📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಬೇಡಿಕೆ ಈಡೇರಿಸುವುದು ನಿಮ್ಮ ಸರದಿ  ಎಂದ ಸಿದ್ದರಾಮಯ್ಯ

    ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತಕ್ಷಣವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯ ಹೈಕಮಾಂಡ್ ಬಂಗಲೆಗೆ ನುಗ್ಗಿದ್ದಾರೆ. ಅವರು ಹಾಗೇ ನುಗ್ಗುವುದರ ಹಿಂದಿನ ಉದ್ದೇಶವೇನು? ನಾನು ನಿಮ್ಮ ಮಾತಿಗೆ ಬೆಲೆ ಕೊಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕರ ಸಂಪೂರ್ಣ ಬೆಂಬಲ ಇದ್ದರೂ ಸಹ, ನಾನು ನಿಮಗೆ ಗೌರವ ನೀಡಿ ರಾಜೀನಾಮೆ ನೀಡಿದ್ದೇನೆ. ನೀವು ಹೇಳಿದಂತೆಯೇ ರಾಜೀನಾಮೆ ಕೊಟ್ಟು ನಿಮ್ಮ ಮುಂದಿದ್ದೇನೆ ನೋಡಿ, ಈಗ ನನ್ನ ಬೇಡಿಕೆ ಈಡೇರಿಸುವುದು  ನಿಮ್ಮ ಜವಾಬ್ದಾರಿಯಾಗಿದೆ  ಎಂದು ಜಟ್ಟಿಯಂತೆ ಕೂತಿದ್ದಾರೆ ಸಿದ್ದರಾಮಯ್ಯ.

    ಹೌದು ದೆಹಲಿಗೆ ಹೋಗಿರುವ ಸಿದ್ದರಾಮಯ್ಯ, ತಮ್ಮ ರಾಜಕೀಯ ದಾಳವನ್ನು ಉರುಳಿಸಲು ಪ್ರಾರಂಭಿಸಿದ್ದಾರೆ. ರಾಷ್ಟ್ರ ರಾಜಕಾರಣಕ್ಕೆ ಬರಲು ನನ್ನ ಮನಸ್ಸು ಒಪ್ಪುತ್ತಿಲ್ಲ ನಾನೇನಿದ್ದರೂ ರಾಜ್ಯದಲ್ಲಿಯೇ ಸಕ್ರಿಯ ನಾಗರುತ್ತೇನೆ ಎಂದು ಹೇಳುತ್ತಲೇ, ತಮ್ಮದೇ ಆದ ಲಿಸ್ಟನ್ನು  ವರಿಷ್ಠರ ಬಳಿ ಇಟ್ಟಿದ್ದಾರೆ

    ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲು ಸುತಾರಾಂ ಇಷ್ಟಪಡದ ಸಿದ್ದರಾಮಯ್ಯ, ವರಿಷ್ಠರನ್ನು ಎದುರು ಹಾಕಿಕೊಳ್ಳಲಾಗದೆ ಡಿಕೆ ಮುಖ್ಯಮಂತ್ರಿ ಗಾದಿಗೆರಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ. ಆದರೆ ಮನಸ್ಸು ಡಿಕೆ ಮುಖ್ಯಮಂತ್ರಿ ಆಗಿ ಒಂದು ವರೆಯಲು ಒಪ್ಪುತ್ತಿಲ್ಲ. ಹಾಗಾಗಿಯೇ ಈಗ ಸರ್ಕಾರ ಹಾಗೂ ಪಕ್ಷದ ಮೇಲೆ ತಮ್ಮ ಪ್ರಬಲ ಹಿಡಿತವನ್ನು ಸ್ಥಾಪಿಸುವ ಕೆಲಸಕ್ಕಾಗಿಯೇ ಸಿದ್ದರಾಮಯ್ಯ ಮಗನ ಜೊತೆಗೆ ದೆಹಲಿಯ ಪ್ರಯಾಣ ಮುಂದುವರೆಸಿದ್ದಾರೆ.

    Also Read  🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ

    ರಾಹುಲ್ ಗಾಂಧಿಯವರ ನಿವಾಸಕ್ಕೆ ಅಧಿಕೃತವಾಗಿ ಭೇಟಿ ನೀಡಿದ ಮಾಜಿ ಸಿಎಂ, ನಿಮ್ಮ ಮಾತನ್ನು ಪಾಲಿಸಿದ್ದೇನೆ. ಇನ್ನು ನನ್ನ ಇಚ್ಛೆಯನ್ನು ಈಡೇರಿಸುವುದು ನಿಮ್ಮ ಹೊಣೆ ಎಂದು ಮುಗುಳ್ನಗುತ್ತಲೇ ಪಟ್ಟಿಯನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆ ಪಟ್ಟಿಯಲ್ಲಿರುವ  20 ಜನರ ಪೈಕಿ ಕನಿಷ್ಠ 15 ಜನರಿಗಾದರೂ ಮಂತ್ರಿ ಮಾಡಬೇಕೆಂದು ಹಾಗೂ ಅವರಿಗೆ ಸಚಿವ ಸ್ಥಾನ ನೀಡಬೇಕೆನ್ನುವ ಪಟ್ಟಿ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.

    ರಾಜ್ಯದಲ್ಲಿ, ಸಾಮಾಜಿಕ ನ್ಯಾಯದ ಅವಶ್ಯಕತೆ ಖಂಡಿತಾ ಇದೆ. ಕಾಂಗ್ರೆಸಿನ ಭವಿಷ್ಯ ಇರುವುದೇ ಆ ವಿಚಾರದಲ್ಲಿ. ಅಹಿಂದ ವರ್ಗ ಸಂಪೂರ್ಣವಾಗಿ ನನ್ನ ಜೊತೆಗಿದೆ. ಅವರು ನನ್ನ ಸಾಮಾಜಿಕ ನ್ಯಾಯದ ವಿಚಾರದ ಪರವಾಗಿದ್ದಾರೆ. ಆ ವಿಚಾರದಲ್ಲಿ ನಾನು ಎಂದು ರಾಜ ಮಾಡಿಕೊಂಡಿಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಒಂದೊಮ್ಮೆ ನಾನು ತಟಸ್ಥರಾದರೆ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಬಹುದೊಡ್ಡ ಡ್ಯಾಮೇಜ್ ಆಗುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಮುಂದೆ ಹೇಳಿದ್ದಾರೆ ಅನ್ನುವುದಕ್ಕಿಂತ ಸೈಲೆಂಟಾಗಿ ನಗುನಗುತ್ತಲೇ ಥ್ರೆಟ್ ನೀಡಿದ್ದಾರೆ ಎನ್ನಬಹುದು

    Also Read  ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್

    ಪ್ರಿಯಾಂಕ ಗಾಂಧಿ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿರುವ ಸಿದ್ದರಾಮಯ್ಯನವರು, ಪಕ್ಷ ಹಾಗೂ ಸರ್ಕಾರ ಎರಡಕ್ಕೂ ಭದ್ರತೆ ಇರಬೇಕು ಎಂದರೆ ನಾನು ರಾಜ್ಯದಲ್ಲಿ ಸಕ್ರಿಯನಾಗಿರಲೇಬೇಕು. ನಾನು ಸಕ್ರಿಯನಾಗಿರಬೇಕು ಎಂದರೆ ನನಗೆ ಬಲ ತುಂಬುವ ಕೆಲಸವನ್ನು ನೀವು ಮಾಡಬೇಕು. ಸರ್ಕಾರ ಹಾಗೂ ಪಕ್ಷ ಎರಡು ವಿಚಾರದಲ್ಲಿ ನನಗೆ ಅವಕಾಶ ಇರುವ ಹಾಗೆ ನೋಡಿಕೊಳ್ಳಬೇಕು. ಹೀಗೆ ಮಾಡಿದಲ್ಲಿ, 2028ರ ಚುನಾವಣೆ ಫಲಿತಾಂಶ ನಮ್ಮ ಪರವಾಗಿರುತ್ತದೆ ಎನ್ನುವುದನ್ನು ನಾನು ಈಗ ವಾಗ್ದಾನ ನೀಡುತ್ತೇನೆ ಎಂದು ಕಾನ್ಫಿಡೆನ್ಸ್ ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

    ಆದರೆ, ಇದರ ಮುನ್ಸೂಚನೆ ಸಿಗುತ್ತಿದ್ದಂತೆಯೇ ನಿಯೋಜಿತ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಕೂಡ ಅದಕ್ಕೆ ತಕ್ಕ ಪ್ಲಾನ್ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ನನಗೆ ಬೇಡಿ ಹಾಕುವ ಕೆಲಸ ಆಗಬಾರದು, ತಂತ್ರವಾಗಿ ಕೆಲಸ ನಿರ್ವಹಿಸಲು  ಅವಕಾಶ ಇರಬೇಕು ಎಂಬುದು ಡಿಕೆ ಶಿವಕುಮಾರ್ ಬೇಡಿಕೆ. ಸಿದ್ದರಾಮಯ್ಯನವರು ಕಳೆದ ಮೂರು ವರ್ಷದಲ್ಲಿ ಹೇಗೆ ಸ್ವತಂತ್ರವಾಗಿ ಆಡಳಿತ ನಡೆಸಿದ್ದಾರೋ, ಅದೇ ರೀತಿಯ ಆಡಳಿತ ನಡೆಸಲು ಮುಂದಿನ ಎರಡು ವರ್ಷಕ್ಕೆ ಸ್ವಾತಂತ್ರ್ಯ ನೀಡಬೇಕು ಅನ್ನುವುದು ಡಿಕೆ ಶಿವಕುಮಾರ್ ಖಡಕ್ ಆಗ್ರಹವಾಗಿದೆ.

    Also Read  ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!

    ಒಂದು ಕಡೆ ಸಿದ್ದರಾಮಯ್ಯ ನಾಲ್ಕು ಉಪ ಮುಖ್ಯಮಂತ್ರಿಗಳಿಗೆ ಪಟ್ಟು ಹಿಡಿದಿದ್ದಾರೆ. ಡಿಕೆ ಶಿವಕುಮಾರ್ ಒಬ್ಬರಿಗೆನೆ ಉಪಮುಖ್ಯಮಂತ್ರಿ ಅನ್ನುತ್ತಿದ್ದಾರೆ. ಹಾಗೆಯೇ, ಸಚಿವ ಸ್ಥಾನದ ವಿಚಾರದಲ್ಲೂ ಬಹುತೇಕ ಹಿರಿಯರಿಗೆ ಹಾಗೂ ಪಕ್ಷನಿಷ್ಠ ರಿಗೆ ಸಚಿವ ಸ್ಥಾನ ಮುಂದುವರೆಯುತ್ತದೆ, ಹಾಗೆಯೇ ಹೊಸಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಮುನ್ನಡೆಯುವುದು ಅನಿವಾರ್ಯ. ಇದೆಲ್ಲವುದರ ಕಾರಣದಿಂದಾಗಿ, ಆಡಳಿತಾತ್ಮಕ ವಿಚಾರದಲ್ಲಿ ಮುಖ್ಯಮಂತ್ರಿಯಾದವರಿಗೆ ಸ್ವಾತಂತ್ರ್ಯ ಅತ್ಯವಶ್ಯಕವಾಗಿ ಬೇಕು ಆ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪ ಇರಬಾರದು ಎಂದು ಪ್ರತಿಪಾದಿಸುತ್ತಿದ್ದಾರೆ ಡಿಕೆ ಶಿವಕುಮಾರ್. ಒಟ್ಟಿನಲ್ಲಿ ಈಗ ಹೊಸ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಸಿದ್ದರಾಮಯ್ಯ ಕಸರತ್ತು ಪ್ರಾರಂಭಿಸಿದ್ದಾರೆ. ಡಿಕೆ ಶಿವಕುಮಾರ್ ಅದಕ್ಕೆ ಅವಕಾಶ ನೀಡಬಾರದು ಎನ್ನುವ ನಿಟ್ಟಿನಲ್ಲಿ ತಮ್ಮ ತಂತ್ರಗಾರಿಕೆ ಶುರು ಮಾಡಿದ್ದಾರೆ. ಜೂನ್ 5ಕ್ಕೆ ಎಲ್ಲವೂ ಬಹಿರಂಗವಾಗಲಿದೆ ಬಿಡಿ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ಇದು ಕಾಕ್ರೋಚ್ ಪವರ್, ಯಾರು ಮಾಡಲಾಗದ್ದನ್ನು ಮಾಡಿದ  ಸ್ಟೂಡೆಂಟ್ಸ್
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
    ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
    ಬೀದಿ ನಾಯಿಗಳ ಹಾವಳಿ ಮಾನವ ಜೀವ ರಕ್ಷಣೆಗೆ ಮೊದಲ ಆದ್ಯತೆ — ಸುಪ್ರೀಂ ಕೋರ್ಟ್‌ನ ಕಠಿಣ ನಿಲುವು
    ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
    ಬೆಳಗ್ಗೆ ಲೈಟ್ ಆನ್ ಮಾಡಿದ್ರು… ಕ್ಷಣದಲ್ಲೇ PGಯಲ್ಲಿ ಸಿಲಿಂಡರ್ ಸ್ಫೋಟ…! 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಬೊಮ್ಮಸಂದ್ರದ ಶ್ರೀ ಸಾಯಿ ಕಂಫರ್ಟ್ PGಯಲ್ಲಿಮುಂಜಾನೆ ಅಗ್ನಿ ದುರಂತ
    ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
    ಮೂಗಿನಿಂದ ಸೋರಿದ್ದು ಶೀತವಲ್ಲ…ಮೆದುಳಿನ ದ್ರವ! 2 ವರ್ಷ ಕಾಡಿದ ಸಮಸ್ಯೆ…10 ವರ್ಷದ ಬಾಲಕನಿಗೆ ಬೆಂಗಳೂರಿನಲ್ಲಿ ಅಪರೂಪದ skull ಡಿಫೆಕ್ಟ್ ಚಿಕಿತ್ಸೆ…!
    ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
    ಹಾರ್ಮುಜ್ ಬಳಿ ಹಡಗುಗಳ ಹಿಂತಿರುಗುವ ಸರಣಿ!ಜಾಗತಿಕ ತೈಲ ಸರಬರಾಜಿಗೆ ಶಾಕ್ ⚠️
    ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!
    ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
    ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
    5 ದಿನಗಳ ಬಿಡದಿ ಹೋರಾಟಕ್ಕೆ ಪೊಲೀಸರ ಬ್ರೇಕ್! ರೈತರು ವಶಕ್ಕೆ,“ಭೂಮಿ ಉಳಿಸಲು ಜೈಲಿಗೂ ಸಿದ್ಧ” ಎಂದ ದೇವೇಗೌಡ…!
    ಮಂಗಳೂರು: ಖಚಿತ ಮಾಹಿತಿಗೆ ಖಾಕಿ ಆಕ್ಷನ್! ಮುಕ್ಕದ ಕಟ್ಟಡದಲ್ಲಿ 8 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಬಂಧನ
    ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
    ಇರಾನ್ ಸಚಿವ ಅಬ್ಬಾಸ್ ಅರಾಘ್ಚಿ ಭಾರತಕ್ಕೆ… ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ BRICS ಸಭೆ ಮೇಲೆ ವಿಶ್ವದ ಗಮನ!ಜಾಗತಿಕ ಉದ್ವಿಗ್ನತೆಯ ನಡುವೆ ದೆಹಲಿ ರಾಜತಾಂತ್ರಿಕ ಕೇಂದ್ರಬಿಂದು!…
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ನಿವೇಶನ ಮೋಸದ ಆರೋಪ: ಶಾಸಕ ಎಸ್ ಟಿ ಸೋಮಶೇಖರ್ ಬೆಂಬಲಿಗ ಕೇಬಲ್ ಕೃಷ್ಣನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ..!
    ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
    35 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದ 50 ವರ್ಷದ ಮಹಿಳೆ: ಇಂಟರ್ನೆಟ್‌ಗೆ ಸ್ಫೂರ್ತಿಯಾದ ಕಥೆ
    ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!