📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಉಡುಪಿಯಲ್ಲಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ  ಮಹಿಳೆಗೆ ₹65 ಲಕ್ಷ ವಂಚನೆ

    ಉಡುಪಿ: ಮುಂಬೈ ಕೊಲಾಬಾ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ನಂಬಿಸಿ, 66 ವರ್ಷದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ₹65 ಲಕ್ಷ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಸೈಬರ್ ವಂಚನೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿಯ ಶೀಲಾ (66) ಅವರಿಗೆ ಜುಲೈ 13ರಂದು ಬೆಳಿಗ್ಗೆ ಮುಂಬೈ ಪೊಲೀಸ್ ಇಲಾಖೆಯ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಸಂದೇಶ ಬಂದಿತ್ತು. ಬಳಿಕ ಅದೇ ಸಂಖ್ಯೆಯಿಂದ ವಿಡಿಯೋ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಪೊಲೀಸ್ ಸಮವಸ್ತ್ರದಲ್ಲಿದ್ದು, ತಾನು ಮುಂಬೈ ಕೊಲಾಬಾ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ ಎನ್ನಲಾಗಿದೆ.

    ಮಹಿಳೆಯ ಬ್ಯಾಂಕ್ ಖಾತೆಗೆ ₹20 ಕೋಟಿ ಹಣ ಜಮೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅವರ ವಿರುದ್ಧ ವಾರೆಂಟ್ ಇದೆ. ಮಂಗಳೂರು ಪೊಲೀಸರು ನಿಮ್ಮನ್ನು ಬಂಧಿಸಲಿದ್ದಾರೆ ಎಂದು ಆರೋಪಿಗಳು ಬೆದರಿಸಿದ್ದಾರೆ. ಬಳಿಕ ಮಹಿಳೆಯಿಂದ ವಿವಿಧ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು, ದಾಖಲೆಗಳ ಫೋಟೋಗಳನ್ನು ಬಲವಂತವಾಗಿ ತೆಗೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    Also Read  ಕಚೇರಿಯಿಂದ ರಸ್ತೆಗಿಳಿದ ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ …….!ಎಲ್ಲಾ ಅಕ್ರಮಕ್ಕೆ ಒಂದ್ಸಲ ಎಚ್ಚರಿಕೆ ನೋಟಿಸ್ , ನೆಕ್ಸ್ಟ್ ಟೈಮ್ ಸೀಜ್…!

    ವಂಚನೆಯಿಂದ ತಪ್ಪಿಸಿಕೊಳ್ಳಬೇಕಾದರೆ ಖಾತೆಯಲ್ಲಿರುವ ಹಣದ ನೋಟುಗಳ ಸೀರಿಯಲ್ ನಂಬರ್ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿ, ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಮಹಿಳೆಗೆ ತಿಳಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಜುಲೈ 13ರಿಂದ 17ರವರೆಗೆ ಪದೇಪದೇ ನಡೆದ ವಾಟ್ಸ್‌ಆ್ಯಪ್ ಕರೆಗಳ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಒಟ್ಟು ₹65 ಲಕ್ಷ ಹಣವನ್ನು ಆರೋಪಿಗಳು ಸೂಚಿಸಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

    ನಂತರ ತಾನು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಬೈ ಕೊಲಾಬಾ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಬೆದರಿಕೆ ಹಾಕಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ₹65 ಲಕ್ಷ ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    Also Read  ₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!

    ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026ರಂತೆ ಐಟಿ ಕಾಯ್ದೆಯ ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಿಡಿಯೋ ಕರೆ ಮಾಡಿ ಬೆದರಿಸುವುದು, ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸುವುದು ಸೇರಿದಂತೆ ಇಂತಹ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಆಗಾಗ ಸೂಚಿಸುತ್ತಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    ಕರ್ನಾಟಕದಲ್ಲಿ ನೀರು–ವಿದ್ಯುತ್ ಬಿಕ್ಕಟ್ಟಿನ ಎಚ್ಚರಿಕೆ!
    ಸ್ಟರ್ಲಿಂಗ್ ವಸತಿ ಶಾಲೆಯ ಶಿಸ್ತಿನ ಹೆಸರಲ್ಲಿ 12 ವರ್ಷದ ಮುಗ್ಧನ ಜೀವ ಕಸಿದ ಕ್ರೌರ್ಯ!ಅನುಮಾನಾಸ್ಪದ ಸಾವಿನ ಸುತ್ತ ಹರಡಿದ ಆಘಾತಕಾರಿ ಸತ್ಯ…ಇಲ್ಲಿದೆ
    ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?
    ದಿಲ್ಲಿಯಲ್ಲಿ ಮತ್ತೊಂದು ನಿರ್ಭಯ ಛಾಯೆ….“ನಿರ್ಭಯಾ ಮತ್ತೆ ನೆನಪು… ಅಪರಾಧಿಗಳು ಮಾತ್ರ ನಿರ್ಭಯ!”ಅಪರಾಧಿಗಳಿಗೆ ಕಾನೂನಿನ ಭಯವೇ ಇಲ್ಲವೇ?
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
    ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
    ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ
    ಮಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್!ಯಾವೆಲ್ಲ ಬದಲಾವಣೆ ಬರಲಿದೆ?
    ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
    ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
    ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
    ಕುಂದಾಪುರದಲ್ಲಿ ಶಾಕಿಂಗ್ ಘಟನೆ..ಪತ್ನಿಗೆ ವಿಷ ನೀಡಿ ಬಳಿಕ ಪ್ರೇಮಿಯೊಂದಿಗೆ ಆತ್ಮಹತ್ಯೆ..!
    ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ ಯಶ್ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ….!
    ಅಮೆರಿಕದಲ್ಲಿ ಭಾರತದ ಧ್ವಜಕ್ಕೆ ಅವಮಾನ…ವೈರಲ್ ವಿಡಿಯೋಗೆ ಕೇಂದ್ರದ ಆಕ್ರೋಶ!
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    ₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
    ಗೃಹ ಸಚಿವರಾದ ಜಿ ಪರಮೇಶ್ವರ್ ರವರ ಒಡೆತನದ ಸಂಸ್ಥೆಯಲ್ಲಿ ನಡೆದಿದೆ ಎಂಬ ವಿಡಿಯೋ ವೈರಲ್….!
    ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
    ಸ್ಮಾರ್ಟ್ ಲಾಕ್ ಇದ್ದ ಸುರಕ್ಷಿತ ಮನೆಯಲ್ಲೇ ಯುವತಿಯ ರೇಪ್ ಅಂಡ್ ಮರ್ಡರ್…!ನಗರವನ್ನು ಬೆಚ್ಚಿಬೀಳಿಸಿದ ಘಟನೆ”
    ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.