📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಿಸಿಲೆ ಘಾಟಿಯಲ್ಲಿ ಕೊಣಾಜೆ ಪ್ರಿಯಕರನ ಕ್ರೌರ್ಯ! ಕೊಲೆಗೆ ಯತ್ನಿಸಿ ಯುವತಿಯನ್ನ ಚರಂಡಿಗೆ ಎಸೆದ ಭೂಪ …

    ಸುಬ್ರಹ್ಮಣ್ಯ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಯುವಕನೇ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ–ಹಾಸನ ಗಡಿ ಭಾಗದ ಬಿಸಿಲೆ ಘಾಟಿಯಲ್ಲಿ ನಡೆದಿದೆ. ಮದುವೆಯಾಗಲು ನಿರಾಕರಿಸಿ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದ ಯುವಕ, ಪ್ರೇಯಸಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ರಸ್ತೆ ಬದಿಯ ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

    ಮದುವೆಯ ವಿಚಾರವೇ ಗಲಾಟೆಗೆ ಕಾರಣ:ಸುಬ್ರಹ್ಮಣ್ಯದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪ್ರಸಾದ್ ಮತ್ತು ಯುವತಿ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಯುವಕ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದು, ನಿಶ್ಚಿತಾರ್ಥವೂ ನಿಗದಿಯಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು.

    ಜತೆಯಾಗಿ ಸಾಯೋಣ ಎಂದು ನಂಬಿಸಿದ! ಬುಧವಾರ ರಾತ್ರಿ ಯುವತಿಯನ್ನು ಉಪ್ಪಿನಂಗಡಿಯಿಂದ ಕಾರಿನಲ್ಲಿ ಕರೆದೊಯ್ದ ಪ್ರಸಾದ್, ಸುಬ್ರಹ್ಮಣ್ಯ–ಕುಲ್ಕುಂದ ಮಾರ್ಗವಾಗಿ ಬಿಸಿಲೆ ಘಾಟಿಗೆ ತೆರಳಿದ್ದಾನೆ. ಇಬ್ಬರೂ ಒಟ್ಟಿಗೆ ಸಾಯೋಣ ಎಂದು ನಂಬಿಸಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    Also Read  ವಿಧಾನಸೌಧದಲ್ಲಿ ಡಿಕೆಶಿ–ಕಟೀಲ್ ಭೇಟಿ -ರಾಜಕೀಯದಲ್ಲಿ ಬಿಸಿ ಚರ್ಚೆ

    ಚರಂಡಿಗೆ ಎಸೆದು ಪರಾರಿ: ಯುವತಿಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಪ್ರಜ್ಞೆ ತಪ್ಪಿಸಿದ ಬಳಿಕ ರಸ್ತೆ ಬದಿಯ ಇಳಿಜಾರಿನ ಚರಂಡಿಗೆ ದೂಡಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

    ರಾತ್ರಿಯಿಡೀ ನರಳಾಟ, ಬೆಳಗ್ಗೆ ಬದುಕುಳಿದ ಯುವತಿ:ರಾತ್ರಿ ಪೂರ್ತಿ ಗಾಯಗೊಂಡ ಸ್ಥಿತಿಯಲ್ಲಿ ಚರಂಡಿಯಲ್ಲಿದ್ದ ಯುವತಿಗೆ ಗುರುವಾರ ಬೆಳಗ್ಗೆ ಪ್ರಜ್ಞೆ ಮರಳಿದೆ. ಬಳಿಕ ರಸ್ತೆ ಬದಿಗೆ ಬಂದು ಬೈಕ್ ಸವಾರನ ಸಹಾಯದಿಂದ ಸುಬ್ರಹ್ಮಣ್ಯ ತಲುಪಿದ್ದಾರೆ. ಮನೆಯವರಿಗೆ ಘಟನೆ ವಿವರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಗೊಂಡ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಆರೋಪಿ ಪೊಲೀಸರ ವಶಕ್ಕೆ: ಸಂತ್ರಸ್ತೆಯ ದೂರಿನ ಆಧಾರದಲ್ಲಿ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪ್ರಸಾದ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 109(1) ಮತ್ತು 118(1) ಅಡಿಯಲ್ಲಿ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಿ ಆರೋಪಿಯನ್ನು ಯಸಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. 

    Also Read  ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ

    ಪ್ರಕರಣದ ಮತ್ತೊಂದು ಆಘಾತಕಾರಿ ಆಯಾಮ: ಕೆಲವು ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಯುವತಿ ಗರ್ಭಿಣಿಯಾಗಿದ್ದಳು ಎಂಬ ಮಾಹಿತಿಯೂ ಪ್ರಕಟವಾಗಿದೆ. ಈ ವಿಚಾರಕ್ಕೆ ಹೆಚ್ಚಿನ ತನಿಖೆಯ ಬಳಿಕವೇ ಸ್ಪಷ್ಟತೆ ಬರಬೇಕಿದೆ.

    ##BisleGhat #Kadaba #Subrahmanya #KarnatakaCrime #CrimeNews #BreakingNews #WomenSafety

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಇಡುಕ್ಕಿಯಲ್ಲಿ Landslide ಆರ್ಭಟ!ಇಬ್ಬರು ಸಾವು, ಮಹಿಳೆಗೆ ಗಂಭೀರ ಗಾಯ
    ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
    ಬೈಕಂಪಾಡಿಯಲ್ಲಿ ನಡುರಾತ್ರಿ ನಡೆದ ಸಿನೆಮಾ ಸ್ಟೈಲ್ ದರೋಡೆ: ಕೇರಳ ಉದ್ಯಮಿ ಕುಟುಂಬಕ್ಕೆ ಗನ್ ಪಾಯಿಂಟ್ ಶಾಕ್!
    ಭಾರೀ ಮಳೆ ಎಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆಗಳಿಗೆ ರಜೆ!
    ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಕಾಂಗ್ರೆಸ್‌ ನಾಯಕರ ಸಭೆ
    ಕರಾವಳಿಯ ಭವಿಷ್ಯ ರೂಪಿಸಲು ಸಿಎಂನ ಮಾಸ್ಟರ್ ಪ್ಲಾನ್! ಹೆಲಿ ಟೂರಿಸಂನಿಂದ ಹಿಡಿದು ಸಾವಿರಾರು ಉದ್ಯೋಗಗಳವರೆಗೆ…ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಕಣ್ಣು.
    ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
    ಪಶ್ಚಿಮ ಬಂಗಾಳ ಅಪ್ರಾಪ್ತೆಯ ಸಾವು, ಸಾರ್ವಜನಿಕರಿಂದ ಶಂಕಿತನ ಲಿಂಚಿಂಗ್ ..!ಬಾಲಕಿಯ ಹತ್ಯೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ;
    ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಕುಟುಂಬದ ನಾಲ್ವರ ನಿಗೂಢ ಸಾವು…
    ₹5.85 ಕೋಟಿ ಯೋಜನೆಯ ಜಪ್ಪು ಮಂಗಳಾದೇವಿ ಬಸ್ ಟರ್ಮಿನಲ್ ಉದ್ಘಾಟನೆಗೆ ಎರಡು ಬಾರಿ ಗೌಜಿ ಸಮಾರಂಭ; ಬಸ್ ಸಂಚಾರಕ್ಕೆ ಮಾತ್ರ ಇನ್ನೂ ಮೀನ ಮೇಷ !
    ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
    ಧರ್ಮ ಬೋಧಿಸಬೇಕಾದ ಗುರು ಪ್ರೀತಿಯ ಬಲೆಗೆ ಬೀಳಿಸಿದರೇ? 22ರ ಯುವತಿಯ ನಿರ್ಧಾರಕ್ಕೆ ಕಣ್ಣೀರಿಟ್ಟ ಹೆತ್ತವರು!
    ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?
    ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
    ಡೈಪರ್‌ನಲ್ಲಿ ಚಿನ್ನ! ಚಿನ್ನ ಕಳ್ಳಸಾಗಣೆಗೆ ಏನೆಲ್ಲಾ‘ಐಡಿಯಾ’? 8 ತಿಂಗಳ ಮಗುವನ್ನೂ ಬಿಟ್ಟಿಲ್ಲ!
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
    “ಒಂದು ಫಾರ್ವರ್ಡ್… ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!
    ಜೆನ್ Alpha ಪ್ರೊಟೆಸ್ಟರ್ ಆದಿತ್ಯ: ಹೆತ್ತವರಿಗಾಗಿ ನ್ಯಾಯ ಕೇಳಿ ,ಅಧಿಕಾರಿಗಳನ್ನೇ ಪ್ರಶ್ನಿಸಿ ಧರಣಿ ಕುಳಿತ 6 ವರ್ಷದ ಬಾಲಕ!ಏನಿದು ನಿಜಾಂಶ??
    ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
    ಕರ್ನಾಟಕದ ನಂದನ್ ನಿಲೇಕಣಿ ನೇತೃತ್ವದಲ್ಲಿ ಭಾರತದ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಮೋದಿ ಸರ್ಕಾರದ ಬಿಗ್ ಪ್ಲಾನ್!ಈಗ ರಾಷ್ಟ್ರೀಯ ಪರೀಕ್ಷೆಗಳಿಗೆ ಹೊಸ ರೂಪ ನಿಲೇಕಣಿ ಕೈಯಲ್ಲಿ!
    ನೀಟ್ ಪರೀಕ್ಷೆಯ ಎಡವಟ್ಟು….ಸುಳ್ಳು ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ ಅಧಿಕಾರಿಗಳು!!?
    ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ 10 ವರ್ಷ ಜೈಲು, ₹10 ಕೋಟಿ ದಂಡ!
    ಚುನಾವಣೆಯವರೆಗೆ ಮೌನ, ನಂತರ LPG ದರ ಭಾರಿ ಏರಿಕೆ –ಇದು ರಾಜಕೀಯ ಅಜೆಂಡಾನಾ?
    ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
    ಟೈಗರ್ ಶ್ರಾಫ್‌ಗೆ ಗುಂಡಿನ ಟಾರ್ಗೆಟ್! ಕೋಟಾದಲ್ಲಿ ಸಿಕ್ಕಿಬಿದ್ದ ಮೂವರು; ದಾಳಿಯ ಹಿಂದಿದೆಯೇ ಬಿಷ್ಣೋಯ್ ಗ್ಯಾಂಗ್?
    “ಬಾಂಬ್‌ಗಿಂತ ಅಪಾಯಕಾರಿ ಅಹಂಕಾರ …! ಜಗತ್ತೇ ಕಾಯುತ್ತಿದೆ… ಮುಂದೇನು?”
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    ಬ್ಯಾಂಕಿಂಗ್ ಸೇವೆ ಸ್ಮಾರ್ಟ್‌ಫೋನ್ ನೇ ಬೇಕಂತಿಲ್ಲ .ಕೀಪ್ಯಾಡ್ ಫೋನ್ ಸಾಕು ಈಗ “ಸ್ಮಾರ್ಟ್” ಆಗಿದ್ದರೆ ಸಾಕು! 
    ‘INS Malvan’ ಲೋಕಾರ್ಪಣೆ-ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗೆ ಹೊಸ ಕಾವಲುಗಾರ ‘ಸೈಲೆಂಟ್ ಹಂಟರ್’ ಕಾರವಾರದಿಂದ ಭಾರತದ ಸಮುದ್ರಶಕ್ತಿಗೆ ಮತ್ತಷ್ಟು ಬಲ!