📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ

    ಇದು ಪೊಲೀಸ್ ಸ್ಟೋರಿ ನೋಡಿ, ಪಿಎಸ್ಐ ವೀರೇಶ್ ಎನ್ನುವವರ ವಿರುದ್ಧ, ಅತ್ಯಾಚಾರ, ಜಾತಿನಿಂದನೆ, ಅಪಹರಣ ದಂತಹ ಗಂಭೀರ ಪ್ರಕರಣವನ್ನು ದಾಖಲಿಸುವ ಮೂಲಕ  ಇಡೀ ರಾಜ್ಯವನ್ನು ತನ್ನತ್ತ ಸೆಳೆದಿದ್ದಾಳೆ ಕಾನ್ಸ್ಟೇಬಲ್ ಜಯಶ್ರೀ

           ಲೇಡಿ ಕಾನ್ಸ್ಟೇಬಲ್ ಜಯಶ್ರೀ ಎನ್ನುವವರೇ ಸಬ್ ಇನ್ಸ್ಪೆಕ್ಟರ್ ವೀರೇಶ್ ಮೇಲೆ ದೂರು ನೀಡಿದ ಮಹಿಳೆಯಾಗಿದ್ದಾಳೆ. ಇದಕ್ಕೂ ಮೊದಲೇ, ವೀರೇಶ್ ಈ ಮಹಿಳೆಯ ಮೇಲೆ ಗುರುತರವಾದಂತಹ ಆರೋಪ ಮಾಡಿದ್ದರು . ಹಲವು ಸಮಯಗಳಿಂದ ನಾವು ಸಂಬಂಧದಲ್ಲಿದ್ದೇವೆ, ಒಂದೇ ರೂಮಿನಲ್ಲಿ ಗಂಡ ಹೆಂಡತಿಯರಂತೆ ಇದ್ದೆವು, ಮದುವೆ ಯಾಗುತ್ತೇನೆ ಅಂತ ನನ್ನನ್ನು ನಂಬಿಸಿದ್ದಳು. ನನ್ನಿಂದ ಸರಿಸುಮಾರು 35 ಲಕ್ಷದಷ್ಟು ಹಣವನ್ನು ಪಡೆದು ವಂಚಿಸಿದ್ದಾಳೆ, ಅಲ್ಲದೆ ನಾನೇ ಇವಳಿಗೆ ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿದ್ದೇನೆ, ಇವಳ ಸಹೋದರನಿಗೆ ಟ್ಯಾಕ್ಟರ್ ಒಂದು ತೆಗೆಸಿಕೊಟ್ಟಿದ್ದೇನೆ. ಇಷ್ಟೆಲ್ಲಾ ಬೆನಿಫಿಟ್ ಪಡೆದದ್ದು ಕುಟುಂಬಕ್ಕೂ ಗೊತ್ತಿದೆ, ಜೊತೆಗೆ ಎಲ್ಲಾ ರೀತಿಯಲ್ಲೂ ಹೊಂದಿಕೊಂಡಿದ್ದವಳು, ಈಗ ನನ್ನಿಂದ ದೂರವಾಗುತ್ತಿದ್ದಾಳೆಂದು ಆರೋಪಿಸಿದ್ದರು ಪಿಎಸ್ಐ ವೀರೇಶ್.

    Also Read  ಕರಾವಳಿಯಲ್ಲಿಲೋಕಾಯುಕ್ತ ಕಣ್ಣು ಪಂಚಾಯಿತಿಗಳ ಮೇಲೆ; ಸರ್ಕಾರದ ಕಣ್ಣು ಕರಾವಳಿ ಕೃಷಿಯತ್ತ?ಕರಾವಳಿ ಕೃಷಿಗೆ ಪ್ರತ್ಯೇಕ ನೀತಿಗೆ ಡಿಮ್ಯಾಂಡ್!

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ, ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರರು, ಇಬ್ಬರ ನಡುವೆ ರಾಜಿ ಪಂಚಾಯತಿಯನ್ನು ಮಾಡಿದ್ದರಂತೆ. ಆದರೆ ಈಗ ಇದ್ದಕ್ಕಿದ್ದಂತೆಯೇ ಜಯಶ್ರೀ, ವೀರೇಶ್ ಮೇಲೆ ಅಪಹರಣ, ಅತ್ಯಾಚಾರ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರನ್ನು ದಾಖಲಿಸಿದ್ದಾಳೆ.

    ಮೇಲ್ನೋಟಕ್ಕೆನೆ ಜಯಶ್ರೀ ಕೊಟ್ಟ ದೂರು,  ಬೋಗಸ್ ಅನ್ನುವುದು ಯಂಥವರಿಗೂ ಗೊತ್ತಾಗುತ್ತದೆ. ಆದರೆ, ಕೆಲವು ಅನವಶ್ಯಕವಾದಂತಹ ಕಾನೂನುಗಳಿಂದಾಗಿ, ಪ್ರಕರಣವು ದಾಖಲಾಗಲೇ ಬೇಕಾಗುತ್ತದೆ. ಹಾಗಾಗಿ ಪ್ರಕರಣ ದಾಖಲಾಗಿದೆ. ಈಗ ಪಿಎಸ್ಐ ವೀರೇಶ್ ಗೆ ಬಂಧನದ ಭೀತಿ ಎದುರಾಗಿದೆ. ಬಹುಶಹ ಪಿಎಸ್ಐ ವೀರೇಶ್ ಅಮಾನತ್ತಿಗೆ ಒಳಗಾಗಬಹುದು.

    ಈ ಪ್ರಕರಣದಲ್ಲಿ, ಕೆಲವು ವರುಷಗಳ ಕಾಲ, ಪಿಎಸ್ಐ ವೀರೇಶ್ ಜೊತೆಗೆ ಸಂಸಾರ ನಡೆಸಿಕೊಂಡಿದ್ದ ಜಯಶ್ರೀ, ಕೆಲವು ಬಾರಿ ವೀರೇಶನ ವಿರೋಧದ ನಡುವೆಯೂ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂಬ ಆರೋಪವು ಇದೆ. ಇದನ್ನು ಸ್ವತಹ ವೀರೇಶ್ ಜಯಶ್ರೀ ದೂರು ಕೊಡುವ  ಮೊದಲೇ ಹೇಳಿದ್ದ ಕೂಡ. ಆದರೀಗ, ಜಯಶ್ರೀ ತನ್ನ ದಾಳವನ್ನು ಉರುಳಿಸಿದ್ದಾಳೆ. ಮಹಿಳೆ ಎಂಬ ವಿಚಾರ ಮುಂದಿಟ್ಟುಕೊಂಡು, ಅದರ ಲಾಭವನ್ನು ಪಡೆಯಲು ಹೊರಟಂತೆ ಕಾಣುತ್ತಿದೆ. ನ್ಯಾಯವು ಹೆಣ್ಣಿಗಿರಲಿ, ಗಂಡಿಗಿರಲಿ- ಬಡವನಿರಲಿ ಶ್ರೀಮಂತನಿರಲಿ ಅಥವಾ ಯಾರೇ ಇರಲಿ, ನ್ಯಾಯ ಅನ್ನೋದು ಒಂದೇ ಆಗಿರಬೇಕು ತಾನೆ? ಇಲ್ಲಿ, ಜಯಶ್ರೀ ಮಾಡುವುದನ್ನೇಲ್ಲ ಮಾಡಿ ಇದೀಗ ಸುಳ್ಳು ದೂರನ್ನು ನೀಡುವ ಮೂಲಕ ಇಡೀ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡುತ್ತಿದ್ದಾಳೆ. ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾಳೆ. ಇದು ಅಕ್ಷಮ್ಯ, ಸರ್ಕಾರ ಮತ್ತು ಕಾನೂನು ಪ್ರಾಧಿಕಾರವು ಇಂತಹ ಬೋಗಸ್ ದೂರುಗಳ ವಿಚಾರದಲ್ಲಿ  ದೂರುದಾರರ ಕೈಗೆನೆ ಕೊಳ ಹಾಕುವ ಕಾನೂನನ್ನು ತರುವ ಕೆಲಸ ಮಾಡಬೇಕು. ಇವರ ದುಷ್ಟ ಆಟದ ಕಾರಣದಿಂದ ಅನವಶ್ಯಕವಾಗಿ ಆರೋಪಿತನು ಎಲ್ಲಾ ರೀತಿಯಲ್ಲೂ ನೋವುಣ್ಣ ಬೇಕಾಗುತ್ತದೆ. ಆತನ ನೋವಿಗೆ ನ್ಯಾಯ ದೊರಕಿಸಿ ಕೊಳ್ಳುವವರು ಯಾರು? ಹಾಗಾಗಿ ದೂರು ಕೊಡುವವರಿಗೂ ಶಿಕ್ಷೆ ಆಗುವ ಭಯ ಇದ್ದರೆ, ಸುಳ್ಳುದುರು ನೀಡುವುದಕ್ಕೆ ಭಯಪಡುತ್ತಾರೆ. ಸುಳ್ಳು ದೂರುಗಳನ್ನು ನೀಡುವುದು ಅಪರಾಧ ಎಂದು ಘೋಷಿಸುವ ಸಮಯ ಬಂದಿದೆ. ಜಾತಿ, ಲಿಂಗ ಸಮುದಾಯ ಯಾವುದೇ ಇರಲಿ, ನೀಡುವ ದೂರಿನಲ್ಲಿ ಸತ್ಯ ಇರಬೇಕು. ಆದರೆ ಸಂಪೂರ್ಣ ಅಸತ್ಯವಾದ ದೂರಿನ ವಿರುದ್ಧ, ಬೇರೆ ಯಾವುದೋ ಕಾರಣಕ್ಕಾಗಿ ದೂರನ್ನು ನೀಡಿ ತೊಂದರೆ ಕೊಡಲು ಹೊರಟವರ ವಿರುದ್ಧ ಯಾವ ಮುಲಾಜೂ ಇಲ್ಲದೆ ಕಠಿಣ ಕ್ರಮ ಜರುಗಿಸಬೇಕು. ಅದಕ್ಕೂ ಮೊದಲು, ಪ್ರಕರಣವೂ ಇಲಾಖೆಯಿಂದಲೇ  ದಾಖಲಾಗಬೇಕು. ಏನಂತೀರಿ?

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್!ಯಾವೆಲ್ಲ ಬದಲಾವಣೆ ಬರಲಿದೆ?
    ಕಚೇರಿಯಿಂದ ರಸ್ತೆಗಿಳಿದ ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ …….!ಎಲ್ಲಾ ಅಕ್ರಮಕ್ಕೆ ಒಂದ್ಸಲ ಎಚ್ಚರಿಕೆ ನೋಟಿಸ್ , ನೆಕ್ಸ್ಟ್ ಟೈಮ್ ಸೀಜ್…!
    ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
    ಪೊರಕೆ ಹಿಡಿದ ಕೈಯಲ್ಲಿ ಫಾರ್ಚೂನರ್ ಕನಸು! SI ಬೆಳ್ಳಿಯಪ್ಪ ,ಸೇಸಪ್ಪನ ಬದುಕಿಗೆ ಹೊಸ ತಿರುವು….?!!!
    ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಕಾಂಗ್ರೆಸ್‌ ನಾಯಕರ ಸಭೆ
    ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
    ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.
    ರಾಮ ಮಂದಿರ ಟ್ರಸ್ಟ್‌ಗೆ ಸರ್ಕಾರದ ನಿಯಂತ್ರಣವೇ ಇಲ್ಲ! ಆರ್‌ಟಿಐಗೂ ಬಾಧ್ಯತೆ ಇಲ್ಲ ಎಂದ ಸಿಐಸಿ
    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    ಬಂಗಾಳ ರಾಜಕೀಯದಲ್ಲಿ ಭಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್..! ಸುವೇಂದು ಪ್ರಮಾಣವಚನಕ್ಕೂ ಬ್ರೇಕ್ ಬೀಳುತ್ತಾ?ಸುಪ್ರೀಂ ಕೋರ್ಟ್ ಎಂಟ್ರಿ ಆಗುತ್ತಾ?
    ನೇಪಾಳದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್: 95 ಮಂದಿ ಸಾವು, 384 ಪ್ರಯಾಣಿಕರು ನಾಪತ್ತೆ; 105 ಭಾರತೀಯರೂ ಸಂಪರ್ಕಕ್ಕೆ ಸಿಗದೆ ಆತಂಕ!
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
    ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
    ಕುಂದಾಪುರ ಗಂಗೊಳ್ಳಿಯಲ್ಲಿ ಕತ್ತಿ  ದೊಣ್ಣೆಗಳಿಂದ ಮಾರಾಮಾರಿ; ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು?
    24 ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕಾ ದಾಳಿ: 3 ನಾವಿಕರ ಜೀವ ಬಲಿ
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
    ಆಂಧ್ರದ ಪುಟ್ಟಪರ್ತಿಯಲ್ಲಿ ಅಡಗಿದೆ ಆ ದೊಡ್ಡ ರಹಸ್ಯ!ಆಕಾಶದಲ್ಲಿ ಕಣ್ಣಿಗೆ ಕಾಣದಂತೆ ಬೇಟೆಯಾಡುವ ಸಮಯ ಹತ್ತಿರದಲ್ಲಿದೆ!
    ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
    ಪ್ರಶಸ್ತಿಗಾಗಿ ಹಂಬಲಿಸಿದ ಟ್ರಂಪ್‌ಗೆ ನಿರಾಸೆ; ನ್ಯಾಯಕ್ಕಾಗಿ ಹೋರಾಡಿದ ನವಿ ಪಿಳ್ಳೆಗೆ ನೊಬೆಲ್!
    ಬರದ ಭೀತಿ ಎದುರಿಸುತ್ತಿರುವ ಕರ್ನಾಟಕ ,ಮಳೆ ಇಲ್ಲ… ಬೆಳೆ ಇಲ್ಲ… ಅನ್ನ ಇಲ್ಲ!,ಕೇಂದ್ರಕ್ಕೆ ನೆರವಿಗಾಗಿ ಡಿ ಕೆ ಶಿ ಮನವಿ
    “Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
    ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
    ಭಾರೀ ಮಳೆ ಎಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆಗಳಿಗೆ ರಜೆ!
    ಟ್ರಂಪ್ ಮೇಲೆ ದಾಳಿ ಯತ್ನ -ಗನ್ ಸದ್ದು ಮತ್ತೆ ವೈಟ್ ಹೌಸ್ ರಾಜಕೀಯವನ್ನ ನಡುಗಿಸಿದೆ!ಭದ್ರತಾ ಪ್ರಶ್ನೆ!