📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!

    ಇಂದು ಮಂಗಳೂರಿನಲ್ಲಿ ಸಂಪುಟ ಸಭೆ… ಸ್ವಾಗತಕ್ಕೆ ಸಿಂಗಾರಗೊಂಡ ಸಿಟಿ, ಪ್ಯಾಚ್‌ಅಪ್ ಕಂಡ ರಸ್ತೆಗಳು; ಅಚ್ಚುಕಟ್ಟಾದ 10⭐️ ವ್ಯವಸ್ಥೆಗಳು….ಆತಿಥ್ಯದಲ್ಲಿ ಕರಾವಳಿಯೇ best…!ಹಾಗೆ ಕರಾವಳಿಯ ಜನರ ಪ್ರಶ್ನೆ ಒಂದೇ—ಈ ಸಭೆಯ ಫಲ ಯಾವಾಗ ಕಾಣಲಿದೆ?

    ಮಂಗಳೂರು:
    ಕಡಲನಗರಿ ಮಂಗಳೂರು ಇಂದು ಸಾಮಾನ್ಯ ದಿನದಂತಿಲ್ಲ. ರಾಜ್ಯದ ಮುಖ್ಯಮಂತ್ರಿ, ಸಚಿವರು, ಹಿರಿಯ ಅಧಿಕಾರಿಗಳು ಒಂದೇ ಕಡೆ ಸೇರುವ ಹಿನ್ನೆಲೆಯಲ್ಲಿ ನಗರಕ್ಕೆ ವಿಶೇಷ ಸಿಂಗಾರ. ವಿಮಾನ ನಿಲ್ದಾಣದಿಂದ ಸಂಪುಟ ಸಭೆ ನಡೆಯುವ ಪಡೀಲ್‌ ಪ್ರಜಾಸೌಧದವರೆಗಿನ ಪ್ರಮುಖ ಮಾರ್ಗಗಳಲ್ಲಿ ಸ್ವಚ್ಛತೆ, ರಸ್ತೆ ದುರಸ್ತಿ, ಸಂಚಾರ ವ್ಯವಸ್ಥೆ, ಭದ್ರತೆ—ಎಲ್ಲವೂ ಚುರುಕಾಗಿದೆ. ಸೆ.18ರಂದು ಮಂಗಳೂರಿನ ಪ್ರಜಾಸೌಧದಲ್ಲಿ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ ನಡೆಯುತ್ತಿದ್ದು, ಕರಾವಳಿಯ ಹಲವು ವರ್ಷಗಳ ಬೇಡಿಕೆಗಳು ಮತ್ತೊಮ್ಮೆ ಸರ್ಕಾರದ ಮೇಜಿನ ಮೇಲಿವೆ.

    ಮಂತ್ರಿಗಳು ಬರುವ ದಾರಿ… ತಕ್ಷಣ ‘ಸ್ಮಾರ್ಟ್’!

    ಇಲ್ಲಿ ಮಂಗಳೂರಿಗರ ಒಂದು ಸಹಜ ಪ್ರಶ್ನೆ ಕೇಳಿಬರುತ್ತಿದೆ.

    ಸಚಿವರು ಬರುವ ದಾರಿ ಎಂದಾಕ್ಷಣ ರಸ್ತೆ ಪ್ಯಾಚ್‌ಅಪ್‌, ಸ್ವಚ್ಛತೆ, ಬ್ಯಾನರ್‌, ಬ್ಯಾರಿಕೇಡ್‌ ಎಲ್ಲವೂ ತಕ್ಷಣ ಸಿದ್ಧವಾಗುತ್ತದೆ. ಹಾಗಾದರೆ ಇದೇ ವೇಗ ನಗರದ ಪ್ರತಿಯೊಂದು ರಸ್ತೆಗೆ ಸಿಗಬಾರದೇ?ಮಂತ್ರಿಗಳು ತಿಂಗಳಿಗೆ ಒಮ್ಮೆ ಮಂಗಳೂರಿಗೆ ಬಂದು ನಗರದ ನಿಜವಾದ ರಸ್ತೆಗಳನ್ನೇ ನೋಡಿದರೆ ಹೇಗೆ?ಆಗಾಗ ಬರ್ತಾ ಇರಿ ಸ್ವಲ್ಪ ಸುಧಾರಿಸಬಹುದು…!
    ಎಂಬುದು ಈಗ ಸಾರ್ವಜನಿಕರ ವ್ಯಂಗ್ಯ ಮಿಶ್ರಿತ ಪ್ರಶ್ನೆ.

    ಸಂಪುಟ ಸಭೆಗಾಗಿ ಪ್ರಮುಖ ಮಾರ್ಗಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಳು ನಡೆಯುವುದು ಆಡಳಿತಾತ್ಮಕವಾಗಿ ಅರ್ಥವಾಗಬಹುದು. ಆದರೆ, ಸಾಮಾನ್ಯ ದಿನಗಳಲ್ಲಿ ಗುಂಡಿ, ಒಳಚರಂಡಿ, ಕಸ, ಪಾದಚಾರಿ ಸಮಸ್ಯೆ ಎದುರಿಸುವ ಜನರಿಗೆ ಇದೇ ಆಡಳಿತದ ವೇಗ ಪ್ರತಿದಿನವೂ ಬೇಕಾಗಿದೆ.

    ಪಾಲಿಕೆಗೆ ದುಡ್ಡೆ ದುಡ್ಡು….!!ಯಾಕಂದ್ರೇ…ಫ್ಲೆಕ್ಸ್‌ಗಳ ದರ್ಬಾರು… !!ನಿಯಮ ಯಾರಿಗೆ?

    ಹಬ್ಬ, ಉತ್ಸವ, ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಅನಧಿಕೃತ ಬ್ಯಾನರ್‌–ಫ್ಲೆಕ್ಸ್‌ಗಳಿಗೆ ದಂಡ, ತೆರವು ಕಾರ್ಯಾಚರಣೆ ನಡೆಯುತ್ತದೆ. ಆದರೆ ಸಂಪುಟ ಸಭೆಯ ಸ್ವಾಗತದ ಹೆಸರಿನಲ್ಲಿ ಪ್ರಮುಖ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ದೊಡ್ಡ ಪ್ರಮಾಣದ ಫ್ಲೆಕ್ಸ್‌ಗಳನ್ನು ನೋಡಿದಾಗ, “ನಿಯಮ ಎಲ್ಲರಿಗೂ ಒಂದೇನಾ?” ಎಂಬ ಪ್ರಶ್ನೆ ಮೂಡುವುದು ಸಹಜ.

    ಮಂಗಳೂರು ಮಹಾನಗರ ಪಾಲಿಕೆಗೆ ಫ್ಲೆಕ್ಸ್‌ಗಳಿಂದ ಆದಾಯ ಬರುತ್ತದೆ ಎಂಬುದಾದರೆ, ನಗರದಲ್ಲಿ ಇಷ್ಟೊಂದು ಫ್ಲೆಕ್ಸ್‌ಗಳಿಗೆ ಅವಕಾಶ ನೀಡಿದಾಗ ಪಾಲಿಕೆಗೆ ನಿಜವಾಗಿ ಎಷ್ಟು ಆದಾಯ? ಅದರ ಲೆಕ್ಕ ಸಾರ್ವಜನಿಕವಾಗಿದೆಯೇ? ಎಂಬ ಪ್ರಶ್ನೆಯೂ ಕೇಳಬೇಕಾಗುತ್ತದೆ.

    Also Read  ಗ್ಯಾಸ್ ಸೋರಿಕೆ ಎಷ್ಟು ಅಪಾಯಕಾರಿ? ಕ್ಷಣದ ನಿರ್ಲಕ್ಷ್ಯ ಮನೆ ಸುಟ್ಟು, ಶೇ.60 ಸುಟ್ಟ ಗಾಯಾಳುವಿಗೆ ಶಾಸಕ ಭರತ್ ಶೆಟ್ಟಿ ನೆರವಿನ ಭರವಸೆ..

    ಸಾರ್ವಜನಿಕ ಸ್ಥಳದ ಸೌಂದರ್ಯ, ಸಂಚಾರ ಸುರಕ್ಷತೆ ಮತ್ತು ನಿಯಮ ಪಾಲನೆ—ಇವೆಲ್ಲವನ್ನೂ ಕಾಪಾಡಿಕೊಂಡೇ ರಾಜಕೀಯ ಅಥವಾ ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ನಡೆಯಬೇಕು ಎಂಬುದು ಜನರ ನಿರೀಕ್ಷೆ.

    ಮಂಗಳೂರು ಸಿದ್ಧವಾಗಿದೆ… ಈಗ ಸರ್ಕಾರದ ಸರದಿ

    ಸಭೆಗೆ ಮುನ್ನವೇ ಪೊಲೀಸರು ಸಂಚಾರ ಮಾರ್ಗ ಬದಲಾವಣೆ ಮತ್ತು ಪರ್ಯಾಯ ಮಾರ್ಗಗಳ ವ್ಯವಸ್ಥೆ ಪ್ರಕಟಿಸಿದ್ದಾರೆ.ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಮಾರ್ಗ ಸಿದ್ಧ…,
    ಸಂಪುಟ ಸಭೆಯ ಸ್ಥಳ ಸಿದ್ಧ…..
    ಭದ್ರತಾ ವ್ಯವಸ್ಥೆ ಸಿದ್ಧ….
    ಅಧಿಕಾರಿಗಳ ಓಡಾಟ ಶುರುವಾಗಿದೆ.
    ಸಚಿವರ ಆಗಮನಕ್ಕೆ ನಗರ ಸಜ್ಜಾಗಿದೆ.ಈ ಸಿದ್ಧತೆಯ ನಡುವೆ “ಕರಾವಳಿಯ ಅಭಿವೃದ್ಧಿಯ ಕಡತಗಳೂ ಇದೇ ರೀತಿ ಸಿದ್ಧವಾಗಿವೆಯೇ?” 

    ಒಳಚರಂಡಿಗೆ ₹350 ಕೋಟಿ? ಮೊದಲ ದೊಡ್ಡ ನಿರೀಕ್ಷೆ

    ಮಂಗಳೂರಿನ ಅತ್ಯಂತ ಮೂಲಭೂತ ಸಮಸ್ಯೆಗಳಲ್ಲೊಂದು ಒಳಚರಂಡಿ ವ್ಯವಸ್ಥೆ. ನಗರದಲ್ಲಿನ ಯುಜಿಡಿ ಜಾಲದ ಸುಧಾರಣೆಗೆ ₹350 ಕೋಟಿ ಅನುದಾನದ ಪ್ರಸ್ತಾವನೆ ಸಂಪುಟದ ಮುಂದೆ ಹೋಗಿದ್ದು, ಅನುಮೋದನೆಯ ನಿರೀಕ್ಷೆ ಇದೆ. ನಗರದಲ್ಲಿ ಸುಮಾರು 35% ಪ್ರದೇಶಕ್ಕೆ ಇನ್ನೂ ಯುಜಿಡಿ ವ್ಯಾಪ್ತಿ ಇಲ್ಲ ಎಂಬುದನ್ನೂ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಹೀಗಾಗಿ ಈ ಘೋಷಣೆ ಕೇವಲ ಕಡತದಲ್ಲೇ ಉಳಿಯದೆ, ಯಾವ ವಾರ್ಡ್‌ನಲ್ಲಿ ಯಾವ ಕೆಲಸ, ಎಷ್ಟು ಹಣ, ಯಾವ ಗಡುವು? ಎಂಬ ಸ್ಪಷ್ಟ ಕಾರ್ಯಯೋಜನೆಯಾಗಿ ಬದಲಾಗಬೇಕಿದೆ.

    ಕರಾವಳಿಯ ಆರ್ಥಿಕತೆಗೆ ನಾಲ್ಕು ಬಾಗಿಲು

    ರಸ್ತೆ, ರೈಲು, ವಿಮಾನ ಮತ್ತು ಬಂದರು—ನಾಲ್ಕೂ ಸಂಪರ್ಕ ವ್ಯವಸ್ಥೆ ಹೊಂದಿರುವ ಮಂಗಳೂರನ್ನು ಕರಾವಳಿಯ ಆರ್ಥಿಕ ಕೇಂದ್ರವಾಗಿ ಬೆಳೆಸುವ ಸಾಧ್ಯತೆ ದೊಡ್ಡದು.

    ಬಂದರು ಆಧಾರಿತ ಕೈಗಾರಿಕೆ, ಲಾಜಿಸ್ಟಿಕ್ಸ್‌, ಮೀನುಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಮತ್ತು ಐಟಿ—ಇವುಗಳನ್ನೆಲ್ಲ ಒಂದೇ ಅಭಿವೃದ್ಧಿ ಚೌಕಟ್ಟಿನಲ್ಲಿ ಜೋಡಿಸುವ ಅಗತ್ಯವಿದೆ.

    KCCI ಕೂಡ ಕೈಗಾರಿಕಾ ಪ್ರದೇಶಗಳ ರಸ್ತೆ, ಒಳಚರಂಡಿ ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿಯಂತಹ ಹಲವು ದೀರ್ಘಕಾಲದ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆದಿದೆ.

    ಐಟಿ ಪಾರ್ಕ್‌: ಯುವಕರು ಹೊರಗೆ ಹೋಗುವುದಕ್ಕೆ ಬ್ರೇಕ್ ಯಾವಾಗ?

    ಕರಾವಳಿಯ ಕಾಲೇಜುಗಳಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರಕ್ಕೆ ಪದವಿ ಪಡೆದು ಹೊರಬರುತ್ತಾರೆ. ಆದರೆ ಸ್ಥಳೀಯವಾಗಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಯಾಗದಿದ್ದರೆ ಪ್ರತಿಭೆ ಬೆಂಗಳೂರಿಗೆ, ಪುಣೆಗೆ, ಹೈದರಾಬಾದ್‌ಗೆ, ವಿದೇಶಕ್ಕೆ ಹೋಗುವುದು ಮುಂದುವರಿಯುತ್ತದೆ.

    Also Read  ಮೈಕ್ರೋಸಾಫ್ಟ್ ಸರ್ವರ್ ಕ್ರಾಶ್: ಕ್ಷಣಕಾಲ ಸ್ತಬ್ಧವಾದ ಜಗತ್ತು!

    ಮಂಗಳೂರಿಗೆ ಐಟಿ ಪಾರ್ಕ್‌ ಬೇಕು ಎನ್ನುವುದು ಹೊಸ ಬೇಡಿಕೆಯಲ್ಲ.
    ಇದು ಕೇವಲ ಕಟ್ಟಡ ನಿರ್ಮಾಣದ ಯೋಜನೆಯಾಗದೆ, ಸ್ಟಾರ್ಟ್‌ಅಪ್‌, ಟೆಕ್ ಕಂಪನಿ, ಸಂಶೋಧನೆ ಮತ್ತು ಸ್ಥಳೀಯ ಯುವಕರ ಉದ್ಯೋಗಕ್ಕೆ ಸಂಪರ್ಕ ಕಲ್ಪಿಸುವ ಸಮಗ್ರ ಯೋಜನೆಯಾಗಬೇಕಿದೆ.

    ಬೀಚ್‌ಗಳಿವೆ… ಆದರೆ ಪ್ರವಾಸೋದ್ಯಮದ ಪೂರ್ಣ ಸಾಮರ್ಥ್ಯ ಬಳಸಲಾಗಿದೆಯೇ?

    ಅರಬ್ಬಿ ಸಮುದ್ರದ ಉದ್ದನೆಯ ಕರಾವಳಿ, ನದಿಗಳು, ಹಿನ್ನೀರು, ಬೀಚ್‌ಗಳು, ಪಶ್ಚಿಮಘಟ್ಟದ ಸಂಪರ್ಕ—ಕರ್ನಾಟಕದ ಕರಾವಳಿಗೆ ಪ್ರವಾಸೋದ್ಯಮದಲ್ಲಿ ಅಪಾರ ಅವಕಾಶವಿದೆ.

    ಆದರೆ ಪ್ರವಾಸೋದ್ಯಮ ಎಂದರೆ ಕೇವಲ ಬೀಚ್‌ಗೆ ಲೈಟ್ ಹಾಕುವುದು ಅಲ್ಲ.

    ಸ್ವಚ್ಛತೆ, ಸುರಕ್ಷತೆ, ಪಾರ್ಕಿಂಗ್, ಸಾರ್ವಜನಿಕ ಶೌಚಾಲಯ, ಜೀವರಕ್ಷಕ ವ್ಯವಸ್ಥೆ, ಸಂಪರ್ಕ ರಸ್ತೆ, ಸ್ಥಳೀಯ ಉದ್ಯೋಗ ಮತ್ತು ಪರಿಸರ ಸಂರಕ್ಷಣೆ—ಇವೆಲ್ಲ ಒಟ್ಟಿಗೆ ಬಂದಾಗ ಮಾತ್ರ ಕರಾವಳಿ ಪ್ರವಾಸೋದ್ಯಮ ಬೆಳೆಯಲಿದೆ.ಇದರಲ್ಲಿ ಸಾರ್ವಜನಿಕರ ಪಾತ್ರವೂ ಅಷ್ಟೇ ಮುಖ್ಯ….!

    ಯಕ್ಷಗಾನ, ಕಂಬಳ, ದೈವಾರಾಧನೆ… ಸಂಸ್ಕೃತಿಗೂ ಆರ್ಥಿಕ ಬೆಲೆ ಇದೆ

    ಕರಾವಳಿಯ ಸಂಸ್ಕೃತಿ ಕೇವಲ ಆಚರಣೆ ಅಲ್ಲ; ಅದರ ಸುತ್ತ ದೊಡ್ಡ ಪ್ರಮಾಣದ ಸ್ಥಳೀಯ ಆರ್ಥಿಕ ಚಟುವಟಿಕೆಯೂ ಇದೆ.

    ಯಕ್ಷಗಾನ, ಕಂಬಳ, ದೈವಾರಾಧನೆ, ಕರಾವಳಿ ಆಹಾರ ಸಂಸ್ಕೃತಿ—ಇವುಗಳನ್ನು ಗೌರವಿಸುವುದರ ಜೊತೆಗೆ ಸಾಂಸ್ಕೃತಿಕ ಪ್ರವಾಸೋದ್ಯಮದ ಕ್ಯಾಲೆಂಡರ್ ರೂಪಿಸಿದರೆ ಕಲಾವಿದರಿಗೆ, ಸ್ಥಳೀಯ ವ್ಯಾಪಾರಿಗಳಿಗೆ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಅವಕಾಶ ಸೃಷ್ಟಿಯಾಗಬಹುದು.

    ಸಾಂಪ್ರದಾಯಿಕ ಕಂಬಳಕ್ಕೆ ವಿಶೇಷ ಅನುದಾನ ನೀಡಬೇಕು ಎಂಬ ಬೇಡಿಕೆಯೂ ಈಗ ಸಂಪುಟ ಸಭೆಯ ಮುನ್ನ ಕೇಳಿಬಂದಿದೆ.

    ತುಳು ಭಾಷೆ: ಭಾವನೆಯಿಂದ ನಿರ್ಧಾರದತ್ತ?

    ಕರಾವಳಿಯ ಬಹುಕಾಲದ ಬೇಡಿಕೆಗಳಲ್ಲಿ ತುಳು ಭಾಷೆಗೆ ಅಧಿಕೃತ ಮಾನ್ಯತೆ ಪ್ರಮುಖವಾದದ್ದು. ಸಂಪುಟ ಸಭೆ ಹಿನ್ನೆಲೆಯಲ್ಲಿ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ತುಳು ಸಂಘಟನೆಗಳು ಅಭಿಯಾನವನ್ನೂ ನಡೆಸಿವೆ.

    ಇಲ್ಲಿ ಜನರ ನಿರೀಕ್ಷೆ ಸ್ಪಷ್ಟ—ವರ್ಷಗಳಿಂದ ಕೇಳಿಬರುತ್ತಿರುವ ಬೇಡಿಕೆಗಳ ಬಗ್ಗೆ ಸರ್ಕಾರದ ನಿಲುವು ಏನು ಎಂಬುದು ಸ್ಪಷ್ಟವಾಗಿ ಹೊರಬರಬೇಕು.

    ಮೀನುಗಾರಿಕೆಗೂ ಅಭಿವೃದ್ಧಿಯ ಪಾಲು ಬೇಕು

    ಮೀನುಗಾರಿಕೆ ಕರಾವಳಿಯ ಆರ್ಥಿಕತೆಯ ಪ್ರಮುಖ ಆಧಾರ. ಬಂದರು ಮತ್ತು ಮೀನುಗಾರಿಕಾ ಮೂಲಸೌಕರ್ಯ ಆಧುನೀಕರಣ, ಮೀನುಗಾರರ ಸುರಕ್ಷತೆ, ಮಾರುಕಟ್ಟೆ ವ್ಯವಸ್ಥೆ, ಕೋಲ್ಡ್‌ಚೈನ್‌, ಸಂಸ್ಕರಣಾ ಘಟಕಗಳು—ಇವುಗಳಿಗೆ ಆದ್ಯತೆ ಅಗತ್ಯ.

    Also Read  ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?

    ಮಲ್ಪೆ ಬಂದರು ಆಧುನೀಕರಣ ಮತ್ತು ಮೀನುಗಾರಿಕೆ ಕ್ಷೇತ್ರ ಬಲಪಡಿಸುವ ಕುರಿತು ಸರ್ಕಾರ ಈಗಾಗಲೇ ಗಮನ ಹರಿಸುವುದಾಗಿ ಸಚಿವರು ಹೇಳಿದ್ದಾರೆ.

    ಮರಳು ನೀತಿ, ಕೈಗಾರಿಕೆ, ಸಂಪರ್ಕ… ಹಳೆಯ ಬೇಡಿಕೆಗಳಿಗೆ ಹೊಸ ದಿನಾಂಕ ಬೇಕು

    ಕರಾವಳಿಗೆ ಪ್ರತ್ಯೇಕ ಮರಳು ನೀತಿ, ಕೈಗಾರಿಕಾ ಪ್ರದೇಶಗಳಿಗೆ ಉತ್ತಮ ಮೂಲಸೌಕರ್ಯ, ಬಂದರು ಸಂಪರ್ಕ, ರೈಲು ಮತ್ತು ರಸ್ತೆ ಯೋಜನೆಗಳು—ಇವೆಲ್ಲ ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ವಿಷಯಗಳು.

    ಹೀಗಾಗಿ ಈ ಬಾರಿ ಜನರಿಗೆ ಬೇಕಿರುವುದು ಮತ್ತೊಂದು ಘೋಷಣೆ ಮಾತ್ರವಲ್ಲ.

    ಘೋಷಣೆ → ಹಣ → ಟೆಂಡರ್ → ಕಾಮಗಾರಿ → ಗಡುವು → ಪೂರ್ಣಗೊಳಿಸುವಿಕೆ.

    ಈ ಸರಪಳಿಯ ಪ್ರತಿಯೊಂದು ಹಂತಕ್ಕೂ ಹೊಣೆಗಾರಿಕೆ ನಿಗದಿಯಾದಾಗ ಮಾತ್ರ ಸಂಪುಟ ಸಭೆಯ ನಿರ್ಧಾರ ನೆಲಮಟ್ಟಕ್ಕೆ ಇಳಿಯುತ್ತದೆ.

    “ಮಂಗಳೂರು ತಿಂಗಳಿಗೆ ಒಮ್ಮೆ ನೋಡಿಬನ್ನಿ!”

    ಸಂಪುಟ ಸಭೆಯ ಹಿನ್ನೆಲೆಯಲ್ಲಿ ಇಂದು ನಗರ ಸಿಂಗಾರಗೊಂಡಿದೆ. ರಸ್ತೆಗಳು ಗಮನ ಸೆಳೆಯುತ್ತಿವೆ. ಅಧಿಕಾರಿಗಳ ಓಡಾಟ ಹೆಚ್ಚಾಗಿದೆ. ಪ್ರಮುಖ ಮಾರ್ಗಗಳಲ್ಲಿ ವ್ಯವಸ್ಥೆಗಳು ವೇಗ ಪಡೆದಿವೆ.

    “ಸಂಪುಟ ಸಭೆಗಾಗಿಯೇ ಮಂಗಳೂರು ಹೀಗೆ ಸಿದ್ಧವಾಗಬೇಕಿಲ್ಲ…
    ಸಾಮಾನ್ಯ ದಿನದಲ್ಲೂ ಇದೇ ಕಾಳಜಿ ಇರಲಿ.”

    “ಮಂತ್ರಿಗಳು ವರ್ಷಕ್ಕೊಮ್ಮೆ ಅಲ್ಲ, ತಿಂಗಳಿಗೆ ಒಮ್ಮೆ ಮಂಗಳೂರಿಗೆ ಬಂದು ಜನರ ರಸ್ತೆಯಲ್ಲಿ ಓಡಾಡಲಿ. ಆಗ ಬಹುಶಃ ಕಡತದಲ್ಲಿರುವ ಸಮಸ್ಯೆಗಳು ರಸ್ತೆಯ ಮೇಲೆಯೇ ಕಾಣಿಸಬಹುದು!”

    ಕಡಲನಗರಿಯ ನಿರೀಕ್ಷೆ ಒಂದೇ—ಸಭೆ ಮುಗಿದರೂ ಕೆಲಸ ಶುರುವಾಗಬೇಕು

    ಇಂದಿನ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯುತ್ತಿದೆ. ಕರಾವಳಿಯ ಬೇಡಿಕೆಗಳು ದೊಡ್ಡ ಪಟ್ಟಿಯಲ್ಲಿವೆ. ಪ್ರವಾಸೋದ್ಯಮದಿಂದ ಮೀನುಗಾರಿಕೆವರೆಗೆ, ಐಟಿಯಿಂದ ಕೈಗಾರಿಕೆವರೆಗೆ, ಭಾಷೆಯಿಂದ ಸಂಸ್ಕೃತಿವರೆಗೆ, ರಸ್ತೆ–ರೈಲಿನಿಂದ ನಗರ ಮೂಲಸೌಕರ್ಯವರೆಗೆ ಹಲವು ಕ್ಷೇತ್ರಗಳು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿವೆ.

    ಫ್ಲೆಕ್ಸ್‌ಗಳು ಇಳಿದ ಮೇಲೂ ಮಂಗಳೂರಿನ ರಸ್ತೆಗಳು ಹೀಗೆಯೇ ಸಿದ್ಧವಾಗಿರಲಿ; ಸಂಪುಟ ಸಭೆಯ ಘೋಷಣೆಗಳು ಕಡತದಲ್ಲಲ್ಲ, ಕಾಮಗಾರಿಯಲ್ಲಿ ಕಾಣಿಸಲಿ.
    ಕಡಲನಗರಿಯ ನಿರೀಕ್ಷೆ ಒಂದೇ—ಮಂತ್ರಿಗಳು ಬರುವ ದಿನವಲ್ಲ, ಪ್ರತಿದಿನವೂ ಆಡಳಿತದ ಕಣ್ಣು ಮಂಗಳೂರಿನ ಮೇಲಿರಲಿ!

    ##Mangaluru #CabinetMeeting #KarnatakaCabinet #MangaloreDevelopment #CoastalKarnataka #Karavali #MangaluruNews #KarnatakaNews #CoastalDevelopment #TourismDevelopment

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೊಡಗು ಬ್ರೇಕಿಂಗ್: ಮಾಜಿ ಸೈನಿಕನ ಮನೆಗೆ ನುಗ್ಗಿದ ಕಳ್ಳರು – ಚಿನ್ನ, ನಗದು ಸೇರಿ ಅಮೂಲ್ಯ ವಸ್ತುಗಳ ದೋಚಾಟ
    ಬಾಲಗರ್ಭಿಣಿಯರ ಸಂಖ್ಯೆ 5975….!!
    ಫೋನ್‌ನಲ್ಲೇ ಉಚಿತ ಟಿವಿ ಆಸೆಗೆ ₹1.78 ಲಕ್ಷ ಖಾಲಿ! ಒಂದು ಕ್ಲಿಕ್‌ನಿಂದಲೇ ಖಾತೆಗೆ ಕನ್ನ!
    ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
    ಅಜಿತ್ ಅಗರ್ಕರ್ ಗೆ ಜಾಕ್ಪಾಟ್
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
    “ಅಮ್ಮಾ… ಉಸಿರಾಡಲು ಆಗ್ತಿಲ್ಲ!” — 2 ಗಂಟೆಯ ಕೊನೆಯ ಕರೆ ಬಳಿಕ 4:30ಕ್ಕೆ ಶವ… ನಿಮಿಷಾಳಿಗೆ ಏನಾಯ್ತು?
    ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    ಹೆಡ್‌ಲೈಟ್ ಇಲ್ಲ… ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!
    ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
    ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ
    ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
    ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
    ಭಾನುವಾರ ಬ್ಯಾಂಕ್ ಓಪನ್! ಸೆ.28ರಿಂದ 3 ದಿನ ಮುಷ್ಕರ
    ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
    ನಿರ್ಮಾಣ ಹಂತದ ಗಾಲ್ಫ್ ಕೋರ್ಸ್‌ನ ಕೆರೆಯಲ್ಲಿ ತೇಲಿದ ಮೂವರು ಬಾಲಕರ ಶವಗಳು..!
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
    ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಹರಿಹರದಲ್ಲಿ ಪ್ಲಾನ್! ಬಂಧಿತ ಸುಹೇಲ್ ಬೆನ್ನತ್ತಿದ ಇಂಟೆಲಿಜೆನ್ಸ್; 10 ಜನರ ಟೀಮ್‌ಗಾಗಿ ತೀವ್ರ ಶೋಧ!
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    “ಅಂಕಗಳು ಭವಿಷ್ಯ ನಿರ್ಧರಿಸುವುದಿಲ್ಲ” B.Tech ನಲ್ಲಿ 24 ವಿಷಯ ಫೇಲ್ ಆದರೂ IPS ಆದ ಸಮೀರ್ ಶರ್ಮಾ
    UAEಯಲ್ಲಿ ಉಡುಪಿ ವ್ಯಕ್ತಿಯ ನಿಗೂಢ ಸಾವು – ಪತ್ನಿ, ಮಗ ಎಲ್ಲಿದ್ದಾರೆ?UAE ,ಭಾರತದಲ್ಲಿ?
    ನಾಟೆಕಲ್ ತಿರುವಿನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ: ಬಸ್‌ನಡಿ ಸಿಲುಕಿ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವು
    ಗುರುವಾಯನಕೆರೆ ಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ
    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    ಟೇಕಾಫ್‌ ಬಳಿಕ RAF ಯುದ್ಧವಿಮಾನ ಪತನ: ಪೈಲಟ್‌ಗಳು ಪಾರು