ಯದವರು ಕರೆಸಿ ಅವರಿಂದ ರಿಪೋರ್ಟ್ ಪಡೆದುಕೊಳ್ಳುತ್ತಾರೆ. ಅಂತಹ ಉದಯ್ ನಾಯಕ್ ಅವರನ್ನು ಸ್ವತಹ ಊರಿನವರು ಕರೆಯಿಸಿ ಇಲ್ಲಿ ಮರಳು ತೆಗೆದರೆ ಏನು ಸಮಸ್ಯೆ ಹಾಗೂ ಎಷ್ಟು ಮರಳನ್ನು ತೆಗೆಯಬಹುದು ಅನ್ನೋದನ್ನ ವೈಜ್ಞಾನಿಕವಾಗಿಯೇ ರಿಪೋರ್ಟ್ ಮಾಡಿಸಿದ್ದಾರೆ. ಅವರು ಕೊಟ್ಟ ರಿಪೋರ್ಟ್ ಹೇಳುತ್ತದೆ, ಇಲ್ಲಿ ಏನೇ ತಿಪ್ಪರ್ಲಾಗ ಹಾಕಿದರು 10000 ಮೆಟ್ರಿಕ್ ಟನ್ ಗಿಂತಲೂ ಜಾಸ್ತಿ , ಮರಳನ್ನು ತೆಗೆಯುವಂತಿಲ್ಲ. ಅದು ಪರಿಸರಕ್ಕೆ ಮಾರಕವಾಗುತ್ತದೆ ಎಂಬ ಸ್ಪಷ್ಟ ರಿಪೋರ್ಟನ್ನು ಉದಯ್ ಕುಮಾರ್ ನಾಯಕ್ ನೀಡಿದ್ದರು. ಆ ರಿಪೋರ್ಟನ್ನು ಜಿಲ್ಲಾಡಳಿತದ ಗಮನಕ್ಕೆ ತಂದರೆ, ಸ್ವತಹ ಜಿಲ್ಲಾಧಿಕಾರಿಯವರೇ ಅದನ್ನು ನಿರ್ಲಕ್ಷಿಸಿದ್ದಾರೆಂಬ ಆರೋಪವಿದೆ. ಆ ರಿಪೋರ್ಟ್ ಮಾಡಿದ ಪ್ರೊಫೆಸರ್ ನಿವೃತ್ತರು, ಅವರ ರಿಪೋರ್ಟಗೆ ಬೆಲೆ ಇಲ್ಲ ನಮ್ಮ ಇಲಾಖೆಯು ಅಧಿಕೃತ ರಿಪೋರ್ಟ್ ತರಿಸಿಕೊಂಡೆ ಇಲ್ಲಿ ನಿಯಮಾನುಸಾರ ಮರಳು ತೆಗೆಯಲು ಪರ್ಮಿಷನ್ ನೀಡಿದೆ ಅಂತ ಹೇಳುವ ಮೂಲಕ ಊರಿನ ಜನರ ವಿರುದ್ಧವಾಗಿ ಜಿಲ್ಲಾಧಿಕಾರಿ ನಿಲ್ಲುತ್ತಾರೆ. ಇದು ಅಕ್ಷಮ್ಯ ಎಂಬ ಮಾತನ್ನು ಹೋರಾಟಗಾರರು ಆಕ್ರೋಶದಿಂದ ನುಡಿಯುತ್ತಿದ್ದಾರೆ.

    ಗಣಿ ಮತ್ತು ಭೂವಿಜ್ಞಾನಿ ಇಲಾಖೆಯು ಇಲ್ಲಿ ಪ್ರಥಮ ಬಾರಿಗೆ ಪರ್ಮಿಷನ್ ಇಡುವಾಗ ದಾಖಲಿಸಿದ ಸರ್ವೇ ನಂಬರ್ ಬೇರೆ. ಆ ಸರ್ವೇ ನಂಬರ್ ವಿಚಾರವಾಗಿ ಮತ್ತು ಅದನ್ನೇ ಇಟ್ಟುಕೊಂಡು ನ್ಯಾಯಾಂಗತ ಹೋರಾಟಕ್ಕೆ ಇಳಿದಾಗ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯು ಆ ಸರ್ವೇ ನಂಬರ್ ಅನ್ನು ಬದಲಾಯಿಸುತ್ತದೆ ಮೊದಲಿಗೆ ಸರ್ವೆ ನಂಬರ್ 90 ಎಂದು ನಮೂದಿಸಿತ್ತು ಆನಂತರ ಆ ಸರ್ವೇ ನಂಬರ್ 111 -140ಆಗಿ ಬದಲಾಗುತ್ತದೆ. ಇಲ್ಲಿಯೇ ತಿಳಿಯುತ್ತದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಷ್ಟು ಚಂದದಲ್ಲೇ ಕೆಲಸ ಮಾಡಿದೆ ಅನ್ನೋದು. ಆದರೂ ಜಿಲ್ಲಾಡಳಿತ ಅಂದರೆ ಜಿಲ್ಲಾಧಿಕಾರಿಗಳು ಜನರ ವಿರುದ್ಧವೇ ನಿಲ್ಲುತ್ತಾರೆ.

    ಇಲ್ಲಿನ ಯುವಕರು, ಯುವತಿಯರು, ಮಹಿಳೆಯರು ಪುರುಷರು ಹಾಗೂ ಸೀನಿಯರ್ ಸಿಟಿಜನ್ಗಳು ಸಹಿತ ಇಡೀ ಊರಿಗೆ ಊರು ಒಂದಾಗಿ ಹೋರಾಟವನ್ನು ಜಿಲ್ಲಾ ಕೇಂದ್ರವಾದ ಉಡುಪಿ ನಗರಕ್ಕೆ ಶಿಫ್ಟ್ ಮಾಡಿದ್ದಾರೆ ಈಗ.

    ಇಷ್ಟಾದರೂ, ಸ್ಥಳೀಯ ಶಾಸಕರು ಆರಾಮವಾಗಿ ಮಾಫಿಯಾದ ಜೊತೆ ಕೈಜೋಡಿಸಿದವರಂತೆ ಊರಿನವರ ಹೋರಾಟದ ಬಗ್ಗೆ ಏನೂ ತಿಳಿಯದವರಂತೆ ತಟಸ್ಥರಾಗಿ ಕುಳಿತಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಬಡ ಜನರ ಪರವಾಗಿ ನಿಲ್ಲುತ್ತಾರೆಂದುಕೊಂಡರೆ ಅವರೂ ಸಹ ಇಲ್ಲಿಗಲ್ ವ್ಯವಹಾರದ ಜೊತೆಗೆ ಕೈಜೋಡಿಸಿದವರಂತೆ, ಊರಿನವರ ಹೋರಾಟ ದಿಂದ ದೂರ ಉಳಿದಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಈ ಹೋರಾಟದ ಜೊತೆಗೆ ಇದ್ದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಮರಕಲ  ಸಹ ಬದಲಾಗಿದ್ದಾರೆ ಈಗ.  ಮರಳು ಮಾಫಿಯಾ ತನ್ನ ಪರವಾಗಿ ನಿಲ್ಲುವ ಹಾಗೆ ಬದಲಾಯಿಸಿಕೊಂಡಿದೆ. ಇದ್ಯಾವುದಕ್ಕೂ ಜಗ್ಗದ ಊರಿನ ಜನರು ಮಾತ್ರ ಹೋರಾಟವನ್ನು ಮುಂದುವರೆಸಿದ್ದಾರೆ. ಈ ಹೋರಾಟವನ್ನು ನ್ಯಾಯಾಲಯ ಹಾಗೂ ರಾಜಧಾನಿ ಬೆಂಗಳೂರಿನವರೆಗೂ ಕೊಂಡೊಯ್ಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಒಂದು ಕಡೆಯಿಂದ ಗಣಿ ಮತ್ತು ಭೂವಿಜ್ಞಾನಿ ಇಲಾಖೆಯ ಅಧಿಕಾರಿಗಳ ಮೇಲೆ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಎಷ್ಟು ಸಾಧ್ಯವೊ ಅಷ್ಟು ಕಠಿಣವಾಗಿ ದೂರು ದಾಖಲಿಸುವುದರ ಬಗ್ಗೆಯೂ ಹೋರಾಟಗಾರರು ಚಿಂತನೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ.

    Also Read  ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ

    ಈಗ ನೊಂದ ಗ್ರಾಮಸ್ಥರು ಹಾಗೂ ತಿಂದು ಕೊಬ್ಬಿರುವ ಜಿಲ್ಲಾಡಳಿತ ಇವೆರಡರ ಮಧ್ಯೆ ಗೆಲ್ಲುವವರು ಯಾರು ಎಂಬ ವಿಚಾರದ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.ಅನವಶ್ಯಕವಾದಂತಹ ಚರ್ಚೆಯಿದು. ಇಂತಹ ಚರ್ಚೆಯ ಬದಲು, ಹೋರಾಟಗಾರರ ಜೊತೆಗೆ ಕೈಜೋಡಿಸುವುದು ಅಥವಾ ಅವರರಿಗೆ  ನೈತಿಕ ಬೆಂಬಲವನ್ನು ಕೊಡುವುದು ಬಿಟ್ಟು ದೂರನಿಂತು, ಈ ರೀತಿಯ ಚರ್ಚೆಯ ಮೂಲಕ ಸಮಯ ವ್ಯರ್ಥ ಮಾಡುತ್ತಿರುವುದು ಕಂಡು ಬರುತ್ತಿದೆ. ಅದೇನೇ ಇರಲಿ, ಇಲ್ಲಿನ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಲವು ಸಮಯಗಳಿಂದ ಇಲ್ಲಿಗಲ್ ವ್ಯವಹಾರಕ್ಕೆ ಕಣ್ಣು ಮುಚ್ಚಿಕೊಂಡು ಕೂತು ಸಪೋರ್ಟ್ ಮಾಡುತ್ತಿದ್ದಾರೆ ಎಂಬ ಆರೋಪವು ಇದ್ದೇ ಇದೆ. ಜಿಲ್ಲೆಯ ತುಂಬ, ಅಕ್ರಮ ಕಲ್ಲು ಕುಾರೆ, ಮರಳುಗಾರಿಕೆ ಹಾಗೂ ಮಣ್ಣು ಸಾಗಾಟ ಯಥೇಚ್ಛವಾಗಿ ನಡೆಯುತ್ತಿದೆ ಎಂಬ ಆರೋಪವಿದ್ದರೂ ಇಲಾಖೆಯ ಅಧಿಕಾರಿಗಳು ಕೇವಲ ವಸೂಲಿಗೆ ಸೀಮಿತಗೊಂಡಿದ್ದಾರೆ ಎಂಬ ಆರೋಪವಿದೆ. ಒಂದೊಮ್ಮೆ ಅದು ಸುಳ್ಳು ಅಂತಾದರೆ, ಇಲ್ಲಿಯವರೆಗೆ ಅಕ್ರಮ ಗಣಿಗಾರಿಕೆಯ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಎಷ್ಟು ರೈಡ್ ಮಾಡಿದ್ದಾರೆ? ಎಷ್ಟು ಪ್ರಕರಣ ದಾಖಲಿಸಿದ್ದಾರೆ? ಆ ಪ್ರಕರಣವು ಯಾವ ಹಂತದಲ್ಲಿದೆ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲಿ ಎಂಬ ಚಾಲೆಂಜ್ ನ್ನು ಸ್ಥಳೀಯ ಸಾಮಾಜಿಕ ಹೋರಾಟಗಾರರೊಬ್ಬರು ಮಾಡುತ್ತಿದ್ದಾರೆ. ಅದರ ಅರ್ಥ, ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಜಿಲ್ಲೆಯ ಪರಿಸರಕ್ಕೆ ಮಾರಕವಾಗುತ್ತಿದೆ ಅಂತರ್ಥ ತಾನೇ?

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!
    ವಿದ್ಯಾರ್ಥಿಗಳಿದ್ದ ಎಮ್ಮೆಕೆರೆ ಲಕ್ಷ್ಮಿ ನಾರಾಯಣ ಹಾಲ್ ಬಾಲ್ಕನಿ ಏಕಾಏಕಿ ಕುಸಿದು ಬಿದ್ದು ಹಲವರಿಗೆ ಗಂಭೀರ ಗಾಯ ..! ಓರ್ವ‌ ವಿದ್ಯಾರ್ಥಿಯ ಬ್ರೈನ್ ಡೆಡ್…
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
    ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …
    ಮಂಗಳೂರಿಗೆ “ಅಮ್ಮ”ನ ಆಗಮನ ಭಕ್ತರಲ್ಲಿ ಸಡಗರವೂ ಸಡಗರ….. ನಾಳೆ ನಗರಕ್ಕೆ ಇಬ್ಬರು ಕೇಂದ್ರ ಸಚಿವರ ಆಗಮನ
    🩸 4 ಲಕ್ಷ ವಿದ್ಯಾರ್ಥಿಗಳು…!!??ಕರ್ನಾಟಕದ ‘ಜೀವ ರಕ್ಷಕ’ Blood Donor Pool!ಏನಿದು ಜೆನ್ ಜಿ ಹೊಸ ಸೋಚ್…
    ಪೊಲೀಸ್ ಇಲಾಖೆಯ ಜಯಶ್ರೀ ನೀಡಿದ ದೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು: ವಿಡಿಯೋ ಕಾಲ್ ಪ್ರಕರಣಕ್ಕೆ ಹೊಸ ತಿರುವು
    ಮಂಗಳೂರಿನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ಹಲ್ಲೆ:…ಕಾಲೇಜು ವಿದ್ಯಾರ್ಥಿಗಳ ರ‍್ಯಾಗಿಂಗ್ ಸಂಸ್ಕೃತಿಗೆ ಬ್ರೇಕ್ ಬೇಕು
    “ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಾನು ಅಧ್ಯಕ್ಷ ಸ್ಥಾನ ಬಿಡಲು ಸಿದ್ಧ”!-ಉದ್ಧವ್ ಠಾಕ್ರೆ ಕಣ್ಣೀರಿನ ಮನವಿ.
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    ಕಂಬಳಕ್ಕೆ ಘೋಷಿತ ಅನುದಾನ ಕೊಡುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ..
    ಸಾಮಾಜಿಕ ಜಾಲತಾಣದ ಹೊಸ ಆತಂಕ!ಕೆಲಸ ಕಡಿಮೆ, Entertainment ಹೆಚ್ಚು! Kids‌ನಿಂದ Adultsವರೆಗೆ Phone ಜಾಲ…!
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ಹೈಕೋರ್ಟ್‌ ಅಂಗಳಕ್ಕೆ ಮೂವರು ಹೊಸ ಮುಖ!ಆ ಮೂವರು ನ್ಯಾಯಾಂಗ ಅಧಿಕಾರಿಗಳು ಯಾರೆಲ್ಲಾ..ಹೇಗೆ ಆಯ್ಕೆ..
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
    “ವಕೀಲರೇ ಎಚ್ಚರ! ಕೋರ್ಟ್‌ನಲ್ಲಿ ನಕಲಿ AI ರೆಫರೆನ್ಸ್ ನೀಡಿದರೆ ಕಠಿಣ ಶಿಸ್ತು ಕ್ರಮ: BCIಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ”
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
    ಹೆಡ್‌ಲೈಟ್ ಇಲ್ಲ… ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!
    ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
    ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”
    ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ