📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು

         ಪತ್ರಿಕಾ ಲೇಖನ

    ಬಾಂಗ್ಲಾ ದೇಶಿಯರು ಎಂದು ದೂಷಣೆಗೆ ಒಳಗಾಗಿ ಬಾಂಗ್ಲಕ್ಕೆ ಬಲವಂತವಾಗಿ ಕಳುಹಿಸಲ್ಪಟ್ಟಿದ್ದ ಪಶ್ಚಿಮ ಬಂಗಾಳದ ಬೀರ್‌ಭೂಮ್‌ನ ನಾಲ್ವರು ವರ್ಷದ ಬಳಿಕ ಮನೆಗೆ ಮರಳಿದರು.

    ಗಡಿಭದ್ರತಾ ಪಡೆಯ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿರುವುದು

    ಕೋಲ್ಕತ್ತಾ: 2025ರ ಜೂನ್‌ನಲ್ಲಿ ದೆಹಲಿಯಿಂದ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಲ್ಪಟ್ಟಿದ್ದ ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ನಾಲ್ವರು ಭಾರತೀಯರು ಒಂದು ವರ್ಷದ ಬಳಿಕ ಬುಧವಾರ (ಜು.8) ತಮ್ಮ ಊರಿಗೆ ಮರಳಿದ್ದಾರೆ.

    ಘಟನೆಯ ಹಿನ್ನೆಲೆ

    ದೆಹಲಿಯಲ್ಲಿ ವಶಕ್ಕೆ ಪಡೆಯಲಾದ ಸುನಾಲಿ ಖಾತೂನ್, ಅವರ ಪತಿ ಡ್ಯಾನಿಶ್ ಶೇಖ್, ಮಗ ಸಾಬಿರ್, ಹಾಗೂ ಸ್ವೀಟಿ ಬಿಬಿ ಮತ್ತು ಅವರ ಇಬ್ಬರು ಗಂಡು ಮಕ್ಕಳನ್ನು “ಅಕ್ರಮ ನುಸುಳುಕೋರರು” ಎಂಬ ಆರೋಪದ ಮೇಲೆ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಲಾಗಿತ್ತು. ಈ ಆರೂ ಜನರು, ತಾವು ಬೀರ್‌ಭೂಮ್ ಜಿಲ್ಲೆಯ ಪೈಕರ್ ಗ್ರಾಮದ ನಿವಾಸಿಗಳು ಎಂದು ನಿರಂತರವಾಗಿ ಪ್ರತಿಪಾದಿಸಿದ್ದರು ಅವರ ಹೇಳಿಕೆ ಅರಣ್ಯರೋಧನವಾಗಿತ್ತು.

    Also Read  ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು

    ಗಡಿಪಾರು ಮಾಡುವಾಗ ಸುನಾಲಿ ಖಾತೂನ್ ತುಂಬು ಗರ್ಭಿಣಿಯಾಗಿದ್ದ ಕಾರಣ, ಮಾನವೀಯ ನೆಲೆಯಲ್ಲಿ 2025ರ ಡಿಸೆಂಬರ್‌ನಲ್ಲಿ ಅವರನ್ನು ಮತ್ತು ಮಗ ಸಾಬಿರ್‌ನನ್ನು ಭಾರತಕ್ಕೆ ಮರಳಿ ಕರೆತರಲಾಗಿತ್ತು.

    ಉಳಿದ ನಾಲ್ವರಾದ ಡ್ಯಾನಿಶ್ ಶೇಖ್, ಸ್ವೀಟಿ ಬಿಬಿ ಮತ್ತು ಅವರ ಇಬ್ಬರು ಮಕ್ಕಳು ಅಂದು ಗಡಿಪಾರಿಗೆ ಒಳಗಾದವರು ಇಂದು ಅಂದರೆ ಕಳೆದ ಬುಧವಾರ ಮಾಲ್ಡಾ ಜಿಲ್ಲೆಯ ಮಹದಿಪುರ ಗಡಿ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದಾರೆ ಎಂದು ಗ್ರಾಮಸ್ಥ ಸೋಯೆಫ್ ಅಲಿ ತಿಳಿಸಿದ್ದಾರೆ.

    ನ್ಯಾಯಾಲಯದ ಮಧ್ಯಸ್ಥಿಕೆ

    ಈ ಆರೂ ಜನರ ಗಡಿಪಾರು ಆದೇಶವನ್ನು ಕಲ್ಕತ್ತಾ ಹೈಕೋರ್ಟ್ ವಜಾಗೊಳಿಸಿತ್ತು. ಸುನಾಲಿ ಖಾತೂನ್ ಅವರ ತಂದೆ ಭೋದು ಸೇಖ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಾಲ್ಕು ವಾರಗಳೊಳಗೆ ಎಲ್ಲರನ್ನೂ ಪಶ್ಚಿಮ ಬಂಗಾಳಕ್ಕೆ ಮರಳಿ ಕರೆತರಬೇಕು ಎಂದು ನಿರ್ದೇಶಿಸಿತ್ತು.

    Also Read  ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!

    ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೇ 22ರಂದು ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ, “ಉಳಿದ ನಾಲ್ವರ ಪೌರತ್ವವನ್ನು ಮರು ಪರಿಶೀಲಿಸಿ ಭಾರತಕ್ಕೆ ವಾಪಸ್ ಕರೆತರಲಾಗುವುದು” ಎಂದು ವಾಗ್ದಾನ ನೀಡಿತ್ತು.

    ರಾಜಕೀಯ ಪ್ರತಿಕ್ರಿಯೆ

    ಈ ಬೆಳವಣಿಗೆ ಬಗ್ಗೆ ಟಿಎಂಸಿ ಸಂಸದ ಸಮೀರುಲ್ ಇಸ್ಲಾಂ ಪ್ರತಿಕ್ರಿಯಿಸಿ, “ನ್ಯಾಯಾಂಗದ ಮಧ್ಯಸ್ಥಿಕೆಯಿಂದಾಗಿ ಮಾತ್ರ ಕೇಂದ್ರ ಸರ್ಕಾರ ಕೊನೆಗೂ ಬಡ ಭಾರತೀಯ ನಾಗರಿಕರನ್ನು ಮರಳಿ ಕರೆತಂದಿದೆ” ಎಂದು ಹೇಳಿದರು.

    “ನಿಜವಾಗಿಯೂ ಅಕ್ರಮ ನುಸುಳುಕೋರರನ್ನು ಗಡಿಪಾರು ಮಾಡುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಗಡಿಪಾರು ಹೆಸರಿನಲ್ಲಿ ಬಡ ಮತ್ತು ನಿಜವಾದ ಭಾರತೀಯ ನಾಗರಿಕರನ್ನು ಏಕೆ ಕಿರುಕುಳಕ್ಕೆ ಒಳಪಡಿಸಬೇಕು?” ಎಂದು ಅವರು ಪ್ರಶ್ನಿಸಿದರು.

    Also Read  ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 

    ಏಪ್ರಿಲ್ 2025ರಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ  ಹಲವು ರಾಜ್ಯಗಳ ಪೊಲೀಸರು ಬಂಗಾಳಿ ಮಾತನಾಡುವ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪೌರತ್ವ ಸಾಬೀತುಪಡಿಸಲು ಒತ್ತಾಯಿಸುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು.

    ಪೌರತ್ವ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಹಲವರನ್ನು ಬಲವಂತವಾಗಿ ಬಾಂಗ್ಲಾ ಗಡಿಯಾಚೆಗೆ ತಳ್ಳಲಾಗಿದೆ. ರಾಜ್ಯ ಅಧಿಕಾರಿಗಳು ತನಿಖೆ ನಡೆಸಿ “ತಪ್ಪಾಗಿ ಗಡಿಪಾರು ಮಾಡಲಾಗಿದೆ” ಎಂದು ಸಾಬೀತುಪಡಿಸಿದ ನಂತರ ಕೆಲವರನ್ನು ಮರಳಿ ಕರೆತರಲಾಗುತ್ತಿದೆ.

    ಒಂದು ವರ್ಷದ ಹೋರಾಟ, ನ್ಯಾಯಾಲಯದ ಹಸ್ತಕ್ಷೇಪದ ಬಳಿಕ ತಮ್ಮ ಊರಿಗೆ ಮರಳಿದ ಈ ನಾಲ್ವರು ಕುಟುಂಬದ ಸದಸ್ಯರು ಇದೀಗ ಬೀರ್‌ಭೂಮ್‌ನ ಪೈಕರ್ ಗ್ರಾಮದಲ್ಲಿ ತಮ್ಮ ಕುಟುಂಬದೊಂದಿಗೆ ಇದ್ದಾರೆ ಎನ್ನಲಾಗಿದೆ.

    ಕೃಪೆ

    ಆಧಾರ: scroll.in

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ
    ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!
    ಅಂದೊಮ್ಮೆ ಬಾಲಿವುಡ್‌ನಲ್ಲಿ ಕಡೆಗಣಿಸಿದ  ಪ್ರಿಯಾಂಕಾ ಚೋಪ್ರಾ ಇಂದು ವಿಶ್ವದ ಪ್ರತಿಷ್ಠಿತ ಬ್ರಾಂಡ್ ರೋಲೆಕ್ಸ್‌ನ ಅಂಬಾಸಿಡರ್! 
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಬಿಡದಿಗಾಗಿ ಗೌಡರ ಗುಡುಗು! ಹೋರಾಟ ನಿಲ್ಲದು ತೀವ್ರಗೊಳ್ಳಲಿದೆ“ಸುಮ್ಮನಿರಲ್ಲ” ಗೌಡರ ಖಡಕ್ ಎಚ್ಚರಿಕೆ..!
    ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
    ದಕ್ಷಿಣ ಕನ್ನಡದಲ್ಲಿ ಮಳೆ ದುರಂತ: ಎರಡು ಮೃತದೇಹಗಳು ನೀರಲ್ಲಿ ಪತ್ತೆ
    ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
    ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ
    ಇಂದು ಆನ್‌ಲೈನ್ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಆಕ್ರೋಶ!ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್ ಶಾಪ್ ಬಂದ್!
    2047ರ ಕನಸಿನ ಭಾರತಕ್ಕಾಗಿ ದೆಹಲಿಯಲ್ಲಿ ಮೆಗಾ ಮಂಥನ… ಏನಿದೆ ಈ ಮಾಸ್ಟರ್ ಪ್ಲಾನ್‌ನಲ್ಲಿ?
    ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಆಸ್ಪತ್ರೆಗಳಲ್ಲಿ ಔಷಧ ಬೆಲೆ ಸುಲಿಗೆ? ಸುಪ್ರೀಂ ಕೋರ್ಟ್ ಗರಂ
    ಬಾಲ್ಯದಲ್ಲೇ ಕಲಿಯಲಿ ಹಣದ ಲೆಕ್ಕ!ಮಕ್ಕಳಿಗಿನ್ನು ಪುಸ್ತಕದ ಜೊತೆ ‘ಹಣದ ಜ್ಞಾನ’! 956 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಪಾಠ
    ಡಾನ್ ಹೇಮಂತ್ ಪೂಜಾರಿ ಸಹೋದರ ವಶಕ್ಕೆ?!?
    ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
    ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
    ಕೊಪ್ಪ ತಹಸಿಲ್ದಾರ್ ಲಿಖಿತಾ ಮೋಹನ್, ಅಧಿಕಾರ ದುರುಪಯೋಗ ಮಾಡಿಕೊಂಡರಾ?
    ಪಾಕಿಸ್ತಾನದಿಂದ ನೀರಿನ ವಿಚಾರದಲ್ಲಿ ಕಠಿಣ ಎಚ್ಚರಿಕೆ; ನೀರಿಗಾಗಿ ಯುದ್ದಕ್ಕೂ ಸಿದ್ದವೆಂದ ಪಾಕ್ ….!
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    ವೈರಲ್ ಆದ ಒಂದೇ ಒಂದು ಪಂಚ್ … ಐಸಿಯು ಕೋಮಾವರೆಗೆ ! ಬೆಚ್ಚಿಬೀಳಿಸಿದ ಜಿಮ್ ಪಂಚ್ ವೀಡಿಯೋ.ದೇಹ ಗಟ್ಟಿಯಾಗಿತ್ತು… ಮನಸ್ಸು ದುರ್ಬಲವಾಗಿತ್ತು!
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ
    Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು