📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಶಿರ್ತಾಡಿ ಭಾಗದಲ್ಲಿ ಮರಗಳ್ಳತನ ಆರೋಪ:  ತನಿಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹ

    ಶಿರ್ತಾಡಿ: ಶಿರ್ತಾಡಿ ಗ್ರಾಮ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ದೈವಸ್ಥಾನಗಳ ಹೆಸರಿನಲ್ಲಿ ಸರ್ಕಾರಿ ಜಾಗದಲ್ಲಿರುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ತನಿಖೆ ನಡೆಸಿ, ಮರಗಳ ಕಡಿತ ಹಾಗೂ ಸಾಗಾಟದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಶಿರ್ತಾಡಿ ಕೋಟಿ ಮನೆಯೊಡೆಯನ ಹೆಸರನ್ನು ಉಲ್ಲೇಖಿಸಿ, ಅವರ ಸಹಕಾರದಿಂದಲೇ ಈ ರೀತಿಯ ಮರಗಳ್ಳತನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ದೃಢೀಕರಣವಾಗಿಲ್ಲ.

    ಇದೇ ವೇಳೆ, ಅರಣ್ಯ ಇಲಾಖೆಗೆ ದೂರು ನೀಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿರುವ ಪರಿಸ್ಥಿತಿಯೂ ಇದೆ ಎಂದು ದೂರಲಾಗಿದೆ. ಶಿರ್ತಾಡಿ ಗ್ರಾಮದಲ್ಲಿರೋ ಮನೆಗೆ ಸಂಬಂಧಿಸಿದ ಕುಮ್ಕಿ ಹಾಗೂ ಪಟ್ಟಾ ಜಾಗದಲ್ಲಿಯೂ ಮರಗಳನ್ನು ಕಡಿದು ಸಾಗಿಸಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ.

    “ನಾನು ಸಾಮಾನ್ಯವಾಗಿ ಈ ರೀತಿಯ ವಿಚಾರಗಳ ಕುರಿತು ಬರೆಯುವವನಲ್ಲ. ಆದರೆ ನಮ್ಮ ಹಿರಿಯರ ಜಾಗ ಶಿರ್ತಾಡಿ ಗ್ರಾಮದಲ್ಲಿದ್ದು, ಅಲ್ಲಿಯೂ ಮರಗಳು ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇನೆ” ಎಂದು ಶಿರ್ತಾಡಿಯ ಸುದತ್ತ ಜೈನ್ ತಿಳಿಸಿದ್ದಾರೆ.

    ಸರ್ಕಾರಿ ಜಾಗ, ದೈವಸ್ಥಾನಗಳಿಗೆ ಸಂಬಂಧಿಸಿದ ಪ್ರದೇಶಗಳು, ಕುಮ್ಕಿ ಹಾಗೂ ಪಟ್ಟಾ ಜಾಗಗಳಲ್ಲಿ ಮರಗಳನ್ನು ಕಡಿದಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಯಾವ ಪ್ರದೇಶದಲ್ಲಿ ಯಾವ ಮರ ಕಡಿತಗೊಂಡಿದೆ, ಮರಗಳನ್ನು ಎಲ್ಲಿಗೆ ಸಾಗಿಸಲಾಗಿದೆ ಹಾಗೂ ಇದರಲ್ಲಿ ಯಾರ ಪಾತ್ರವಿದೆ ಎಂಬುದನ್ನು ತನಿಖೆ ಮೂಲಕ ಪತ್ತೆಹಚ್ಚಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಪರಿಸರ ಹಾಗೂ ಅರಣ್ಯ ಸಂಪತ್ತಿನ ನಾಶಕ್ಕೆ ಕಾರಣರಾದವರು ಯಾರೇ ಆಗಿದ್ದರೂ, ತನಿಖೆಯ ಮೂಲಕ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

    ಈ ಕುರಿತು ಅರಣ್ಯ ಇಲಾಖೆಯ ಮೇಲಧಿಕಾರಿಗಳು ಕೂಡಲೇ ಗಮನಹರಿಸಿ, ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ಮಂಗಳೂರು ಇದರ ಕುಂದು ಕೊರತೆ ಸಮಿತಿಯ ಸದಸ್ಯರಾದ ಸುಧತ್ ಜೈನ್ ಶಿರ್ತ್ತಾಡಿ ಆಗ್ರಹಿಸಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬರಾಯಿಪುರ 12 ವರ್ಷದ ಬಾಲಕಿಯ ಅತ್ಯಾಚಾರದ ಕ್ರೌರ್ಯಕ್ಕಿಂತ ಈಗ ಎನ್‌ಕೌಂಟರ್‌ ಚರ್ಚೆಯ ಕೇಂದ್ರ!?ಆರೋಪಿ ಒಟ್ಟಿಗೆ … ಎಲ್ಲಾ ಸತ್ಯವೂ ಸತ್ತಿತೇ?
    ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ
    ಗ್ರಾಮೀಣ ಕೋಟಾಕ್ಕೆ ಒಳಮೀಸಲು: ಅವಕಾಶವೇ? ರಾಜಕೀಯದ ಮತ್ತೊಂದು ಲೆಕ್ಕಾಚಾರವೇ?“ಗ್ರಾಮೀಣ ಮಕ್ಕಳಿಗೆ 7.5% ಕೋಟಾ; ಆದರೆ ಗುಣಮಟ್ಟದ ಶಿಕ್ಷಣಕ್ಕೆ ಎಷ್ಟು %?”
    ಒಬ್ಬರೇ ಹಾಗಾಗಿ ಕಾರಿನಲ್ಲಿ ಯಾಕೆ? ಫ್ಲೈಟ್ ಫೇರ್ ಜಾಸ್ತಿ ಇದೆ..ಟ್ರೈನ್ ಲೇಟ್ ಆಗುತ್ತೆ..so ಹೆಗೋಗೋಣ….!? ಹೀಗೂ ಹೋಗ್ಬಹುದು ತಿಳ್ಕೊಳ್ಳಿ..
    ಫೇಸ್‌ಬುಕ್ ಜಾಹೀರಾತು ನಂಬಿ ₹32.68 ಲಕ್ಷ ಕಳೆದುಕೊಂಡ ಕಾರ್ಕಳದ ವ್ಯಕ್ತಿ!
    “ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
    ಸತೀಶ್’ ಆಗಿ ಹೋದವ, ‘ಸಲೀಂ’ ಆಗಿ ವಾಪಸ್ …!26 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಮಗನ ಭಾವುಕ ಕಥೆ
    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    “ಕುನಾಲ್ ಶಾ ವಾಟ್ಸಾಪ್ ಗ್ಲೋಬಲ್ ಹೆಡ್! ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸಾಲಿಗೆ ಮತ್ತೊಬ್ಬ ಭಾರತೀಯನ ಸೇರ್ಪಡೆ.
    ಮಂಗಳೂರು ಏರ್‌ಪೋರ್ಟ್ ಬಳಿ ಬರ್ತಿದೆ ಲಕ್ಸುರಿ ಇಂಟರ್‌ನ್ಯಾಷನಲ್ ಹೋಟೆಲ್!
    ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
    ಸರ್ಕಾರಿ ಮಕ್ಕಳ ಶೂ ಕಳಪೆ…!ಸರ್ಕಾರಿ ಯೋಜನೆಗಳಲ್ಲಿ ಗುಣಮಟ್ಟ ಕೊರತೆಗೆ ಪರಿಹಾರವೇ ಇಲ್ವಾ ?
    ಅಣ್ಣಾಮಲೈ ಸಿಡಿಸಿದ ಬಾಂಬ್: ವಿಜಯ್ ಸರ್ಕಾರದ ಸಚಿವರ ವಿರುದ್ಧ 2–4% ಕಿಕ್‌ಬ್ಯಾಕ್ ಆರೋಪ!
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ದಿವಾ ಉತ್ಕರ್ಷ ಬೆಂಗಳೂರಿನ ಕೇವಲ 17 ವರ್ಷದ ಹೆಣ್ಣುಮಗಳಕಾರ್ಯಕ್ಕೆ ಪ್ರಪಂಚವೇ ಫಿದಾ…ಫೋರ್ಬ್ಸ್ ಟಾಪ್ ಪಟ್ಟಿಯಲ್ಲಿ ಯುವಸ್ಪೂರ್ತಿ ಹೆಸರು ಯಾಕೆ ಬಂತು ..!?
    ಖಾಸಗಿ ಶಿಕ್ಷಕರಿಗೂ ಸಮಾನ ವೇತನ–ಸಾಮಾಜಿಕ ಭದ್ರತೆ?
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    “ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    ಪ್ರಕೃತಿಯ ಮುನಿಸಿಗೆ ಕರಗುತ್ತಿದೆ ಯುರೋಪ್ ….!ತಂತ್ರಜ್ಞಾನದ ಅಹಂಕಾರವನ್ನು ಸುಟ್ಟು ಬೂದಿ ಮಾಡುತ್ತಿರುವ ಯುರೋಪ್ ಹೀಟ್‌ವೇವ್!
    ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ಶಿಕ್ಷಕರು ಹೊಡೆಯುತ್ತಾರೆಂಬ ಭಯಕ್ಕೆ ಮನೆ ಬಿಟ್ಟ 9ನೇ–10ನೇ ತರಗತಿ ವಿದ್ಯಾರ್ಥಿನಿಯರು..!ಎಲ್ಲಿದ್ದರು ಗೊತ್ತಾ..!
    ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಳಿಸಬಹುದಾ? ಈಗಲೇ ಎಚ್ಚರ!
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ! 
    ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …
    ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.