📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..

    ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಒಂದು ಗಂಭೀರ ಹಣಕಾಸು ವಂಚನೆ ಮತ್ತು ನಕಲಿ ದಾಖಲೆಗಳ ಪ್ರಕರಣ ಇದೀಗ ಖಾಸಗಿ ದೂರಿನ ಆಧಾರದ ಮೇಲೆ ಅಪರಾಧ ಕ್ರಮಾಂಕ 72/2026ರಲ್ಲಿ ದಾಖಲಾಗಿ ತನಿಖೆಗೆ ಒಳಪಟ್ಟಿದೆ.

    ಪಿರ್ಯಾದಿದಾರರಾದ ಎಸ್. ಬಾಲಕೃಷ್ಣ ಹೆಗ್ಡೆ (61) ಮತ್ತು ಗಂಗಾಧರ ಹೆಗ್ಡೆ ಅವರು ನೀಡಿದ ದೂರಿನ ಪ್ರಕಾರ, 2013ರ ಡಿಸೆಂಬರ್ 22ರಂದು ಹೊಸಾಳ ಗ್ರಾಮದ ಸರ್ವೋದಯ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್‌ನಲ್ಲಿ ಜೆಸಿಬಿ ಯಂತ್ರ ಖರೀದಿಗಾಗಿ ಸಾಲ ಪಡೆದಂತೆ 1ನೇ ಆರೋಪಿ ಎನ್. ಹರೀಶ್ ಕಾರಂತ್ ತೋರಿಸಲಾಗಿದೆ. ಈ ಸಾಲದ ಪ್ರಸ್ತಾವನೆ ವೇಳೆ 2ನೇ ಆರೋಪಿ ನಿತ್ಯಾನಂದ ಕಾಮತ್ ಮತ್ತು 3ನೇ ಆರೋಪಿ ಬಾಬು ರಾಜೇಂದ್ರ ಪ್ರಸಾದ್ ಅವರು ಪಿರ್ಯಾದಿದಾರರಿಂದ ಕೇವಲ “ಸಾಕ್ಷಿ ಸಹಿ” ಪಡೆಯುವ ನೆಪದಲ್ಲಿ ಸಹಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪ ಇದೆ.

    Also Read  ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ

    ಆದರೆ ವಾಸ್ತವದಲ್ಲಿ, ಪಿರ್ಯಾದಿದಾರರನ್ನು ಜಾಮೀನುದಾರರಾಗಿ ತೋರಿಸುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರ ಅರಿವಿಲ್ಲದೇ ದೊಡ್ಡ ಪ್ರಮಾಣದ ಸಾಲದ ಹೊಣೆಗಾರಿಕೆಯಲ್ಲಿ ಸಿಲುಕಿಸಲಾಗಿದೆ ಎಂಬುದು ದೂರಿನ ಪ್ರಮುಖ ಅಂಶವಾಗಿದೆ. ಈ ಸುಳ್ಳು ದಾಖಲೆಗಳ ಆಧಾರದ ಮೇಲೆ ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟ್ರಾರ್ ಮುಂದೆ ಏಕಪಕ್ಷೀಯ ತೀರ್ಪು ಪಡೆದು, ಸುಮಾರು ₹33,89,899 ವಸೂಲಾತಿಗಾಗಿ ಪಿರ್ಯಾದಿದಾರರ ವಿರುದ್ಧ ಎಕ್ಸಿಕ್ಯೂಶನ್ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ.

    ಇದಲ್ಲದೆ, ಅಡಮಾನವಿಟ್ಟ ಜೆಸಿಬಿ ಯಂತ್ರವನ್ನು ಪಿರ್ಯಾದಿದಾರರಿಗೆ ತಿಳಿಸದೇ ಅಕ್ರಮವಾಗಿ ಮಾರಾಟ ಮಾಡಿ, ಆ ಹಣವನ್ನು ಸಾಲದ ಖಾತೆಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಭದ್ರತಾ ಆಸ್ತಿಯೇ ನಾಶವಾಗಿರುವಂತಾಗಿದೆ ಎಂದು ಹೇಳಲಾಗಿದೆ.

    ಇನ್ನೊಂದು ಗಂಭೀರ ಅಂಶವೆಂದರೆ, ನಿಜವಾದ ಜಾಮೀನುದಾರಳಾದ 3ನೇ ಆರೋಪಿಯ ಪತ್ನಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ, ಉದ್ದೇಶಪೂರ್ವಕವಾಗಿ ಪಿರ್ಯಾದಿದಾರರನ್ನೇ ಗುರಿಯಾಗಿಸಲಾಗಿದೆ ಎಂಬ ಆರೋಪವೂ ಇದೆ. ಜೊತೆಗೆ ಒಂದೇ ಸಾಲದ ವಿಚಾರಕ್ಕೆ ಸಂಬಂಧಿಸಿ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ವಸೂಲಾತಿ ಪ್ರಕ್ರಿಯೆಗಳನ್ನು ಆರಂಭಿಸಿ, ಕಾನೂನು ವ್ಯವಸ್ಥೆಯನ್ನು ತಪ್ಪಾಗಿ ಬಳಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

    Also Read  ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ

    ಮತ್ತಷ್ಟು ಗಂಭೀರವಾಗಿ, ಹಿಂದಿನ ಸಾಲದ ವೇಳೆ ಪಡೆದಿದ್ದ ಚೆಕ್‌ಗಳನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದಾಗಿ ಪಿರ್ಯಾದಿದಾರರು ಆರೋಪಿಸಿದ್ದಾರೆ. ಕಾಲಮಿತಿ ಮೀರಿದ ಬಳಿಕವೂ ದಾವೆ ಹೂಡಿ ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲಾಗಿದೆ ಎಂಬುದೂ ದೂರಿನ ಭಾಗವಾಗಿದೆ.

    ಈ ಹಿನ್ನೆಲೆಯಲ್ಲಿ, ಸಂಬಂಧಿತ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ಆರಂಭವಾಗಿದೆ.

    ##ಬ್ರಹ್ಮಾವರ #ವಂಚನೆಕೇಸ್ #ನಕಲಿದಾಖಲೆ #ಸಹಕಾರಸಂಸ್ಥೆ #ಕಾನೂನುಕ್ರಮ #ಕ್ರೈಂನ್ಯೂಸ್

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    ನಾಟೆಕಲ್ ತಿರುವಿನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ: ಬಸ್‌ನಡಿ ಸಿಲುಕಿ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವು
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!
    ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
    ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
    ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
    ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
    ಭಾರೀ ಮಳೆ ಎಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆಗಳಿಗೆ ರಜೆ!
    MRPL ಭೀಕರ ಸ್ಫೋಟ: ಮನೀಶ್ ಕರ್ಕೇರ ಬಲಿ; ರಾಜೇಶ್‌ಗೆ 35% ಸುಟ್ಟ ಗಾಯ, 8 ಮಂದಿಗೆ ಗಾಯ
    ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
    ರಷ್ಯಾದಲ್ಲಿ ಪ್ಲೇಗ್ ಆತಂಕ! ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿಗೆ ನಿಗಾ…!ರಷ್ಯಾದಲ್ಲಿ ಕಟ್ಟೆಚ್ಚರ!
    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    ಶಾಲಾ ಶಿಕ್ಷಕಿಯರ ಹೆಸರಿನಲ್ಲಿ ಡ್ರಗ್ಸ್ ಜಾಲ ..! ತನಿಖೆಯಲ್ಲಿ ಬೆಚ್ಚಿಬೀಳಿಸುವ ಕೊಂಡಿಗಳು ಇನ್‌ಸ್ಟಾಗ್ರಾಮ್‌ನಿಂದ ಗ್ರಾಹಕರ ಸೆಳೆತ, ಗಲ್ಫ್ ನಂಬರ್ ಮೂಲಕ ಬುಕ್ಕಿಂಗ್
    ಕ್ಲೌಡ್ ಮಾರುಕಟ್ಟೆಗೆ ಮಾರ್ಕ್ ಜುಕರ್‌ಬರ್ಗ್ ಎಂಟ್ರಿ!?ಇಡೀ ಟೆಕ್ ಪ್ರಪಂಚವೇ ಬೆಚ್ಚಿಬೀಳುವಂತಿದೆ ಜುಕರ್‌ಬರ್ಗ್ ಮುಂದಿನ ನಡೆ!
    ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
    ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
    ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಕಾಂಗ್ರೆಸ್‌ ನಾಯಕರ ಸಭೆ
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
    ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!
    ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
    ಮಂಗಳೂರು–ಉಡುಪಿಗೆ ಹೈಕೋರ್ಟ್ ಪೀಠ? ಅಧಿಕೃತ ಪರಿಶೀಲನೆಗೆ ಸಮಿತಿ ರಚನೆ
    ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
    ಮಳೆ ಮಾಯ! ಪೆಸಿಫಿಕ್ ಚಂಡಮಾರುತದಿಂದ ಮುಂಗಾರಿಗೆ ಬ್ರೇಕ್ – ದೇಶದ 70-80% ಭಾಗದಲ್ಲಿ ಒಣಹವೆ