📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?

    ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ ಮತ್ತು ವಂಚನೆ ಪ್ರಕರಣದ ಪ್ರಮುಖ ಆರೋಪಿ ಜೀನತ್ ಇಬ್ರಾಹಿಂ ಆಲಿಯಾಸ್ ಜೀನತ್ ಅಬ್ದುಲ್ ಸಲಾಂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಈ ಪ್ರಕರಣದ ತನಿಖೆ ಆಳಕ್ಕೆ ಹೋದಂತೆ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳು ಹೊರಬರುತ್ತಿದ್ದು, ಪೊಲೀಸ್ ಇಲಾಖೆ ತೀವ್ರ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

    ಜಾಲದ ಸ್ವರೂಪ ಬಯಲು
    ಮೂಲಗಳ ಪ್ರಕಾರ, ಆರೋಪಿ ಜೀನತ್ ವಿವಿಧ ವೃತ್ತಿ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಜಾಲ ನಡೆಸುತ್ತಿದ್ದಳು ಎಂಬ ಶಂಕೆ ಇದೆ.

    • ರಾಜಕೀಯ ವಲಯ: ಬೆಂಗಳೂರು ಗ್ರಾಮಾಂತರ ಭಾಗದ ಹಾಲಿ ಶಾಸಕರೊಬ್ಬರ ಆಕ್ಷೇಪಾರ್ಹ ವಿಡಿಯೋ ಅಥವಾ ಫೋಟೋ ಡಿಜಿಟಲ್ ಎವಿಡೆನ್ಸ್ ರೂಪದಲ್ಲಿ ಸಿಕ್ಕಿದೆ ಎನ್ನಲಾಗುತ್ತಿದೇ. ಜೊತೆಗೆ ಉಡುಪಿ ಜಿಲ್ಲೆಯ ಮಾಜಿ ಎಂಎಲ್ಎ ಮತ್ತು ಮಾಜಿ ಸಚಿವರೊಬ್ಬರೊಂದಿಗಿನ ಆಪ್ತತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
    • ಇತರೆ ಕ್ಷೇತ್ರ: ಸ್ಥಳೀಯ ಕಾಂಗ್ರೆಸ್ ನಾಯಕ ಹಾಗೂ ಹೋಟೆಲ್ ಉದ್ಯಮಿಯೊಬ್ಬರ ಜೊತೆಗಿನ ಫೋಟೋ, ವಿಡಿಯೋಗಳು, ಇಬ್ಬರು ವಕೀಲರು ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯ ಹೆಸರೂ ಸಾರ್ವಜನಿಕವಾಗಿ ಹರಡುತ್ತಿರುವ ಸುದ್ದಿಯಲ್ಲಿ ಕೇಳಿ ಬರುತ್ತಿದೆ ಎನ್ನಲಾಗಿದೆ.
    • ಬ್ಯಾಂಕಿಂಗ್ ವಲಯ: ಬ್ಯಾಂಕ್ ಮ್ಯಾನೇಜರ್ ಜೊತೆ ವಿಡಿಯೋ ಕಾಲ್, ಸೊಸೈಟಿ ಅಧ್ಯಕ್ಷರನ್ನು ಗುರಿಯಾಗಿಸಿದ್ದು, ನಿವೃತ್ತ ಬ್ಯಾಂಕ್ ಸಿಬ್ಬಂದಿಯೊಬ್ಬರಿಂದ ಹಣ ವಸೂಲಿ ಮಾಡಿದ ಆರೋಪವೂ ಇದೆ.
    Also Read  14ರ ಸೊಂಟಕ್ಕೆ ಕೈ ಹಾಕಿದ ಮದರಸಾ ಮೌಲ್ವಿಗೆ 20 ವರ್ಷ ಕಠಿಣ ಶಿಕ್ಷೆ

    ತನಿಖೆ ಪ್ರಗತಿಯಲ್ಲಿ
    ಆರೋಪಿ ಜೀನತ್‌ನನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಪೊಲೀಸರು ಆಕೆಯ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆದು ಫೋರೆನ್ಸಿಕ್ ಪರಿಶೀಲನೆಗೆ ಕಳುಹಿಸಿದ್ದಾರೆ. ವಿಡಿಯೋ, ಆಡಿಯೋ ಕ್ಲಿಪ್‌ಗಳನ್ನು ಬಳಸಿಕೊಂಡು ಬೆದರಿಕೆ ಹಾಕಿ ಹಣ ಪೀಡಿಸಲಾಗಿದೆಯೇ ಎಂಬ ಕೋನದಿಂದ ತನಿಖೆ ನಡೆಯುತ್ತಿದೆ.

    ಸಾರ್ವಜನಿಕರಲ್ಲಿ ಆತಂಕ
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಗಣ್ಯರ ಹೆಸರುಗಳು ವದಂತಿಯಾಗಿ ಹರಿದಾಡುತ್ತಿವೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿದೆ. “ಇಂತಹ ವದಂತಿಗಳಿಗೆ ಕಡಿವಾಣ ಬೀಳುವುದು ಯಾವಾಗ” ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮಾತ್ರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತನಿಖೆ ಮುಗಿಯುವವರೆಗೆ ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    Also Read  ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?

    ವರದಿ: ಅಪರಾಧ ವರದಿಗಾರ

    ##HoneyTrap #CrimeNews #KarnatakaNews #JudicialCustody #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಇನ್ಮುಂದೆ ಗೂಗಲ್‌ನಲ್ಲಿ ನಿಮ್ಮ ಹಳೆಯ ಕೋರ್ಟ್ ಕೇಸ್‌ಗಳ ವಿವರಗಳನ್ನುಮರೆಮಾಡಬಹುದು-ದೆಹಲಿ ಹೈಕೋರ್ಟ್ ಗೈಡ್‌ಲೈನ್ಸ್ ರಿಲೀಸ್! 
    ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
    “ಒಂದು ಫಾರ್ವರ್ಡ್… ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!
    ಬೆಂಗಳೂರಿನಿಂದ ಚೆನ್ನೈಗೆ ಹೊರಟ ವಿಮಾನದಲ್ಲಿ ಹೊಗೆ — ಎಲ್ಲಾ ವಿಮಾನಗಳು ವಿಳಂಬ ಪ್ರಯಾಣಿಕರಿಗೆ ತೊಂದರೆ
    ಚುನಾವಣೆಯವರೆಗೆ ಮೌನ, ನಂತರ LPG ದರ ಭಾರಿ ಏರಿಕೆ –ಇದು ರಾಜಕೀಯ ಅಜೆಂಡಾನಾ?
    🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
    ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.
    ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
    ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ಪರಿಸರ ಕಾಪಾಡುವವರೇ ನಿಜವಾದ ಹೀರೋಗಳು! ‘ಇಕೋಪ್ರಿನ್ಯೂರ್ ಅವಾರ್ಡ್ಸ್ 2026’ ಮೂಲಕ ಹಸಿರು ಸಾಧಕರಿಗೆ ಗೌರವ
    ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
    ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
    ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
    ಮೋದಿ ವಿಡಿಯೋ ಡಿಲೀಟ್ ವಿವಾದ: ಭಾರತಕ್ಕೆ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್!
    ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
    ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
    ಪ್ರಧಾನಿ ಮೋದಿ ಇಂದು ಬಂಟ್ವಾಳ ಸೇರಿ ಕರ್ನಾಟಕದ 4 ನವೀಕೃತ ರೈಲುನಿಲ್ದಾಣಗಳು ಲೋಕಾರ್ಪಣೆ..!
    ಕುಮಾರಸ್ವಾಮಿ ನೆನೆದ ಗುಬ್ಬಿ ವಾಸು: ಮತ್ತೆ ಜೆಡಿಎಸ್ ಸೇರ್ಪಡೆಗೆ ಮುನ್ನುಡಿಯೇ ಈ ಹೇಳಿಕೆ?
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    ಕರಾವಳಿಯ ಭವಿಷ್ಯ ರೂಪಿಸಲು ಸಿಎಂನ ಮಾಸ್ಟರ್ ಪ್ಲಾನ್! ಹೆಲಿ ಟೂರಿಸಂನಿಂದ ಹಿಡಿದು ಸಾವಿರಾರು ಉದ್ಯೋಗಗಳವರೆಗೆ…ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಕಣ್ಣು.
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಬೆಂಗಳೂರಿನಲ್ಲಿ₹2,384 ಕೋಟಿ GSTದಂಧೆ ಭೇದಿಸಿದ ಇಲಾಖೆ.. ಭರ್ಜರಿ ದಾಳಿ! ಭಾರೀ GST ಸ್ಕ್ಯಾಂ .. ಹಲವರು ಬಲೆಗೆ ಬೀಳುವ ಸಾಧ್ಯತೆ!…
    ಕಸ ಎಸೆದರೆ ದುಪ್ಪಟ್ಟು ದಂಡ: ಬೆಂಗಳೂರು ಶುರು ಮಾಡಿದೆ, ಮಂಗಳೂರು ಯಾವಾಗ? ಈಗ ಮಾತಲ್ಲ, ಕಠಿಣ ಕಾರ್ಯಾಚರಣೆ ಬೇಕು,ಕಟ್ಟುನಿಟ್ಟಿನ ಕ್ರಮಗಳಾಗ್ಬೆಕ್ ..
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
    ನೈಸ್ ಟೋಲ್ ವಿವಾದ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಖೇಣಿ ತಿರುಗೇಟು.. ಇವರಿಬ್ಬರಲ್ಲಿ ಸತ್ಯವಂತರು ಯಾರು?
    “ನಿಮ್ಮ ಮಗಳನ್ನು ನಾನು ಸಾಯಿಸಿದ್ದೇನೆ…ನಾಳೆ ನನ್ನ ಹೆಣವನ್ನೂ ನೋಡುತ್ತೀರಿ” ಎಂದ ಚೇತನ್!ಲಾವಣ್ಯಳ ತಂದೆಗೆ ಕರೆ ಮಾಡಿ ಶಾಕ್ ನೀಡಿದ ಆರೋಪಿ ಚೇತನ್ ಪೊಲೀಸ್ ವಶಕ್ಕೆ..!
    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…
    ಡಾನ್ -3 ಸಿನಿಮಾ ಕಥೆ ಗೋವಿಂದ….!