📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಇಂದು ಆನ್‌ಲೈನ್ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಆಕ್ರೋಶ!ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್ ಶಾಪ್ ಬಂದ್!

    ಬೆಂಗಳೂರು, ಮೇ 20: ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ (AIOCD) ಇಂದು ದೇಶವ್ಯಾಪಿ ಮೆಡಿಕಲ್ ಶಾಪ್ ಬಂದ್‌ಗೆ ಕರೆ ನೀಡಿತ್ತು. ಆದರೆ ಕರ್ನಾಟಕದಲ್ಲಿ ಈ ಹೋರಾಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ರಾಜ್ಯದ ಕೆಲವು ವ್ಯಾಪಾರ ಸಂಘಟನೆಗಳು ಸಂಪೂರ್ಣ ಬಂದ್‌ಗೆ ಬೆಂಬಲ ನೀಡಿದರೆ, ಇನ್ನೂ ಕೆಲವು ಸಂಘಟನೆಗಳು ಕಪ್ಪುಪಟ್ಟಿ ಧರಿಸಿ ನೈತಿಕ ಬೆಂಬಲ ಸೂಚಿಸಿ ಅಂಗಡಿಗಳನ್ನು ತೆರೆಯುವ ನಿರ್ಧಾರ ಕೈಗೊಂಡಿವೆ. ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳಿದ್ದು, ಬೆಂಗಳೂರಿನಲ್ಲಿ ಶೇಕಡಾ 90ರಷ್ಟು ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

    ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಸುಮಾರು 1100ಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಬಂದ್ ಆಗಿವೆ. ಆದರೂ ಸಾರ್ವಜನಿಕರಿಗೆ ಔಷಧ ಕೊರತೆ ಉಂಟಾಗದಂತೆ 38 ಅಪೋಲೋ ಮೆಡಿಕಲ್ ಮಳಿಗೆಗಳು, 40 ಮೆಡ್ ಪ್ಲಸ್ ಶಾಪ್‌ಗಳು ಹಾಗೂ 130 ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

    Also Read  ನೈಸ್ ಟೋಲ್ ವಿವಾದ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಖೇಣಿ ತಿರುಗೇಟು.. ಇವರಿಬ್ಬರಲ್ಲಿ ಸತ್ಯವಂತರು ಯಾರು?

    ಆರೋಗ್ಯ ಇಲಾಖೆ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತುರ್ತು ಅಗತ್ಯ ಇರುವ ರೋಗಿಗಳಿಗೆ ಔಷಧ ಲಭ್ಯವಾಗುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.

    ವ್ಯಾಪಾರಿಗಳು ಜಿಎಸ್‌ಆರ್ 220(ಇ) ನಿಯಮವನ್ನು ಹಿಂಪಡೆಯಬೇಕು, ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು, ಅತಿಯಾದ ಡಿಸ್ಕೌಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

    ಆನ್‌ಲೈನ್ ಔಷಧ ಮಾರಾಟದಿಂದ ನಕಲಿ ಪ್ರಿಸ್ಕ್ರಿಪ್ಷನ್ ಬಳಕೆ, ಆಂಟಿಬಯೋಟಿಕ್ ಮತ್ತು ವ್ಯಸನಕಾರಿ ಔಷಧಿಗಳ ದುರುಪಯೋಗ, ರೋಗಿ ಮತ್ತು ಫಾರ್ಮಸಿಸ್ಟ್ ನಡುವಿನ ನೇರ ಸಂಪರ್ಕದ ಕೊರತೆ, ಸರಿಯಾದ ಸಂಗ್ರಹಣೆಯಿಲ್ಲದ ಔಷಧಿಗಳ ಅಪಾಯ ಹೆಚ್ಚುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

    ಬೃಹತ್ ಬೆಂಗಳೂರು ಔಷಧ ವ್ಯಾಪಾರಿಗಳ ಸಂಘ ಕೇವಲ ನೈತಿಕ ಬೆಂಬಲ ಸೂಚಿಸಿದ್ದು, “ರೋಗಿಗಳ ಸೇವೆ ಅಡ್ಡಿಯಾಗಬಾರದು” ಎಂಬ ಕಾರಣಕ್ಕೆ ಮೆಡಿಕಲ್ ಶಾಪ್‌ಗಳನ್ನು ತೆರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಕೆ. ಮಾಯಣ್ಣ ತಿಳಿಸಿದ್ದಾರೆ.

    Also Read  ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..

    ಎಐಒಸಿಡಿ ಅಧ್ಯಕ್ಷ ಜೆ.ಎಸ್. ಶಿಂಧೆ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಕೇವಲ ವ್ಯಾಪಾರಿಗಳ ಹೋರಾಟವಲ್ಲ, ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಯ ಪ್ರಶ್ನೆಯೂ ಹೌದು ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.

    “ಔಷಧಿಗಳು ಸಾಮಾನ್ಯ ವಸ್ತುಗಳಲ್ಲ. ವೈದ್ಯರ ಸಲಹೆ ಮತ್ತು ಅರ್ಹ ಫಾರ್ಮಸಿಸ್ಟ್ ಮಾರ್ಗದರ್ಶನದೊಂದಿಗೆ ಮಾತ್ರ ಬಳಸಬೇಕು. ಜನರು ಸ್ವಯಂ ಔಷಧ ಸೇವನೆ ತಪ್ಪಿಸಿ, ಅಧಿಕೃತ ಮತ್ತು ವಿಶ್ವಾಸಾರ್ಹ ವೇದಿಕೆಗಳಲ್ಲಿಯೇ ಔಷಧ ಖರೀದಿಸಬೇಕು” ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

    ##BreakingNews #MedicalShopBandh #OnlinePharmacy #Karnataka #DakshinaKannada #HealthSafety #MedicineAlert #AIOCD

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    ಪಶ್ಚಿಮ ಘಟ್ಟದ ಕಸ್ತೂರಿರಂಗನ್ ವರದಿಗೆ ಬ್ರೇಕ್?…ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧತೆ
    ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
    ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಬೆಂಕಿ,15 ವಿದ್ಯಾರ್ಥಿಗಳು ಸಜೀವ ದಹನ ಹೃದಯವಿದ್ರಾವಕ ದುರಂತ
    ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ
    ಎರಡು ತಿಂಗಳ ಬಳಿಕ ಸಮಾಧಿಯಿಂದ ಹೊರಬಂತು ಆಲ್ಬರ್ಟ್ ರೇಗೋ …ಕೊಲೆ ರಹಸ್ಯ ಬಯಲಾಗುತ್ತಾ ?
    ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ
    ಸ್ಮಾರ್ಟ್ ಲಾಕ್ ಇದ್ದ ಸುರಕ್ಷಿತ ಮನೆಯಲ್ಲೇ ಯುವತಿಯ ರೇಪ್ ಅಂಡ್ ಮರ್ಡರ್…!ನಗರವನ್ನು ಬೆಚ್ಚಿಬೀಳಿಸಿದ ಘಟನೆ”
    ಕುಂದಾಪುರದಲ್ಲಿ ಶಾಕಿಂಗ್ ಘಟನೆ..ಪತ್ನಿಗೆ ವಿಷ ನೀಡಿ ಬಳಿಕ ಪ್ರೇಮಿಯೊಂದಿಗೆ ಆತ್ಮಹತ್ಯೆ..!
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿಕೆ: ಜುಲೈ 2ಕ್ಕೆ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
    ರಾಮ ಮಂದಿರ ಟ್ರಸ್ಟ್‌ಗೆ ಸರ್ಕಾರದ ನಿಯಂತ್ರಣವೇ ಇಲ್ಲ! ಆರ್‌ಟಿಐಗೂ ಬಾಧ್ಯತೆ ಇಲ್ಲ ಎಂದ ಸಿಐಸಿ
    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
    ಒಂದೇ ಫ್ಲಾಟ್ ಇಬ್ಬಿಬ್ಬಿರ ಹೆಸರಲ್ಲಿ ..!ಡಬಲ್ ಡಾಕ್ಯುಮೆಂಟ್ ದಂಧೆ ಬಯಲು –ಕೋಟಿ ಕೋಟಿ ವಂಚನೆ ಮಾಡಿ ಆರೋಪಿ ಪರಾರಿ! ರಿಯಲ್ ಎಸ್ಟೇಟ್ ಶಾಕ್….
    🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
    ಇಬ್ಬರ ಸಣ್ಣ ಜಗಳದ ಎಫೆಕ್ಟ್ ನೋಡಿ..ಕಡಬದಲ್ಲಿ ಹೈಡ್ರಾಮಾ!ಸಿಲ್ಲಿAngry ಮೂಡ್‌ನಲ್ಲಿ ಎಸೆದ car ಕೀ ಚರಂಡಿಗೆ…
    ಖಾಸಗಿ ಶಿಕ್ಷಕರಿಗೂ ಸಮಾನ ವೇತನ–ಸಾಮಾಜಿಕ ಭದ್ರತೆ?
    ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ
    “ಗೃಹಲಕ್ಷ್ಮಿಗೆ 3 ವರ್ಷಗಳ ಸಂಭ್ರಮ…!–ಆದರೆ ಹಣಕ್ಕಾಗಿ ಕಾಯುತ್ತಿರುವ ಗೃಹಲಕ್ಷ್ಮಿಯರು”ಪಿಂಕ್ ಲೈಟ್‌ನಲ್ಲಿ ಗೃಹಲಕ್ಷ್ಮಿ … ಖಾತೆಯಲ್ಲಿ ಹಣ ಮಾತ್ರ ಇಲ್ಲ!
     “ತಪ್ಪು ಮಾಡಿದ್ರೆ ಕೈ-ಕಾಲು ಕತ್ತರಿಸ್ಬೇಕು, ಆಗಲೇ ಕಾನೂನಿನ ಭಯ ಬರೋದು! “ಗಲ್ಫ್ ದೇಶಗಳ ಮಾದರಿ ಶಿಕ್ಷೆ ಜಾರಿಯಾಗ್ಬೇಕು ಅನ್ನೋ ನ್ಯಾಯಮೂರ್ತಿಗಳ ನಿಲುವಿಗೆ ಇಡೀ ರಾಜ್ಯವೇ ಜೈ ಅಂತಿದೆ!
    🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
    ಕೊನೆಗೂ ಸೋತ ಖಾಕಿ….!!!
    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ
    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
    ‘ಸೈಯಾರಾ’ ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ
    ದಿಲ್ಲಿಯಲ್ಲಿ ವಾಗ್ದಾಳಿ.. ಗಲ್ಲಿಯಲ್ಲಿ ಒಪ್ಪಂದ?! ದೇಶದ ಅತ್ಯಂತ ಕಾಂಟ್ರವರ್ಸಿಯಲ್ ಬಿಡ್ ತೆರೆಮರೆಯಲ್ಲಿ ನಡೆದ ಆ ಒಂದು ನಡೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾಕೆ?!
    ಇಡುಕ್ಕಿಯಲ್ಲಿ Landslide ಆರ್ಭಟ!ಇಬ್ಬರು ಸಾವು, ಮಹಿಳೆಗೆ ಗಂಭೀರ ಗಾಯ
    ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ