📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮೋದಿ ಸರ್ಕಾರಕ್ಕೆ ಮತ್ತೊಂದು ಶಾಕ್ …ಕೇಂದ್ರ ಸಚಿವ ಸಂಪುಟಕ್ಕೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ

    ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆ ಸ್ಪರ್ಧೆ ಕುರಿತು ಊಹಾಪೋಹ


    ನವದೆಹಲಿ: ದೇಶಾದ್ಯಂತ ನೀಟ್‌ ಪರೀಕ್ಷೆ ವಿಚಾರವಾಗಿ ರಾಜಕೀಯ ವಾಗ್ವಾದ ತೀವ್ರಗೊಂಡಿರುವ ನಡುವೆಯೇ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
    ಪಂಜಾಬ್ ಬಿಜೆಪಿ ನಾಯಕ ರವನೀತ್ ಸಿಂಗ್ ಬಿಟ್ಟು ಅವರು ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂಬ ಊಹಾಪೋಹಗಳ ನಡುವೆಯೇ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬಿಟ್ಟು ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
    ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ, ಜಾರ್ಜ್ ಕುರಿಯನ್ ಅವರ ರಾಜೀನಾಮೆಯ ನಂತರ ಒಂದು ತಿಂಗಳ ಅವಧಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ನಡೆದ ಮತ್ತೊಂದು ಪ್ರಮುಖ ರಾಜೀನಾಮೆ ಇದಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
    ರವನೀತ್ ಸಿಂಗ್ ಬಿಟ್ಟು ಅವರ ರಾಜೀನಾಮೆ ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ರಾಜಕೀಯ ಕಾರ್ಯತಂತ್ರದ ಭಾಗವೇ ಎಂಬ ಪ್ರಶ್ನೆಯೂ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆಯೇ ಎಂಬ ಕುತೂಹಲವೂ ಮೂಡಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ತಿರುಪತಿ ತಿಮ್ಮಪ್ಪನಿಗೆ ಉದ್ಯಮಿ ವರ್ಧಮಾನ್ ಜೈನ್ ಮತ್ತು ರಾಧಿಕಾ ಜೈನ್ ರಿಂದ 121 ಕೆ.ಜಿ ಚಿನ್ನದ ಮಹಾಕಾಣಿಕೆ….!
    ಸ್ಮಾರ್ಟ್‌ಫೋನ್ ಅಗ್ಗವಾಗುತ್ತಾ? ಮೊಬೈಲ್ ಖರೀದಿಗೆ ಇದು ‘Wait & Watch’ ಟೈಮ್!
    ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
    ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿಕೆ: ಜುಲೈ 2ಕ್ಕೆ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
    ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ
    ಬಿಡದಿ “ಸಮಗ್ರ ಉಪನಗರ” ಯೋಜನೆ ಕೈಬಿಡಿ: ಸಿಎಂ ಡಿಕೆ ಶಿಗೆ ಎಚ್.ಡಿ. ದೇವೇಗೌಡ ಪತ್ರ
    ಕೆಪಿಎಸ್‌ಸಿ ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್‌, ಸದಸ್ಯೆ ಗೀತಾ ಇ.ಡಿ. ಬಂಧನ
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    ಸೈಡ್ ಕೊಡಲಿಲ್ಲ ಎಂಬ ಸಣ್ಣ ವಿಚಾರ… ದೊಡ್ಡ ಜಗಳದ ವೈರಲ್ ವಿಡಿಯೋ… ಪೊಲೀಸ್ ಕೇಸ್… ಕೊನೆಗೆ ಬಂಧನ!
    ಗಂಡನನ್ನು ಕೊಂದ ಪತಿವ್ರತೆ… ಮೂರು ವರ್ಷದ ಮಗು ಅನಾಥ
    ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
    ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 
    ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
    ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
    ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
    ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ… 
    ವೇಣೂರಿನಲ್ಲಿ ಬಾಲಕಿಗೆ ಶಾಲಾ ರಿಕ್ಷಾಚಾಲಕನಿಂದಲೇ ಲೈಂಗಿಕದೌರ್ಜನ್ಯ: ಮಕ್ಕಳಿಗೆ ಯಾರನ್ನು ನಂಬಬೇಕು? ಯಾರಿಗೆ ಹೇಳಬೇಕು? — ಪೋಷಕರೇ ಎಚ್ಚರ
    “ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    ಅಣ್ಣಾಮಲೈ ಸಿಡಿಸಿದ ಬಾಂಬ್: ವಿಜಯ್ ಸರ್ಕಾರದ ಸಚಿವರ ವಿರುದ್ಧ 2–4% ಕಿಕ್‌ಬ್ಯಾಕ್ ಆರೋಪ!
    ಗ್ರಾಮೀಣ ಅಭಿವೃದ್ಧಿಯಲ್ಲಿ ಉಡುಪಿ ನಂ.1: ಐದು ಪಂಚಾಯಿತಿಗಳಿಗೆ ರಾಷ್ಟ್ರ ಗೌರವ-ಉಡುಪಿ ಬರೆದ ಸುವರ್ಣ ಇತಿಹಾಸ!
    ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
    ಸಿಟಿ ಬಸ್ ಫೋಲ್ಡಿಂಗ್ ಬಾಗಿಲು ಕಡ್ಡಾಯ: ಸುರಕ್ಷತೆಗೆ ಹೆಜ್ಜೆ, ಆದರೆ ಸವಾಲುಗಳೇನು? ಪರಿಹಾರ ಹೇಗೆ?
    ಹಸಿರು ಪಟಾಕಿಗೆ ಮಾತ್ರ ಅನುಮತಿ, ಆದ್ರೆ ಮಾರುಕಟ್ಟೆಯ ಹವಾ ನೋಡಿದ್ರೇ…!ಮೂಲಕ್ಕೇ ಕಡಿವಾಣ ಹಾಕದಿದ್ದರೆ ನಿಷೇಧಕ್ಕೆ ಅರ್ಥವೇನು?
    MRPL ಸ್ಫೋಟದ ಭೀಕರತೆಗೆ 9 ಜನಕ್ಕೆ ತೀವ್ರ ಗಾಯ ….ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ…!