📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….

    ಅಷ್ಟಕ್ಕೂ ಆ ಜನಿವಾರವು ಅವರಿಗೆ ಏನು ತೊಂದರೆ ಮಾಡಿತ್ತು? ಆ ಜನಿವಾರವನ್ನು ತೆಗೆಸಬೇಕು, ಆ ಮೂಲಕ ರಾಜ್ಯದ ಬ್ರಹ್ಮಣರಿಗೆ ಅವಮಾನ ಮಾಡಬೇಕು ಎಂದು, ಒಂದು ತಂಡವು ಪ್ರಯತ್ನಿಸುತ್ತಿತ್ತಾ ಎಂಬ ಪ್ರಶ್ನೆ ಎದ್ದೇಳುತ್ತಿದೆ ಈಗ. ಆ ತಂಡವು ಕೊಟ್ಟ ಬೆಂಬಲದ ಪರಿಣಾಮ, ಆ ಸಿಬ್ಬಂದಿಗಳು ಜನಿವಾರಕ್ಕೆ ಕೈಹಾಕಲು ಹೋಗಿ ಈಗ ಪರಮನೆಂಟಾಗಿ ಮನೆಯ ಮೂಲೆಯನ್ನು ಸೇರಲು ಹೊರಟಿದ್ದಾರೆ ಎನ್ನಲಾಗುತ್ತಿದೆ.

    ಸಿಇಟಿ ಪರೀಕ್ಷೆಯು ರಾಜ್ಯ ರಾಜಧಾನಿಯಾದ ಬೆಂಗಳೂರಿನ ಕೃಪಾನಿ ಶಿಕ್ಷಣ ಸಂಸ್ಥೆಯಲ್ಲಿ ನಿಗದಿಯಾಗಿತ್ತು. ಹಾಗೆ ಪರೀಕ್ಷೆ ಬರೆಯಲು ಬಂದಂತಹ ವಿದ್ಯಾರ್ಥಿಗಳ ಜೇಬು ಹಾಗೂ  ಇತರ ಕಡೆ ಪರಿಶೀಲಿಸಿ ಯಾವುದೇ ನಕಲು ಹೊಡೆಯುವಂತಹ ಸಾಧನ ಇಲ್ಲದಿರುವುದನ್ನು ಕನ್ಫರ್ಮ್ ಮಾಡಿಕೊಂಡು ಒಳಗೆ ಬಿಡುತ್ತಿದ್ದ ಮೂವರು ಸಿಬ್ಬಂದಿಗಳು, ಬ್ರಾಹ್ಮಣ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಅವರು ಹಾಕಿಕೊಂಡಿದ್ದ ಜನಿವಾರವನ್ನು ತೆಗೆಯುವಂತೆ ಬಲವಂತ ಪಡಿಸುತ್ತಾರೆ.

    ಕಳೆದ ವರ್ಷ ಶಿವಮೊಗ್ಗದಲ್ಲೂ ಇದೇ ತರಹದ ಘಟನೆ ನಡೆದಿತ್ತು. ಅದು ವಿವಾದಕ್ಕೂ ಕಾರಣವಾಗಿತ್ತು. ಅದರ ಮುಂದುವರಿದ ಭಾಗವೇ ಕೃಪಾನಿ ಶಿಕ್ಷಣ ಸಂಸ್ಥೆಯಲ್ಲಿ ಈಗ ನಡೆದದ್ದು. ಆದರೆ, ಈ ಬಾರಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಯಾವುದೇ ರೀತಿಯ ಸಬೂಬು ಹೇಳದೆ , ತಪ್ಪಿತಸ್ಥ ಮೂವರು ಸಿಬ್ಬಂದಿಗಳಾದ ಗಿರಿಜಮ್ಮ, ಸರಿತಾ ಹಾಗೂ ಸುಧಾಕರ್ ಅವರನ್ನು ತಕ್ಷಣವೇ ಅಮಾನತ್ತು ಗೊಳಿಸಿದ್ದಾರೆ. ಹಾಗೂ ಬ್ರಾಹ್ಮಣ ಮಹಾಸಭಾ ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ.

    Also Read  UAEಯಲ್ಲಿ ಉಡುಪಿ ವ್ಯಕ್ತಿಯ ನಿಗೂಢ ಸಾವು – ಪತ್ನಿ, ಮಗ ಎಲ್ಲಿದ್ದಾರೆ?UAE ,ಭಾರತದಲ್ಲಿ?

    ಇದು ಕೇವಲ ಮೂವರು ಸಿಬ್ಬಂದಿಗಳಿಂದ ನಡೆದಂತಹ ಕೆಲಸವಲ್ಲ. ಶಿವಮೊಗ್ಗದಲ್ಲಿ ನಡೆದ ವಿವಾದ, ಜನಿವಾರಕ್ಕೆ ಕೈ ಹಾಕಿದಾಗ ನಡೆದಂತಹ ಘಟನೆ ಯ ಬಗ್ಗೆ ಆ ಸಿಬ್ಬಂದಿಗಳಿಗೆ ಗೊತ್ತಿಲ್ಲ ಅನ್ನುವಂತಿಲ್ಲ. ನೂರಕ್ಕೆ ನೂರರಷ್ಟು ಅವರಿಗೆ ಗೊತ್ತಿತ್ತು. ಗೊತ್ತಿಲ್ಲದೇ ಇರುವಂತಹ ವ್ಯಕ್ತಿ ಇಂತಹ ಜಾಗದಲ್ಲಿ ದುಡಿಯಲು ಅರ್ಹನೂ ಅಲ್ಲ. ಆದರೂ ಆ ಮೂವರು ಸಿಬ್ಬಂದಿಗಳು ಮತ್ತೆ ಜನಿವಾರಕ್ಕೆ ಕೈ ಹಾಕುತ್ತಾರೆ ಎಂದರೆ, ಅವರನ್ನು ಈ ರೀತಿ ಮಾಡಲು ಪ್ರೇರೇಪಿಸಿದ  ಟೀಮ್ ಒಂದು ಇರಲೇಬೇಕು. ಆ ಟೀಮ್ ಯಾವುದು? ಆ ಟಿವಿನ ಹಿನ್ನೆಲೆ ಏನು? ಆ ಟೀಮಿನ ಗುರಿ ಏನು? ಎಲ್ಲವೂ ಸಂಪೂರ್ಣ ತನಿಖೆಗೆ ಒಳಪಡಬೇಕು. ಹಾಗೆಯೇ ಈ ಒಂದು ತನಿಖೆಯು ಮತ್ತು ನೀಡಲಾಗುವ ಶಿಕ್ಷೆಯು, ಮುಂದಿನ ದಿನದಲ್ಲಿ ನಡೆಯುವ ಎಲ್ಲಾ ತರಹದ ಹುಚ್ಛಾಟಗಳಿಗೂ ಕಡಿವಾಣ ಹಾಕುವ ರೀತಿಯಲ್ಲಿರಬೇಕು. ಅದರ ಅರ್ಥ, ಈ ಮೂವರು ಸಿಬ್ಬಂದಿಗಳನ್ನು ಪರ್ಮನೆಂಟಾಗಿ ಶಿಕ್ಷಣ ಇಲಾಖೆಯಿಂದಲೇ ಬ್ಯಾನ್ ಮಾಡಬೇಕು. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಅವರಿಗೆ ದುಡಿಯಲು ಅವಕಾಶವೇ ಇರಬಾರದು. ಇಂತಹ ಕಲುಷಿತ ಮನಸ್ಸುಳ್ಳ ವ್ಯಕ್ತಿಗಳು ಶಿಕ್ಷಣ ಇಲಾಖೆಯಂತಹ ಪವಿತ್ರ ಸ್ಥಳದಲ್ಲಿ ಇರುವುದು ತಪ್ಪು. ಮನಸ್ಸಿನಲ್ಲಿ ಕಲ್ಮಶ ತುಂಬಿಕೊಂಡಂತವರು ಶಿಕ್ಷಣ ಇಲಾಖೆಯಲ್ಲಿ ಇರಲು ಯೋಗ್ಯರೂ ಅಲ್ಲ, ಯಾವ ಅರ್ಹತೆಯೂ ಅವರಿಗಿಲ್ಲ ಅನ್ನುವುದನ್ನು ಸರ್ಕಾರವು ಹೇಳುವಂತ ಕೆಲಸ ಈ ಪ್ರಕರಣದಲ್ಲಿ ಆಗಬೇಕಿದೆ. ಹಾಗೆಯೇ ಈ ಮೂವರಿಗೂ ಪ್ರಚೋದನೆ ನೀಡಿದಂತಹ ಆ ಟೀಮಿನ ಬಗ್ಗೆಯೂ ತನಿಖೆಯಾಗಬೇಕು ಹಾಗೂ ಅವರ ಮೇಲು ಕ್ರಮ ಆಗಬೇಕು.

    Also Read  ಮಂಗಳೂರಿನ ಆಡಳಿತ ವೈಫಲ್ಯ ಸರ್ಕಾರಿ ಕಚೇರಿಗಳಲ್ಲಿ ಸಾಲು...ಪಾಲಿಕೆ ಸೇವೆಗಳ ವಿಳಂಬ, ಭೂಪರಿವರ್ತನೆ ಗೊಂದಲ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ..

    ಈಗಾಗಲೇ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಅವರು ಈ ಕ್ಷಣದ ತನಿಖಾ ವರದಿಯನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿ ಮೂವರು ಸಿಬ್ಬಂದಿಗಳು ಬೇಕಂತಲೇ, ಯಾವುದೋ ಉದ್ದೇಶವನ್ನು ಇಟ್ಟುಕೊಂಡು ಈ ತಪ್ಪುಗಳನ್ನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆಗಾಗಲೇ ಇಲಾಖೆಯು ಸಿಬ್ಬಂದಿಗಳಿಗೆ ತಿಳುವಳಿಕೆ ನೀಡಿತ್ತು ಇಲಾಖೆ ಮತ್ತು, ಟ್ರೈನಿಂಗ್ ಕೂಡ ನೀಡಿತ್ತು. ಅಷ್ಟಾದರೂ ಈ ಮೂವರು ಸಿಬ್ಬಂದಿಗಳು ಸರ್ಕಾರದ ಸುತ್ತೋಲೆಯನ್ನು ಬದಿಗಿಟ್ಟು, ಬೇಕಂತಲೇ ಜನಿವಾರಕ್ಕೆ ಕೈ ಹಾಕಿದ್ದಾರೆಂದು ಪ್ರಾಥಮಿಕ ತನಿಖೆಯ ವರದಿಯನ್ನು ಬಹಿರಂಗಪಡಿಸಿದ್ದಾರೆ.

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಈಗಾಗಲೇ ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ
    ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
    ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!
    35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    ಒಂದೇ ಫ್ಲಾಟ್ ಇಬ್ಬಿಬ್ಬಿರ ಹೆಸರಲ್ಲಿ ..!ಡಬಲ್ ಡಾಕ್ಯುಮೆಂಟ್ ದಂಧೆ ಬಯಲು –ಕೋಟಿ ಕೋಟಿ ವಂಚನೆ ಮಾಡಿ ಆರೋಪಿ ಪರಾರಿ! ರಿಯಲ್ ಎಸ್ಟೇಟ್ ಶಾಕ್….
    ದುಬೈ ಕನಸು… ಜೈಲು ವಾಸ್ತವ!ಡ್ರಗ್ ಮಾಫಿಯಾದ ಗುರಿಯೇ ಯುವಕರು..!!ಭವಿಷ್ಯ ಕಳೆದುಕೊಳ್ಳುವ ಮುನ್ನ ಎಚ್ಚರ!
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಕರ್ನಾಟಕದಲ್ಲಿ ಈಗ ಏನು ಟ್ರೆಂಡಿಂಗ್ ಗೊತ್ತಾ…! ಸಾಲು ಸಾಲು ಹಗರಣ, ಲಂಚವತಾರ , ಅಕ್ರಮ ನೇಮಕಾತಿ,ಟ್ರಾನ್ಸ್‌ಫರ್ ಮಾಫಿಯಾ ..ಒಂದೋ ಎರಡೋ….!??
    ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    ಬೆಳ್ತಂಗಡಿ: 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಆಟೋ ಚಾಲಕ ಅಂದರ್!
    ನೇಪಾಳ ಪ್ರವಾಹ: ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ- ನೇಪಾಳ ಪ್ರಧಾನಿಗೆ ಸಹಕಾರದ ಭರವಸೆ
    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    ಇಡುಕ್ಕಿಯಲ್ಲಿ Landslide ಆರ್ಭಟ!ಇಬ್ಬರು ಸಾವು, ಮಹಿಳೆಗೆ ಗಂಭೀರ ಗಾಯ
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
    ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
    ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
    ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
    PG ಊಟದ ಮೇಲೆ FDA ಕಣ್ಣು; 64 ಕಡೆ ತಪಾಸಣೆ, 23ಕ್ಕೆ ನೋಟಿಸ್!
    ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ
    ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ಸೆ.18ಕ್ಕೆ..!
    KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತ್
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ