📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ

    ದಾವಣಗೆರೆ ಉಪಚುನಾವಣೆಯ ರಿಸಲ್ಟ್ ಇನ್ನೂ ಬಂದಿಲ್ಲ. ಆದರೆ ಅದಕ್ಕೂ ಮೊದಲೇ ಇಬ್ಬರು ನಾಯಕರ ತಲೆದಂಡವಾಗಿದೆ. ಇನ್ನೊಬ್ಬ ಸಚಿವರ ತಲೆದಂಡಕ್ಕೆ ಕ್ಷಣಗಣನೆಯ ಕೌಂಟ್ ಶುರುವಾಗಿದೆ.

    ಸಚಿವ ಜಮೀರ್ ಅಹ್ಮದ್ ಖಾನ್ ನಾಳೆ ಸಂಜೆಯ ಹೊತ್ತಿಗೆ ಸಚಿವ ಸ್ಥಾನದಿಂದ ಹೊರದಬ್ಬಲ್ಪಡಬಹುದು ಎಂಬ ಮೆಸೇಜ್ ಅಧಿಕೃತವಾಗಿ ಬರುತ್ತಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಜಯಮೀರ್ ಅಹ್ಮದ್ ರವರನ್ನು ಬಚಾವ್ ಮಾಡುವ ಪ್ರಯತ್ನ ಮಾಡುತ್ತಿದ್ದರೂ, ಅದು ವರ್ಕ್ ಆಗುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ಜಮೀರ್ ಅಹ್ಮದ್ ಖಾನ್, ತೇಪೆ ಹಾಕುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಖುದ್ದು  ಪಕ್ಷವೇ ಜಮೀರ್ ಅಹ್ಮದ್ ಗೆ ಒಂದು ಜವಾಬ್ದಾರಿಯನ್ನು ವಹಿಸಿತ್ತು. ತಪ್ಪು ಅವರಿಂದ ಏನೇ ಆಗಿದ್ದರು, ಅದನ್ನು ಸರಿಪಡಿಸಲು ಒಂದು ಅವಕಾಶವನ್ನು ನೀಡಿತ್ತು. ಆದರೆ ಜಮೀರ್ ಅಹ್ಮದ್ ಖಾನ್ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ತಾನು ಮಾಡಿರುವ ತಪ್ಪನ್ನು ಸರಿಪಡಿಸಬೇಕಾದ ಸಮಯದಲ್ಲಿ ಸರಿಪಡಿಸಲು ಹೋಗಲಿಲ್ಲ. ಪರಿಣಾಮ, ಉಪಚುನಾವಣೆಯ ಮೇಲೆ ದೊಡ್ಡ ಪರಿಣಾಮವನ್ನೇ ಬೀರಿದೆ. ಪಕ್ಷದ ಅಭ್ಯರ್ಥಿಯು ಗೆಲ್ಲಬೇಕಾದ ಸಂದರ್ಭದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ರೊಚ್ಚಿಗೆಗೆದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವಂತಹ ನಾಯಕರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪಕ್ಷವನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಖಡಕ್ಕಾಗಿ ಹೈಕಮಾಂಡ್ಗೆ ಸಂದೇಶ ಕಳುಹಿಸುತ್ತಾರೆ. ಹೈಕಮಾಂಡ್ ಆ ಸಂದೇಶವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವುದರ ಜೊತೆಗೆ, ಸಂಪೂರ್ಣ ವರದಿಯನ್ನು ಕೇಳುತ್ತದೆ. ಹಾಗೆಯೇ ದಾವಣಗೆರೆಯ ವಿಚಾರದಲ್ಲಿ ಏನೆಲ್ಲಾ ನಡೆದಿದೆ ಯಾವ ಯಾವ ನಾಯಕರಿಂದ ತಪ್ಪಾಗಿದೆ ಎನ್ನುವುದರ ಬಗ್ಗೆ ಒಂದು ತನಿಖಾ ವರದಿಯನ್ನು ಹೈಕಮಾಂಡ್ ತರಿಸಿಕೊಳ್ಳುತ್ತದೆ. ವರದಿಯ ಆಧಾರದ ಮೇಲೆಯೇ ಇಬ್ಬರು ವಿಧಾನ ಪರಿಷತ್ ಸದಸ್ಯರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಲಾಗಿದೆ. ಈಗ ಉಳಿದದ್ದು ಸಚಿವ ಜಮೀರ್ ಅಹಮದ್ ಖಾನ್ ಒಬ್ಬರೇ.

    Also Read  ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ

    ಮಂಗಳವಾರ  ಸಂಜೆಯ ಒಳಗೆನೇ ಜಮೀರ್ ಅಹ್ಮದ್ ರನ್ನ ಸಚಿವ ಸ್ಥಾನದಿಂದ ಹೊರಗಟ್ಟಿ ಎಂಬ ಸಂದೇಶ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರದ ತಡರಾತ್ರಿಯೇ  ದೆಹಲಿಯಿಂದ ಬಂದಾಗಿದೆ. ಹಾಗಾಗಿಯೇ ಮಂಗಳವಾರ ಬೆಳಿಗ್ಗೆ ಜಮೀರ್ ಅಹ್ಮದ್ ಖಾನ್ ಗೆ ಫೋನ್ ಮಾಡಿ ಕರೆಸಿಕೊಳ್ಳುತ್ತಾರೆ ಮುಖ್ಯಮಂತ್ರಿಗಳು. ಮಂತ್ರಿಗಳು,  ನಿನ್ನನ್ನು ಬಚಾವ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಮೆಸೇಜನ್ನು ಕೊಡುತ್ತಿರುವಂತೆಯೇ, ಜಮೀರ್ ಅಹಮದ್ ಖಾನ್ ಒಂದಷ್ಟು ಸ್ಪಷ್ಟನೆ ಕೊಡಲು ಮುಂದಾಗುತ್ತಾರೆ. ಹಾಗೆ ಮುಂದಾಗುತ್ತಿದ್ದಂತೆಯೇ ಈಗ ಅದ್ಯಾವುದೂ ವರ್ಕ್ ಆಗುವುದಿಲ್ಲ. ಸ್ಪಷ್ಟನೆ ಏನೇ ಕೊಡುವುದಿದ್ದರೂ ದೆಹಲಿಗೆ ಹೋಗಿ ಕೊಡಿ. ಈಗ ನಾನು ಕಾರ್ಯಕ್ರಮಕ್ಕೆ ಹೊರಟಿದ್ದೇನೆ ಎಂದು ಹೇಳಿ, ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಹೊರಡುತ್ತಾರೆ. ಇದರ ಅರ್ಥ ಸ್ಪಷ್ಟವಾಗಿದೆ , ಸಚಿವ ಜಮೀರ್ ಅಹ್ಮದ್ ಖಾನ್ ನಾಳೆ ಸಚಿವ ಸ್ಥಾನದಲ್ಲಿ ಮುಂದುವರೆಯಬೇಕು ಎಂದರೆ ದೊಡ್ಡ ಮ್ಯಾಜಿಕ್  ಆಗಬೇಕು ಅಷ್ಟೇ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಶಾಂತಿ ಕಾಪಾಡಿ, ವದಂತಿಗಳಿಗೆ ಕಿವಿಗೊಡಬೇಡಿ: ಪ್ರತಿಭಟನಾಕಾರರಿಗೆ ದೆಹಲಿ ಪೊಲೀಸರ ಮನವಿ
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    ದೆಹಲಿ ಹೋಟೆಲ್ ಭೀಕರ ಅಗ್ನಿ ದುರಂತ!ಹೊತ್ತಿ ಉರಿದ ಹೋಟೆಲ್‌ನಲ್ಲಿ 21 ಮಂದಿ ಸಜೀವ ದಹನ..
    ಫಾರ್ಮ್-7 ವಿವಾದ ಸ್ಫೋಟ: 52 ಮಂದಿಯ ವಿರುದ್ಧ FIR-ಮತದಾರರ ಹೆಸರು ಅಳಿಸುವ ಆರೋಪಕ್ಕೆ ತನಿಖೆ ಆಗ್ರಹ
    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    ಇಂದು ಆನ್‌ಲೈನ್ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಆಕ್ರೋಶ!ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್ ಶಾಪ್ ಬಂದ್!
    2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ
    ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
    ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
    “ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
    ಅರ್ಹ ಮತದಾರರಿಗೆ ರಿಲೀಫ್‌: ಹೆಸರು ಬಿಟ್ಟವರಿಗೆ ಮತ್ತೆ ಅವಕಾಶ!
    17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
    ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ‘ಸೈಯಾರಾ’ ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!
    ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
    ಮಂಗಳೂರು ಹೆದ್ದಾರಿಗಳಲ್ಲಿ ರಾತ್ರಿ ಟ್ರಾನ್ಸ್ಜೆಂಡರ್ ಕಿರುಕುಳಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಸೂಚನೆ..!
    ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
    ಇಡುಕ್ಕಿಯಲ್ಲಿ Landslide ಆರ್ಭಟ!ಇಬ್ಬರು ಸಾವು, ಮಹಿಳೆಗೆ ಗಂಭೀರ ಗಾಯ
    ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
    ವಿಮಾನದಲ್ಲಿ ಭಾರೀ ಟರ್ಬುಲೆನ್ಸ್:300 ಅಡಿ ಹಠಾತ್ ಕುಸಿದ ಏರ್ ಇಂಡಿಯಾ ವಿಮಾನ..!ಪ್ರಯಾಣಿಕರು-ಸಿಬ್ಬಂದಿಗೆ ಗಾಯ..
    ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
    ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!