📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 

ಮಂಗಳೂರು: ಕಾಲೇಜು ಕ್ಯಾಂಪಸ್‌ನಲ್ಲಿ ರಾಜಕೀಯ ಘರ್ಷಣೆ – NSUI vs ABVP ತೀವ್ರ ತಕರಾರು

ಮಂಗಳೂರು ನಗರದ ಹಂಪನಕಟ್ಟೆಯ ಪ್ರತಿಷ್ಠಿತ ಯೂನಿವರ್ಸಿಟಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯ ಘೋಷಣೆಯ ವಿಚಾರ ರಾಜಕೀಯ ಬಣ್ಣ ಪಡೆದು ಗಲಾಟೆಗೆ ಕಾರಣವಾಗಿದೆ. ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿ ಸಂಘದ ಚುನಾವಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬೆಂಬಲಿತ NSUI ಕಾರ್ಯಕರ್ತರು ಕಾಲೇಜು ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪರ ಘೋಷಣೆಗಳನ್ನು ಕೂಗಿದದ್ದು ಕ್ಯಾಂಪಸ್‌ ವಾತಾವರಣವನ್ನು ರಾಜಕೀಯಗೊಳಿಸಿದೆ ಎಂಬ ಆರೋಪ ಕೇಳಿಬಂದಿದೆ.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಬೆಂಬಲಿತ ABVP ವಿದ್ಯಾರ್ಥಿಗಳು, “ಶೈಕ್ಷಣಿಕ ಸಂಸ್ಥೆಗಳನ್ನು ಕಾಂಗ್ರೆಸ್ ರಾಜಕೀಯ ವೇದಿಕೆಯಾಗಿಸುತ್ತಿದೆ” ಎಂದು ಆರೋಪಿಸಿ ಕಾಲೇಜು ಮುಂಭಾಗ ರಸ್ತೆ ತಡೆ ನಡೆಸಿದರು. ಕಾಲೇಜಿನೊಳಗೆ ರಾಜಕೀಯ ಘೋಷಣೆಗಳಿಗೆ ಅವಕಾಶ ನೀಡಿದ ಪ್ರಾಂಶುಪಾಲ ಗಣಪತಿ ಗೌಡ ವಿರುದ್ಧವೂ ವಿದ್ಯಾರ್ಥಿಗಳು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲರು, “ಸಿಹಿ ಹಂಚಲು ಮಾತ್ರ ಅನುಮತಿ ನೀಡಲಾಗಿತ್ತು, ರಾಜಕೀಯ ಘೋಷಣೆ ಕೂಗಿರುವುದು ಗಮನಕ್ಕೆ ಬಂದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಹೇಳಿಕೆ ABVP ವಿದ್ಯಾರ್ಥಿಗಳ ಅಸಮಾಧಾನಕ್ಕೆ ಮತ್ತಷ್ಟು ಕಾರಣವಾಗಿದೆ. ಘಟನೆ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ವರದಿ ಸಲ್ಲಿಸುವುದಾಗಿ ಪ್ರಾಂಶುಪಾಲರು ಭರವಸೆ ನೀಡಿದ್ದಾರೆ.

ಈ ಘಟನೆ ರಾಜ್ಯದಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ ಘೋಷಣೆ ಸುತ್ತ ರಾಜಕೀಯ ಪಕ್ಷಗಳ ಪ್ರಭಾವ ಮತ್ತು ಕ್ಯಾಂಪಸ್ ರಾಜಕೀಯದ ಕುರಿತ ಚರ್ಚೆಗೆ ಮತ್ತೆ ಬೆಂಕಿ ಹಚ್ಚಿದಂತಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
ಕೊನೆಗೂ ಸೋತ ಖಾಕಿ….!!!
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
ಮಾರ್ಚ್ 17 :ಮಂಗಳೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…