📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    18 ದಿನಗಳಲ್ಲಿ 7 ಕೊಲೆ! ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ನರಮೇಧ..! ಪತ್ನಿ ಸೇರಿ 7 ಮಂದಿಯ ಹತ್ಯೆ, ಮಗಳೂ ಶಾಮೀಲು!

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದಿರುವ ಭೀಕರ ಘಟನೆ ತೀವ್ರ ಆತಂಕ ಮೂಡಿಸಿದೆ. ಕ್ಯಾಬ್ ಚಾಲಕನಾಗಿರುವ ಎಸ್. ಇಂದುಶೇಖರ್ ಅಲಿಯಾಸ್ ಅರ್ಜುನ್ ಎಂಬಾತ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಪೂರ್ವಯೋಜಿತವಾಗಿ ಹತ್ಯೆಗೈದಿರುವ ಆರೋಪ ಎದುರಿಸುತ್ತಿದ್ದಾನೆ.

    18 ದಿನಗಳಲ್ಲಿ ಏಳು ಕೊಲೆ: ಅಕ್ಟೋಬರ್ 16ರಿಂದ ನವೆಂಬರ್ 3ರ ನಡುವೆ ತನ್ನ ಮನೆಯಲ್ಲೇ ಅಡುಗೆಗೆ ಬಳಸುವ ರುಬ್ಬುಗಲ್ಲಿನಿಂದ ತಲೆಗೆ ಹೊಡೆದು ಏಳು ಮಂದಿಯನ್ನು ಪ್ರತ್ಯೇಕ ದಿನಗಳಲ್ಲಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

    ಹತ್ಯೆಗೀಡಾದವರು ಯಾರು? ಆರೋಪಿ ಪತ್ನಿ ಸುನೀತಾ (40), ಅತ್ತೆ ರೂಪವತಿ (65), ಬಾಮೈದ ಶಿವಕುಮಾರ್ (30), ಅವರ ಪತ್ನಿ ದಿವ್ಯಾ (30), ಪುತ್ರ ಪುನೀತ್ (7), ಮತ್ತೊಬ್ಬ ಬಾಮೈದ ಶಂಕರ್ (52) ಹಾಗೂ ನಳಿನಿ ಹತ್ಯೆಗೀಡಾದವರು ಎಂದು ವರದಿಯಾಗಿದೆ.

    Also Read  ಡೆಲಿವರಿ ಬಾಯ್‌ಗೆ ಅಡ್ಡಗಟ್ಟಿ ಹಲ್ಲೆ - ಪ್ರಕರಣ ದಾಖಲು

    ಮೃತದೇಹಗಳನ್ನು ವಿವಿಧೆಡೆ ಎಸೆದಿದ್ದ: ಹತ್ಯೆಯ ಬಳಿಕ ಮೃತದೇಹಗಳನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ತನ್ನ ಕಾರಿನಲ್ಲಿ ಸಾಗಿಸಿದ್ದಾನೆ. ನಂದಿಬೆಟ್ಟ, ಚಾಮುಂಡಿ ಬೆಟ್ಟ, ಶಿರಾಡಿ ಘಾಟ್ ಹಾಗೂ ತಮಿಳುನಾಡಿನ ಏರ್ಕಾಡ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎಸೆದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕ ಪುನೀತ್‌ನ ಮೃತದೇಹ ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

    ಮಗಳ ಮೇಲೂ ಸಹಕಾರದ ಆರೋಪ: ಆರೋಪಿಯ 17 ವರ್ಷದ ಮಗಳು ಹತ್ಯೆ ಪ್ರಕರಣಗಳಲ್ಲಿ ಸಹಕರಿಸಿರುವ ಶಂಕೆಯಿದೆ. ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ತಂದೆಯ ಕೃತ್ಯದಲ್ಲಿ ಆಕೆಯ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ.

    ಕುಟುಂಬದ ಕಲಹವೇ ಕಾರಣ? ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ಮದುವೆಯಾಗಿದ್ದ ಇಂದುಶೇಖರ್, ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಕುಟುಂಬದವರು ಪ್ರತಿಬಾರಿಯೂ ಪತ್ನಿಯ ಪರ ನಿಲ್ಲುತ್ತಿದ್ದುದರಿಂದ ಅವರ ಮೇಲೂ ದ್ವೇಷ ಬೆಳೆಸಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

    Also Read  ಮಹಾನಗರಗಳ ಜಲಕಂಠಕ:ಸ್ಮಾರ್ಟ್ ಸಿಟಿಗಳ ಕರಾಳ ಮುಖ: ಕುಡಿಯಲು ನೀರಿಲ್ಲ, ಸಿಗುವ ನೀರು ವಿಷ!

    ಮಿಸ್ಸಿಂಗ್ ದೂರಿನಿಂದ ಬಯಲಾದ ಪ್ರಕರಣ:ಕುಟುಂಬದ ಸದಸ್ಯರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದರಿಂದ ಅನುಮಾನಗೊಂಡ ನಳಿನಿ ಅವರ ತಾಯಿ ತುಂಗಮ್ಮ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ನವೆಂಬರ್ 3ರಂದು ಇಂದುಶೇಖರ್‌ನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಆತನ ಕಾರಿನಲ್ಲಿದ್ದ 11 ವರ್ಷದ ಬಾಲಕನನ್ನು ರಕ್ಷಿಸಿದ್ದಾರೆ. ಬಾಲಕ ತನ್ನ ಪೋಷಕರ ಮೃತದೇಹಗಳನ್ನು ಸಾಗಿಸಿರುವುದನ್ನು ನೋಡಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ.

    12 ದಿನ ಪೊಲೀಸ್ ಕಸ್ಟಡಿ: ಪ್ರಕರಣದ ಗಂಭೀರತೆ ಪರಿಗಣಿಸಿರುವ ಪೊಲೀಸರು ಆರೋಪಿಯನ್ನು 12 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹಗಳ ಪತ್ತೆ ಹಾಗೂ ಕೃತ್ಯದ ಹಿಂದಿನ ಸಂಪೂರ್ಣ ಕಾರಣ ತಿಳಿಯಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

    Also Read  ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 

    ಗೃಹ ಸಚಿವರ ಪ್ರತಿಕ್ರಿಯೆ: ಇದು ಆಕಸ್ಮಿಕ ಘಟನೆಯಲ್ಲ, ಪೂರ್ವಯೋಜಿತ ಕೃತ್ಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಆರೋಪಿಯು ಕುಟುಂಬದವರನ್ನು ಹಂತ ಹಂತವಾಗಿ ಹತ್ಯೆಗೈದಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿಗೆ ಕಾನೂನು ಪ್ರಕಾರ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

    ##BengaluruCrime #SerialKiller #KarnatakaNews #CrimeNews #Bengaluru #BreakingNews #PoliceInvestigation

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
    “ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ” – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
    ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
    2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    ಸೆಲೆಬ್ರಿಟಿಗಳು–ಇನ್‌ಫ್ಲುವೆನ್ಸರ್‌ಗಳಿಗೆ FSSAI ನೋಟಿಸ್ ….!ಹಣಕ್ಕಾಗಿ ಜಾಹೀರಾತು, ಜನರ ಆರೋಗ್ಯದ ಜೊತೆ ಆಟವೇ?
    ಐಸ್‌ಕ್ರೀಂ ಲೋಕಕ್ಕೆ ಅಂಬಾನಿ ಎಂಟ್ರಿ…“ಕೋಲ್ಡ್ ವಾರ್”. ದಿಗ್ಗಜರ ಟೆನ್ಷನ್!₹10ಕ್ಕೆ ಅಂಬಾನಿ ಐಸ್‌ಕ್ರೀಂ…‘ಬಾಂಬೆ ಕ್ರೀಮರಿ’ ಧಮಾಕಾ!
    ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
    ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಅವಹೇಳನ ಜಾತಿ ನಿಂದನೆ  ಆರೋಪದಲ್ಲಿ ಕಾರ್ಕಳ ವ್ಯಕ್ತಿಯ ಬಂಧನ !
    ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
    ಹೃದಯವಿದ್ರಾವಕ ಘಟನೆ: ರಾಜಕಾಲುವೆಯಲ್ಲಿ ತೇಲಿ ಬಂದ ನವಜಾತ ಹಸುಗೂಸು
    ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
    KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    ಸೋಮನಾಥ ಪುತ್ರನ್ ಪ್ರಕರಣಕ್ಕೆ ಮಹತ್ವದ ತಿರುವು! ಇದೀಗ ನಿಷ್ಪಕ್ಷಪಾತ CID ತನಿಖೆಯ ನಿರೀಕ್ಷೆ….!
    ಹುಡುಗಾಟಿಕೆ ಆಡುತ್ತಿರುವ ರಾಮಲಿಂಗಾರೆಡ್ಡಿ-ಕ್ಷೇತ್ರದ ಜನರಲ್ಲಿ ಅಸಮಾಧಾನ
    ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
    ‘ಪೊಲೀಸರಿಗೆ ದೂರು ಕೊಡ್ತೀಯಾ?’… ಗಾಂಜಾ ವ್ಯಸನಕ್ಕೆ ಸೈಜು ಕಲ್ಲಿನಿಂದ ಅಜ್ಜಿಯ ತಲೆ ಪುಡಿ ಮಾಡಿದ ಮೊಮ್ಮಗ!ಅಜ್ಜಿಯೇ ಬಲಿ!
    ರಷ್ಯಾದಲ್ಲಿ ಪ್ಲೇಗ್ ಆತಂಕ! ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿಗೆ ನಿಗಾ…!ರಷ್ಯಾದಲ್ಲಿ ಕಟ್ಟೆಚ್ಚರ!
    ನೇಪಾಳದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್: 95 ಮಂದಿ ಸಾವು, 384 ಪ್ರಯಾಣಿಕರು ನಾಪತ್ತೆ; 105 ಭಾರತೀಯರೂ ಸಂಪರ್ಕಕ್ಕೆ ಸಿಗದೆ ಆತಂಕ!
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಪಂಜಿಮೊಗರುವಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ, ಗಂಡ ಫಿನಿಶ್!
    ಸಿಜೆಪಿಯ ಪ್ರತಿಭಟನೆ ಬಗ್ಗೆ ತನಿಖೆ ನಡೆಸಲು ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ
    ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
    ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
    ನಿದ್ದೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಕುಸಿದ ಕಟ್ಟಡ ಸಾವು ಆರಕ್ಕೆ..!ದಿಲ್ಲಿ ಪಿಜಿ ದುರಂತ ದೇಶದ ಹಳೆಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆ..!
    ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…