📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಧರ್ಮಸ್ಥಳ-ಚಿಕ್ಕಮಗಳೂರು ಟ್ರಿಪ್‌ಗೆ ಹೊರಟ ಸ್ವಿಗ್ಗಿ ಡೆಲಿವರಿ ಬಾಯ್ಸ್… ಅರಬೈಲ್ ಘಾಟ್‌ನಲ್ಲಿ ಭೀಕರ ಅಪಘಾತ, 6 ಜೀವಗಳು ಅಂತ್ಯ!

    ಯಲ್ಲಾಪುರ ಅರಬೈಲ್ ಘಾಟ್‌ನಲ್ಲಿ ಭೀಕರ ರಸ್ತೆ ದುರಂತ: ಪ್ರವಾಸಕ್ಕೆ ಹೊರಟಿದ್ದ ಸ್ವಿಗ್ಗಿ ಡೆಲಿವರಿ ಯುವಕರ ಕನಸು ಚೂರಾಗಿ 6 ಸಾವು, 4 ಮಂದಿಗೆ ಗಂಭೀರ ಗಾಯ

    ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಅರಬೈಲ್ ಘಾಟ್‌ನ ಬಳಗಾರ್ ಪ್ರದೇಶದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿಗರಿದ್ದ ತೂಫಾನ್ ಕ್ರೂಸರ್ ಮತ್ತು ಎದುರಿನಿಂದ ಬಂದ ಲಾರಿ ನಡುವೆ ನಡೆದ ಮುಖಾಮುಖಿ ಡಿಕ್ಕಿ ಈ ದುರ್ಘಟನೆಗೆ ಕಾರಣವಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

    ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ KA-19 AA-5920 ಸಂಖ್ಯೆಯ ತೂಫಾನ್ ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದವರು ಧಾರವಾಡ ಜಿಲ್ಲೆಯ ನಿವಾಸಿಗಳಾಗಿದ್ದು, ಬಹುತೇಕರು ಸ್ವಿಗ್ಗಿ ಸಂಸ್ಥೆಯಲ್ಲಿ ಪಾರ್ಟ್‌ಟೈಮ್ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಕೆಲಸ ಮುಗಿಸಿದ ಬಳಿಕ ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಪ್ರವಾಸಕ್ಕೆ ಸ್ನೇಹಿತರೊಂದಿಗೆ ಹೊರಟಿದ್ದ ವೇಳೆ ಅರಬೈಲ್ ಘಾಟ್‌ನಲ್ಲಿ ಎದುರಿನಿಂದ ಬಂದ KA-22 AA-1008 ಸಂಖ್ಯೆಯ ಲಾರಿ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

    Also Read  “ಒಂದು ಫಾರ್ವರ್ಡ್... ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!

    ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ತೂಫಾನ್ ಕ್ರೂಸರ್ ಸಂಪೂರ್ಣ ಜಖಂಗೊಂಡು ಕಬ್ಬಿಣದ ಮುದ್ದೆಯಂತಾಗಿದೆ. ಸ್ಥಳದಲ್ಲೇ ಐವರು ಮೃತಪಟ್ಟರೆ, ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ದುರಂತದ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ರಕ್ಷಣಾ ಸಿಬ್ಬಂದಿ ವಾಹನದಲ್ಲಿದ್ದವರನ್ನು ಹೊರತೆಗೆದಲು ಸಾಕಷ್ಟು ಹರಸಾಹಸ ಪಟ್ಟರು.

    ಮೃತರನ್ನು ಬಸವರಾಜ್ (48), ಅಭಿಷೇಕ್ ಈಶ್ವರ್ (28), ಅಕ್ಷಯ (26), ಅಭಿಷೇಕ್ (26) ಹಾಗೂ ಸಂಜೀವ್ (ಸಂಜಯ ಅಂಗಡಿ) ಎಂದು ಗುರುತಿಸಲಾಗಿದೆ. ಇನ್ನೋರ್ವ ಮೃತರ ಗುರುತು ಅಥವಾ ಹೆಸರು ಕುರಿತು ಅಧಿಕೃತ ಮಾಹಿತಿ ನಿರೀಕ್ಷೆಯಲ್ಲಿದೆ.

    ಅಪಘಾತದಲ್ಲಿ ಶಿವರಾಜ್ ದುರ್ಗಪ್ಪ ಮಡಿವಾಳ್ (22), ಮಂಜುನಾಥ್ ಅಶೋಕ್ ಚುಲಕಿ (32), ಸಚಿನ್ ಹಾಗೂ ಚೆನ್ನಬಸಯ್ಯ ಬಸಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

    Also Read  ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಅರಬೈಲ್ ಘಾಟ್‌ನಲ್ಲಿ ತಿರುವುಗಳು ಮತ್ತು ಇಳಿಜಾರು ಹೆಚ್ಚಿರುವ ಕಾರಣ ವಾಹನ ಚಾಲಕರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

    ಒಂದೇ ವಾಹನದಲ್ಲಿ ಸಂತಸದಿಂದ ಪ್ರವಾಸಕ್ಕೆ ಹೊರಟಿದ್ದ ಯುವಕರ ಸಂಭ್ರಮ ಕೆಲವೇ ಕ್ಷಣಗಳಲ್ಲಿ ಶೋಕವಾಗಿ ಮಾರ್ಪಟ್ಟಿದೆ. ಕುಟುಂಬದ ಬದುಕಿಗೆ ಆಸರೆಯಾಗಿದ್ದ ಯುವಕರ ಅಕಾಲಿಕ ನಿಧನದಿಂದ ಧಾರವಾಡ ಜಿಲ್ಲೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

    ##YellapurAccident #UttaraKannada #RoadAccident #SwiggyDelivery #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
    ಮಂಗಳೂರಿನಲ್ಲಿ ಬೃಹತ್ ನಕಲಿ ನೋಟು ಜಾಲ ಭೇದಿಸಿದ ಉಪ್ಪಿನಂಗಡಿ ಪೊಲೀಸರು..!ಅಡೆಂಜದಲ್ಲಿ ನಕಲಿ ನೋಟಿನ ಕಾರ್ಖಾನೆ ಬಯಲು! ಏಳು ಮಂದಿ ಅರೆಸ್ಟ್‌, ಕೋಟಿ ಕೋಟಿ ವಂಚನೆಗೆ ಬ್ರೇಕ್
    ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    FSSAI ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ…!ಕಾರ್ಪೊರೇಟ್ ಒತ್ತಡಕ್ಕೆ ಮಣಿದಿರಾ?ಪ್ಯಾಕ್ ಆಹಾರಕ್ಕೆ ಎಚ್ಚರಿಕೆ ಲೇಬಲ್ ಕಡ್ಡಾಯ ಯಾಕಿಲ್ಲ? 
    24 ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕಾ ದಾಳಿ: 3 ನಾವಿಕರ ಜೀವ ಬಲಿ
    ವಂದೇ ಮಾತರಂ ವಿವಾದ ದೇಶಭಕ್ತಿಯ ಸಂಕೇತವೇ, ರಾಜಕೀಯ ಅಸ್ತ್ರವೇ?
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
    ‘ಮೈ ಭಾರತ್’-ದಕ್ಷಿಣ ಕನ್ನಡದ ಯುವ(ಕ/ತಿ)ಯರೇ, ರಾಷ್ಟ್ರಮಟ್ಟದ ವೇದಿಕೆಗೆ ಇದು ನಿಮ್ಮ ಅವಕಾಶ!
    ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    ಬಂಟ್ವಾಳದಲ್ಲಿ ವ್ಯಕ್ತಿಗಳ ಆರೋಪ–ಪ್ರತ್ಯಾರೋಪಕ್ಕಿಂತ “ರಾಜಕೀಯದೊಳಗಿನ ರಾಜಕೀಯ”ಬಿಸಿ…!ಲಾಭ ಯಾರಿಗೆ?
    ಶಾಲಾ ಶಿಕ್ಷಕಿಯರ ಹೆಸರಿನಲ್ಲಿ ಡ್ರಗ್ಸ್ ಜಾಲ ..! ತನಿಖೆಯಲ್ಲಿ ಬೆಚ್ಚಿಬೀಳಿಸುವ ಕೊಂಡಿಗಳು ಇನ್‌ಸ್ಟಾಗ್ರಾಮ್‌ನಿಂದ ಗ್ರಾಹಕರ ಸೆಳೆತ, ಗಲ್ಫ್ ನಂಬರ್ ಮೂಲಕ ಬುಕ್ಕಿಂಗ್
    ಅಣ್ಣಾ ಹಜಾರೆಗೆ ಲೈವ್, ಸೋನಂ ವಾಂಗ್ಚುಕ್‌ಗೆ ಮೌನವೇಕೆ?”  ದ್ವಂದ್ವ ನೀತಿಯ ಬಗ್ಗೆ ಪ್ರಶ್ನೆ
    ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳಿಗೆ heartattack !!!..ಐಸಿಯು ಮತ್ತು ಸಿಸಿಟಿವಿ ದೃಶ್ಯಗಳಲ್ಲಿದೆ ಕ್ಲಾರಿಟಿ!
    “ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
    ಪರಿಸರ ಕಾಪಾಡುವವರೇ ನಿಜವಾದ ಹೀರೋಗಳು! ‘ಇಕೋಪ್ರಿನ್ಯೂರ್ ಅವಾರ್ಡ್ಸ್ 2026’ ಮೂಲಕ ಹಸಿರು ಸಾಧಕರಿಗೆ ಗೌರವ
    ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಕಠಿಣ ಎಚ್ಚರಿಕೆ ದ್ವಿವೇದಿ ವಾರ್ನಿಂಗ್ ವೈರಲ್!” “ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದ ಭಾಗವಾಗಬೇಕೆ ?”
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    NEET ಹಂಗಾಮ ನೀಟಾಗಿ ಅಂತ್ಯ ಕಾಣುತ್ತಾ…?!ಮೋದಿಯ ‘ತಡವಾದ ಪ್ರತಿಕ್ರಿಯೆ’-ಕೊನೆಗೂ ವಾಂಗ್ಚುಕ್ ಉಪವಾಸ ಅಂತ್ಯ… ಆದರೆ … ‘ಕಾಕ್ರೋಚ್’ ಹೋರಾಟ ಮುಂದುವರಿಕೆ!ಮುಂದೇನು??
    “ಕುನಾಲ್ ಶಾ ವಾಟ್ಸಾಪ್ ಗ್ಲೋಬಲ್ ಹೆಡ್! ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸಾಲಿಗೆ ಮತ್ತೊಬ್ಬ ಭಾರತೀಯನ ಸೇರ್ಪಡೆ.
    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಬಿಡದಿ “ಸಮಗ್ರ ಉಪನಗರ” ಯೋಜನೆ ಕೈಬಿಡಿ: ಸಿಎಂ ಡಿಕೆ ಶಿಗೆ ಎಚ್.ಡಿ. ದೇವೇಗೌಡ ಪತ್ರ
    ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
    ಸಮಾಜಸೇವಕನ ಮುಖವಾಡದ ಹಿಂದೆ ಡ್ರಗ್ಸ್ ದಂಧೆ?ಅದು ಆ್ಯಂಬುಲೆನ್ಸ್ ನಲ್ಲಿ ..!ಚಾಲಕ ಜಲೀಲ್ ಬಾಬಾ ಪರಾರಿ!ಆತನಿಗೆ ಆಶ್ರಯ ಅಥವಾ ಪರಾರಿಯಾಗಲು ಸಹಾಯ ಮಾಡಿದವರ ಮೇಲೂ ಕಾನೂನು ಕ್ರಮ
    “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು