📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ

    ವೀರ ಯೋಧರಿಗೆ ಶಾಶ್ವತ ಗೌರವ ಸಲ್ಲಿಸುವ ಉದ್ದೇಶ — ಜಿಲ್ಲೆಯ ಅಭಿವೃದ್ಧಿ ಹಾಗೂ ಮಾಜಿ ಸೈನಿಕರ ಹಿತಕ್ಕೆ ಎರಡು ಪ್ರಮುಖ ಬೇಡಿಕೆ

    ನವದೆಹಲಿ: ದಾವಣಗೆರೆಯ ‘ಅಮರ್ ಜವಾನ್ ಪಾರ್ಕ್’ನಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರ ಯೋಧರ ಸ್ಮರಣಾರ್ಥವಾಗಿ ನಿವೃತ್ತಿಗೊಳಿಸಲಾದ ವಿಂಟೇಜ್ ಯುದ್ಧ ಟ್ಯಾಂಕ್ ಹಾಗೂ ಯುದ್ಧ ವಿಮಾನವನ್ನು ಸ್ಥಾಪಿಸುವಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ನವದೆಹಲಿಯಲ್ಲಿ ಇಂದು ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಸಂಸದೆ, ಜಿಲ್ಲೆಯ ಅಭಿವೃದ್ಧಿ ಹಾಗೂ ಮಾಜಿ ಸೈನಿಕರ ಹಿತದೃಷ್ಟಿಯಿಂದ ಎರಡು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಚಿವರಿಗೆ ಹಸ್ತಾಂತರಿಸಿದರು.

    Also Read  ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..

    ದಾವಣಗೆರೆಯ ‘ಅಮರ್ ಜವಾನ್ ಪಾರ್ಕ್’ನಲ್ಲಿ ಸೇವೆಯಿಂದ ನಿವೃತ್ತಿಗೊಳಿಸಲಾದ ಯುದ್ಧ ಟ್ಯಾಂಕ್ ಹಾಗೂ ಯುದ್ಧ ವಿಮಾನವನ್ನು ಪ್ರದರ್ಶನಕ್ಕೆ ಇಡುವುದರಿಂದ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಭಾರತೀಯ ಸೇನೆಯ ಶೌರ್ಯ ಮತ್ತು ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ದೇಶದ ಗಡಿಗಳನ್ನು ಕಾಯುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಈ ಮೂಲಕ ಶಾಶ್ವತ ಗೌರವ ಸಲ್ಲಿಸಿದಂತಾಗಲಿದೆ. ಅಲ್ಲದೆ, ಯುವಜನರಲ್ಲಿ ದೇಶಭಕ್ತಿ, ರಾಷ್ಟ್ರ ಸೇವೆ ಹಾಗೂ ಸಶಸ್ತ್ರ ಪಡೆಗಳ ಬಗ್ಗೆ ಗೌರವ ಮೂಡಿಸಲು ಇದು ಪ್ರೇರಣೆಯಾಗಲಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

    ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳ ಕಲ್ಯಾಣಕ್ಕೂ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ದೊರೆಯಬೇಕು ಎಂದು ಸಂಸದೆ ಮನವಿ ಮಾಡಿದ್ದಾರೆ.

    Also Read  ಹೊಸ ಸಂಸತ್ ಭವನದ ವಿನ್ಯಾಸಕ್ಕೆ ಶಶಿ ತರೂರ್ ಅಸಮಾಧಾನ: “ಆತ್ಮ ರಹಿತ ಸಮಾವೇಶ ಕೇಂದ್ರ”

    ದಾವಣಗೆರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಅಮರ್ ಜವಾನ್ ಪಾರ್ಕ್’ ಭವಿಷ್ಯದಲ್ಲಿ ವೀರ ಯೋಧರ ಸ್ಮರಣೆಯ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ಕೇಂದ್ರ ರಕ್ಷಣಾ ಸಚಿವಾಲಯದಿಂದ ಅಗತ್ಯ ನೆರವು ಹಾಗೂ ನಿವೃತ್ತ ಯುದ್ಧೋಪಕರಣಗಳ ಮಂಜೂರಾತಿ ದೊರೆಯುವ ವಿಶ್ವಾಸವಿದೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಆಶಯ ವ್ಯಕ್ತಪಡಿಸಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
    ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
    ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
    Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
    ಅಮ್ಮಾ, ನನ್ನನ್ನು ಕ್ಷಮಿಸು’ ಎಂದು ಡೆತ್‌ನೋಟ್ ಬರೆದು ಯುವಕ ಆತ್ಮಹತ್ಯೆ
    ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!
    BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
    ‘₹1ಕ್ಕೆ ಫ್ಯಾಷನ್’ ಜಾಹೀರಾತು ವೈರಲ್… ಮಾಲಾಡ್ ಮಾಲ್‌ನಲ್ಲಿ ನಿಯಂತ್ರಣ ತಪ್ಪಿದ ಜನಸಾಗರ-ಸ್ಟ್ಯಾಂಪೀಡ್ ಭೀತಿ ಮೂಡಿಸಿದ ಜನಸಂದಣಿ!
    ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
    ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
    ಕೇವಲ ₹7ರ ದುರಾಸೆ… ₹7 ಲಕ್ಷದ ಹೊರೆ!ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಅಂಗಡಿಗೆ ಭಾರೀ ದಂಡ; ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ಬೈಕಂಪಾಡಿಯಲ್ಲಿ ನಡುರಾತ್ರಿ ನಡೆದ ಸಿನೆಮಾ ಸ್ಟೈಲ್ ದರೋಡೆ: ಕೇರಳ ಉದ್ಯಮಿ ಕುಟುಂಬಕ್ಕೆ ಗನ್ ಪಾಯಿಂಟ್ ಶಾಕ್!
    ಗಂಡನನ್ನು ಕೊಂದ ಪತಿವ್ರತೆ… ಮೂರು ವರ್ಷದ ಮಗು ಅನಾಥ
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
    ಉಡುಪಿ ಮಹಿಳೆಗೆ ಮುಂಬೈನಲ್ಲಿ ಕಂಬಿ! ₹3.10 ಕೋಟಿ ವಂಚನೆ ಉಡುಪಿ ಮೂಲದ ಮಹಿಳೆ ಅರೆಸ್ಟ್!
    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    ವಿದ್ಯಾರ್ಥಿ ಪ್ರತಿಭಟನೆಗೆ ಬಿಗ್ ವಿಕ್ಟರಿ:ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ಕೊನೆಗೂ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಸರ್ಕಾರ…!?
    ₹6,695 ಕೋಟಿಯ ಮೆಗಾ ಪ್ರಾಜೆಕ್ಟ್‌ಗೆ ಮಳೆಯ ಅಗ್ನಿಪರೀಕ್ಷೆ-ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ
    ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
    ಭಾರತದ ಟ್ರಾಫಿಕ್ ಕಿರಿಕಿರಿಗೆ ಇದುವರೆಗೂ ಯಾರೂ ಯೋಚಿಸದ ಮಾಸ್ಟರ್ ಪ್ಲಾನ್!ಉಬರ್ ಡ್ರೈವರ್ ಕೊಟ್ಟ ಐಡಿಯಾ ಕೇಳಿದ್ರೆ ನೀವೂ ಹೌದಲ್ವಾ ಅಂತೀರಾ….
    ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    ‘ಕಾಕ್ರೋಚ್’ಗಳ ದಂಗೆಗೆ ದೆಹಲಿ ನಡುಗಿತೇ? ವಿದ್ಯಾರ್ಥಿಗಳ ‘ಸಂಸತ್ ಚಲೋ’ಗೆ ಲಾಠಿಚಾರ್ಜ್… ಸಂಸತ್ತಿನಲ್ಲೂ ಸದ್ದು!ಕಲಾಪ ಮುಂದೂಡಿಕೆ?!
    ಡಿಜಿಟಲ್ ಡಿಟಾಕ್ಸ್‌ಗೆ ಮಾದರಿಯಾದ ಸಿಇಒ: ಯುವಜನತೆಗೆ ಹೊಸ ಸಂದೇಶ!