📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!

    ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿಗೆ ಮಸಿ ಬಳಿದಿದ್ದಾರೆ, ಅಮೇರಿಕಾದ ಘನತೆಯನ್ನು ಮುರ್ಕಾಸಿಗೆ ಹರಾಜಿಡುತ್ತಿದ್ದಾನೆ. ಅದೆಲ್ಲ, ಆದೇಶಕ್ಕೆ ಸಂಬಂದಿಸಿದ ವಿಚಾರ. ಆದ್ರೆ ಜಗತ್ತಿಗೆ ಕಂಠಕವನ್ನು ತಂದಿಡುತ್ತಿದ್ದರೂ, ಜಗತ್ತಿನ ಬಹುತೇಕ ರಾಷ್ಟ್ರಗಳು ನಿರ್ವಿರ್ಯವಾಗಿ ಕುಳಿತಿರೋದು ನೋಡಿದ್ರೆ ಸೇಮ್ ಟು ಸೇಮ್ ನಮ್ಮಲ್ಲಿನ ರೌಡಿಗಳ ಕಾಳಗ ನೆನಪಾಗ್ತಾದೆ.

    ನಮ್ಮಲ್ಲಿ ಸಾಕಷ್ಟು ಬಾರಿ ರೌಡಿಗಳು ಜನನಿಭಿಡ ಸ್ಥಳದಲ್ಲಿ ಹೋಡೆದಾಡೋದನ್ನು, ಹಿಂಸಾತ್ಮಕವಾಗಿ ನಡೆದುಕೊಳ್ಳೋದನ್ನು, ಸಾರ್ವಜನಿಕರಲ್ಲಿ ಭಯ ಹುಟ್ಟಿಸೋದನ್ನು ನೋಡಿದ್ದೇವೆ. ಅಂತಹ ಸಂದರ್ಭದಲ್ಲಿ ಸಾಮಾನ್ಯ ಜನರು ಬಹುತೇಕವಾಗಿ ತಮಗೇನೂ ಗೊತ್ತಿಲ್ಲದವರಂತೆ ಇದ್ದು ಬಿಡ್ತಾರೆ. ಹಿಂಸೆಯನ್ನು ತಪ್ಪಿಸಲು ಹೋಗೋದಿಲ್ಲ, ಭಯ ಹುಟ್ಟಿಸುವವರ ವಿರುದ್ಧ ತಿರುಗಿಯೂ ಬೀಳೋದಿಲ್ಲ. ಕಾನೂನು ಜೊತೆ ಸಹಕಾರವನ್ನು ನೀಡೋದಿಲ್ಲ. ಅದೇ ಸೇಮ್ ದೃಶ್ಯ ಕಾಣ್ತಿದೆ ಈಗ.

    ಅಮೇರಿಕ ಎಂಬ ದೇಶವು ಡಾಲರ್ ತನ್ನದಾಗಿಸಿಕೊಂಡು, ಈಡಿ ಜಗತ್ತಿನ ಮೇಲೆ ಹಿಡಿತ ಸಾಧಿಸುವ ಕೆಲಸ ಮಡಿಕೊಂಡು ಬಂದಿದೆ. ಅದು ತಪ್ಪಲ್ಲ, ಆದ್ರೆ ಆ ದೇಶದ ಅಧ್ಯಕ್ಷನಾಗಿ ಬಂದು ಕೂತ ಡೊನಾಲ್ಡ್   ಟ್ರಂಪ್, ತನ್ನ ಹುಚ್ಚಾಟಗಳ ಮೂಲಕ ಇಡೀ ಜಗತ್ತಿಗೆ ಕಂಟಕನಾಗುತ್ತಿದ್ದಾನೆ, ಅದು ತಪ್ಪು. ಡೊನಾಲ್ಡ್ ಟ್ರಂಪ್ ನಿಮಿಷಕ್ಕೊಂದು ಮಾತನಾಡುತ್ತಾನೆ, ಆತನ ಮಾತಿನಲ್ಲಿ ತಾನು ಎಂಬ ಅಹಂಕಾರವು ಮಿತಿಮೀರಿದ್ದು ಗೋಚರವಾಗುತ್ತದೆ. ಇರಾನ್ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಹಾಗೂ ಅದನ್ನು ಸಮರ್ಥಿಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಸಹ್ಯಕರವಾಗಿದೆ. ಆದರೂ ಇಡೀ ಜಗತ್ತಿನ ಒಂದೆರಡು ದೇಶ ಬಿಟ್ಟು, ಉಳಿದ ದೇಶಗಳು ನೋಡಿದರೂ  ನೋಡದವರ ಹಾಗೆ ಇರೋದನ್ನ ನೋಡಿದರೆ ಸೇಮ್ ಘಟನೆಗಳು ನೆನಪಿಗೆ ಬರುತ್ತದೆ

    ಕ್ರಿಶ್ಚಿಯನ್ ಧರ್ಮದ ಪರಮೋಚ್ಚ ಗುರುವಿನ ವಿರುದ್ಧವೇ ಡೊನಾಲ್ಡ್ ಟ್ರಂಪ್ ಎಲ್ಲೆ ಮೀರಿದ ಮಾತುಗಳನ್ನು ಆಡಿದ್ದಾರೆ. ಈತ ಪೋಪ್ ಆಗಲು ಲಾಯಕ್ಕೆ ಇಲ್ಲದ ವ್ಯಕ್ತಿ ಎಂದು ಏಕವಚನದಲ್ಲೇ ಜರಿಯುವ ಡೊನಾಲ್ಡ್ ಟ್ರಂಪ್, ಹಲವು ಗುರುತರವಾದಂತಹ ಆರೋಪವನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಪೋಪ್ ಸ್ಥಾನಕ್ಕೆ ಈ ಲಿಯೋ ಹೋಗಲು ನಾನೇ ಕಾರಣ, ನಾನಿಲ್ಲ ಅಂದರೆ ಆ ಸ್ಥಾನಕ್ಕೆ ಪರಿಗಣನೆಗೂ ಒಳಪಡುತ್ತಿರಲಿಲ್ಲ. ನನ್ನಿಂದಾಗಿ ವ್ಯಾಟಿಕನ್ ಅಂತಹ ಪರಮೋಚ್ಚ ಸ್ಥಾನದಲ್ಲಿ ಕುಳಿತಿದ್ದೀಯಾ, ಗೊತ್ತಿಲ್ಲದ ವಿಚಾರಕ್ಕೆ ಮಾತನಾಡಿ ಆಸ್ಥಾನವನ್ನು ಕಳೆದುಕೊಳ್ಳಬೇಡಿ ಎಂದು ಬೆದರಿಕೆ ಹಾಕಿದ್ದಾರೆ.

    ಅಷ್ಟಕ್ಕೂ ಕ್ಯಾಥೋಲಿಕ್ ಕ್ರಿಶ್ಚಿಯನ್ನ ಪರಮೋಚ್ಚ ನಾಯಕ ಪೋಪ್ ಲೀಯೋ ಅಮೇರಿಕನ್ನರು. ಇಡೀ ಜಗತ್ತು ಅಮೇರಿಕಾಮಯವಾಗಬೇಕು ಅನ್ನುವುದು ಹುಚ್ಚಾಟ ನಡೆಸುತ್ತಿರುವ ಅಮೆರಿಕಾ ಅಧ್ಯಕ್ಷರ ಧ್ಯೇಯ. ಹಲವು ಬಾರಿ ಈ ಬಗ್ಗೆ ಮಾತನ್ನೂ ಆಡಿದ್ದಾರೆ. ಅಮೇರಿಕಾವನ್ನು ಮಹಾನ್ ಮಾಡಬೇಕೆನ್ನುವುದು ಅವರ ಭಾಷಣದ ಭಾಗ. ಆ ನಿಟ್ಟಿನಲ್ಲಿ ಸಾಗುವುದು ತಪ್ಪಲ್ಲ, ಹಾಗಂತ ಅದಕ್ಕಾಗಿ ಜಗತ್ತಿನ ಮೇಲೆ ದಬ್ಬಾಳಿಕೆ ನಡೆಸುವುದು ತಪ್ಪು, ರಕ್ಕಸಿ ಪ್ರವೃತ್ತಿ ನಡೆಸೋದೂ ತಪ್ಪು.

    ಅಷ್ಟಕ್ಕೂ ಪೋಪ್ ಲೀಯೋ ಹೇಳಿದ್ದೇನು ಗೊತ್ತಾ? ಯುದ್ಧ, ಹಿಂಸೆ, ರಾಜಕೀಯ ಅಹಂಕಾರ ಇದೆಲ್ಲವನ್ನು ಕ್ರಿಶ್ಚಿಯನ್ ಧರ್ಮವು ವಿರೋಧಿಸುತ್ತದೆ. ಧರ್ಮದ ಸಂದೇಶವು ಇದೆಲ್ಲವುದರ ವಿರುದ್ಧವೇ ಇದೆ. ಹಾಗಾಗಿ ವಿನಾಕಾರಣ ಒಂದು ದೇಶದ ವಿರುದ್ಧ ಯುದ್ಧ ಮಾಡುವಂತದ್ದು, ಮತ್ತು ಇಡೀ ದೇಶದ ನಾಗರಿಕರನ್ನು ಮುಗಿಸಿ ಬಿಡುತ್ತೇನೆ ಎಂಬ ಸ್ಟೇಟ್ ಮೆಂಟ್ ನೀಡುವುದು ಶುದ್ಧ ತಪ್ಪು ಎಂದು ಸ್ಪಷ್ಟವಾಗಿ ಸ್ಟೇಟ್ಮೆಂಟ್ ನೀಡಿದ್ದರು. ಈ ಸ್ಟೇಟ್ಮೆಂಟಿನಿಂದ ಸಿಟ್ಟಾದ ಡೊನಾಲ್ಡ್ ಟ್ರಂಪ್, ಪೋಪ್ ವಿರುದ್ಧವೇ ಗುಡುಗಿದ್ದಾರೆ. ವ್ಯಾಟಿಕನ್ ನನ್ನ ಕಂಟ್ರೋಲ್ ನಲ್ಲಿದೆ ಅಂತ ವಾರ್ನಿಂಗ್ ನೀಡಿದ್ದಾರೆ. ಕಟ್ಟರ್ ಎಡಪಂಥೀಯ ಸಿದ್ದಾಂತದವರ ಜೊತೆಗೆ ಪೋಪ್ ಮಾತುಕತೆ ನಡೆಸುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಎಂದು ಎಚ್ಚರಿಸಿದ್ದಾರೆ. ಪೋಪ್ ಅವರನ್ನು ಬದಲಾಯಿಸುವುದು ನನಗೆ ಸುಲಭದ ಕೆಲಸ ಅಂತಲೂ ಸಂದೇಶ ಕಳುಹಿಸಿದ್ದಾರೆ. ಈ ಹಿಂದಿನ ಪೋಪ್ ಫ್ರಾನ್ಸಿಸ್ ಕೂಡ, ಡೊನಾಲ್ಡ್ ಟ್ರಂಪ್ ಅವರ ನಡೆ ಮತ್ತು ಮಾತಿನ ದಾಟಿಯನ್ನು ಖಡಕ್ಕಾಗಿ ವಿರೋಧಿಸಿದ್ದರು. ಆಗ ಫ್ರಾನ್ಸಿಸ್ ಅವರನ್ನು ಅಮೆರಿಕಾದ ವಿರೋಧಿ ಅಂತ ಬಿಂಬಿಸಿದ್ದರು. ಅಷ್ಟೇ ಅಲ್ಲ, ಫ್ರಾನ್ಸಿಸ್ ಕ್ರಿಶ್ಚಿಯನ್ ಅಲ್ಲ ಅಂತ ಜನರನ್ನು ನಂಬಿಸುವ ಪ್ರಯತ್ನ ಮಾಡಿದ್ದರು. ಇಷ್ಟೇ ಅಲ್ಲ, ತನ್ನನ್ನು ತಾನು ಏಸುವಿನ ಅವತಾರ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಂತಹ ಹುಚ್ಚಾಟದ ನಾಯಕ ಜಗತ್ತಿನ ಯಾವ ದೇಶದಲ್ಲೂ ಇರಲಿಕ್ಕಿಲ್ಲ. ನಿಮಿಷಕ್ಕೊಂದು ರೀತಿಯಲ್ಲಿ ಮಾತನಾಡುವ ಡೊನಾಲ್ಡ್ ಟ್ರಂಪ್ ರನ್ನು ಯಾರೋ ನಿಯಂತ್ರಿಸುತ್ತಿದ್ದಾರೆ, ಹಾಗಾಗಿಯೇ ಅವರ ಮಾತುಗಳು ಪದೇ ಪದೇ ಬದಲಾಗುತ್ತದೆ ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಮೂಲಕ ಕಾಣದ ಕೈ ಈ ಎಲ್ಲಾ ಹುಚ್ಚಾಟಗಳನ್ನು ಮಾಡಿಸುತ್ತಿದೆ ಎನ್ನುವುದು ಅವರ ವಾದವೂ ಆಗಿದೆ.

    Also Read  'ಸೈಯಾರಾ' ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ

    ಅದೇನೇ ಇರಲಿ, ಈಗ ಡೊನಾಲ್ಡ್ ಟ್ರಂಪ್ ಇರಾನ್ ವಿಚಾರದಲ್ಲಿ ಯುದ್ಧಕ್ಕೆ ಇಳಿದಿದ್ದು ಯಾಕೆ? ಜಗತ್ತಿನ ಮುಂದೆ ಇರಾನ್ ಅಣ್ವಸ್ತ್ರವನ್ನು ಹೊಂದಲು ಪ್ರಯತ್ನಿಸುತ್ತಿದೆ, ಹಾಗಾಗಿ ಈ ದಾಳಿ ಅಂತ ಜಗತ್ತನ್ನು ನಂಬಿಸಲು ಪ್ರಯತ್ನಿಸಿತು ಅಮೇರಿಕ. ಜಗತ್ತು ನಂಬಿದೆಯಾ ಅಂದರೆ, ನೋ ಚಾನ್ಸ್. ಜಗತ್ತು ಟ್ರಂಪ್ ಅವರ ಯಾವುದೇ ಮಾತನ್ನು ನಂಬಲು ತಯಾರಿಲ್ಲ. ಆದರೆ ಅವರನ್ನು ವಿರೋಧಿಸಲು ತಾಕತ್ತಿಲ್ಲದ ಪರಿಸ್ಥಿತಿ.

    ಇರಲಿ, ಇರಾನ್ ಮೇಲೆ ಈ ರೀತಿಯ ಆರೋಪ ಮಾಡುವ ಅಮೆರಿಕಾದ ಕೈಲಿ ಅಣ್ವಸ್ತ್ರ ಇಲ್ವಾ? ಅವರು ಅದನ್ನು ಹೊಂದಬಹುದು ಆದರೆ ಇರಾನ್ ಹೊಂದಬಾರದು ಅನ್ನುವುದು ಎಷ್ಟು ಸರಿ? ಬೇರೆ ದೇಶಗಳಿಗೆ ಹೀಗೆ ಇರಬೇಕು ಅನ್ನುವ ಅಮೇರಿಕಾ, ತಾನು ಸಹ ಹಾಗೆಯೇ ಇದ್ದುಕೊಂಡು ಇದನ್ನು ಹೇಳಿದರೆ ಅದಕ್ಕೊಂದು ಅರ್ಥ ಇದೆ. ಆದರೆ ಅದನ್ನು  ಹೇಳಬೇಕಾದ ಇಡೀ ಜಗತ್ತಿನ ಇತರ ದೇಶಗಳು ನಿರ್ವಿರ್ಯರಾಗಿದ್ದಾರೆ ಯಾಕೆ?

    ಅಮೇರಿಕಾ ಇರಾನ್ ಜೊತೆಗೆ ಸಂಘರ್ಷ ನಡೆ ಸುತ್ತಿರುವುದು ಒಂದೆಡೆಯಾದರೆ, ಇರಾನ್ ಜೊತೆಗೆ ಜಗತ್ತಿನ ಯಾವ ದೇಶವೂ ಸಂಪರ್ಕ ಹೊಂದಬಾರದು ಅನ್ನುವ ತಾಕಿತು ಇನ್ನೊಂದು ಕಡೆ. ಇದನ್ನ ಕೇಳಿಸಿಕೊಂಡೂ ಸಹ ಸುಮ್ಮನಿರಬೇಕಾದ ದರ್ದು ಉಳಿದ ದೇಶಗಳದ್ದು.

    Also Read  ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ

    ಎಲ್ಲಾ ದೇಶಗಳು ಅವರವರ ರಕ್ಷಣೆ ಹಾಗೂ ಸೇಫ್ಟಿಗೆ ಒತ್ತು ಕೊಡುತ್ತಾರೆ. ಅಮೇರಿಕಾದಂತಹ ಬಲಾಢ್ಯನನ್ನು ಎದುರು ಹಾಕಿಕೊಳ್ಳುವುದು ಕ್ಷೇಮವಲ್ಲ ಅನ್ನೋದು ಎಲ್ಲರ ಭಾವನೆ. ಹಾಗಾಗಿಯೇ ಅವರೆಲ್ಲರೂ ಮೌನವಾಗಿ ಕುಳಿತಿದ್ದಾರೆ. ಬಲಿಷ್ಠ ದೇಶ ಅಂತ ಅನಿಸಿಕೊಂಡಿರುವ ರಷ್ಯಾ ಹಾಗೂ ಚೀನಾ ಕೂಡ ನೇರವಾಗಿ ಇರಾನ್ ಜೊತೆಗೆ ನಿಂತು ಯುದ್ಧಕ್ಕೆ ತಯಾರಿಲ್ಲ. ಇರಾನ್ ಜೊತೆಗೆ ಓಪನ್ ಆಗಿ ಕಾಣಿಸಿಕೊಂಡಿದ್ದಾರೆ ನಿಜ, ಹಾಗಂತ ಇರಾನಿಗೆ ಈ ಯುದ್ಧದಲ್ಲಿ ನೇರವಾಗಿ ಸಹಕಾರ ಇಲ್ಲಿಯವರೆಗೆ ಕೊಟ್ಟಿಲ್ಲ. ಗುಪ್ತವಾಗಿ ಏನೇ ಸಹಕಾರ ಕೊಟ್ಟರು ಅದು ಲೆಕ್ಕಕ್ಕೆ ಇಲ್ಲ. ಈಗ ಇಸ್ರೇಲಿಗೆ ಅಮೆರಿಕ ಹೇಗೆ ನೇರವಾಗಿ ಸಹಕಾರ ನೀಡುತ್ತಿದೆಯೋ, ಆ ರೀತಿಯ ಸಹಕಾರವನ್ನು ಯಾವ ದೇಶವು ಇರಾನಿಗೆ ಇಲ್ಲಿಯವರೆಗೆ ನೀಡಿಲ್ಲ. ಅಂದರೆ ಜಗತ್ತಿನ ಎಲ್ಲಾ ದೇಶಗಳೂ ಸಹ ಅಮೇರಿಕಾದ ಮುಂದೆ ಮಂಡಿಯೂರಿದೆ ಅಂತಲೇ ಲೆಕ್ಕ. ಇಂತಹ ಹುಚ್ಚಾಟ ನಡೆಸುವ, ಅಹಂಕಾರದಿಂದ ಕುಣಿಯುತ್ತಿರುವ ಡೊನಾಲ್ಡ್ ಟ್ರಂಪ್ ಮುಂದೆ ಮಂಡಿಯುವುದು ಎಷ್ಟರಮಟ್ಟಿಗೆ ಸರಿ? ಇಡೀ ಜಗತ್ತು ಬಿಟ್ಟುಬಿಡಿ, ಟ್ರಂಪ್ ನಡೆ ಶುದ್ದ ತಪ್ಪು  ಅಂತ ತಿಳಿದವರು ಒಟ್ಟಾಗಿ ಸೇರಿ ತಿರುಗಿ ನಿಂತರೂ ಸಾಕು ಡೊನಾಲ್ಡ್ ಟ್ರಂಪ್ ಇರಲಿ, ಅಮೇರಿಕವೇ ಇರಲಿ, ಗಂಟು ಮೂಟೆ ಕಟ್ಟಲೇ ಬೇಕಾಗುತ್ತದೆ. ಆದರೆ ಈ ನಿಟ್ಟಿನಲ್ಲಿ ಸಾಗಲು ಯಾವ ದೇಶವೂ ರೆಡಿ ಇಲ್ಲ ಯಾಕೆ?

    ಸಿಂಪಲ್, ಇದು ಒಂದು ಮಾಫಿಯಾದ ಕಾರ್ಯತಂತ್ರವಾಗಿದೆ. ಆ ಮಾಫಿಯಾ ಕಾರ್ಯತಂತ್ರದ ಭಾಗವಾಗಿಯೇ ಈ ಎಲ್ಲಾ ಚಟುವಟಿಕೆಯು ನಡೆಯುತ್ತಿದೆ. ಮಾಫಿಯಾ, ಜಗತ್ತಿನ ಯಾರನ್ನು ಬೇಕಾದರೂ ದೊಡ್ಡಣ್ಣನನ್ನಾಗಿ ಮಾಡುತ್ತದೆ. ಯಾರನ್ನು ಬೇಕಾದರೂ ಬಲಿಷ್ಠರನ್ನಾಗಿಸುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ಆ ಮಾಫಿಯಾದ ಹಿಡಿತವಿದೆ. ಆದೇಶಗಳ, ರಾಜಕಾರಣದಿಂದ ಹಿಡಿದು ಆಡಳಿತ ವ್ಯವಸ್ಥೆಯವರೆಗೆ ತನಗೆ ಬೇಕಾದ ಹಾಗೆ ಮಾಡಿಸಿಕೊಳ್ಳುವ ತಾಕತ್ತನ್ನು ಆ ಮಾಫಿಯಾ ಹೊಂದಿದೆ. ಆ ಮಾಫಿಯಾದ ಕೈಗೊಂಬೆಯೇ ಡೊನಾಲ್ಡ್ ಟ್ರಂಪ್ ಎಂಬ ಮಾತನ್ನು ಅನೇಕ ವಿಶ್ಲೇಷಕರು ಹೇಳುತ್ತಿರುವದರಲ್ಲಿ ನಿಜಾಂಶವಿದೆ.

    ಕೇವಲ ಅಮೆರಿಕ ಆಗಿದ್ದರೆ, ಡೊನಾಲ್ಡ್ ಟ್ರಂಪ್ ಆಗಿದ್ದರೆ, ಜಗತ್ತು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದರ ಹಿಂದೆ ವೆpಪನ್ ಮಾಫಿಯಾ ಹಾಗೂ ಡ್ರಗ್ ಮಾಫಿಯಾ ಕೆಲಸ ಮಾಡುತ್ತಿದೆ. ಇಡೀ ಜಗತ್ತನ್ನು ಆಳುತ್ತಿರುವುದೇ ಈ ಎರಡು ಮಾಫಿಯಾಗಳು. ಈ ಮಾಫಿಯಾ ಹಿಡಿತದಲ್ಲಿಯೇ ಇಡೀ ಜಗತ್ತಿನ ಕಾರ್ಪೊರೇಟ್ ವಿಭಾಗ ಇದೆ. ಆ ವಿಭಾಗವು ಜಗತ್ತಿನ ಬಹುತೇಕ ದೇಶದ ಮೇಲೆ ಹಿಡಿತ ಸಾಧಿಸುತ್ತಿದೆ ಅನ್ನೋದು, ಆ ವಿಶ್ಲೇಷಕರ ಅಭಿಪ್ರಾಯ. ಹಾಗಾಗಿ ಯಾವುದೇ ದೇಶದಲ್ಲಿ ಏನೇ ಬದಲಾವಣೆ ಆಗುವುದಿದ್ದರೂ ಅದರ ಹಿಂದೆ ಈ ಮಾಫಿಯಾದ ಕೈವಾಡ ಇರುತ್ತದೆ. ಯಾವುದೇ ದೇಶದಲ್ಲಿ ನಡೆಯುವಂತಹ ಕ್ರಾಂತಿಯ ಹಿಂದೆಯೂ ಇದರ ಕೈವಾಡವಿರುತ್ತದೆ. ಸೂಕ್ಷ್ಮವಾಗಿ ಗಮನಿಸಿ ನೋಡಿ, ಈಗ ಕೆಲವೇ ಕೆಲವು ಸಮಯಗಳ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ದೊಡ್ಡಮಟ್ಟಿಗಿನ ಕ್ರಾಂತಿಯೇ ಆಗಿಹೋಯಿತು. ಕ್ರಾಂತಿಯ ಮೊದಲು ಅಲ್ಲಿನ ರಾಜಕೀಯ ಹಾಗೂ ಅದರ ವಿದೇಶಿ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಆಗ ನಿಮಗೆ ಪಕ್ಕಾ ಅಂದಾಜು ಸಿಗುತ್ತದೆ. ಶ್ರೀಲಂಕಾದಲ್ಲಿ ಒಂದು ಕಡೆ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿರುವುದನ್ನು ಗಮನಿಸಿದ ಅಮೆರಿಕ, ತನ್ನ ಆಟವನ್ನು ಆಡಿತು. ಪರಿಣಾಮ ಚೀನಾದ ಪ್ರಭಾವ ಅಲ್ಲಿ ತಗ್ಗಿತು. ಬಾಂಗ್ಲಾದೇಶದಲ್ಲೂ ಸಹ ಶೇಕ್ ಹಸಿನಾ ಅಮೆರಿಕಾದ ಆರ್ಡರ್ ಪಾಲಿಸಲಿಲ್ಲ. ಪರಿಣಾಮ ಅಲ್ಲಿ ಕ್ರಾಂತಿಯಾಯಿತು. ಅದರ ಪರಿಣಾಮ ಆ ದೇಶದ ಹಿಂದೂ ಸಮಾಜ ಸಿಕ್ಕಾಪಟ್ಟೆ ನೋವುಣ್ಣಬೇಕಾಯಿತು. ಅಲ್ಲಿನ ಪ್ರಧಾನಿಯೇ ದೇಶ ಭ್ರಷ್ಟರಾದರು. ಅದೇ ರೀತಿ ನೇಪಾಳದಲ್ಲೂ ಸಹ ಕ್ರಾಂತಿಯಾಯಿತು. ಆ ಕ್ರಾಂತಿಯ ಪರಿಣಾಮ ಏನು ಅನ್ನುವುದನ್ನು ಕಾದು ನೋಡಬೇಕಿದೆ. ಹೊಸ ಸರ್ಕಾರದ ಮೇಲೆ ಯಾರ ಪ್ರಭಾವ ಇರಬಹುದು ಅನ್ನುವುದನ್ನು ಮುಂದಿನ ದಿನದಲ್ಲಿ ಕಾಣಬಹುದಾಗಿದೆ. ಇದರ ಅರ್ಥ ಇಷ್ಟೇ, ಇಡೀ ಜಗತ್ತನ್ನು ಆಳುತ್ತಿರುವ ಮಾಫಿಯಾ ಅಮೆರಿಕಾದ ಮೂಲಕ ತನ್ನ ಅಣತಿಯಂತೆ ನಡೆಯುವ ಸರ್ಕಾರಗಳು ಜಗತ್ತಿನ ಎಲ್ಲಾ ದೇಶಗಳಲ್ಲೂ ಇರಬೇಕೆಂದು ಭಾವಿಸುತ್ತವೆ. ಅದಕ್ಕೋಸ್ಕರ ಅವು ಇನ್ವೆಸ್ಟ್ಮೆಂಟ್ ಕೂಡ ಮಾಡುತ್ತವೆ. ಅದ್ಯಾವುದೂ ಯಾರಿಗೂ ಗೊತ್ತಾಗುವುದಿಲ್ಲ. ಆ ರೀತಿಯಲ್ಲಿ ಕಾರ್ಯಚರಿಸುತ್ತವೆ. ಇವತ್ತು ಅಮೆರಿಕವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿರುವುದೇ ಈ ಮಾಫಿಯಾ. ಈ ಮೊದಲು ಬ್ರಿಟನ್ ಅನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿತ್ತು. ಆನಂತರ ಅದು ಅಮೆರಿಕಕ್ಕೆ ಶಿಫ್ಟ್ ಆಯಿತು ಅಷ್ಟೇ. ಇಲ್ಲಿ ದೇಶ ಅಥವಾ ವ್ಯಕ್ತಿ ಮುಖ್ಯವಲ್ಲ. ಬದಲಿಗೆ ಮಾಫಿಯಾದ ವ್ಯವಹಾರ ಸಲೀಸಾಗಿ ಜಗತ್ತಿನಾದ್ಯಂತ ನಡೆಯಬೇಕು. ಅದಕ್ಕೋಸ್ಕರ ಇನ್ನೊಂದು ಪ್ರತಿಸ್ಪರ್ಧಿ ಹುಟ್ಟಿಕೊಳ್ಳಬಾರದು. ಹುಟ್ಟಿಕೊಳ್ಳುವ ಪ್ರತಿಸ್ಪರ್ಧಿಯನ್ನು ಮುಗಿಸಿಬಿಡುವಂತಹ ಪ್ರವೃತ್ತಿಯು ಈ ಮಾಫಿಯದ್ದಾಗಿದೆ. ಹಾಗಂತ ಅದು ನೇರವಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಜಗತ್ತಿನಲ್ಲಿ ಹುಟ್ಟಿಕೊಳ್ಳುವ ಭಯೋತ್ಪಾದನೆಯ ಹಿಂದೆ ಈ ಮಾಫಿಯಾ ಇದೆ, ಇಲ್ಲಿಗಲ್ ವ್ಯವಹಾರದ ಹಿಂದೆ ಈ ಮಾಫಿಯಾ ಇದೆ, ದೊಡ್ಡ ದೊಡ್ಡ ಉದ್ಯಮದ ಹಿಂದೆ ಈ ಮಾಫಿಯಾ ಇದೆ, ಒಳ್ಳೆಯದರ ಕಡೆನೂ ಮಾಫಿಯಾ ಇದೆ, ಕೆಟ್ಟದರ ಕಡೆನೂ ಮಾಫಿಯಾ ಇದೆ. ಒಂದರ್ಥದಲ್ಲಿ ತೊಟ್ಟಿಲು ತೂಗುವ ಕೆಲಸವನ್ನೂ ಮಾಡುತ್ತದೆ, ಚಿವುಟುವ ಕೆಲಸವನ್ನೂ ಮಾಡುತ್ತದೆ.

    Also Read  ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?

    ಈಗ ಅರ್ಥ ಆಗಿರಬೇಕು. ಅಮೆರಿಕಾದ ಇಂತಹ ಹುಚ್ಛಾಟದ ನಡೆಯನ್ನ ಜಗತ್ತಿನ ದೇಶಗಳು ಯಾಕೆ ಪ್ರಶ್ನೆ ಸುತ್ತಿಲ್ಲ, ವಿರೋಧಿಸುತ್ತಿಲ್ಲ ಅನ್ನುವುದು ಗೊತ್ತಾಗಿರಬೇಕು ತಾನೆ? ಜಗತ್ತಿನ ಬಹುತೇಕ ರಾಷ್ಟ್ರಗಳು ಮೌನವಾಗಿರುವುದರ ಹಿಂದೆ ಈ ಮಾಫಿಯಾದ ತಾಕೀತು ಕೆಲಸ ಮಾಡುತ್ತಿದೆ. ನೋ ಡೌಟ್, ಇದೇ ಕಾರಣಕ್ಕಾಗಿಯೇ ವಿಶ್ವಸಂಸ್ಥೆಯು ಲೆಕ್ಕಕ್ಕಿಲ್ಲದಂತಾಗಿದೆ. ಹುಚ್ಚಾಟ ನಡೆಸುತ್ತಿರುವ ಅಮೆರಿಕ, ಇಸ್ರೇಲ್ ಹಾಗೂ ಟ್ರಂಪ್ ಅವರನ್ನು ವೈಭವಿಕರಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಹಾಗೆ ಮಾಡುವಂತಹ ಪ್ರಭಾವವು ಎಲ್ಲಿಂದ ಬಂದಿತು ನೀವೇ ಊಹಿಸಿ ನೋಡಿ.

    -ದತ್ತು ಹೆಗಡೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
    ನಿಶ್ಶಬ್ದ ಕೊಠಡಿ ಹೇಳುವ ನಿಗೂಢ ರಹಸ್ಯ …!ಮನೆಯ ಗೋಡೆಗಳ ಮೇಲೆ ಬರಹ,ಕಾಗದಗಳು ನೂರಾರು…! ಅಸಹಜ ಮರಣದ ಹಿಂದೆ ಅಡಗಿರುವ ಸತ್ಯ ಇನ್ನೂ ಅನಾವರಣವಾಗಿಲ್ಲ…”
    ಇಂದು ಮಂಗಳೂರಲ್ಲಿ ತಲೆಮೇಲೆ ಸುತ್ತು ಹೊಡೆದಂತೆ ಬಾರಿ ಶಬ್ದದೊಂದಿಗೆ ಹೆಲಿಕಾಪ್ಟರ್‌..!ಆಶ್ಚರ್ಯ ಮತ್ತು ಆತಂಕದ ಹಿಂದಿದೆ ಭದ್ರತಾ ‘ಮೆಗಾ ಡ್ರಿಲ್’ ..!ಅಸಲಿ ಕಾರಣವೇನು
    ಮಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್!ಯಾವೆಲ್ಲ ಬದಲಾವಣೆ ಬರಲಿದೆ?
    ಗೃಹಲಕ್ಷ್ಮಿಗೆ ಬ್ರೇಕ್? ₹2,000 ಹಣ ನೀರಾವರಿಗೆ ಬಳಸಿ ಎಂದ ಕಾಂಗ್ರೆಸ್‌ ಎಂಎಲ್‌ಸಿ!
    ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
    ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    ಮಧ್ಯಪ್ರಾಚ್ಯದಲ್ಲಿ ರೆಡ್ ಅಲರ್ಟ್!3 ತಿಂಗಳ ಯುದ್ಧಕ್ಕೆ ಮಹಾ ಟ್ವಿಸ್ಟ್ ಇರಾನ್ ಸೇನಾ ನೆಲೆಗಳನ್ನು ಧೂಳೀಪಟ ಮಾಡಿದ ಅಮೆರಿಕ!
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ
    ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
    ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
    ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
    ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
    ಒಂದೆಡೆ ‘ನಶಾ ಮುಕ್ತ ಯುವ ಭಾರತ’ ಅಭಿಯಾನ; ಮತ್ತೊಂದೆಡೆ ಪಬ್ ಸಂಸ್ಕೃತಿಯ ಸೆಳೆತ..! ಮಣಿಪಾಲದಲ್ಲಿ ಅಪ್ರಾಪ್ತರ ಮದ್ಯಪಾನ ಬಯಲು
    ಕರ್ನಾಟಕದಲ್ಲಿ ನೀರು–ವಿದ್ಯುತ್ ಬಿಕ್ಕಟ್ಟಿನ ಎಚ್ಚರಿಕೆ!
    ಬೆಂಗಳೂರಿನಿಂದ ಚೆನ್ನೈಗೆ ಹೊರಟ ವಿಮಾನದಲ್ಲಿ ಹೊಗೆ — ಎಲ್ಲಾ ವಿಮಾನಗಳು ವಿಳಂಬ ಪ್ರಯಾಣಿಕರಿಗೆ ತೊಂದರೆ
    ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಕಾಂಗ್ರೆಸ್‌ ನಾಯಕರ ಸಭೆ
    24 ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕಾ ದಾಳಿ: 3 ನಾವಿಕರ ಜೀವ ಬಲಿ
    ”ಮೋದಿ ಭರವಸೆ ಪೊಳ್ಳು” : ನೀಟ್ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಕೇಜ್ರಿವಾಲ್ ವಾಗ್ದಾಳಿ
    ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
    “ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ