📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

     ಮಗಳ ಗಂಡನೇ …ಅತ್ತೆಯ ಗಂಡ! ಹೌದು…ಅಳಿಯ-ಅತ್ತೆಯ ಪ್ರೇಮಕಥೆ ವೈರಲ್!ಕುಟುಂಬ ಸಂಬಂಧಗಳೇ ತಲೆಕೆಳಗು! ಉತ್ತರ ಪ್ರದೇಶದ ಈ ಮದುವೆ ಹಿಂದಿನ ರಹಸ್ಯ ಏನು?

    ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಅತ್ತೆ-ಅಳಿಯ ಸಂಬಂಧಕ್ಕೆ ವಿಶೇಷ ಗೌರವದ ಸ್ಥಾನವಿದೆ. ಆದ್ದರಿಂದ ಈ ರೀತಿಯ ಮದುವೆ ಹಲವರಿಗೆ ಅಚ್ಚರಿ ಮತ್ತು ಆಘಾತ ಉಂಟುಮಾಡಿದೆ. ಕೆಲವರು “ಇದು ಇಬ್ಬರು ಅಪ್ರಾಪ್ತವಯಸ್ಕರ ವೈಯಕ್ತಿಕ ನಿರ್ಧಾರ” ಎಂದು ಅಭಿಪ್ರಾಯಪಟ್ಟರೆ, ಮತ್ತೊಬ್ಬರು “ಇದರಿಂದ ಕುಟುಂಬದ ನೈತಿಕ ಮೌಲ್ಯಗಳಿಗೆ ಧಕ್ಕೆಯಾಗುತ್ತದೆ” ಎಂದು ಟೀಕಿಸಿದ್ದಾರೆ.

    ಉತ್ತರ ಪ್ರದೇಶದ ಕಾನ್ಪುರ ದೇಹಾತ್ ಜಿಲ್ಲೆಯ ಅಕ್ಬರ್‌ಪುರ ಪ್ರದೇಶದಲ್ಲಿ ನಡೆದಿರುವ ಘಟನೆ ಇದು.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, 35 ವರ್ಷದ ವ್ಯಕ್ತಿಯೊಬ್ಬ ತನ್ನ 52 ವರ್ಷದ ಅತ್ತೆಯೊಂದಿಗೆ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ವಿಡಿಯೋದಲ್ಲಿ ಇಬ್ಬರೂ ಹಾರ ವಿನಿಮಯ ಮಾಡಿಕೊಂಡು, ಮದುವೆ ಪ್ರಮಾಣಪತ್ರವನ್ನು ತೋರಿಸುತ್ತಾ ಜನರ ಆಶೀರ್ವಾದವನ್ನು ಕೋರಿದ್ದಾರೆ.

    ಆ ವ್ಯಕ್ತಿ ಸುಮಾರು ಒಂದು ವರ್ಷದ ಹಿಂದೆ ಅತ್ತೆಯ ಮಗಳನ್ನು ಮದುವೆಯಾಗಿದ್ದನು. ಆದರೆ ಕಾಲಕ್ರಮೇಣ ಅಳಿಯ ಮತ್ತು ಅತ್ತೆಯ ನಡುವೆ ಆತ್ಮೀಯತೆ ಹೆಚ್ಚಾಗಿತ್ತೆಂದು ಸ್ಥಳೀಯರು ಹೇಳುತ್ತಿದ್ದಾರೆ. ನಂತರ ಈ ವಿಚಾರ ಪತ್ನಿಗೆ ತಿಳಿದು, ಕುಟುಂಬದಲ್ಲಿ ಗಂಭೀರ ಕಲಹ ಉಂಟಾಯಿತು ಎನ್ನಲಾಗಿದೆ. ಇದರ ಪರಿಣಾಮವಾಗಿ ಪತಿ-ಪತ್ನಿಯ ಸಂಬಂಧ ಮುರಿದುಬಿದ್ದ ಬಳಿಕ, ಅಳಿಯ ಮತ್ತು ಅತ್ತೆ ಕೋರ್ಟ್ ಮದುವೆಗೆ ಮುಂದಾದರೆಂದು ವರದಿಗಳು ಹೇಳುತ್ತಿವೆ. 

    Also Read  30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ

    ವಿಡಿಯೋ ವೈರಲ್ ಆದ ನಂತರ ಕಾನ್ಪುರ ದೇಹಾತ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮದುವೆ ನಿಜವಾಗಿಯೂ ನಡೆದಿದೆಯೇ, ದಾಖಲೆಗಳು ಮಾನ್ಯವೇ, ಯಾವುದೇ ಕಾನೂನು ಉಲ್ಲಂಘನೆ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸದ್ಯದ ವರದಿಗಳ ಪ್ರಕಾರ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. 

    ಇದುವರೆಗೆ ಈ ಜೋಡಿ ಸಾರ್ವಜನಿಕವಾಗಿ “ನಾವು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ” ಎಂಬುದನ್ನು ಮಾತ್ರ ಹೇಳಿದೆ. ಆದರೆ ಈ ನಿರ್ಧಾರದ ಹಿಂದಿನ ನಿಜವಾದ ಕಾರಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇದನ್ನು ಪ್ರೇಮ ಸಂಬಂಧದ ಪರಿಣಾಮ ಎನ್ನುತ್ತಿದ್ದರೆ, ಇನ್ನು ಕೆಲವರು ಕುಟುಂಬ ಕಲಹ, ಆಸ್ತಿ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆ ಇರಬಹುದೆಂದು ಊಹಿಸುತ್ತಿದ್ದಾರೆ. ಆದರೆ ಈ ಎಲ್ಲವು ಕೇವಲ ಊಹಾಪೋಹಗಳು ಮಾತ್ರ; ಅಧಿಕೃತ ದೃಢೀಕರಣ ಇಲ್ಲ.

    Also Read  ಉತ್ತರ ಕನ್ನಡಕ್ಕೆ ₹6,925 ಕೋಟಿ ಬಂದರು ಯೋಜನೆ: 15 MTPA ಸಾಮರ್ಥ್ಯದ ಮಂಕಿ ಬಂದರಿಗೆ ಸಚಿವ ಸಂಪುಟ ಒಪ್ಪಿಗೆ

    ##KanpurMarriage #ViralNews #UPNews #CourtMarriage #FamilyDrama #TrendingStory #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
    ಇನ್‌ಸ್ಟಾಗ್ರಾಮ್ ಬ್ಲಾಕ್ ಆದ ಕ್ಷಣದಿಂದ ಹೊರಬಂತು ರಹಸ್ಯ!
    ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
    ಕಸ ಎಸೆದರೆ ದುಪ್ಪಟ್ಟು ದಂಡ: ಬೆಂಗಳೂರು ಶುರು ಮಾಡಿದೆ, ಮಂಗಳೂರು ಯಾವಾಗ? ಈಗ ಮಾತಲ್ಲ, ಕಠಿಣ ಕಾರ್ಯಾಚರಣೆ ಬೇಕು,ಕಟ್ಟುನಿಟ್ಟಿನ ಕ್ರಮಗಳಾಗ್ಬೆಕ್ ..
    ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತ್ತೊಂದು ಸೌಹಾರ್ದದ ಹೆಜ್ಜೆ
    ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ಅಪ್ಪಿಕೊಳ್ಳುವ ಅಮ್ಮನ ಕೈಗಳೇ ಕತ್ತು ಹಿಸುಕಿ ಉಸಿರು ನಿಲ್ಲಿಸಿದ್ರೆ … ಎಂಥ ದುರ್ವಿಧಿ..!
    ಕೆಸರೆರಚಾಟದ ನಡುವೆ SIR-ಪ್ರಜಾಪ್ರಭುತ್ವದ ಹಬ್ಬವೋ, ರಾಜಕೀಯ ಗೊಂದಲದ ಗೂಡೋ?
    ಮತದಾನದ ಹಕ್ಕು ಉಳಿಸಿಕೊಳ್ಳಿ: ಎಸ್‌ಐಆರ್ ಗಡುವು ಆಗಸ್ಟ್.17ರವರೆಗೆ ವಿಸ್ತರಣೆ
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ಬೆಂಗಳೂರಿಗರಿಗೆ BIG TRAFFIC ALERT! ಸೆ.4ರಿಂದ ಫ್ಲೈಓವರ್‌ಗಳಲ್ಲಿ ಹೊಸ ರೂಲ್ಸ್… ಬೈಕ್, ಆಟೋ ಸವಾರರು ಈ ಮಾಹಿತಿ ತಪ್ಪದೇ ಓದಿ!
    ಕರ್ನಾಟಕದಲ್ಲಿ ತಾಪಮಾನ ಅಪಾಯ ಮಟ್ಟಕ್ಕೆ!ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ಸ್ಟ್ರೋಕ್ ರೂಮ್‌ಗಳು-ಆರೋಗ್ಯ ಇಲಾಖೆ ತುರ್ತು ಕ್ರಮ ಜಾರಿ
    ದಕ್ಷಿಣ ಕನ್ನಡದಲ್ಲಿ ಮಳೆ ದುರಂತ: ಎರಡು ಮೃತದೇಹಗಳು ನೀರಲ್ಲಿ ಪತ್ತೆ
    ಕೇಂದ್ರ ಸಚಿವ ಸೋಮಣ್ಣರ ವಿರುದ್ಧ  ವಾಗ್ದಾಳಿ: “ನಡೆದು ಬಂದ ದಾರಿ ಮರೆತು ಮಾತನಾಡಬೇಡಿ”
    ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್…!ಅಪ್ಲಿಕೇಶನ್ ಬ್ಯಾನ್ ಅಲ್ಲ, ವ್ಯವಸ್ಥೆ ಸರಿಪಡಿಸಿ! ಸರ್ಕಾರಕ್ಕೆ ನಿಸರ್ಗ ಅಧಿಕಾರಿಯ ಸಲಹೆ
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    ಪಶ್ಚಿಮ ಬಂಗಾಳ ಅಪ್ರಾಪ್ತೆಯ ಸಾವು, ಸಾರ್ವಜನಿಕರಿಂದ ಶಂಕಿತನ ಲಿಂಚಿಂಗ್ ..!ಬಾಲಕಿಯ ಹತ್ಯೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ;
    ಬಿಹಾರದಲ್ಲಿ ಭೀಕರ ನೆರೆ: 12 ಜಿಲ್ಲೆಗಳ 22 ಲಕ್ಷ ಜನ ಸಂಕಷ್ಟದಲ್ಲಿ; ಗಂಗಾ ಅಪಾಯದ ಮಟ್ಟ ಮೀರಿ ಹರಿವು
    “ಅಂಕಗಳು ಭವಿಷ್ಯ ನಿರ್ಧರಿಸುವುದಿಲ್ಲ” B.Tech ನಲ್ಲಿ 24 ವಿಷಯ ಫೇಲ್ ಆದರೂ IPS ಆದ ಸಮೀರ್ ಶರ್ಮಾ
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
    ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
    ‘ಮೈ ಭಾರತ್’-ದಕ್ಷಿಣ ಕನ್ನಡದ ಯುವ(ಕ/ತಿ)ಯರೇ, ರಾಷ್ಟ್ರಮಟ್ಟದ ವೇದಿಕೆಗೆ ಇದು ನಿಮ್ಮ ಅವಕಾಶ!
    ಉಡುಪಿಯ ಆರು ತಹಶೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ… ದಾಳಿಯ ಬಿಸಿ ತಟ್ಟುತ್ತದಾ ಅಧಿಕಾರಿಗಳಿಗೆ?
    ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು