📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಿಡದಿ ಟೌನ್‌ಶಿಪ್‌ಗೆ ಮರುಜೀವ: ವಿಶ್ವದರ್ಜೆಯ ‘ಎಐ ಸಿಟಿ’ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ .. ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ

    ರೈತರಿಗೆ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ; ಭೂಮಿ ಬದಲಾಗಿ 50% ಅಭಿವೃದ್ಧಿಪಡಿಸಿದ ಜಾಗ ನೀಡಲು ನಿರ್ಧಾರ: ಮುಖ್ಯಮಂತ್ರಿ

    ಬೆಂಗಳೂರು: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಗೆ ರಾಜ್ಯ ಸರ್ಕಾರ ಮರುಜೀವ ನೀಡಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೊಸ ರೂಪ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು  ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಚಾರ ತಿಳಿಸಿದರು.

    ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಬೃಹತ್ ಯೋಜನೆಯಡಿ ಬಿಡದಿಯನ್ನು ವಿಶ್ವದರ್ಜೆಯ ಮೂಲಸೌಕರ್ಯ ಹೊಂದಿರುವ ಅತ್ಯಾಧುನಿಕ **‘ಎಐ ಸಿಟಿ’**ಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣಗಳು, ವಿಶಾಲ ಉದ್ಯಾನವನಗಳು ಹಾಗೂ ಸುಸಜ್ಜಿತ ವಸತಿ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ನಗರ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

    Also Read  ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಸಿಂಗ್‌ಗೆ ದೆಹಲಿ ಕೋರ್ಟ್‌ನಿಂದ ಖುಲಾಸೆ

    ರೈತರ ಹಿತರಕ್ಷಣೆ ಸರ್ಕಾರದ ಮೊದಲ ಆದ್ಯತೆ

    ಬಿಡದಿ ಟೌನ್‌ಶಿಪ್‌ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

    “ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿತ್ತು. ಆದರೆ ನಮ್ಮ ಸರ್ಕಾರ ರೈತರಿಗೆ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗ ನೀಡಲಾಗುವುದು,” ಎಂದು ಅವರು ಹೇಳಿದರು.

    ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ಐಚ್ಛಿಕವಾಗಿರಲಿದೆ. ಯೋಜನೆಗೆ ತಮ್ಮ ಜಮೀನು ನೀಡಲು ಇಚ್ಛಿಸದ ಯಾವುದೇ ರೈತರ ಮೇಲೂ ಸರ್ಕಾರದಿಂದ ಒತ್ತಡ ಹೇರುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

    Also Read  ಮಣಿಪಾಲ KMC ಆಸ್ಪತ್ರೆಯ 4ನೇ ಮಹಡಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಒಳರೋಗಿ ಬಿದ್ದು ಗಂಭೀರ ಗಾಯ…ವೀಡಿಯೋ ವೈರಲ್

    ಯುವಜನರಿಗೆ ಉದ್ಯೋಗ, ರೈತರಿಗೆ ಗೌರವಯುತ ಬದುಕು

    ಬಿಡದಿ ಟೌನ್‌ಶಿಪ್‌ ಯೋಜನೆಯು ಕೇವಲ ನಗರಾಭಿವೃದ್ಧಿಗೆ ಸೀಮಿತವಾಗದೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಆರ್ಥಿಕ ಹಾಗೂ ಸಾಮಾಜಿಕ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.

    ಅತ್ಯಾಧುನಿಕ ಕೈಗಾರಿಕೆಗಳು, ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಯುವಜನತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.

    “ಯುವಜನತೆಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸುವುದು ಸರ್ಕಾರದ ಬದ್ಧತೆ. ಅಭಿವೃದ್ಧಿಯೊಂದಿಗೆ ರೈತರ ಹಿತವನ್ನೂ ಕಾಪಾಡಿಕೊಂಡು ಮುಂದೆ ಸಾಗುತ್ತೇವೆ. ಈ ಮಹತ್ವದ ಯೋಜನೆಗೆ ಜನರ ಸಹಕಾರ ಇರಲಿ,” ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

    Also Read  ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ

    ಬಿಡದಿ ಟೌನ್‌ಶಿಪ್‌ ಯೋಜನೆ ಪೂರ್ಣಗೊಂಡರೆ ಬೆಂಗಳೂರು ದಕ್ಷಿಣ ಭಾಗದಲ್ಲಿ ವಸತಿ, ಸಾರಿಗೆ, ಉದ್ಯೋಗ, ಕ್ರೀಡೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಪರಿವರ್ತನೆ ಆಗಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹೃದಯವಿದ್ರಾವಕ ಘಟನೆ: ರಾಜಕಾಲುವೆಯಲ್ಲಿ ತೇಲಿ ಬಂದ ನವಜಾತ ಹಸುಗೂಸು
    2029ರೊಳಗೆ 21 ಎನ್‌ಡಿಎ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ₹6,695 ಕೋಟಿಯ ಮೆಗಾ ಪ್ರಾಜೆಕ್ಟ್‌ಗೆ ಮಳೆಯ ಅಗ್ನಿಪರೀಕ್ಷೆ-ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
    ಶಿಕ್ಷಕರು ಹೊಡೆಯುತ್ತಾರೆಂಬ ಭಯಕ್ಕೆ ಮನೆ ಬಿಟ್ಟ 9ನೇ–10ನೇ ತರಗತಿ ವಿದ್ಯಾರ್ಥಿನಿಯರು..!ಎಲ್ಲಿದ್ದರು ಗೊತ್ತಾ..!
    ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
    ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ ಯಶ್ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ….!
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
    ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
    ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
    ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
    ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
    “ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
    ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
    🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
    ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ
    ಬೆಂಗಳೂರು ಮಾತ್ರವಲ್ಲ… ಮಂಗಳೂರಿನಿಂದಲೂ Startup ಹಾರಾಟ! ₹9.5 ಕೋಟಿಗೂ ಅಧಿಕ ಹೂಡಿಕೆಯ K-Combinatorಗೆ ಚಾಲನೆ
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    ಭೀಕರ ಅಪಘಾತ ಮಹಿಳೆ ಬಲಿ