📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಉಡುಪಿ ಮಹಿಳೆಗೆ ಮುಂಬೈನಲ್ಲಿ ಕಂಬಿ! ₹3.10 ಕೋಟಿ ವಂಚನೆ ಉಡುಪಿ ಮೂಲದ ಮಹಿಳೆ ಅರೆಸ್ಟ್!

    ಉಡುಪಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ.10ರಷ್ಟು ಖಚಿತ ಲಾಭ ದೊರೆಯುತ್ತದೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿದ ಆರೋಪದ ಮೇಲೆ ಉಡುಪಿ ಮೂಲದ ಮಹಿಳೆಯೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಕೊಳಲಗಿರಿಯ ಕುಕ್ಕಿಕಟ್ಟೆ ನಿವಾಸಿ ದೀಪಿಕಾ ಮನೋಜ್ ಶೆಟ್ಟಿ ಎಂದು ಗುರುತಿಸಲಾಗಿದೆ.

    ಮಾಹಿತಿಯ ಪ್ರಕಾರ, ಮುಂಬೈನ ಕಾಂದಿವಲಿ ಪಶ್ಚಿಮ ನಿವಾಸಿ ಸುಮಾರು 60 ವರ್ಷದ ರಜನಿ ದಯಾನಂದ ಶೆಟ್ಟಿ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ, ದೀಪಿಕಾ ಮನೋಜ್ ಶೆಟ್ಟಿ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಯಾವುದೇ ಅಪಾಯವಿಲ್ಲದೆ ಶೇ.10ರಷ್ಟು ಖಚಿತ ಲಾಭ ನೀಡಲಾಗುತ್ತದೆ ಎಂದು ಭರವಸೆ ನೀಡಿ ತಮ್ಮನ್ನು ಹಾಗೂ ತಮ್ಮ ಸಹೋದರರನ್ನು ಹೂಡಿಕೆ ಮಾಡಲು ಪ್ರೇರೇಪಿಸಿದ್ದಾಗಿ ಆರೋಪಿಸಲಾಗಿದೆ.

    Also Read  ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!

    ಆರೋಪಿಯ ಮಾತುಗಳನ್ನು ನಂಬಿದ ದೂರುದಾರರು ಹಾಗೂ ಅವರ ಕುಟುಂಬದವರು ಹಂತ ಹಂತವಾಗಿ ಒಟ್ಟು ₹3.10 ಕೋಟಿ ಹಣವನ್ನು ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಆರಂಭದಲ್ಲಿ ಲಾಭದ ಭರವಸೆ ನೀಡಿದ್ದ ಆರೋಪಿಯು ನಂತರ ಹಣವನ್ನು ಹಿಂದಿರುಗಿಸದೇ ಸಂಪರ್ಕವನ್ನು ಕಡಿತಗೊಳಿಸಿದ್ದು, ತಾವು ವಂಚನೆಗೆ ಒಳಗಾಗಿರುವುದು ಅರಿವಾದ ಬಳಿಕ ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದಾರೆ.

    ದೂರು ಆಧರಿಸಿ ಮುಂಬೈನ ಕಾಂದಿವಲಿ ಪೊಲೀಸ್ ಠಾಣೆಯಲ್ಲಿ ಆರ್ಥಿಕ ವಂಚನೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಆರೋಪಿಯ ವಿರುದ್ಧ ಲಭ್ಯವಾದ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ದೀಪಿಕಾ ಮನೋಜ್ ಶೆಟ್ಟಿಯನ್ನು ಬಂಧಿಸಲಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ, ದೀಪಿಕಾ ಮನೋಜ್ ಶೆಟ್ಟಿ ವಿರುದ್ಧ ಈ ಪ್ರಕರಣ ಮಾತ್ರವಲ್ಲದೆ ಚೆಕ್‌ ಬೌನ್ಸ್ ಹಾಗೂ ಇತರೆ ಆರ್ಥಿಕ ವಂಚನೆಗೆ ಸಂಬಂಧಿಸಿದ ಹಲವು ಪ್ರಕರಣಗಳೂ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    Also Read  ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ

    ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಈ ಹಣಕಾಸು ವ್ಯವಹಾರದಲ್ಲಿ ಮತ್ತಷ್ಟು ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ, ಇತರ ಹೂಡಿಕೆದಾರರೂ ಇದೇ ರೀತಿಯ ವಂಚನೆಗೆ ಒಳಗಾಗಿದ್ದಾರೆಯೇ ಎಂಬ ಬಗ್ಗೆ ಮುಂಬೈ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು, ಪರಿಚಯಸ್ಥರು ಅಥವಾ ಖಾಸಗಿ ಹೂಡಿಕೆ ಯೋಜನೆಗಳ ಮೂಲಕ “ಖಚಿತ ಲಾಭ”, “ಅಪಾಯವಿಲ್ಲದ ಹೂಡಿಕೆ” ಎಂಬ ಭರವಸೆ ನೀಡಿ ಹಣ ಸಂಗ್ರಹಿಸುವ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೂಡಿಕೆ ಮಾಡುವ ಮುನ್ನ ಸಂಸ್ಥೆಯ ನೋಂದಣಿ, ಅಧಿಕೃತ ದಾಖಲೆಗಳು ಹಾಗೂ ನಿಯಂತ್ರಣ ಸಂಸ್ಥೆಗಳ ಅನುಮತಿಯನ್ನು ಪರಿಶೀಲಿಸುವಂತೆ ಹಣಕಾಸು ತಜ್ಞರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

    ##Udupi #MumbaiFraud #ShareMarketScam #FinancialFraud #Arrest

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ
    ನೂರರ ಸಂಭ್ರಮದಲ್ಲಿ “ಜೈ” ತುಳು ಸಿನಿಮಾ
    ‘₹1ಕ್ಕೆ ಫ್ಯಾಷನ್’ ಜಾಹೀರಾತು ವೈರಲ್… ಮಾಲಾಡ್ ಮಾಲ್‌ನಲ್ಲಿ ನಿಯಂತ್ರಣ ತಪ್ಪಿದ ಜನಸಾಗರ-ಸ್ಟ್ಯಾಂಪೀಡ್ ಭೀತಿ ಮೂಡಿಸಿದ ಜನಸಂದಣಿ!
    ಬ್ರೇಕಿಂಗ್ ನ್ಯೂಸ್
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!
    ಜಾತಿ ನಿಂದನೆಗೆ ಕೋರ್ಟ್ ಹಾಕಿದ ಕಾನೂನು ಸ್ಪಷ್ಟತೆ!?
    ಉಡುಪಿಯಲ್ಲಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ  ಮಹಿಳೆಗೆ ₹65 ಲಕ್ಷ ವಂಚನೆ
    ಎರಡು ತಿಂಗಳ ಬಳಿಕ ಸಮಾಧಿಯಿಂದ ಹೊರಬಂತು ಆಲ್ಬರ್ಟ್ ರೇಗೋ …ಕೊಲೆ ರಹಸ್ಯ ಬಯಲಾಗುತ್ತಾ ?
    ಸಚಿವ ಜಮೀರ್ ಕಥೆ ಗೋವಿಂದ!!!?
    UAEಯಲ್ಲಿ ಉಡುಪಿ ವ್ಯಕ್ತಿಯ ನಿಗೂಢ ಸಾವು – ಪತ್ನಿ, ಮಗ ಎಲ್ಲಿದ್ದಾರೆ?UAE ,ಭಾರತದಲ್ಲಿ?
    ಜಿಯೊ ಷೇರುಪೇಟೆಗೆ ಎಂಟ್ರಿ: ಮೊದಲ ದಿನವೇ ₹2.76 ಲಕ್ಷ ಕೋಟಿ ಸಂಪತ್ತು ಸೃಷ್ಟಿ! ಅನಂತ್ ಅಂಬಾನಿ ಮಾತುಗಳಿಗೆ ಮನಸೋತ ಹೂಡಿಕೆದಾರರು….!
    ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
    🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
    ವಿಟ್ಲ ಕನ್ಯಾನದಲ್ಲಿ ಕತ್ತಿ ದಾಳಿಗೆ 55 ವರ್ಷದ ವ್ಯಕ್ತಿ ಸಾವು; ಅಣ್ಣನ ಮಗಳ ವಿರುದ್ಧ ಪ್ರಕರಣ!
    14 ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್….!!!!!!ಸುಪ್ರೀಂ ಕೋರ್ಟ್‌ಗೆ ಶಾಕಿಂಗ್ ವರದಿ!
    ಬೆಳಗ್ಗೆಯೇ ಲೋಕಾಯುಕ್ತ ಬಿಗ್ ಬ್ಲಾಸ್ಟ್!54 ಕಡೆ ಏಕಕಾಲದಲ್ಲಿ ರೇಡ್… ಚಿನ್ನ, ನಗದು, ಮನೆ, ಜಮೀನುಗಳ ಮಹಾಪರ್ವತ ಪತ್ತೆ!
    ರಾಜ್ಯ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಹೊಸ ಸಾರಥಿ!
    “ಮಾಜಿ RSS ಕಾರ್ಯಕರ್ತನಿಗೆ ಮುಸ್ಲಿಂ ಮಹಿಳೆ ಅಗ್ನಿಸ್ಪರ್ಶ”ವಾಸ್ತವ ಏನು?ಮಾನವೀಯತೆಗೆ ಧರ್ಮದ ಗಡಿ ಇಲ್ಲ!
    21 ವರ್ಷದ ಆಡಳಿತಕ್ಕೆ ತೆರೆ: ನಿತೀಶ್ ಕುಮಾರ್ ಹೊರಟರೇ?ಸಿಎಂ ಕುರ್ಚಿ ಖಾಲಿ-ಬಿಜೆಪಿ ಹೊಸ ಮುಖ ಮುಂದಿನ ಸಿಎಂ??
    ಭ್ರಷ್ಟಾಚಾರದ ತನಿಖೆಗೆ ಪೂರ್ವಾನುಮತಿ ಬೇಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!
    ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
    ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
    ಮನುಷ್ಯನಿಗಿಂತ AI ನಿಯಂತ್ರಣ ತಪ್ಪಿ ಶಕ್ತಿಶಾಲಿಯಾದ್ರೆ…ಚೀನಾದ ಎಚ್ಚರಿಕೆ ಬೆಚ್ಚಿಬೀಳಿಸುವಂತಿದೆ!ರಾಷ್ಟ್ರೀಯ ಭದ್ರತೆ ಬಗ್ಗೆ ಶುರುವಾಯ್ತು ಭಾರೀ ಆತಂಕ!
    “ರೈಲಿನಲ್ಲೇ ಇಂಥಾ ಕೃತ್ಯ! ನಾಗರಿಕ ಪ್ರಜ್ಞೆ ಎಲ್ಲಿದೆ?”
    “ಧುರಂಧರ್ “ಸಿನಿಮಾವನ್ನೂ ಮೀರಿದ ಪಾಕ್ ಸಂಚನ್ನ ಭೇದಿಸಿದ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಖಾಕಿ..
    ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
    ಗೃಹಿಣಿ ಅಲ್ಲ, ರಾಷ್ಟ್ರ ನಿರ್ಮಾಣಕಾರಿ”ಮನೆಯ ಕೆಲಸ ಕೆಲಸವೇ ಅಲ್ಲ ಎನ್ನುವವರೇ… ಈ ಸುದ್ದಿ ಒಮ್ಮೆ ಓದಿ!ಆಕೆಯ ಶ್ರಮಕ್ಕೆ-₹30,000 ಮೌಲ್ಯ!– ಸುಪ್ರೀಂ ಕೋರ್ಟ್ ಮಹತ್ವದ ಸಂದೇಶ