📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?

ಉಡುಪಿ ಜಿಲ್ಲೆಯ ಶಿರ್ವ ಪರಿಸರದ  ಯುವತಿಗೆ ಗಿಫ್ಟ್ ಕೋರಿಯರ್ ಹೆಸರಿನಲ್ಲಿ ₹13.99 ಲಕ್ಷ ಮೋಸ ಆದ ಘಟನೆ ನಡೆದಿದೆ. ಈ ಒಂದು ಆನ್ಲೈನ್ ವಂಚನೆಯ ಜಾಲಕ್ಕೆ ಎಲ್ಲೋ ಒಂದು ಕಡೆ ಬ್ಯಾಂಕಿನ ನಿಯಮಗಳು ಸಹಕಾರಿಯಾಗುತ್ತಿದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಬರಲು ಕಾರಣವಾಗುತ್ತಿದೆ. ಬ್ಯಾಂಕ್ ಮೂಲಕ ನಡೆಯುವ ವ್ಯವಹಾರ ಯಾವತ್ತೂ ಸೇಫ್ ಎನ್ನುವ ಭಾವನೆ ಇತ್ತು. ಈಗ ಪದೇ ಪದೇ ಇಂತಹ ಆನ್ ಲೈನ್ ವಂಚನೆಗಳು ಬ್ಯಾಂಕ್ ಗಳ ಮೂಲಕವೇ ನಡೆಯುತ್ತಿರುವುದರಿಂದ ಹಾಗೆ ಜನಸಾಮಾನ್ಯರಲ್ಲಿ ಈ ರೀತಿಯ ಅನುಮಾನ ಹುಟ್ಟಲು ಕಾರಣವಾಗಿದೆ.

  ವಿದೇಶದಿಂದ ಗಿಫ್ಟ್ ಕೋರಿಯರ್ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ₹13,99,700/- ಹಣವನ್ನು ಆನ್‌ಲೈನ್ ಮೂಲಕ ಪಡೆದು ಮೋಸ ಮಾಡಲಾಗಿದೆ ಎಂದು ತಡವಾಗಿ ದೂರು ದಾಖಲಾಗಿದೆ.
ವಿದ್ಯಾ (ಹೆಸರು ಬದಲಿಸಲಾಗಿದೆ) ಅವರು Canara Bankನಲ್ಲಿ ಖಾತೆ ಹೊಂದಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ಮೊಬೈಲ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬನು ತಾನು ವಿದೇಶದಲ್ಲಿದ್ದು, ತಮ್ಮ ಹೆಸರಿನಲ್ಲಿ ಗಿಫ್ಟ್ ಕೋರಿಯರ್ ಕಳುಹಿಸಿದ್ದೇನೆ ಎಂದು 22/02/2026ರಂದು ವಾಟ್ಸ್‌ಆಪ್ ಮೂಲಕ ಅದರ ಛಾಯಾಚಿತ್ರ ಕಳುಹಿಸಿದ್ದಾನೆ.
23/02/2026ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ, ದೂರುದಾರಳಾದ ವಿದ್ಯಾಳ  ಮೊಬೈಲ್‌ಗೆ ಮಹಿಳೆಯೊಬ್ಬಳು ಕರೆ ಮಾಡಿ, “ನಿಮ್ಮ ಹೆಸರಿನಲ್ಲಿ ವಿದೇಶದಿಂದ ಕೋರಿಯರ್ ಬಂದಿದೆ. ವಿಮಾನ ನಿಲ್ದಾಣದಿಂದ ಬಿಡುಗಡೆಗೊಳಿಸಲು ₹49,700/- ಪಾವತಿಸಬೇಕು” ಎಂದು ತಿಳಿಸಿದ್ದಾಳೆ. ಆಕೆಯ ಸೂಚನೆಯಂತೆ ಪಿರ್ಯಾದಿದಾರರು IDBI Bank, ದೆಹಲಿ ಶಾಖೆಯ ಖಾತೆಗೆ ಉಡುಪಿ ಕೆನರಾ ಬ್ಯಾಂಕ್ ಶಾಖೆಯ ಮೂಲಕ ₹49,700/- ಕಳುಹಿಸಿದ್ದಾರೆ.
ನಂತರ ಕೋರಿಯರ್ ಪರಿಶೀಲನೆಗಾಗಿ ಮತ್ತಷ್ಟು ಹಣ ಅಗತ್ಯವಿದೆ ಎಂದು ತಿಳಿಸಿ, ಕೋರಿಯರ್‌ನಲ್ಲಿ 30,000 ಪೌಂಡ್ ವಿದೇಶಿ ನಗದು ಇದೆ, ಇದನ್ನು ಕಳುಹಿಸುವುದು ಕಾನೂನುಬಾಹಿರವಾಗಿರುವುದರಿಂದ ₹1,89,000/- ಪಾವತಿಸಬೇಕೆಂದು ಮೂರು ವಿಭಿನ್ನ ಖಾತೆ ಸಂಖ್ಯೆಗಳು ನೀಡಲಾಗಿದೆ. ಪಿರ್ಯಾದಿದಾರರು ಸೂಚಿಸಿದಂತೆ ಒಟ್ಟು ₹1,89,000/- ಹಣ ವರ್ಗಾವಣೆ ಮಾಡಿದ್ದಾರೆ.
ಅದೇ ದಿನ ಸಂಜೆ “ಮನಿ ಎಕ್ಸ್‌ಚೇಂಜ್” ಹಾಗೂ “ಡಾಕ್ಯುಮೆಂಟೇಶನ್” ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ₹62,500/-ರಂತೆ ಒಟ್ಟು ₹2,50,000/- ಹಣ ಕಳುಹಿಸುವಂತೆ ಹೇಳಿ ಪಡೆದುಕೊಂಡಿದ್ದಾರೆ. 23/02/2026ರಿಂದ 27/02/2026ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹13,99,700/- ಹಣ ವರ್ಗಾವಣೆ ಮಾಡಲಾಗಿದೆ.
ಇನ್ನೊಂದೆಡೆ, “ಮಿಲರ್ ಗೇರ್ ಹಾರ್ಡ್” ಎಂದು ಪರಿಚಯಿಸಿಕೊಂಡ ವ್ಯಕ್ತಿಯು ಕೋರಿಯರ್‌ನಲ್ಲಿ 30,000 ಪೌಂಡ್ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾನೆ. ಕರೆ ಮಾಡಿದ ಮಹಿಳೆ ಈ ಮೊತ್ತವು ಭಾರತೀಯ ರೂಪಾಯಿಗೆ ಸುಮಾರು ₹37 ಲಕ್ಷ ಆಗುತ್ತದೆ ಎಂದು ಹೇಳಿ ನಂಬಿಸಿದ್ದಾಳೆ. ಆದರೆ ಕೋರಿಯರ್ ಆಗಮಿಸದೇ ಇರುವುದರಿಂದ ತಾನು ಮೋಸ ಹೋಗಿರುವುದನ್ನು ಪಿರ್ಯಾದಿದಾರರು ಅರಿತು ದೂರು ನೀಡಿದ್ದಾರೆ.
ದೂರಿನ ಮೇರೆಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2026 ಅಡಿಯಲ್ಲಿ ಐಟಿ ಕಾಯಿದೆ ಕಲಂ 66(ಡಿ) ಹಾಗೂ ಬಿಎನ್‌ಎಸ್ ಕಲಂ 316(2), 318(4) r/w 3(5) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ವಿದೇಶದಿಂದ ಗಿಫ್ಟ್, ಲಾಟರಿ, ಕೋರಿಯರ್ ಹೆಸರಿನಲ್ಲಿ ಹಣ ಕೇಳುವ ಅಪರಿಚಿತರ ಕರೆಗಳನ್ನು ನಂಬಬಾರದು ಎಂದು ಸೂಚಿಸಿದ್ದಾರೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
“ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..