📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!


ಬೈಂದೂರು: ಶಿರೂರು ಗ್ರಾಮದ ಸುಮತಿ (36) ಅವರು ತಮ್ಮ ಪತಿ ಮತ್ತು ಮನೆಯ ಸದಸ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 07/04/2014 ರಂದು ಹಿಂದೂ ಬಂಟ್ಸ್ ಸಮುದಾಯದ ಸಂಪ್ರದಾಯದಂತೆ ಚಿತ್ತೂರು ಮಾರಣಕಟ್ಟೆ ವಾಸುಕಿ ಸಭಾಭವನದಲ್ಲಿ ರಾಘವೇಂದ್ರ ಶೆಟ್ಟಿ ಅವರೊಂದಿಗೆ ವಿವಾಹವಾಗಿದ್ದರು.

ಮದುವೆಗೆ ಮೊದಲು ಆರೋಪಿಗಳ ಬೇಡಿಕೆಯಂತೆ ಸುಮತಿ ಅವರ ಕುಟುಂಬವು 30 ಪವನ್ ಚಿನ್ನವನ್ನು ನೀಡಿದ್ದು, ಬಳಿಕ ಅವರು ಗಂಡನ ಮನೆಯಲ್ಲಿ ವೈವಾಹಿಕ ಜೀವನ ನಡೆಸುತ್ತಿದ್ದರು. ಈ ವೇಳೆ ಮನೆಯ ಇತರೆ ಸದಸ್ಯರು ಸಹ ವಾಸವಾಗಿದ್ದರು.
08/06/2018 ರಂದು ಗಂಡು ಮಗು ಜನಿಸಿದ ನಂತರ, ಪತಿ ರಾಘವೇಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ ಮತ್ತು ನಾಗೇಂದ್ರ ಶೆಟ್ಟಿ ಅವರ ಪ್ರೇರಣೆಯಿಂದ ಪಾರ್ವತಿ ಶೆಟ್ಟಿ ಮತ್ತು ಸುಮಲತಾ ಅವರು ಹೆಚ್ಚುವರಿ ವರದಕ್ಷಿಣೆ ಹಣಕ್ಕಾಗಿ ಸುಮತಿ ಅವರಿಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರೆಂದು ದೂರಲಾಗಿದೆ .
ಇದೇ ವೇಳೆ, ಮದುವೆಯ ಸಮಯದಲ್ಲಿ ತಂದ ಚಿನ್ನಾಭರಣಗಳನ್ನು ಪತಿ ಬ್ಯಾಂಕ್‌ನಲ್ಲಿ ಅಡವಿರಿಸಿ ಸಾಲ ಪಡೆದಿದ್ದು, ಇದುವರೆಗೆ ಬಿಡುಗಡೆ ಮಾಡದೇ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. ಈ ಕುರಿತು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿತ್ತಂತೆ.
ಎರಡನೇ ಹೆರಿಗೆಗಾಗಿ ತವರು ಮನೆಗೆ ಬಂದಿದ್ದ ಸುಮತಿ, 01/03/2026 ರಂದು ಮಕ್ಕಳೊಂದಿಗೆ ವೈವಾಹಿಕ ಮನೆಗೆ ಹೋದಾಗ, ಆರೋಪಿಗಳು ಮನೆಯೊಳಗೆ ಪ್ರವೇಶಿಸಲು ಬಿಡದೇ ಹೊರಗೆ ತಳ್ಳಿ, ಕೋಲಿನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆಂದು ತಿಳಿಸಿದ್ದಾರೆ.
ಮುಂದುವರೆದು, 06/03/2026 ರಂದು ಸಂಜೆ 7:30ರ ಸುಮಾರಿಗೆ, ಪತಿ ತವರು ಮನೆಗೆ ಬಂದು ಜಗಳವಾಡಿ ಸುಮತಿ ಮೇಲೆ ದೈಹಿಕ ಹಲ್ಲೆ ನಡೆಸಿದಷ್ಟೇ ಅಲ್ಲದೆ, ಅವರನ್ನು ರಕ್ಷಿಸಲು ಬಂದ ತಾಯಿ ಮತ್ತು ದೊಡ್ಡಮ್ಮನ ಮೇಲೂ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2026ರಡಿ ಕಲಂ 85, 115(2), 118(1), 352, 351(2) ಜೊತೆಗೆ BNS 3(5) ಮತ್ತು ಡಿಪಿ ಕಾಯ್ದೆಯ 3 ಹಾಗೂ 4ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

##EndDowrySystem##StopDomesticViolence##WomenRights#marital dispute

COMMENTS

Login with Gmail to comment

ಇನ್ನಷ್ಟು ಸುದ್ದಿ

ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!