📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ

    ಇನ್ನೂ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿಲ್ಲ, ಇಂದು ಸಂಜೆಯ ಹೊತ್ತಿಗೆ ಅವರು ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ನಿಯೋಜಿತ ಮುಖ್ಯಮಂತ್ರಿ ಎಂದೇ ಹೇಳಲಾಗುವ ಡಿಕೆ ಶಿವಕುಮಾರ್ ಗೆ ಆ ಕುರ್ಚಿ ವಿಪರೀತ ಕಷ್ಟವನ್ನುಂಟುಮಾಡಲಿದೆ ಅನ್ನುವುದಂತೂ ಪಕ್ಕಾ ಆಗಿದೆ.

    ಈಗಾಗಲೇ, ಮುಂದೆ ಏನು ಮಾಡಬೇಕೆನ್ನುವುದರ ಪ್ಲಾನುಗಳು ತಯಾರಾಗುತ್ತಿವೆ. ಡಿಕೆ ಶಿವಕುಮಾರ್ ಶುಕ್ರವಾರ ಅಥವಾ ಭಾನುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ನಿಘಂಟಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಮಾಡಬೇಡಿ ಅಂತ ರಾಹುಲ್ ಗಾಂಧಿಯ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ ರಾಹುಲ್ ಗಾಂಧಿ, ಅವರ ಬೇಡಿಕೆಗೆ ಒಪ್ಪಲು ಸಾಧ್ಯವೇ ಇರಲಿಲ್ಲ. ಸೋನಿಯಾ ಗಾಂಧಿ ಹಾಗೂ ಪ್ರಿಯಂಕಾ ಗಾಂಧಿ ಇಬ್ಬರು ಡಿಕೆ ಶಿವಕುಮಾರ್ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ರಾಹುಲ್ ಗಾಂಧಿ ಈ ವಿಚಾರದಲ್ಲಿ ಸಿದ್ದರಾಮಯ್ಯಗೆ ಸಹಕರಿಸಲು ಸಾಧ್ಯವಿರಲಿಲ್ಲ. ಹಾಗಾಗಿಯೇ ರಾಹುಲ್ ಗಾಂಧಿ ಸಿದ್ದರಾಮಯ್ಯಗೆ ಬೇರೆಯದೇ ಆದ ದೊಡ್ಡ  ಅಸ್ತ್ರವನ್ನು ಕೊಟ್ಟಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ನಿಮಗೆ ಬೇಕಾದವರಿಗೆ 20 ಸಚಿವ ಸ್ಥಾನವಿರುತ್ತದೆ. ಆಸ್ಥಾನವನ್ನು ನೀವು ಯಾರಿಗೆ ಬೇಕಾದರೂ ನೀಡಬಹುದು ಎಂಬ ಅಸ್ತ್ರವನ್ನು ಸಿದ್ದರಾಮಯ್ಯರಿಗೆ ನೀಡಿದ್ದಾರೆ. ಹಾಗೆಯೇ, ನಾಲ್ಕು ಡಿಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಪ್ರಬಲ ವಿರೋಧವನ್ನು ಒಡ್ಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ನಾನೊಬ್ಬನೇ ಡಿಸಿಎಂ ಆಗಿದ್ದೆ. ಈಗಲೂ ಡಿಸಿಎಂ ಒಬ್ಬರೇ ಆಗಿರಬೇಕು ಅನ್ನುವುದು ಡಿಕೆಶಿ ಪ್ರತಿಪಾದನೆ. ಅದೇ ರೀತಿ, ಸಿದ್ದರಾಮಯ್ಯರಿಗೆ ಈ ಮೂರು ವರ್ಷಗಳ ಕಾಲ ಎಷ್ಟು ಸ್ವಾತಂತ್ರ್ಯವಿತ್ತೋ ಅಷ್ಟೇ ಸ್ವಾತಂತ್ರ್ಯ ನನಗಿರಬೇಕು ಅನ್ನುವ ಬೇಡಿಕೆಯನ್ನು ರಾಹುಲ್ ಗಾಂಧಿ ಮುಂದೆ ಡಿಕೆಶಿ ಇಟ್ಟಿದ್ದಾರೆ. ಎರಡುವರೆ ವರ್ಷ ಆಡಳಿತದ ನಂತರ ಕೊಡಬೇಕಿದ್ದ ಅಧಿಕಾರವನ್ನು 3 ವರ್ಷದವರೆಗೆ ಸಿದ್ದರಾಮಯ್ಯನವರು ಅನುಭವಿಸಿದ್ದಾರೆ. ಮತ್ತೆ ಈಗ, ನನ್ನ ಅಧಿಕಾರದ ಅವಧಿಯಲ್ಲಿ ಪದೇ ಪದೇ ಬಂದು ಅಧಿಕಾರ ಚಲಾಯಿಸುವುದು ನನಗೆ ಸುತಾರಾಮ್ ಇಷ್ಟವಿಲ್ಲ ಎಂದು ಡಿಕೆಶಿ ಖಡಕ್ಕಾಗಿ ಹೇಳಿದ್ದರೂ, ರಾಹುಲ್ ಗಾಂಧಿ ಆ ವಿಚಾರದಲ್ಲಿ ಮೌನರಾಗಿದ್ದಾರೆಂದು ತಿಳಿದು ಬಂದಿದೆ. 

    Also Read  ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!

    ಇಂದು ಬೆಳಗ್ಗಿನ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿದಿದೆ. ಆಪ್ತ ಶಾಸಕರು ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಆಪ್ತ ಸಮಾಲೋಚನೆ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಹಾಗೂ ಇಂಧನ ಸಚಿವ ಜಾರ್ಜ್ ಇಬ್ಬರು ಮುಂದಿನ ಸಂಪುಟದಲ್ಲಿ ತಾವು ಇರುವುದಿಲ್ಲ ಅಂತ ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರಿಗೆ ಮಾಹಿತಿ ಹೋಗಿದೆ. ಡಿಕೆ ಸಂಪುಟದಲ್ಲಿ ಯುವ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇರುವುದರಿಂದ, ತಮಗೆ ಸ್ಥಾನ ಸಿಗುವುದು ಡೌಟ್ . ಹಾಗಾಗಿಯೇ ತಾವಾಗಿಯೇ ತಾವು ಡಿಕೆಶಿ ಸಂಪುಟದಲ್ಲಿ ಸಚಿವರಾಗುವುದಿಲ್ಲ ಅಂತ ಹೇಳುವ ಮೂಲಕ ಹೊಸ ದಾಳ ಉರುಳಿಸಲು ತಯಾರಿ ನಡೆಸಿದಂತಿದೆ. ಒಟ್ಟಿನಲ್ಲಿ ಇಂದು ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ, ರಾಜ್ಯಪಾಲರು ಊರಿನಲ್ಲಿಲ್ಲದ ಕಾರಣ ಅವರ ರಾಜೀನಾಮೆಯನ್ನು ಪರಿಶೀಲಿಸಿ ಅಕ್ಸೆಪ್ಟ್ ಮಾಡುವುದು ಯಾವಾಗ? ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವುದು ಯಾವಾಗ ಅನ್ನುವುದು ರಾಜ್ಯಪಾಲರು ಆಗಮಿಸಿದ ನಂತರವೇ ಗೊತ್ತಾಗಲಿದೆ?

    Also Read  ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..

    ಒಂದಂತೂ ಸತ್ಯ, ಡಿಕೆಶಿಗೆ ಸಿಎಂ ಕುರ್ಚಿಯನ್ನು ಮಗ್ಗಲು ಮುಳ್ಳನ್ನಾಗಿಸಲು ಏನೆಲ್ಲ ಮಾಡಬೇಕು ಅದೆಲ್ಲವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಅವರ ತಂಡ ಮುಂದಿನ ದಿನದಲ್ಲಿ ಹಂತ ಹಂತವಾಗಿ ಮಾಡಲಿದೆ. ಇದಕ್ಕೆ ಡಿಕೆ ಶಿವಕುಮಾರ್ ಹೇಗೆ ಎದುರಿಸುತ್ತಾರೆ, ಪ್ರತ್ಯುತ್ತರ ನೀಡುತ್ತಾರೆ ಎನ್ನುವುದು ನಿಗೂಢ ವಿಚಾರ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೊನೆಗೂ ಸೋತ ಖಾಕಿ….!!!
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಲು ಮಹಾರಾಷ್ಟ್ರದ ಮಾಸ್ಟರ್ ಪ್ಲಾನ್: ಇನ್ವಿಟೇಶನ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಕಡ್ಡಾಯ!
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”
    ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    Old Monk, Royal Challengeಗೆ ಭಾರೀ ಶಾಕ್..! FSSAI ಲ್ಯಾಬ್ ವರದಿಯಲ್ಲಿ ಬಯಲಾಯ್ತಾ ದೊಡ್ಡ ರಹಸ್ಯ?
    ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
    ಸಾರ್ವಜನಿಕವಲ್ಲದ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದರೆ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
    ‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
    ಶಾಂತಿ ಕಾಪಾಡಿ, ವದಂತಿಗಳಿಗೆ ಕಿವಿಗೊಡಬೇಡಿ: ಪ್ರತಿಭಟನಾಕಾರರಿಗೆ ದೆಹಲಿ ಪೊಲೀಸರ ಮನವಿ
    ‘ಕಾಕ್ರೋಚ್’ಗಳ ದಂಗೆಗೆ ದೆಹಲಿ ನಡುಗಿತೇ? ವಿದ್ಯಾರ್ಥಿಗಳ ‘ಸಂಸತ್ ಚಲೋ’ಗೆ ಲಾಠಿಚಾರ್ಜ್… ಸಂಸತ್ತಿನಲ್ಲೂ ಸದ್ದು!ಕಲಾಪ ಮುಂದೂಡಿಕೆ?!
    ಇಂದಿನ ಆಧುನಿಕ ಯುಗದಲ್ಲೂ ಗಂಡನ ಮನೆಯಲ್ಲಿ ಹೆಣ್ಣೊಬ್ಬಳ ನರಕಯಾತನೆಯ ನೈಜ ದೃಶ್ಯ ತಂದೆಯೇ ಕಣ್ಣಾರೆ ನೋಡಿದರೇ ….ಕಣ್ಣೀರು ತಡೆಯಲು ಸಾಧ್ಯವಿಲ್ಲ…..
    ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
    ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!
    ನೂರರ ಸಂಭ್ರಮದಲ್ಲಿ “ಜೈ” ತುಳು ಸಿನಿಮಾ
    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
    ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
    ಕೋರ್ಟ್ ವಿಡಿಯೊ ವೈರಲ್‌ಗೆ ಬ್ರೇಕ್: ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಜನಾಭಿಪ್ರಾಯ ಏನು?
    ಮೋದಿ ವಿಡಿಯೋ ಡಿಲೀಟ್ ವಿವಾದ: ಭಾರತಕ್ಕೆ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್!
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಒಂಟಿ – ಆಂಟಿಯರ ನಂಬಿಕೆ ಗಳಿಸಿ ಕೊಲೆಗೈಯುತ್ತಿದ್ದ ಸೀರಿಯಲ್ ಕಿಲ್ಲರ್ ಬಂಧನ …!
    ದಿಶಾ ಸಾಲಿಯನ್ ಕೇಸ್‌ ರೀಓಪನ್‌…ಸುಶಾಂತ್ ಸಿಂಗ್ ಸಾವಿನ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ?
    ಕರಾವಳಿಯಲ್ಲಿ ಅಕ್ರಮ 109 ಹೋಂಸ್ಟೇಗಳು, 21ರೆಸಾರ್ಟ್‌ಗಳಿಗೆ ಶಾಕ್ ಲೋಕಾಯುಕ್ತ ಬೀಗ!ರೆಸಾರ್ಟ್‌ಗಳು ಬಂದ್!
    ಮೊದಲ ದಿನವೇ ಯು.ಟಿ. ಖಾದರ್ ಖಡಕ್ ನಡೆ …PF ಕೊಡದ ಗುತ್ತಿಗೆದಾರನಿಗೆ ನೋಟಿಸ್, ಅಧಿಕಾರಿಗಳಿಗೆ ತರಾಟೆ