📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಅಕ್ಕಾ, ಮನೆಗೆ ಹೋಗೋಣ” ಎಂದು ಅಕ್ಕನನ್ನು ಕರೆತರಲು ಬಂದ ಅಪೂರ್ವ… ಕೆಲವೇ ಕ್ಷಣಗಳಲ್ಲಿ ಕಬ್ಬಿಣದ ಗೇಟ್ ಅಡಿಯಲ್ಲಿ ಅಂತ್ಯ

    ಕುಶಾಲನಗರದಲ್ಲಿ ಹೃದಯವಿದ್ರಾವಕ ದುರಂತ: ಶಾಲೆಯ ಶಿಥಿಲಗೊಂಡ ಕಬ್ಬಿಣದ ಗೇಟ್‌ ಬಿದ್ದು 4 ವರ್ಷದ ಬಾಲಕಿ ಅಪೂರ್ವ ಬಲಿ..

    ಕುಶಾಲನಗರ: ಶಾಲೆಗೆ ಅಕ್ಕನನ್ನು ಕರೆತರಲು ಬಂದಿದ್ದ ನಾಲ್ಕು ವರ್ಷದ ಪುಟ್ಟ ಬಾಲಕಿ, ಕೆಲವೇ ಕ್ಷಣಗಳಲ್ಲಿ ಜೀವ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಮಳೆಯಿಂದ ದುರ್ಬಲಗೊಂಡಿದ್ದ ಶಾಲೆಯ ಕಾಂಪೌಂಡ್‌ನ ಭಾರೀ ಕಬ್ಬಿಣದ ಗೇಟ್‌ ಕಳಚಿ ಬಿದ್ದ ಪರಿಣಾಮ ಅಂಗನವಾಡಿ ವಿದ್ಯಾರ್ಥಿನಿ ಅಪೂರ್ವ (4)ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಮೃತ ಅಪೂರ್ವ, ಬಸವನಹಳ್ಳಿ ಹಾಡಿಯ ನಿವಾಸಿಗಳಾದ ಸತೀಶ್ ಮತ್ತು ಪವಿತ್ರ ದಂಪತಿಯ ಮೂರನೇ ಪುತ್ರಿ. ಪ್ರತಿದಿನದಂತೆ ತನ್ನ ಅಕ್ಕಂದಿರಾದ ಅಮೂಲ್ಯ (5ನೇ ತರಗತಿ) ಮತ್ತು ಶ್ರಾವಣಿ (1ನೇ ತರಗತಿ) ಅವರನ್ನು ಕರೆದುಕೊಂಡು ಹೋಗಲು ಶಾಲೆಯ ಗೇಟ್ ಬಳಿ ಬಂದಿದ್ದಳು. ಸ್ಥಳೀಯರ ಮಾಹಿತಿ ಪ್ರಕಾರ, ಗೇಟ್ ಬಳಿ ಆಟವಾಡುವುದು ಅಪೂರ್ವನ ದಿನನಿತ್ಯದ ಅಭ್ಯಾಸವಾಗಿತ್ತು.

    Also Read  🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್

    ಆದರೆ ಶುಕ್ರವಾರ ಸಂಜೆ ಮಳೆಯ ನಡುವೆ ಶಿಥಿಲಗೊಂಡಿದ್ದ ಕಾಂಪೌಂಡ್ ಏಕಾಏಕಿ ಕುಸಿದು, ಅದರೊಂದಿಗೆ ಭಾರೀ ತೂಕದ ಕಬ್ಬಿಣದ ಗೇಟ್ ಬಾಲಕಿಯ ಮೇಲೆ ಬಿದ್ದಿದೆ. ತಲೆಗೆ ಗಂಭೀರ ಗಾಯಗೊಂಡ ಅಪೂರ್ವಳನ್ನು ತಕ್ಷಣ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಘಟನೆ ಬಳಿಕ ಬಸವನಹಳ್ಳಿ ಹಾಡಿಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬದವರ ಆಕ್ರಂದನ ಕಂಡು ಸ್ಥಳೀಯರ ಕಣ್ಣಲ್ಲೂ ನೀರು ತರಿಸಿದೆ.

    15 ದಿನಗಳಿಂದ ಮಳೆಯ ಹೊಡೆತ – ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ

    ಕಳೆದ ಸುಮಾರು 15 ದಿನಗಳಿಂದ ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಶಾಲೆಯ ಕಾಂಪೌಂಡ್ ಗೋಡೆ ಮತ್ತು ಗೇಟ್ ಅಪಾಯಕಾರಿಯಾಗಿ ಶಿಥಿಲಗೊಂಡಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗೇಟ್ ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿದ್ದರೂ, ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Also Read  ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ

    ನೂರಾರು ಮಕ್ಕಳು ಪ್ರತಿದಿನ ಓಡಾಡುವ ಶಾಲೆಯ ಆವರಣದಲ್ಲಿ ಇಂತಹ ಅಪಾಯಕಾರಿ ಸ್ಥಿತಿ ಇದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದೇ ಈ ದುರಂತಕ್ಕೆ ಕಾರಣ ಎಂದು ನಿವಾಸಿಗಳು ದೂರಿದ್ದಾರೆ.

    ಅಧಿಕಾರಿಗಳ ಭೇಟಿ – ಪರಿಹಾರದ ಭರವಸೆ

    ಘಟನಾ ಸ್ಥಳಕ್ಕೆ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಗಿರಿಜನ ಮುಖಂಡ ಆರ್.ಕೆ. ಚಂದ್ರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿ, “ಇದು ಪ್ರಕೃತಿ ವಿಕೋಪದಿಂದ ಉಂಟಾದ ದುರ್ಘಟನೆ. ಇತ್ತೀಚಿನ ಭಾರೀ ಮಳೆಯಿಂದ ಮಣ್ಣು–ಇಟ್ಟಿಗೆ ಮಿಶ್ರಿತ ಕಾಂಪೌಂಡ್ ದುರ್ಬಲಗೊಂಡು ಭಾರೀ ಗೇಟ್ ಬಿದ್ದಿದೆ. ಪೋಷಕರು ಅಗತ್ಯ ದಾಖಲೆ ಸಲ್ಲಿಸಿದರೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಗಳಡಿ ಪರಿಹಾರ ಒದಗಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

    Also Read  ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!

    ಪ್ರಶ್ನೆ ಮಾತ್ರ ಉಳಿದಿದೆ

    ಒಂದು ಶಾಲೆಯ ಶಿಥಿಲಗೊಂಡ ಗೇಟ್‌ ಸಮಯಕ್ಕೆ ದುರಸ್ತಿ ಮಾಡಿದ್ದರೆ, ನಾಲ್ಕು ವರ್ಷದ ಅಪೂರ್ವ ಇಂದು ಜೀವಂತವಾಗಿರುತ್ತಿರಲಿಲ್ಲವೇ? ಎಂಬ ಪ್ರಶ್ನೆ ಈಗ ಬಸವನಹಳ್ಳಿ ಹಾಡಿಯ ಜನರನ್ನು ಕಾಡುತ್ತಿದೆ. ಈ ದುರಂತ ಕೇವಲ ಪ್ರಕೃತಿ ವಿಕೋಪವೇ, ಅಥವಾ ಆಡಳಿತದ ನಿರ್ಲಕ್ಷ್ಯದ ಮತ್ತೊಂದು ಬಲಿಯೇ ಎಂಬ ಚರ್ಚೆ ವ್ಯಾಪಕವಾಗಿದೆ.

    ##ಕುಶಾಲನಗರ #ಕೊಡಗು #ಶಾಲಾದುರಂತ #ಅಪೂರ್ವ #ಗೇಟ್ಬಿದ್ದುಸಾವು #ಕರ್ನಾಟಕಸುದ್ದಿ #NegligenceCase

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
    ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
    ಇನ್‌ಸ್ಟಾಗ್ರಾಮ್ ಬ್ಲಾಕ್ ಆದ ಕ್ಷಣದಿಂದ ಹೊರಬಂತು ರಹಸ್ಯ!
    “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 
    ಬಿಡದಿಯ ಭೂಮಿ ಯಾರಿಗೆ? ಹೋರಾಟಕ್ಕೆ ಹೊಸ ತಿರುವು.! ಭೂಸಮರದ ಒಳನೋಟ…!
    TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
    ಸಹೋದರಿಯ ಎಲುಬುಗಳೊಂದಿಗೆ ಬ್ಯಾಂಕ್ ಗೆ ಬಂದ ಅಣ್ಣ…!ದಾಖಲೆ ನಿಯಮಗಳ ನಡುವೆ ಸೋತ ಮಾನವೀಯತೆ”
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ಸ್ಮಾರ್ಟ್ ಲಾಕ್ ಇದ್ದ ಸುರಕ್ಷಿತ ಮನೆಯಲ್ಲೇ ಯುವತಿಯ ರೇಪ್ ಅಂಡ್ ಮರ್ಡರ್…!ನಗರವನ್ನು ಬೆಚ್ಚಿಬೀಳಿಸಿದ ಘಟನೆ”
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
    ದಿಶಾ ಸಾಲಿಯನ್ ಕೇಸ್‌ ರೀಓಪನ್‌…ಸುಶಾಂತ್ ಸಿಂಗ್ ಸಾವಿನ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ?
    ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
    ವಂದೇ ಮಾತರಂ ವಿವಾದ ದೇಶಭಕ್ತಿಯ ಸಂಕೇತವೇ, ರಾಜಕೀಯ ಅಸ್ತ್ರವೇ?
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
    ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..
    ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ
    79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!
    ಕೆಪಿಎಸ್‌ಸಿ ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್‌, ಸದಸ್ಯೆ ಗೀತಾ ಇ.ಡಿ. ಬಂಧನ
    ಸ್ಪೇನ್‌ಗೆ 2ನೇ FIFA ವಿಶ್ವಕಪ್ ಕಿರೀಟ!ನ್ಯೂಯಾರ್ಕ್‌ನಲ್ಲಿ ಮೆಸ್ಸಿಯ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ನ ಲಾ ರೋಜಾ ಗೆ ಐತಿಹಾಸಿಕ ಜಯ! 
    “ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ” – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
    Forex ಟ್ರೇಡಿಂಗ್ ಹೆಸರಲ್ಲಿ 3.5 ಲಕ್ಷ ವಂಚನೆ – ಆರೋಪಿ ವಿರುದ್ಧ ಪ್ರಕರಣ ದಾಖಲು
    ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!
    “ಮಹಿಳೆಯರು ಮನೆಯಲ್ಲೇ ಇರಬೇಕೇ? AP ಅಬೂಬಕರ್ ಕಾಂತಪುರಂ ಹೇಳಿಕೆ ಭಾರಿ ಚರ್ಚೆ!”