📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    *ಬೈಕಂಪಾಡಿ ಹೆದ್ದಾರಿ ಡಕಾಯಿತಿ, 23 ಲಕ್ಷ ಮೌಲ್ಯದ ಸೊತ್ತು ದರೋಡೆ ಪ್ರಕರಣ: 3 ಆರೋಪಿಗಳು ಸೆರೆ.

    ಮಂಗಳೂರು: ಮಹಾರಾಷ್ಟ್ರದಿಂದ ಕೇರಳಕ್ಕೆ ತೆರಳುತ್ತಿದ್ದ ಕುಟುಂಬವೊಂದನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ರೂ.23.10 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಸಹಿತ ಸೊತ್ತು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಘಟನೆ ನಡೆದದ್ದು ಹೇಗೆ?
    ದಿನಾಂಕ 29-06-2026 ರಂದು ನಸುಕಿನ 2:45ಕ್ಕೆ ರಾಷ್ಟ್ರೀಯ ಹೆದ್ದಾರಿ-66ರ ಬೈಕಂಪಾಡಿ ಬಳಿ ಈ ಘಟನೆ ನಡೆದಿದೆ. ದೂರುದಾರ ವಿಕಾಸ್ ಸುಬ್ಬರಾವ್ ಧವಡೆ (44) ಅವರು ಪತ್ನಿ ಮತ್ತು ಮಗನೊಂದಿಗೆ KL-59-R-9450 ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಪಯ್ಯನ್ನೂರಿಗೆ ತೆರಳುತ್ತಿದ್ದರು. ಈ ವೇಳೆ ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಜನ ಮುಸುಕುಧಾರಿಗಳು ಕಾರನ್ನು ಅಡ್ಡಗಟ್ಟಿ, ತಲವಾರು ತೋರಿಸಿ ಹಲ್ಲೆ ನಡೆಸಿದ್ದಾರೆ.

    Also Read  ಅಂದೊಮ್ಮೆ ಬಾಲಿವುಡ್‌ನಲ್ಲಿ ಕಡೆಗಣಿಸಿದ  ಪ್ರಿಯಾಂಕಾ ಚೋಪ್ರಾ ಇಂದು ವಿಶ್ವದ ಪ್ರತಿಷ್ಠಿತ ಬ್ರಾಂಡ್ ರೋಲೆಕ್ಸ್‌ನ ಅಂಬಾಸಿಡರ್! 

    ದೂರುದಾರರಿಗೆ ಗಾಯಪಡಿಸಿ, ಪತ್ನಿ-ಮಗನನ್ನು ಅಪಹರಿಸಿ ಕೆಲ ಕಿ.ಮೀ ದೂರದಲ್ಲಿ ಅವರನ್ನು ಬಿಟ್ಟು, ಕಾರು, 180 ಗ್ರಾಂ ಚಿನ್ನಾಭರಣ (ರೂ.20 ಲಕ್ಷ), 2 ಮೊಬೈಲ್ (ರೂ.10,000) ಸಹಿತ ಒಟ್ಟು ರೂ.23,10,000 ಮೌಲ್ಯದ ಸೊತ್ತು ದೋಚಿ ಪರಾರಿಯಾಗಿದ್ದರು.
    ಪಣಂಬೂರು ಠಾಣೆಯಲ್ಲಿ BNS ಕಲಂ 310(2), 311, 324(2), 137(2), 126(2) ಹಾಗೂ KPDLP Act ಅಡಿ ಪ್ರಕರಣ ದಾಖಲಾಗಿ ಇದೀಗ ಮೂವರು ಆರೋಪಿಗಳನ್ನು ಎಡೆಮುಡಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳು
    ನಿಮಿಲ್ ಆರ್.ಕೆ (37) ಕಣ್ಣೂರು, ಕೇರಳ. ಈತನನ್ನು ಕಣ್ಣೂರಿನ ASTER MIMS ಆಸ್ಪತ್ರೆ ಬಳಿ ಬಂಧಿಸಲಾಯಿತು. ಇರ್ಷಾದ್ (40) ಮಡಿಕೇರಿ. ಕೃತ್ಯಕ್ಕೆ ಸಹಕರಿಸಿ, ಆರೋಪಿತರಿಗೆ ಆಶ್ರಯ ನೀಡಿದ ಆರೋಪ ಈತನ ಮೇಲಿದೆ. ಈತನನ್ನು ಪೊನ್ನಂಪೇಟೆಯಲ್ಲಿ ಸೆರೆ ಹಿಡಿಯಲಾಯಿತು.
    ಮುಸ್ತಾಫ (49) ಮಡಿಕೇರಿಯವ. ದುಷ್ಕೃತ್ಯಕ್ಕೆ ಕಾರು ಒದಗಿಸಿ ಆಶ್ರಯ ನೀಡಿದ ಆರೋಪ ಈತನ ಮೇಲಿದೆ. ಮೂರ್ನಾಡು ಬಸ್ ನಿಲ್ದಾಣದಲ್ಲಿ ಹೆಡೆಮುರಿ ಕಟ್ಟಲಾಯಿತು

    Also Read  ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..

    ಮೂವರನ್ನೂ ದಿನಾಂಕ 03-07-2026 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

    ತನಿಖಾ ಪ್ರಗತಿ
    ಪ್ರಾಥಮಿಕ ವಿಚಾರಣೆಯಲ್ಲಿ ಒಟ್ಟು 14 ಆರೋಪಿಗಳು ನೇರವಾಗಿ, 2 ಆರೋಪಿಗಳು ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ. ಒಟ್ಟು 16 ಆರೋಪಿಗಳ ಪೈಕಿ 13 ಜನರ ಪತ್ತೆ ಬಾಕಿ ಇದೆ.

    ಸೊತ್ತು ಸ್ವಾಧೀನ: ದೂರುದಾರರ ಮಾರುತಿ ಡಿಝೈರ್ ಕಾರು ಪಚ್ಚಿನಡ್ಕ ಗುಡ್ಡದಲ್ಲಿ ಪತ್ತೆಯಾಗಿದೆ. ಆರೋಪಿಗಳು ಬಳಸಿದ 4 ಕಾರುಗಳ ಪೈಕಿ 1 ಇನ್ನೋವಾ ಕ್ರಿಸ್ಟಾ ವಶಪಡಿಸಿಕೊಂಡಿದ್ದಾರೆ ಪೊಲೀಸರು.
    ಪತ್ತೆ ಬಾಕಿ
    180 ಗ್ರಾಂ ಚಿನ್ನ, 2 ಮೊಬೈಲ್, ಉಳಿದ 3 ಕಾರುಗಳು.

    ಉತ್ತರ ವಿಭಾಗ ಎಸಿಪಿ ಶ್ರೀಕಾಂತ ಕೆ., ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪಣಂಬೂರು ನಿರೀಕ್ಷಕ ಸಲೀಂ ಅಬ್ಬಾಸ್, ಪಿಎಸ್‌ಐ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ವಿವಿಧ ಠಾಣೆಗಳ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಆರೋಪಿಗಳೆಲ್ಲರೂ ಮಡಿಕೇರಿ ಮತ್ತು ಕೇರಳದವರೆಂದು ತನಿಖೆಯಲ್ಲಿ ತಿಳಿದುಬಂದಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
    ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!
    ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
    ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಕುಟುಂಬದ ನಾಲ್ವರ ನಿಗೂಢ ಸಾವು…
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
    ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
    ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
    ನೀಟ್ ಪರೀಕ್ಷೆಯ ಎಡವಟ್ಟು….ಸುಳ್ಳು ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ ಅಧಿಕಾರಿಗಳು!!?
    ಫೇಸ್‌ಬುಕ್ ‘ಸುಂದರಿ’ಅವಳಲ್ಲ ಅವನು!ಲವ್ ಮಾಡಿ ಹೆಂಡತಿ ಅಂದುಕೊಂಡವನು ಗಂಡಸು ಅಂತ ಗೊತ್ತಾದಾಗ ನಡೆದಿದ್ದೇ ಬೇರೆ!
    ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
    ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ಕಾರ್ಮಿಕನ ಸುಳಿವಿನಿಂದ ₹4.91 ಕೋಟಿ ನಕಲಿ ಔಷಧ ಪತ್ತೆ!ಔಷಧದ ಹೆಸರಿನಲ್ಲಿ ಭಯಾನಕ ದಂಧೆ!
    ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
    ಮಂಗಳೂರು ಬಸ್‌ನಲ್ಲಿ ಗುಪ್ತಾಂಗ ತೋರಿಸಿ ಕಂಡಕ್ಟರ್ ವಿಕೃತ ವರ್ತನೆ: ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಬಂಧನ
    Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
    ಕುಂದಾಪುರದಲ್ಲಿ ಗುಂಡಿನ ದಾಳಿ: ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಹತ್ಯೆ
    ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..
    ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ
    “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
    ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..
    ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
    ಬೆಂಗಳೂರು ಮಾತ್ರವಲ್ಲ… ಮಂಗಳೂರಿನಿಂದಲೂ Startup ಹಾರಾಟ! ₹9.5 ಕೋಟಿಗೂ ಅಧಿಕ ಹೂಡಿಕೆಯ K-Combinatorಗೆ ಚಾಲನೆ
    “ಟೀಕೆ ಮಾಡಿ, ತೇಜೋವಧೆ ಬೇಡ” – ಹೈಕೋರ್ಟ್‌ನಿಂದ ಗಿರೀಶ್ ಮಟ್ಟೆಣ್ಣನವರ್‌ಗೆ ಖಡಕ್ ಎಚ್ಚರಿಕೆ
    🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
    ಭಾರತದಲ್ಲಿ ಮೋದಿ-ಜಸ್ಸಿ ಹೈ-ಲೆವೆಲ್ ಮೀಟಿಂಗ್ – ಅಮೆಜಾನ್ ಬರೋಬ್ಬರಿ $48 ಬಿಲಿಯನ್ ಹೂಡಿಕೆಗೆ ಆಂಡಿ ಜಸ್ಸಿ ಮುದ್ರೆ!
    ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
    ಅಪ್ಪ -ಅಮ್ಮ ಮಕ್ಕಳ–ಬಾಂಧವ್ಯಕ್ಕೆ ಎಚ್ಚರಿಕೆಯ ಗಂಟೆ……!ಸುತ್ತಿಗೆಯಿಂದ ಹೊಡೆದು ತಂದೆ-ತಾಯಿಯನ್ನೇ ಕೊಂದ ಮಗ!