📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ

    ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದ ಕೇರಳ ಲಾಟರಿ ಜಾಹೀರಾತು ನಂಬಿ ಆನ್‌ಲೈನ್ ಮೂಲಕ ಹಂತಹಂತವಾಗಿ 1,85,636 ರೂ. ಕಳೆದುಕೊಂಡು ಮೋಸಹೋದ ಘಟನೆ ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ವಂಚಕರು “ತೆರಿಗೆ”, “ಪ್ರೋಸೆಸಿಂಗ್ ಫೀ” ಎಂದು ವಿವಿಧ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡಿದ್ದಾರೆ.

    ವಂಚನೆಗಳಿಗಾದವರು ದಿನಾಂಕ 29-05-2026 ರಂದು ಬೆಳಿಗ್ಗೆ ಮನೆಯಲ್ಲಿ ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುತ್ತಿದ್ದಾಗ ಕೇರಳ ಲಾಟರಿ ಜಾಹೀರಾತು ಕಾಣಿಸಿದೆ. “50 ರೂ ಟಿಕೆಟ್, ಸಂಜೆ ಡ್ರಾ” ಎಂದು ಜಾಹೀರಾತಿನಲ್ಲಿದ್ದ ಲಿಂಕ್‌ನ ನಂಬರ್‌ಗೆ ಕರೆ ಮಾಡಿದ್ದಾರೆ.

    ಕರೆ ಸ್ವೀಕರಿಸಿದ “ನವೀನ್” ಹೆಸರಿನ ಅಪರಿಚಿತ ವ್ಯಕ್ತಿ, ಲಾಟರಿ ನಂಬರ್ ಕಳುಹಿಸಿ, 2 ನಂಬರ್ ಆಯ್ಕೆ ಮಾಡಿಸಿಕೊಂಡಿದ್ದಾನೆ. ನಂತರ ಸ್ಕ್ಯಾನರ್ ಕಳುಹಿಸಿ ಬೆಳಿಗ್ಗೆ 10:00 ಗಂಟೆಗೆ 100 ರೂ. GPay ಮಾಡಿಸಿಕೊಂಡಿದ್ದಾನೆ.

    Also Read  ಸಹೋದರಿಯ ಎಲುಬುಗಳೊಂದಿಗೆ ಬ್ಯಾಂಕ್ ಗೆ ಬಂದ ಅಣ್ಣ…!ದಾಖಲೆ ನಿಯಮಗಳ ನಡುವೆ ಸೋತ ಮಾನವೀಯತೆ”

    ಸಂಜೆ 4:00 ಗಂಟೆಗೆ “1 ನಂಬರ್‌ಗೆ 12 ಲಕ್ಷ ಬಹುಮಾನ ಬಂದಿದೆ” ಎಂದು ನಂಬಿಸಿದ್ದಾನೆ. UIDAI ಕಾರ್ಡ್, ಬ್ಯಾಂಕ್ ಖಾತೆ, IFSC ಕೋಡ್ ಪಡೆದುಕೊಂಡಿದ್ದಾನೆ. “12 ಲಕ್ಷಕ್ಕೆ 1% ಫೀ 12,000 ರೂ” ಎಂದು “ದೀಪಕ್” ಹೆಸರಿನ GPay ನಂ 9729838069 ಗೆ ಪಾವತಿಸಿಕೊಂಡಿದ್ದಾನೆ.

    ದಿನಾಂಕ 30-05-2026 ರಂದು ಬೆಳಿಗ್ಗೆ 11:33 ಗಂಟೆಗೆ “24,981 ರೂ ತೆರಿಗೆ” ಎಂದು ಅದೇ ನಂಬರ್‌ಗೆ ಮತ್ತೆ GPay ಮಾಡಿಸಿಕೊಂಡಿದ್ದಾನೆ. ನಂತರ “58,760 ರೂ ತೆರಿಗೆ ಬಾಂಡ್” ಎಂದು “ರಾಜ್ ಕುಮಾರ್” ಹೆಸರಿನ GPay ನಂ 9523765412 ಗೆ ಹಣ ಹಾಕಿಸಿಕೊಂಡಿದ್ದಾನೆ.

    ಕೊನೆಗೆ “89,895 ರೂ ಕೊನೆಯ ತೆರಿಗೆ” ಎಂದು “ಚಿಯಸ್ ಬಯಿದಿ” ಹೆಸರಿನ Indian Overseas Bank ಖಾತೆ ನಂ 272201000005603 ಗೆ NEFT ಮಾಡಿಸಿಕೊಂಡಿದ್ದಾನೆ.

    Also Read  ಚುನಾವಣಾ ಆಯೋಗದ ಪರ ನಿಂತ 42 ನಿವೃತ್ತ ನ್ಯಾಯಮೂರ್ತಿಗಳು,…!ವಿರುದ್ಧ ಬೀದಿಗಿಳಿದ ಪ್ರತಿಪಕ್ಷಗಳು ಹಾಗೂ ಸಂಘಟನೆಗಳು

    ಒಟ್ಟು 1,85,636 ರೂ. ಕಳೆದುಕೊಂಡ ನಂತರ ಅನುಮಾನ ಬಂದ ಪಿರ್ಯಾದಿದಾರರು ಕೇರಳದ ತ್ರಿವೇಂಡ್ರಮ್‌ಗೆ ತೆರಳಿ “ಲಾಟರಿ ಆಫೀಸ್” ವಿಚಾರಿಸಿದ್ದಾರೆ. ಅದು ಫೇಕ್ ಆಫೀಸ್ ಎಂದು ಗೊತ್ತಾಗಿ ಮೋಸವಾಗಿದೆ ಎಂದು ಇದೀಗ ದೂರು ನೀಡಿದ್ದಾರೆ.

    ಪೊಲೀಸರ ಸೂಚನೆ

    ಯಾವುದೇ ಲಾಟರಿ ಬಹುಮಾನಕ್ಕೆ “ಪ್ರೋಸೆಸಿಂಗ್ ಫೀ, ತೆರಿಗೆ, ರಿಜಿಸ್ಟ್ರೇಷನ್ ಫೀ” ಎಂದು ಮುಂಗಡ ಹಣ ಕೇಳಿದರೆ ಅದು 100% ವಂಚನೆ ಎಂದೆ ತಿಳಿಯಬೇಕು

    ಫೋನ್/ವಾಟ್ಸಾಪ್‌ನಲ್ಲಿ UIDAI, ಬ್ಯಾಂಕ್ ಡಿಟೇಲ್ಸ್ ಯಾರಿಗೂ ಕಳುಹಿಸಬೇಡಿ. ಫೇಸ್‌ಬುಕ್/ಯೂಟ್ಯೂಬ್ ಜಾಹೀರಾತು ಲಿಂಕ್ ಕ್ಲಿಕ್ ಮಾಡಿ ಲಾಟರಿ ಆಡಬೇಡಿ. ಅನುಮಾನ ಬಂದ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ.

    ಈ ಮೇಲಿನ ದೂರಿನ ಬಗ್ಗೆ  ಪ್ರಕರಣ ದಾಖಲಾಗಿದ್ದು, ಪೊಲೀಸರು ಮೊಬೈಲ್ ನಂ 9032823911, GPay ನಂ 9729838069, 9523765412 ಹಾಗೂ ಬ್ಯಾಂಕ್ ಖಾತೆ ವಿವರದ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

    Also Read  ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ

    ಲಾಟರಿ ಬಹುಮಾನ ಬಂದರೆ ಸರ್ಕಾರವೇ ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡುತ್ತದೆ. ಮುಂಗಡ ಹಣ ಕೇಳುವ ಯಾವುದೇ ಕರೆ, ಮೆಸೇಜ್ ನಂಬಬೇಡಿ ಎಂದು ಪೊಲೀಸರೇ ತಿಳಿಸಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಪುಟಿನ್‌ ಭದ್ರತೆಯ ಈ ರಹಸ್ಯ ಕೇಳಿದ್ರೆ ಶಾಕ್ ಆಗ್ತೀರಾ!ಪುಟಿನ್‌ಗೆ ಇಷ್ಟೊಂದು ಭದ್ರತೆನಾ? ‘ಸುಸು–ಕಕ್ಕಾ’ ಕೂಡ ರಷ್ಯಾಕ್ಕೆ ವಾಪಸ್!
    ಸಕ್ಕರೆ ದುಬಾರಿ… ಬೆಲ್ಲವೂ ದುಬಾರಿ! ಸಿಹಿ ತಿನ್ನೋದು ಈಗ ‘ಲಕ್ಸುರಿ’ನಾ? ಕಬ್ಬು ಸಕ್ಕರೆ ಕಾರ್ಖಾನೆಗೆ ಅಲ್ಲ… ಇಥೆನಾಲ್ ಘಟಕಗಳಿಗೆ? ಗ್ರಾಹಕರ ಜೇಬಿಗೆ ಹೊಡೆತ!
    ಮಹಾನಗರಗಳ ಜಲಕಂಠಕ:ಸ್ಮಾರ್ಟ್ ಸಿಟಿಗಳ ಕರಾಳ ಮುಖ: ಕುಡಿಯಲು ನೀರಿಲ್ಲ, ಸಿಗುವ ನೀರು ವಿಷ!
    ಶಾಲೆ ಹತ್ತಿರವಿದ್ದರೂ,ಮಕ್ಕಳ ಹೆಲ್ಮೆಟ್ ನಿರ್ಲಕ್ಷಿಸಬೇಡಿ!4 ವರ್ಷದೊಳಗಿನ ಮಗುಗೂ ಹೆಲ್ಮೆಟ್ ಕಡ್ಡಾಯ!
    ಅಂದೊಮ್ಮೆ ಬಾಲಿವುಡ್‌ನಲ್ಲಿ ಕಡೆಗಣಿಸಿದ  ಪ್ರಿಯಾಂಕಾ ಚೋಪ್ರಾ ಇಂದು ವಿಶ್ವದ ಪ್ರತಿಷ್ಠಿತ ಬ್ರಾಂಡ್ ರೋಲೆಕ್ಸ್‌ನ ಅಂಬಾಸಿಡರ್! 
    ನಾಹೀದಾ( ‘ರಾಮಕ್ಕ’)ಗೆ ಧರ್ಮ ಮೀರಿದ ಸೀಮಂತ! ಹಾರೈಸಿದ ಮುಸ್ಲಿಂ ಸಮುದಾಯ!ಜನರ ಪ್ರೀತಿಯ ಉಡುಗೊರೆ…
    “ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
    ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    ಬೆಳಗ್ಗೆ ಲೈಟ್ ಆನ್ ಮಾಡಿದ್ರು… ಕ್ಷಣದಲ್ಲೇ PGಯಲ್ಲಿ ಸಿಲಿಂಡರ್ ಸ್ಫೋಟ…! 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಬೊಮ್ಮಸಂದ್ರದ ಶ್ರೀ ಸಾಯಿ ಕಂಫರ್ಟ್ PGಯಲ್ಲಿಮುಂಜಾನೆ ಅಗ್ನಿ ದುರಂತ
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ಡಾನ್ ಹೇಮಂತ್ ಪೂಜಾರಿ ಸಹೋದರ ವಶಕ್ಕೆ?!?
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
    ಡೈಪರ್‌ನಲ್ಲಿ ಚಿನ್ನ! ಚಿನ್ನ ಕಳ್ಳಸಾಗಣೆಗೆ ಏನೆಲ್ಲಾ‘ಐಡಿಯಾ’? 8 ತಿಂಗಳ ಮಗುವನ್ನೂ ಬಿಟ್ಟಿಲ್ಲ!
    ಪೊಲೀಸರಿಂದ ಕ್ರೂರವಾಗಿ ತಳಿಸಲ್ಪಟ್ಟ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಿದ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ
    ಅಧಿಕಾರಿಗಳಿಗೆ ಲಂಚವೋ? ಗೌರವ ಧನವೋ ….!ಶಿವಲಿಂಗೇಗೌಡ “ಹೇಳಿಕೆ”ಭಾರಿ ವಿವಾದ…!
    ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
    ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ ‘ಶಾ’ ಸೂಚನೆ
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
    “ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ, ಯಂಗ್ ಜಡ್ಜ್ ಆತ್ಮಹತ್ಯೆ