📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಕುಟುಂಬದ ನಾಲ್ವರ ನಿಗೂಢ ಸಾವು…

    ಢಾಕಾ: ಬಾಂಗ್ಲಾದೇಶದ ರಂಗ್‌ಪುರ ನಗರದಲ್ಲಿ ನಿವೃತ್ತ ಶಿಕ್ಷಕನೊಬ್ಬರು, ಅವರ ಪತ್ನಿ, ಪುತ್ರಿ ಹಾಗೂ 12 ವರ್ಷದ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮನೆಯೊಳಗೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ಆತಂಕ ಮೂಡಿಸಿದೆ.

    ಮೃತರನ್ನು ರಂಗ್‌ಪುರ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ 65 ವರ್ಷದ ಗಣಪತಿ ಚಕ್ರವರ್ತಿ, ಅವರ ಪತ್ನಿ 50 ವರ್ಷದ ಪ್ರೀತಿಲತಾ ಚಕ್ರವರ್ತಿ, 23 ವರ್ಷದ ಪುತ್ರಿ ಅಗಾಮಿ ಚಕ್ರವರ್ತಿ ಪ್ರಾರ್ಥಿ ಹಾಗೂ 12 ವರ್ಷದ ಪುತ್ರ ಪ್ರಿಯಂ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಕುಟುಂಬದ ಸದಸ್ಯರನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪ್ರೀತಿಲತಾ ಹಾಗೂ ಅಗಾಮಿ ಅವರ ಮೃತದೇಹಗಳು ಮನೆಯ ಮೆಟ್ಟಿಲುಗಳ ಬಳಿ, ಗಣಪತಿ ಅವರ ಮೃತದೇಹ ಚಾವಣಿಯಲ್ಲಿ ಹಾಗೂ ಬಾಲಕ ಪ್ರಿಯಂನ ಮೃತದೇಹ ಹಾಸಿಗೆಯ ಕೆಳಗೆ ಪತ್ತೆಯಾಗಿದೆ. ಮನೆಯ ಮುಖ್ಯ ಗೇಟ್ ಒಳಗಿನಿಂದ ಲಾಕ್ ಆಗಿತ್ತು. ಪೊಲೀಸರು ಬೀಗ ಒಡೆದು ಮನೆಯೊಳಗೆ ಪ್ರವೇಶಿಸಿದಾಗ ನಾಲ್ವರ ಮೃತದೇಹಗಳು ಪತ್ತೆಯಾಗಿವೆ.

    Also Read  ಜಾಗತಿಕ ಯುದ್ಧ ಭೀತಿ:ಟ್ರಂಪ್ ಎಫೆಕ್ಟ್‌ಗೆ ಭಾರೀ ಆರ್ಥಿಕ ಭೂಕಂಪ! — ಒಂದೇ ದಿನ ₹6 ಲಕ್ಷ ಕೋಟಿ ನಷ್ಟ!ಸೆನ್ಸೆಕ್ಸ್ ಧರೆಗುರುಳಿ, ರೂಪಾಯಿ ದಾಖಲೆ ಪತನ!

    ಸಂಬಂಧಿಕರ ಪ್ರಕಾರ, ಪ್ರೀತಿಲತಾ ಅವರ ಸಹೋದರಿ ಪೂಜಾ ಚಕ್ರವರ್ತಿ ಅವರು ಗುರುವಾರ ಮಧ್ಯಾಹ್ನ ಕೊನೆಯ ಬಾರಿ ಅವರೊಂದಿಗೆ ಮಾತನಾಡಿದ್ದರು. ಬಳಿಕ ಕುಟುಂಬದ ನಾಲ್ವರು ಸದಸ್ಯರ ಮೊಬೈಲ್‌ಗಳು ಸಂಪರ್ಕಕ್ಕೆ ಸಿಗದೆ ಗುರುವಾರ ರಾತ್ರಿ ಬಳಿಕ ಸ್ವಿಚ್ ಆಫ್ ಆಗಿದ್ದವು. ಇದರಿಂದ ಆತಂಕಗೊಂಡ ಸಂಬಂಧಿಕರು ಶನಿವಾರ ರಾತ್ರಿ ಮನೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

    ಕುಟುಂಬವು ಇತ್ತೀಚೆಗಷ್ಟೇ ಈ ಪ್ರದೇಶದಲ್ಲಿ ಹೊಸ ಮನೆಯನ್ನು ನಿರ್ಮಿಸಿತ್ತು ಎನ್ನಲಾಗಿದೆ. ಪ್ರಕರಣದ ನಿಖರ ಕಾರಣ ಹಾಗೂ ಸಾವಿನ ಹಿಂದಿರುವ ವ್ಯಕ್ತಿಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ##Bangladesh #Rangpur #HinduFamily #FamilyTragedy #BangladeshNews #CrimeNews #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ FIR ..!ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ರಾಜಕೀಯ ಕಾವು ಏರಿಕೆ!
    ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
    ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ
    ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
    ಮುಖವಾಡ ಧರಿಸಿದವರನ್ನು ನಂಬುವ ಮುನ್ನ ನೂರು ಬಾರಿ ಯೋಚಿಸಿ…!
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ನೆಮ್ಮದಿಯ ಗೂಡಿಗೆ ಸಾಲದ ಕೊಳ್ಳಿ..?!ಮುದ್ದಾದ ಮಕ್ಕಳ ಉಸಿರುಗಟ್ಟಿಸಲು ಅದೇಗೆ…..ಕರುಳಬಳ್ಳಿ ಹಿಂಡುವ ನಾಲ್ಕು ಜೀವಗಳ ದುರಂತ ಅಂತ್ಯ!
    ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
    ಪವಾಡವೇ? 33 ದಿನ ,775 ಗಂಟೆಗಳ ಬಳಿಕ ಸಮಾಧಿಯಿಂದ ಹೊರಬಂದ ಶಿವಯೋಗಿ ಶ್ರೀಗಳು……!!!!ಗದಗದಲ್ಲಿ ಅಪರೂಪದ ಆಧ್ಯಾತ್ಮಿಕ ಘಟನೆ!ಪರಮ ಯೋಗವೇ?
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    🚀 ಸ್ಪೇಸ್‌ನಲ್ಲಿ ಪೆಟ್ರೋಲ್ ಬಂಕ್‌ನಿಂದ..ಔಷಧ ತಯಾರಿಕೆಯವರೆಗೆ!
    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    ಏನಿದು ‘ಲಾಸ್ಟ್ ಲೈವ್’ ಮತ್ತು ಅಂತಿಮ ಸಂಸ್ಕಾರದ ವಿಡಿಯೋ ಅಸಲಿ ಸಮಾಚಾರ? ವೈರಲ್ ಆದ ಬಿಹಾರದ ಭರತ್ ತಿವಾರಿ ಎನ್‌ಕೌಂಟರ್ ಕೇಸ್…
    35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
    ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
    “ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ” – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
    “ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”
    ಮಿಸೆಸ್ ಕೇರಳ ಈಗ ‘ಡ್ರಗ್ ಕ್ವೀನ್’…!?ಕೋಟಿ ಮೌಲ್ಯದ ಡ್ರಗ್ಸ್ ಜೊತೆ ಮಾಜಿ ‘ಮಿಸೆಸ್ ಕೇರಳ’ ಅರೆಸ್ಟ್!”
    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾತ್ರ (ಅ)ವ್ಯವಸ್ಥೆ ಎಚ್ಚರಗೊಳ್ಳಬೇಕೇ? ಯಾರು ಹೊಣೆ? ಏನು ಕ್ರಮ?
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!
    ಸಿಟಿ ಬಸ್ ಫೋಲ್ಡಿಂಗ್ ಬಾಗಿಲು ಕಡ್ಡಾಯ: ಸುರಕ್ಷತೆಗೆ ಹೆಜ್ಜೆ, ಆದರೆ ಸವಾಲುಗಳೇನು? ಪರಿಹಾರ ಹೇಗೆ?
    ರಷ್ಯಾದಲ್ಲಿ ಪ್ಲೇಗ್ ಆತಂಕ! ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿಗೆ ನಿಗಾ…!ರಷ್ಯಾದಲ್ಲಿ ಕಟ್ಟೆಚ್ಚರ!
    🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
    ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….