📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂಗಳೂರಲ್ಲಿ ರಕ್ಷಕರೇ ಭಕ್ಷಕರಾದರೇ? !!! ಮೂವರು ಪೊಲೀಸರ ವಿರುದ್ಧ ಸರಣಿ ಸುಲಿಗೆ ಆರೋಪ!

    ಮಂಗಳೂರು: ಜನರ ಸುರಕ್ಷತೆ ಕಾಪಾಡಬೇಕಾದ ಪೊಲೀಸರ ವಿರುದ್ಧವೇ ಹಲ್ಲೆ, ಬೆದರಿಕೆ ಹಾಗೂ ಹಣ ಸುಲಿಗೆ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ರಾತ್ರಿ ವೇಳೆ ಮನೆಗೆ ಮರಳುತ್ತಿದ್ದ ಎಲೆಕ್ಟ್ರಿಷಿಯನ್ ಒಬ್ಬರನ್ನು ಪದೇಪದೇ ತಡೆದು ಕಿರುಕುಳ ನೀಡಿ, ಒಟ್ಟು ₹4,000 ಸುಲಿಗೆ ಮಾಡಿದ್ದಾರೆ ಎನ್ನಲಾದ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

    ವಿಟ್ಲ ಮುಡ್ನೂರು ಮೂಲದ ರವಿರಾಜ್ ದೂರು ನೀಡಿದವರು. ಪಾಂಡೇಶ್ವರದ ಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಅವರು, ಕಂಕನಾಡಿಯ ಖಾಸಗಿ ಸಂಸ್ಥೆಯೊಂದರಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.

    ಆಗಸ್ಟ್ 25: ವಾಕಿಂಗ್ ಮುಗಿಸಿ ಬರುತ್ತಿದ್ದಾಗ ಹಲ್ಲೆ ಆರೋಪ

    ರವಿರಾಜ್ ನೀಡಿರುವ ದೂರಿನ ಪ್ರಕಾರ, ಆಗಸ್ಟ್ 25ರಂದು ರಾತ್ರಿ ಸುಮಾರು 10 ಗಂಟೆಗೆ ನೆಹರೂ ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದಾಗ ಆರ್‌ಟಿಒ ಕಚೇರಿ ಬಳಿ ಹೊಯ್ಸಳ ಗಸ್ತು ವಾಹನದಲ್ಲಿ ಬಂದ ಮೂವರು ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಈ ವೇಳೆ ಲಾಠಿಯಿಂದ ಭುಜ ಮತ್ತು ಕಾಲಿಗೆ ಹಲ್ಲೆ ನಡೆಸಿ, ಮೊಬೈಲ್ ಕವರ್‌ನಲ್ಲಿದ್ದ ₹300 ಹಣ ಕಸಿದುಕೊಂಡಿದ್ದಾರೆ. ಅಲ್ಲದೆ, ಅಶ್ಲೀಲವಾಗಿ ನಿಂದಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    Also Read  ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!

    ಆಗಸ್ಟ್ 27: ಎಟಿಎಂನಿಂದ ಹಣ ಡ್ರಾ ಮಾಡಿಸಿದರೇ?

    ಎರಡು ದಿನಗಳ ಬಳಿಕ ಮತ್ತೆ ಅದೇ ಸ್ಥಳದಲ್ಲಿ ರವಿರಾಜ್ ಅವರನ್ನು ತಡೆದ ಸಿಬ್ಬಂದಿ, ಅವರ ಮೊಬೈಲ್, ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ನ ಎರಡು ಎಟಿಎಂ ಕಾರ್ಡ್‌ಗಳು ಹಾಗೂ ವಾಹನದ ಕೀ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

    ಬಳಿಕ ಮೊಬೈಲ್ ಪಾಸ್‌ವರ್ಡ್ ಪಡೆದು ಬ್ಯಾಂಕ್ ಖಾತೆಯಲ್ಲಿದ್ದ ಹಣದ ಮಾಹಿತಿ ಪರಿಶೀಲಿಸಿದ್ದಾರೆ. ಸಾಲದ ಕಂತು ಪಾವತಿಸಲು ಹಣ ಇಟ್ಟುಕೊಂಡಿದ್ದೇನೆ ಎಂದು ರವಿರಾಜ್ ಮನವಿ ಮಾಡಿದರೂ, ಮಂಗಳಾದೇವಿ ದೇವಸ್ಥಾನದ ಸಮೀಪದ ಎಸ್‌ಬಿಐ ಎಟಿಎಂಗೆ ಕರೆದೊಯ್ದು ಹಣ ಡ್ರಾ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ನವೆಂಬರ್ 4: ಮತ್ತೆ ಅದೇ ಕಿರುಕುಳ?

    ನವೆಂಬರ್ 4ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ರವಿರಾಜ್ ಅವರನ್ನು ಮತ್ತೆ ತಡೆದು ವಾಹನದ ಕೀ ಹಾಗೂ ಮೊಬೈಲ್ ಪಡೆದುಕೊಂಡಿದ್ದಾರೆ. ಬಳಿಕ ಪಾಂಡೇಶ್ವರದ ಮಾಲ್‌ವೊಂದರ ಬಳಿ ಕರೆದೊಯ್ದು, ಮೊಬೈಲ್ ಮರಳಿ ಪಡೆಯಲು ದಂಡ ಪಾವತಿಸಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ. ಹಣ ನೀಡಲು ಸಾಧ್ಯವಿಲ್ಲ, ಪೊಲೀಸ್ ಠಾಣೆಗೆ ಬಂದು ಮೊಬೈಲ್ ಪಡೆಯುತ್ತೇನೆ ಎಂದು ರವಿರಾಜ್ ತಿಳಿಸಿದ ಬಳಿಕ ರಾತ್ರಿ ಅವರ ವಾಹನವನ್ನು ಮರಳಿ ಪಡೆಯುವಂತೆ ಕರೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

    Also Read  ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ

    ಮೂವರು ಸಿಬ್ಬಂದಿ ವಿರುದ್ಧ ದೂರು

    ಈ ಘಟನೆಗಳಿಗೆ ಸಂಬಂಧಿಸಿ ಪಾಂಡೇಶ್ವರ ಪೊಲೀಸ್ ಠಾಣೆಯ ಹೊಯ್ಸಳ ವಾಹನದ ಚಾಲಕ ಹಿರಣ್ಣ ಬೆನ್ನಿ ಹಾಗೂ ಸಿಬ್ಬಂದಿಗಳಾದ ಶಿವರಾಜ್ ಮತ್ತು ಉಮಾಕಾಂತ್ ವಿರುದ್ಧ ರವಿರಾಜ್ ದೂರು ನೀಡಿದ್ದಾರೆ .ಹಲ್ಲೆ, ಬೆದರಿಕೆ, ಕಿರುಕುಳ ಮತ್ತು ಹಣ ಸುಲಿಗೆ ಆರೋಪಗಳ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

    ಮುಂದೇನು?…ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಮಾಹಿತಿ ಲಭ್ಯವಾಗಿದೆ. ಆದರೆ ಮೂವರ ಬಂಧನ, ಅಮಾನತು ಅಥವಾ ಇಲಾಖಾ ತನಿಖೆಯ ಮುಂದಿನ ಹಂತಗಳ ಕುರಿತು ಸದ್ಯ ಸ್ಪಷ್ಟ ಮಾಹಿತಿ ಇಲ್ಲ.

    ಜನರ ರಕ್ಷಣೆ ಮಾಡಬೇಕಾದವರ ಮೇಲೆಯೇ ಇಂತಹ ಆರೋಪಗಳು ಕೇಳಿಬಂದಾಗ ಪೊಲೀಸ್ ಇಲಾಖೆಯ ಹೊಣೆಗಾರಿಕೆ ಮತ್ತು ಸಾರ್ವಜನಿಕರ ವಿಶ್ವಾಸದ ಪ್ರಶ್ನೆಯೂ ಮುನ್ನೆಲೆಗೆ ಬರುತ್ತದೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.ಪೊಲೀಸ್ ಇಲಾಖೆಯ ಅಧಿಕೃತ ಪ್ರತಿಕ್ರಿಯೆ ಹಾಗೂ ತನಿಖೆಯ ಮುಂದಿನ ಬೆಳವಣಿಗೆಗಳು ಈ ಪ್ರಕರಣದಲ್ಲಿ ಮಹತ್ವ ಪಡೆದುಕೊಂಡಿವೆ.

    ##Mangaluru #MangaluruNews #KarnatakaPolice #PoliceMisconduct #ExtortionCase #PandeshwarPolice #Raviraj #BreakingNews #DakshinaKannada #CoastalKarnataka

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಗೋವಾ ಕ್ಯಾಲಂಗಟ್ ರೆಸಾರ್ಟ್‌ನಲ್ಲಿ ಕರಾವಳಿಯ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ನಾಪತ್ತೆಯಾದ ಆ ಮಹಿಳೆಗಾಗಿ ತೀವ್ರ ಶೋಧ…
    ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
    ಬಂಗಾಳದ ಸಿಂಹಾಸನಕ್ಕೆ ಸುವೇಂದು ಏರಿಕೆ — 15 ವರ್ಷದ ಮಮತಾ ಯುಗಕ್ಕೆ ಬ್ರೇಕ್!ಟಿಎಂಸಿ ಕೋಟೆ ಕುಸಿತ…
    ಅರ್ಧ ಸಂಬಳ ಸಾಕು ಮತ್ತು VIP ಸೌಲಭ್ಯಕ್ಕೆ ‘ನೋ’ ಎಂದ ನ್ಯಾಯಾಧೀಶ!
    ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
    ಕರ್ನಾಟಕದಲ್ಲಿ ಈಗ ಏನು ಟ್ರೆಂಡಿಂಗ್ ಗೊತ್ತಾ…! ಸಾಲು ಸಾಲು ಹಗರಣ, ಲಂಚವತಾರ , ಅಕ್ರಮ ನೇಮಕಾತಿ,ಟ್ರಾನ್ಸ್‌ಫರ್ ಮಾಫಿಯಾ ..ಒಂದೋ ಎರಡೋ….!??
    ರಾಷ್ಟ್ರೀಯ ಹೆದ್ದಾರಿ ಪೊಳಲಿ ದ್ವಾರದ ಸಮೀಪ ಭಾರೀ ಗಾತ್ರದ ಮರ ಬಿದ್ದು ಕಾರ್ ಜಖಂ, ಚಾಲಕ ಆಸ್ಪತ್ರೆಗೆ ದಾಖಲು
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    10 ಜನರ ಕೆಲಸವನ್ನು ಒಬ್ಬನೇ ಮಾಡಬಲ್ಲ AI! ಬದಲಾವಣೆಗೆ ಸಿದ್ಧರಾಗಿ!ಉದ್ಯಮಿ ಶ್ರೀಧರ್ ವೆಂಬು ಎಚ್ಚರಿಕೆ…!
    ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
    ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
    14 ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್….!!!!!!ಸುಪ್ರೀಂ ಕೋರ್ಟ್‌ಗೆ ಶಾಕಿಂಗ್ ವರದಿ!
    “ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಾನು ಅಧ್ಯಕ್ಷ ಸ್ಥಾನ ಬಿಡಲು ಸಿದ್ಧ”!-ಉದ್ಧವ್ ಠಾಕ್ರೆ ಕಣ್ಣೀರಿನ ಮನವಿ.
    ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    ಆಹಾರ ಬೆಲೆ ಏರಿಕೆ: ಸಾಮಾನ್ಯರ ಅಡಿಗೆ ಮನೆಗೆ ಮತ್ತೆ ಹೊರೆ?
    ಕೆಪಿಎಸ್‌ಸಿ ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್‌, ಸದಸ್ಯೆ ಗೀತಾ ಇ.ಡಿ. ಬಂಧನ
    ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
    ನೂತನ ಸಚಿವ ಲಕ್ಷ್ಮಣ ಸವದಿ ಎದುರು ಹೈಡ್ರಾಮಾ: ಸಮಸ್ಯೆ ಹೇಳಿಕೊಳ್ಳುತ್ತಿದ್ದ ವ್ಯಕ್ತಿಗೆ ಶಾಸಕರಿಂದ ಬೆದರಿಕೆ ಆರೋಪ
    ಮಂಗಳೂರು ಯೂಟ್ಯೂಬರ್‌ಗಳ ವಿರುದ್ಧ ಬಿಎನ್‌ಎಸ್ ಅಸ್ತ್ರ ಪ್ರಯೋಗಿಸಿದ ಖಾಕಿ!….
    50ಕ್ಕೂ ಹೆಚ್ಚು ಆಟೋ ಚಾಲಕರ ದಿನನಿತ್ಯದ ಆರೋಗ್ಯದ ಬದುಕಿಗೆ ಮುಳುವಾದ ದೇರಳಕಟ್ಟೆ ಜಂಕ್ಷನ್ ದುರ್ನಾತ! 
    ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಹರಿಹರದಲ್ಲಿ ಪ್ಲಾನ್! ಬಂಧಿತ ಸುಹೇಲ್ ಬೆನ್ನತ್ತಿದ ಇಂಟೆಲಿಜೆನ್ಸ್; 10 ಜನರ ಟೀಮ್‌ಗಾಗಿ ತೀವ್ರ ಶೋಧ!
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
    ಸತೀಶ್’ ಆಗಿ ಹೋದವ, ‘ಸಲೀಂ’ ಆಗಿ ವಾಪಸ್ …!26 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಮಗನ ಭಾವುಕ ಕಥೆ
    ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
    5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್..! ಸರ್ಕಾರದ ಹೊಸ ಕಠಿಣ ನಿಯಮ
    ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ