📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸತ್ತವಳು 6 ವರ್ಷಗಳ ಬಳಿಕ ಜೀವಂತ ಪ್ರತ್ಯಕ್ಷ!ಮಾಡದ ಕೊಲೆಗೆ 2.5 ವರ್ಷ ಜೈಲು!

    ಮಂಡ್ಯ: ಜೀವಂತವಾಗಿದ್ದ ಮಹಿಳೆಯನ್ನು ಕೊಲೆ ಮಾಡಿದ್ದಾನೆಂಬ ಆರೋಪದಲ್ಲಿ ನಿರಪರಾಧಿ ವ್ಯಕ್ತಿಯೊಬ್ಬ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿ ಕಳೆಯಬೇಕಾದ ಆಘಾತಕಾರಿ ಘಟನೆ ನಾಗಮಂಗಲದಲ್ಲಿ ಬೆಳಕಿಗೆ ಬಂದಿದೆ. ಆರು ವರ್ಷಗಳ ಹಿಂದೆ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ. ಆದರೆ, ಆಕೆಯ ಕೊಲೆ ಆರೋಪ ಹೊತ್ತಿದ್ದ ವ್ಯಕ್ತಿ ಅನುಭವಿಸಿದ ಜೈಲು ಶಿಕ್ಷೆಗೆ ಹೊಣೆ ಯಾರು ಎಂಬ ಪ್ರಶ್ನೆ ಈಗ ಎದ್ದಿದೆ.

    ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ನಿವಾಸಿ ರಾಜೇಶ್ ಅಲಿಯಾಸ್ ಕಾಳ ಈ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿ. 2019ರ ಜೂನ್ 24ರಂದು ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ನಿವಾಸಿ ಮಂಜು ನಾಪತ್ತೆಯಾಗಿದ್ದರು. ಮಗಳೊಂದಿಗೆ ಸಲುಗೆಯಿಂದಿದ್ದ ರಾಜೇಶ್ ತನ್ನ ಮದುವೆಗೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಮಂಜು ತಂದೆ ನಾಗರಾಜು ಆರೋಪಿಸಿದ್ದರು.

    ಈ ದೂರಿನ ಆಧಾರದಲ್ಲಿ ಪೊಲೀಸರು ರಾಜೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸುಮಾರು 2 ವರ್ಷ 5 ತಿಂಗಳು ಜೈಲಿನಲ್ಲಿದ್ದ ರಾಜೇಶ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ತಾನು ಮಾಡದ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ರಾಜೇಶ್ ಇದೀಗ ಪ್ರಕರಣದ ಹೊಸ ಬೆಳವಣಿಗೆಯಿಂದ ಮತ್ತೆ ಸುದ್ದಿಯಾಗಿದ್ದಾರೆ.

    Also Read  ಕರ್ನಾಟಕದಲ್ಲೇ ಮೊದಲು-ಕಿಚ್ಚ ಸುದೀಪ್ ಕೈಯಿಂದ ಗ್ರಾಂಡ್ ಓಪನಿಂಗ್!₹130 ಕೋಟಿ ವೆಚ್ಚದ ವಿಶ್ವದರ್ಜೆಯ 'MR-Linac' ತಂತ್ರಜ್ಞಾನ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ!

    ಆರು ವರ್ಷಗಳ ಬಳಿಕ ಮಹಿಳೆ ಪ್ರತ್ಯಕ್ಷ!

    ನಾಪತ್ತೆಯಾಗಿದ್ದ ಮಂಜು ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿಯಲ್ಲಿ ಎರಡನೇ ಪತಿ ಮಂಜುನಾಥ್ ಅವರೊಂದಿಗೆ ವಾಸಿಸುತ್ತಿರುವುದು ಪತ್ತೆಯಾಗಿದೆ. ತಮಿಳುನಾಡಿನಲ್ಲಿದ್ದ ತಾನು ಬಳಿಕ ಗ್ರಾಮಕ್ಕೆ ಮರಳಿದ್ದಾಗಿ ಆಕೆ ತಿಳಿಸಿದ್ದಾರೆ.

    ಮಂಜುನಾಥ್ ಅವರೊಂದಿಗಿನ ಮದುವೆಯಲ್ಲಿ ಇಷ್ಟವಿಲ್ಲದ ಕಾರಣ ಚಾಮರಾಜನಗರದ ನಾಗೇಂದ್ರ ಎಂಬವರನ್ನು ಮದುವೆಯಾಗಿದ್ದೆ. ನಂತರದ ಬೆಳವಣಿಗೆಗಳಿಂದಾಗಿ ಮನೆ ಬಿಟ್ಟು ಹೋಗಿದ್ದೆ. ಕೊಲೆ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ರಾಜೇಶ್‌ನಿಂದಲೂ ನನಗೆ ತೊಂದರೆಯಾಗಿಲ್ಲ ಎಂದು ಮಂಜು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಪೊಲೀಸರ ತನಿಖೆಯೇ ಈಗ ಪ್ರಶ್ನೆ!

    ಮಹಿಳೆ ಜೀವಂತವಾಗಿರುವುದು ದೃಢಪಟ್ಟ ಬೆನ್ನಲ್ಲೇ ಅಂದಿನ ಪೊಲೀಸ್ ತನಿಖೆಯ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಕೇವಲ ನಾಪತ್ತೆಯಾದ ದೂರಿನ ಆಧಾರದಲ್ಲಿ ಕೊಲೆ ಆರೋಪಕ್ಕೆ ಬಂದಿದ್ದು ಹೇಗೆ? ಮಹಿಳೆಯ ಪತ್ತೆಗಾಗಿ ಸಮರ್ಪಕ ತನಿಖೆ ನಡೆದಿತ್ತೇ? ಸಾಕ್ಷ್ಯಗಳ ಪರಿಶೀಲನೆ ಸರಿಯಾಗಿ ನಡೆದಿತ್ತೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.

    Also Read  717 ಮದ್ಯದಂಗಡಿಗಳಿಗೆ ವಿಜಯ್ ಬ್ರೇಕ್‌! ತಮಿಳುನಾಡು ಖಜಾನೆಗೆ ಸಾವಿರಾರು ಕೋಟಿ ಶಾಕ್!

    ರಾಜೇಶ್ ಅವರು ಪೊಲೀಸರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಿ, ವಿದ್ಯುತ್ ಶಾಕ್ ನೀಡಿ, ಮಾಡದ ಕೊಲೆಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿತ್ತು. ಚಿತ್ರಹಿಂಸೆ ತಡೆಯಲಾಗದೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.

    ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಎಸ್ಪಿ ಸೂಚನೆ

    ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಎಸ್ಪಿ ಡಾ.ವಿ.ಜಿ.ಶೋಭರಾಣಿ, ಮಹಿಳೆ ಜೀವಂತವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಂದಿನ ತನಿಖೆಯಲ್ಲಿನ ಲೋಪಗಳ ಕುರಿತು ವಿಚಾರಣೆ ನಡೆಸಲಾಗುವುದು. ತನಿಖಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್ ಪ್ರಭಾಕರ್ ನಿವೃತ್ತರಾಗಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆಸಲು ಸೂಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    Also Read  ಉಡುಪಿಯ ಸಾಯಿ ರಾಜ್ ಕೋ ಆಪರೇಟಿವ್ ಸೊಸೈಟಿ ಸಿಇಒ ಆತ್ಮ ಹತ್ಯೆಗೆ ಯಾರು ಕಾರಣ?

    ನ್ಯಾಯ ಯಾರಿಗೆ ಸಿಗಬೇಕು?

    ಒಬ್ಬ ವ್ಯಕ್ತಿಯ ವಿರುದ್ಧ ಕೊಲೆ ಆರೋಪ ಮಾಡುವುದು ಸುಲಭ. ಆದರೆ, ಆ ಆರೋಪವನ್ನು ಸಾಬೀತುಪಡಿಸಲು ವೈಜ್ಞಾನಿಕ ಸಾಕ್ಷ್ಯ ಮತ್ತು ಸಮಗ್ರ ತನಿಖೆ ಅತ್ಯಗತ್ಯ. ಇಲ್ಲಿ ಆರು ವರ್ಷಗಳ ಬಳಿಕ ಮಹಿಳೆ ಜೀವಂತವಾಗಿ ಪತ್ತೆಯಾಗಿರುವುದು ಅಂದಿನ ತನಿಖೆಯ ಮೇಲೆಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

    ಮಾಡದ ಕೊಲೆಗಾಗಿ 2 ವರ್ಷ 5 ತಿಂಗಳು ಜೈಲಿನಲ್ಲಿ ಕಳೆದ ರಾಜೇಶ್‌ಗೆ ನ್ಯಾಯ ಸಿಗುತ್ತದೆಯೇ? ತನಿಖೆಯಲ್ಲಿ ಲೋಪ ಎಸಗಿದವರ ಹೊಣೆಗಾರಿಕೆ ನಿಗದಿಯಾಗುತ್ತದೆಯೇ? ನಿರಪರಾಧಿಯ ಜೀವನಕ್ಕೆ ಉಂಟಾದ ನಷ್ಟಕ್ಕೆ ಉತ್ತರ ನೀಡುವವರು ಯಾರು? ಈ ಪ್ರಶ್ನೆಗಳಿಗೆ ತನಿಖೆಯೇ ಉತ್ತರ ನೀಡಬೇಕಿದೆ.

    ##MandyaNews #Nagamangala #CrimeNews #PoliceInvestigation #JusticeForRajesh #KarnatakaNews #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    “ನಿಮ್ಮ ಮಗಳನ್ನು ನಾನು ಸಾಯಿಸಿದ್ದೇನೆ…ನಾಳೆ ನನ್ನ ಹೆಣವನ್ನೂ ನೋಡುತ್ತೀರಿ” ಎಂದ ಚೇತನ್!ಲಾವಣ್ಯಳ ತಂದೆಗೆ ಕರೆ ಮಾಡಿ ಶಾಕ್ ನೀಡಿದ ಆರೋಪಿ ಚೇತನ್ ಪೊಲೀಸ್ ವಶಕ್ಕೆ..!
    ಷೇರು ವ್ಯವಹಾರದ ಲಾಭವೂ ಆದಾಯವೇ: ಜೀವನಾಂಶ ₹50 ಸಾವಿರದಿಂದ ₹1.20 ಲಕ್ಷಕ್ಕೆ ಏರಿಸಿದ ಹೈಕೋರ್ಟ್
    ತುಮಕೂರಿನಲ್ಲಿ 10 ಲಕ್ಷದ ವಜ್ರಾಭರಣ ಕದ್ದ ಈ ಮಹಾಚೋರನ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!”
    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
    ₹30 ಲಕ್ಷ ಖರ್ಚಿನ ಹೊಸ ಮನೆಯಡಿಯಲ್ಲಿ ಗುಹೆ ಪತ್ತೆ; ವಾಸಕ್ಕೆ ಯೋಗ್ಯವಲ್ಲ ಎಂದ ತಜ್ಞರು …!!!ಗೃಹಪ್ರವೇಶದ ಸಂಭ್ರಮದಲ್ಲೇ ಕುಟುಂಬಕ್ಕೆ ಆಘಾತ!
    ಶಿರಾಡಿ ಗ್ರಾ.ಪಂ PDO ಸಹಿ ನಕಲು ….6 ತಿಂಗಳಾದರೂ ದೂರು ದಾಖಲಾಗಿಲ್ಲ!
    ಫೇಸ್‌ಬುಕ್ ‘ಸುಂದರಿ’ಅವಳಲ್ಲ ಅವನು!ಲವ್ ಮಾಡಿ ಹೆಂಡತಿ ಅಂದುಕೊಂಡವನು ಗಂಡಸು ಅಂತ ಗೊತ್ತಾದಾಗ ನಡೆದಿದ್ದೇ ಬೇರೆ!
    ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
    ಚೀನಾಗೆ ಮಾತುಕತೆ, ರಷ್ಯಾ–ಉಕ್ರೇನ್‌ಗೆ ಸಂಧಾನ; ವಿಶ್ವ ವೇದಿಕೆಯಲ್ಲಿ ಭಾರತದ ಡಬಲ್ ಡಿಪ್ಲೊಮಸಿ!
    ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ಹೈಕೋರ್ಟ್, ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಭದ್ರತೆ ಬಿಗಿ
    ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
    ವಿಧಾನಸೌಧದಲ್ಲಿ ಡಿಕೆಶಿ–ಕಟೀಲ್ ಭೇಟಿ -ರಾಜಕೀಯದಲ್ಲಿ ಬಿಸಿ ಚರ್ಚೆ
    ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ
    ಪ್ರತಿಭಟನೆ ಜನರ ಹಕ್ಕು, ಜನರ ಧ್ವನಿ ಅಡಗಿಸಲು ಸಾಧ್ಯವಿಲ್ಲ! ದಿಲ್ಲಿ ಪೊಲೀಸರಿಗೆ ಸುಪ್ರೀಂ ಎಚ್ಚರಿಕೆ…
    ದಸರಾ ರಜೆಯಲ್ಲೂ ಶಾಲೆ! ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿ
    ಪಶ್ಚಿಮ ಘಟ್ಟದ ಕಸ್ತೂರಿರಂಗನ್ ವರದಿಗೆ ಬ್ರೇಕ್?…ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧತೆ
    ಮಾರ್ಚ್ 17 :ಮಂಗಳೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ
    ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
    “Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
    ರಾಷ್ಟ್ರೀಯ ಹೆದ್ದಾರಿ ಪೊಳಲಿ ದ್ವಾರದ ಸಮೀಪ ಭಾರೀ ಗಾತ್ರದ ಮರ ಬಿದ್ದು ಕಾರ್ ಜಖಂ, ಚಾಲಕ ಆಸ್ಪತ್ರೆಗೆ ದಾಖಲು
    ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    “ಅಕ್ಕಾ, ಮನೆಗೆ ಹೋಗೋಣ” ಎಂದು ಅಕ್ಕನನ್ನು ಕರೆತರಲು ಬಂದ ಅಪೂರ್ವ… ಕೆಲವೇ ಕ್ಷಣಗಳಲ್ಲಿ ಕಬ್ಬಿಣದ ಗೇಟ್ ಅಡಿಯಲ್ಲಿ ಅಂತ್ಯ
    ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!
    ಪತ್ರ ಕಳುಹಿಸುವ ಅಂಚೆ ಕಚೇರಿ ಈಗ ಜೀವವಿಮೆಗೂ ಆಸರೆ ..!ಅಂಚೆ ಕಚೇರಿಯಲ್ಲೇ ಕುಟುಂಬದ ಭವಿಷ್ಯಕ್ಕೆ ಭದ್ರತೆ!
    ಮಹಿಳಾ ಕ್ರೀಡಾಪಟುಗಳ ಹೋರಾಟಕ್ಕೆ ಹೊಸ ತಿರುವು ಕೊಟ್ಟ ದೆಹಲಿ ಹೈಕೋರ್ಟ್!