📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗಂಡನನ್ನು ಕೊಂದ ಪತಿವ್ರತೆ… ಮೂರು ವರ್ಷದ ಮಗು ಅನಾಥ

    ಪ್ರೀತಿಸಿ ಮದುವೆಯಾದ ಗಂಡನ ಸಹವಾಸ ನಾಲ್ಕೇ ವರ್ಷಕ್ಕೆ ಸಾಕಾಗಿ ಹೋಯಿತು ನೋಡಿ. ಮನೆಯವರ ಬಲವಂತಕ್ಕೆ ಗಂಡನ ಮನೆಗೆ ಬಂದ ಈ ಮಹಾನ್ ಪತಿವ್ರತೆ, ಕಟ್ಟಿಕೊಂಡ ಗಂಡ ನಿದ್ರಿಸುತ್ತಿರುವಾಗ ಕಬ್ಬಿಣದ ರಾಡನ್ನು ತಲೆಗೆ ಬೀಸಿ ಕೊಂದು ಹಾಕಿದ್ದಾಳೆ.

    ಇಂತಹುದೊಂದು ಘಟನೆ ನಡೆದದ್ದು ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲಿ. ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ ನಾಗನೂರು ಗ್ರಾಮದಲ್ಲಿ ನಡೆದಿದೆ.

    ಮೃತ ವ್ಯಕ್ತಿಯ ಹೆಸರು ವಿಶ್ವನಾಥ್. ಈತ ಪದವೀಧರ ಹಾಗೂ ಮಾಜಿ ಸೈನಿಕನ ಸುಪುತ್ರ. ಇನ್ನು 28ರ ಯುವಕ. 2022ರಲ್ಲಿ ಅವರ ದೂರದ ಸಂಬಂಧಿಯು ಆಗಿರುವಂತಹ ಕವಿತಾ ಹಾದಿಮನಿ ಎಂಬ ಚಿನುಕುರಳಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಅವರ ಪ್ರೀತಿಯ ಆರ್ಭಟಕ್ಕೆ ಮೂರು ವರ್ಷದ ಗಂಡು ಮಗು ಉದಯವಾಗಿದೆ.

    Also Read  ಮಂಗಳೂರಿನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ಹಲ್ಲೆ:…ಕಾಲೇಜು ವಿದ್ಯಾರ್ಥಿಗಳ ರ‍್ಯಾಗಿಂಗ್ ಸಂಸ್ಕೃತಿಗೆ ಬ್ರೇಕ್ ಬೇಕು

    ಆದರೆ, ಇದ್ದಕ್ಕಿದ್ದಂತೆಯೇ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಅದರ ಪರಿಣಾಮ ಕವಿತಾ ಸೀದಾ ತವರು ಮನೆಗೆ ಎದ್ದು ಹೋಗುತ್ತಾಳೆ. ಏನೇ ಮಾಡಿದರು ಬರುವುದಿಲ್ಲ. ಆದರೆ ಇತ್ತೀಚೆಗೆ ವಿಶ್ವನಾಥನ ತಂಗಿಯ ಮದುವೆಯ ಕಾರ್ಯ ಇದ್ದ  ಕಾರಣದಿಂದಾಗಿ, ಕವಿತಾ ಇಲ್ಲಿಗೆ ಬರುತ್ತಾಳೆ. ಮದುವೆ ಮುಗಿಸಿ ವಾಪಸ್ ತವರು ಮನೆಗೆ ಹೋದವಳು, ಇದ್ದಕ್ಕಿದ್ದಂತೆಯೇ ವಾಪಸ್ ಗಂಡನ ಮನೆಗೆ ಬರುತ್ತಾಳೆ. ಹಾಗೆ ಬಂದವಳ ಬಗ್ಗೆ, ಯಾರೋ ಬುದ್ಧಿ ಹೇಳಿರಬೇಕು ಹಾಗಾಗಿ ಬಂದಿದ್ದಾಳೆ. ಇನ್ನು ಸಂಸಾರ ನಡೆಸಬಹುದು ಎಂಬ ನಿರ್ಧಾರಕ್ಕೆ ವಿಶ್ವನಾಥ್ ಬಂದಿರುತ್ತಾನೆ.

    ಹಾಗೆ ಬಂದವಳು ಮತ್ತೆ ಜಗಳ ಶುರುವಿಟ್ಟು ಕೊಂಡಿದ್ದಾಳೆ. ವಿಶ್ವನಾಥನ ತಂದೆ ತಾಯಿ ಇವರ ಜಗಳ ಯಾವತ್ತೂ ಇದ್ದದ್ದೇ ಅಂತ ಅದೇ ಮನೆಯ ಮೇಲ್ಮಹಡಿಯಲ್ಲಿ ಆರಾಮಾಗಿ ಇರುತ್ತಾರೆ. ಆದರೆ, ಮೊನ್ನೆಯ ದಿನ ರಾತ್ರಿ, ಜಗಳ ಆಗಿದ್ದು ವಿಶ್ವನಾಥ್ ತಂದೆ ತಾಯಿಯರಿಗೆ ಕೇಳಿಸದಿದ್ದರೂ ಬೆಳಗಾಗುವಷ್ಟರಲ್ಲಿ ವಿಶ್ವನಾಥ್ ಹೆಣವಾಗಿ ಮಲಗಿದ್ದ. ಅತ್ತೆ ಮಾವ ಬಂದು ಕೇಳಿದಾಗ, ರಾತ್ರಿ ಜಗಳ ಆಯ್ತು, ಆ ಸಂದರ್ಭದಲ್ಲಿ ಹೀಗಾಯ್ತು ಅಂತ ಅಳುತ್ತಾ ಹೇಳುತ್ತಾಳೆ. ಸೀದಾ ಪೊಲೀಸರಿಗೆ ಮಾಹಿತಿ ಹೋಗುತ್ತದೆ. ಪೊಲೀಸರು ಬಂದು ಕವಿತಾ ಹಾದಿಮನಿಯನ್ನು ಬಂದಿಸಿ ವಿಚಾರಿಸಿದಾಗ, ಕೊಲೆಯ ಬಗ್ಗೆ ಬಾಯ್ ಬಿಡುತ್ತಾಳೆ. ಮಲಗಿದ್ದ ಗಂಡನ ತಲೆ ಒಡೆದು ಹಾಕಿದ್ದನ್ನು ಒಪ್ಪಿಕೊಳ್ಳುತ್ತಾಳೆ.

    Also Read  ಬ್ರಹ್ಮಾವರ ಅಪಾರ್ಟ್‌ಮೆಂಟ್ ರೂಮಿನಲ್ಲಿ ಯುವತಿಯ ನಿಗೂಢ ಸಾವು

    ನಿಜವಾಗಿಯೂ ಅವಳೊಬ್ಬಳೇ ಈ ಕೆಲಸ ಮಾಡಿದಳ? ಅಥವಾ ಇನ್ಯಾರದ್ದಾದರೂ ಸಹಾಯ ಪಡೆದಿದ್ದಾಳ? ಅದರ ಬಗ್ಗೆ ಹೆಚ್ಚಿನ ವಿಚಾರಣೆನದ ನಡೆದ ನಂತರ ತಿಳಿದು ಬರುತ್ತದೆ. ಆದರೆ, ಗಂಡನನ್ನು ಕೊಂದು ಜೈಲು ಪಾಳಾದ ಕವಿತಾ ಹಾದಿಮನಿ 3 ವರ್ಷದ ಪಾಪದ ಮಗುವನ್ನು ಅನಾಥಳನ್ನಾಗಿಸಿದ್ದಾಳೆ. ಹೆಣ್ಣನ್ನು ಸಹನಾಮೂರ್ತಿ, ಎಲ್ಲವನ್ನು ಸಹಿಸಿಕೊಳ್ಳುವ ಗಟ್ಟಿಗಿತ್ತಿ, ಮಮತೆಯ ತೊಟ್ಟಿಲು ಅಂತೆಲ್ಲ ಕರೆಯುತ್ತಾರೆ. ಅದೆಲ್ಲದಕ್ಕೂ ತದ್ ವಿರುದ್ಧವಾಗಿರುವಂತಹ ಕವಿತಾ ಹಾದಿಮನಿ ಅಂತವರ ಸಂಖ್ಯೆ ಇವತ್ತು ಸಮಾಜದಲ್ಲಿ ಹೆಚ್ಚುತ್ತಿದೆ ಅನ್ನುವುದು ಮಾತ್ರ ಸತ್ಯ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಬೇಕಾದರೇ ನನಗೆ ಪೊರಕೆಲಿ ಹೊಡಿರಿ ಆದ್ರೆ ಅಧಿಕಾರಿಗಳಿಗಲ್ಲ”- ಡಿಕೆಶಿ “ಭೂಮಿ ಉಳಿಸಿಕೊಳ್ಳಲು ಹೋರಾಡಿದ ರೈತರ ಮೇಲೆ ಕೊಲೆ ಕೇಸ್? ಬಿಡದಿ ವಿವಾದದ ಬಗ್ಗೆ ರಾಜ್ಯಾದ್ಯಂತ ಆಕ್ರೋಶ!
    ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
    AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
    ಅಜಿತ್ ಅಗರ್ಕರ್ ಗೆ ಜಾಕ್ಪಾಟ್
    ಶಿರಾಡಿ ಗ್ರಾ.ಪಂ PDO ಸಹಿ ನಕಲು ….6 ತಿಂಗಳಾದರೂ ದೂರು ದಾಖಲಾಗಿಲ್ಲ!
    ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
    “ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಾನು ಅಧ್ಯಕ್ಷ ಸ್ಥಾನ ಬಿಡಲು ಸಿದ್ಧ”!-ಉದ್ಧವ್ ಠಾಕ್ರೆ ಕಣ್ಣೀರಿನ ಮನವಿ.
    ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
    ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
    ಸ್ಮಾರ್ಟ್‌ಫೋನ್ ಅಗ್ಗವಾಗುತ್ತಾ? ಮೊಬೈಲ್ ಖರೀದಿಗೆ ಇದು ‘Wait & Watch’ ಟೈಮ್!
    ಜೂನ್ 30,ಪ್ಲಾಸ್ಟಿಕ್ ನೋಟುಗಳು ಬರುತ್ತಿವೆಯೇ? – ವೈರಲ್ ಸುದ್ದಿಯ ಹಿಂದಿನ ವಿಷಯ
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
    “ಪತ್ನಿ ಮನೆಗೆಲಸದ ಸೇವಕಿ ಅಲ್ಲ!” — ಮದುವೆ ಎಂದರೆ ಹೆಂಡತಿಯ ಸ್ವಾತಂತ್ರ್ಯ ಕಸಿಯುವ ಪರವಾನಗಿ ಅಲ್ಲ: ಹೈಕೋರ್ಟ್
    ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
    ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
    2047ರ ಕನಸಿನ ಭಾರತಕ್ಕಾಗಿ ದೆಹಲಿಯಲ್ಲಿ ಮೆಗಾ ಮಂಥನ… ಏನಿದೆ ಈ ಮಾಸ್ಟರ್ ಪ್ಲಾನ್‌ನಲ್ಲಿ?
    ಅಮೆರಿಕದಲ್ಲಿ ಭಾರತದ ಧ್ವಜಕ್ಕೆ ಅವಮಾನ…ವೈರಲ್ ವಿಡಿಯೋಗೆ ಕೇಂದ್ರದ ಆಕ್ರೋಶ!
    “ಸೌಜನ್ಯಾ ಕೇಸ್ ಮತ್ತೆ ಓಪನ್!”14 ವರ್ಷಗಳ ಬಳಿಕ ಸೌಜನ್ಯಾ ಪ್ರಕರಣಕ್ಕೆ ಮತ್ತೆ ಮರುಜೀವ!ಸುಪ್ರೀಂ ‘ರೀ-ಸ್ಟಾರ್ಟ್’!
    2027ರಿಂದ YouTube ಹೊಸ ರೂಲ್ಸ್..ಕ್ರಿಯೇಟರ್‌ಗಳಿಗೆ ಶಾಕ್!YouTube Monetization ಕಠಿಣ!
    ₹6,695 ಕೋಟಿಯ ಮೆಗಾ ಪ್ರಾಜೆಕ್ಟ್‌ಗೆ ಮಳೆಯ ಅಗ್ನಿಪರೀಕ್ಷೆ-ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ
    ನೆಮ್ಮದಿಯ ಗೂಡಿಗೆ ಸಾಲದ ಕೊಳ್ಳಿ..?!ಮುದ್ದಾದ ಮಕ್ಕಳ ಉಸಿರುಗಟ್ಟಿಸಲು ಅದೇಗೆ…..ಕರುಳಬಳ್ಳಿ ಹಿಂಡುವ ನಾಲ್ಕು ಜೀವಗಳ ದುರಂತ ಅಂತ್ಯ!
    ಟೆಕ್ಸಾಸ್‌ನಲ್ಲಿ ತ್ರಿವರ್ಣ ಧ್ವಜ ಹರಿದು ಹಾಕಿದ ವಿಡಿಯೋ ವೈರಲ್ …ಅಮೆರಿಕದಲ್ಲಿ ಹೆಚ್ಚುತ್ತಿದೆಯೇ ಭಾರತ ವಿರೋಧಿ ಮನೋಭಾವ?
    ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ
    ಸಾಲಗಾರರಿಗೆ ಶಾಕ್ ….RBI ಬಡ್ಡಿ ಹೆಚ್ಚಳ-EMI ಮತ್ತೆ ಏರಿಕೆ..!?
    ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    ಮಂಗಳೂರಿನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ಹಲ್ಲೆ:…ಕಾಲೇಜು ವಿದ್ಯಾರ್ಥಿಗಳ ರ‍್ಯಾಗಿಂಗ್ ಸಂಸ್ಕೃತಿಗೆ ಬ್ರೇಕ್ ಬೇಕು
    ದಿವಾ ಉತ್ಕರ್ಷ ಬೆಂಗಳೂರಿನ ಕೇವಲ 17 ವರ್ಷದ ಹೆಣ್ಣುಮಗಳಕಾರ್ಯಕ್ಕೆ ಪ್ರಪಂಚವೇ ಫಿದಾ…ಫೋರ್ಬ್ಸ್ ಟಾಪ್ ಪಟ್ಟಿಯಲ್ಲಿ ಯುವಸ್ಪೂರ್ತಿ ಹೆಸರು ಯಾಕೆ ಬಂತು ..!?
    ಸಾರ್ವಜನಿಕರಲ್ಲಿ ವಿನಂತಿ …!