📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ

    ಮಂಗಳೂರು: ನಗರದ ಕುಂಟಿಕಾನ ಸಮೀಪದ ಆನ್‌ಲೈನ್ ಡೆಲಿವರಿ ಸಂಸ್ಥೆಯ ಕಟ್ಟಡದಲ್ಲಿ ಸಂಭವಿಸಿದ ಹೃದಯವಿದ್ರಾವಕ ಲಿಫ್ಟ್ ದುರಂತದಲ್ಲಿ ಯುವ ಉದ್ಯೋಗಿಯೊಬ್ಬರು ದುರ್ಮರಣಕ್ಕೀಡಾದ ಘಟನೆ ಶನಿವಾರ ನಡೆದಿದೆ.

    ಮೃತರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಎಂದು ಗುರುತಿಸಲಾಗಿದೆ. ಅವರು ಖಾಸಗಿ ಆನ್‌ಲೈನ್ ಡೆಲಿವರಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

    ಕರ್ತವ್ಯದ ನಿಮಿತ್ತ ಕಟ್ಟಡದ ಮೇಲ್ಮಹಡಿಗೆ ಲಿಫ್ಟ್ ಮೂಲಕ ತೆರಳುತ್ತಿದ್ದ ವೇಳೆ ಏಕಾಏಕಿ ಲಿಫ್ಟ್ ತಾಂತ್ರಿಕ ದೋಷದಿಂದ ನೆಲಮಹಡಿ ಮತ್ತು ಮೊದಲ ಮಹಡಿ ನಡುವಿನ ಭಾಗದಲ್ಲಿ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಲಿಫ್ಟ್ ಒಳಗೆ ಸಿಲುಕಿಕೊಂಡ ನೌಫಾಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದು, ತಕ್ಷಣ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದರು.

    Also Read  79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!

    ಲಿಫ್ಟ್‌ನ ಒಂದು ಭಾಗ ಮೊದಲ ಮಹಡಿಗೆ ಸಮೀಪದಲ್ಲಿದ್ದ ಹಿನ್ನೆಲೆ, ಸಿಬ್ಬಂದಿ ಬಾಗಿಲು ತೆರೆಯುವ ಮೂಲಕ ನೌಫಾಲ್ ಅವರನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ ಇದೇ ವೇಳೆ ಲಿಫ್ಟ್ ಅನಿರೀಕ್ಷಿತವಾಗಿ ಮರುಚಲನೆಗೊಂಡ ಪರಿಣಾಮ, ನೌಫಾಲ್ ಗಂಭೀರವಾಗಿ ಸಿಲುಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

    ಯುವ ಉದ್ಯೋಗಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಸಹೋದ್ಯೋಗಿಗಳಲ್ಲಿ ಆಕ್ರಂದನ ಮೇಳೈಸಿದೆ.

    ಘಟನಾ ಸ್ಥಳಕ್ಕೆ ಉರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದೇ ಅಥವಾ ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತೇ ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.

    ##Mangalore #Instamart #RIPNaufal #Tragedy

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    ಸಾರ್ವಜನಿಕವಲ್ಲದ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದರೆ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
    ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
    ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
    ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!
    ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!
    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ಪುತ್ತೂರು ಅತ್ಯಾಚಾರ ಪ್ರಕರಣ: ಹೈಕೋರ್ಟ್‌ನಲ್ಲಿ ರಾಜಿ ಸಂಧಾನ ಪ್ರಸ್ತಾಪ..!
    ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ, ಯಂಗ್ ಜಡ್ಜ್ ಆತ್ಮಹತ್ಯೆ
    ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
    🔥 ಬಿಸಿಲಿನ ಬಿಸಿ ತಾರಕ್ಕೇರಿದೆ, ಆದರೆ ಮಳೆ ಸಿಡಿಲು ಸರ್ಪ್ರೈಸ್ ಬರ್ತಿದೆ! 🌩️
    ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್
    ಕಾರು ಸ್ಟೀರಿಂಗ್ ಹಿಡಿದ ಬಾಲಕಿ… ಪಕ್ಕದಲ್ಲೇ ಕುಳಿತಿದ್ದ ಪೊಲೀಸ್ ಅಧಿಕಾರಿ! ವೈರಲ್ ವಿಡಿಯೋ ಎಬ್ಬಿಸಿದ ದೊಡ್ಡ ಪ್ರಶ್ನೆ
    “ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಂದು ಮಗುವಿನ ಸುರಕ್ಷತೆಗೆ ಶಾಲೆಯೇ ಹೊಣೆ!”
    ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
    ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
    ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
    ಗೃಹಲಕ್ಷ್ಮಿ ಹಣ ಪಡೆಯೋರೇ ಗಮನಿಸಿ! ಪತಿ ಆಧಾರ್‌ನಿಂದ ಬ್ಯಾಂಕ್ ಖಾತೆವರೆಗೆ ಹೊಸ ರೂಲ್ಸ್
    ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    ಬ್ರಿಜ್‌ಭೂಷಣ್ ಸಿಂಗ್ ಖುಲಾಸೆಗೆ ಸವಾಲ್; ನಾಲ್ವರು ಮಹಿಳಾ ಕುಸ್ತಿಪಟುಗಳಿಂದ ಮೇಲ್ಮನವಿ—ಸೆ.28ಕ್ಕೆ ವಿಚಾರಣೆ
    ಸಾಧನೆ ಇಲ್ಲದೆ ಸತ್ತರೆ ಸಾವಿಗೂ ಅಪಮಾನ!
    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
    ಫುಟ್‌ಪಾತ್ ಬೇಕು, ಆದರೆ ಬದುಕಿಗೂ ಜಾಗ ಬೇಕಲ್ಲವೇ?ಮಂಗಳೂರಿನಲ್ಲಿ ಬೀದಿಬದಿ ಹೂವಿನ ವ್ಯಾಪಾರಕ್ಕೆ ‘ಶಾಕ್’ ವ್ಯಾಪಾರಿಗಳ ತೆರವು ನಿಯಮ ಸರಿ… ಪರ್ಯಾಯ ವ್ಯವಸ್ಥೆ ಎಲ್ಲಿ?
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!