📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …

    ಯಾತನೆಗೆ ಮುಕ್ತಿ ಕೊಡೋದು ಕರುಣೆಯಾ? ಅಥವಾ ಅಪರಾಧವಾ?ನಾಲ್ಕನೇ ಮಹಡಿಯಿಂದ ತಾಯಿಯನ್ನು ಎಸೆದು ಕೊಲೆ ಮಾಡಿದ ಬೆಂಗಳೂರು ಘಟನೆ ನೋವು, ನಿರಾಶೆ, ಮತ್ತು ಮಾನವೀಯ ಪ್ರಶ್ನೆಗಳನ್ನು ಎಬ್ಬಿಸಿದೆ….ರಾಜರಾಜೇಶ್ವರಿ ನಗರದಲ್ಲಿ 75 ವರ್ಷದ ಸಾವಿತ್ರಮ್ಮ ಅವರನ್ನು ಅವರದೇ ಮಗ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಎಸೆದು ಕೊಂದಿದ್ದಾನೆ. ಈ ಪ್ರಕರಣದಲ್ಲಿ ಪುತ್ರ ವೆಂಕಟೇಶ್ (ಅಲಿಯಾಸ್ ದಶರಥ್) ಅನ್ನು ಪೊಲೀಸರು ಬಂಧಿಸಿದ್ದಾರೆ.

    ಸಾವಿತ್ರಮ್ಮ ಅವರು ಕಳೆದ ಮೂರು ವರ್ಷಗಳಿಂದ ಶಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ. ದಿನವೂ ತಾಯಿಯ ನೋವನ್ನು ನೋಡುವುದೇ ಮನಸ್ಸಿಗೆ ತಾಳಲಾರದ ಯಾತನೆಯಾಗಿ ಪರಿಣಮಿಸಿತ್ತು ಎಂದು ವೆಂಕಟೇಶ್ ವಿಚಾರಣೆಯಲ್ಲಿ ಹೇಳಿದ್ದಾನೆ.

    ಘಟನೆಯ ದಿನ ಮಧ್ಯಾಹ್ನ, ಮನೆಯಿಂದ ಹೊರಗೆ ತಾಯಿಯನ್ನು ಎತ್ತಿಕೊಂಡು ಹೋಗಿ, ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ. ಗಂಭೀರ ಗಾಯಗಳಿಂದ ಸಾವಿತ್ರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    Also Read  'ಸೈಯಾರಾ' ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ

    ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

    ಈ ಘಟನೆಯನ್ನ ನೋಡಿದಾಗ ಸಮಾಜದ ಆರೋಗ್ಯ ವ್ಯವಸ್ಥೆ, ಮಾನಸಿಕ ಒತ್ತಡ, ಹಾಗೂ ಆರೈಕೆ ಮಾಡುವವರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುತ್ತದೆ.

    • ದೀರ್ಘಕಾಲದ ರೋಗಿಗಳ ಆರೈಕೆ ಕುಟುಂಬದ ಮೇಲೆ ಎಷ್ಟು ಗಂಭೀರ ಮಾನಸಿಕ ಹಾಗೂ ಆರ್ಥಿಕ ಒತ್ತಡ ತರುತ್ತದೆ ಅನ್ನೋದಕ್ಕೆ ಜ್ವಲಂತ ನಿದರ್ಶನ.ಇದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮತ್ತು ಸಹಾಯ ವ್ಯವಸ್ಥೆಗಳ ಕೊರತೆ”ಯನ್ನ ಯಾತನೆಗೆ ಮುಕ್ತಿ” ಎಂಬ ಭಾವನೆ ಕೆಲವೊಮ್ಮೆ ಅಪಾಯಕಾರಿ ನಿರ್ಧಾರಗಳಿಗೆ ದಾರಿ ಮಾಡಿಕೊಡಬಹುದು ಅನ್ನೋದು ವಿಚಾರ .

    • ಸಮಾಜಕ್ಕೆ ಸಂದೇಶ:
      ಇಂತಹ ಸಂದರ್ಭಗಳಲ್ಲಿ ಸಹಾಯ ಕೇಳುವುದು ದುರ್ಬಲತೆ ಅಲ್ಲ. ಮಾನಸಿಕ ಒತ್ತಡವನ್ನು ನಿರ್ವಹಿಸಲು ವೈದ್ಯಕೀಯ ಮತ್ತು ಸಮುದಾಯ ಬೆಂಬಲ ಅತ್ಯಗತ್ಯ.
    ##BengaluruCrime #EmotionalDistress #CaregiverStress #MentalHealthAwareness #ElderCare #BreakingNews #HumanStory

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
    ರೈತರಿಗೆ ಬಿಗ್ ರಿಲೀಫ್! ಕೃಷಿ ಸಾಲ ಮರುಪಾವತಿಗೆ 12 ತಿಂಗಳ ಮೊರಟೋರಿಯಂ
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ
    ಸುಮಂತ್ ನಿಗೂಢ ಸಾವು ಪ್ರಕರಣ: ತನಿಖೆಗೆ ಹೊಸ ತಿರುವು—ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್, ಮಂಪರು ಪರೀಕ್ಷೆ!
    ಡಾನ್ -3 ಸಿನಿಮಾ ಕಥೆ ಗೋವಿಂದ….!
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
    ಹೊಸ ಸಂಸತ್ ಭವನದ ವಿನ್ಯಾಸಕ್ಕೆ ಶಶಿ ತರೂರ್ ಅಸಮಾಧಾನ: “ಆತ್ಮ ರಹಿತ ಸಮಾವೇಶ ಕೇಂದ್ರ”
    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಶಿರ್ತಾಡಿ ಭಾಗದಲ್ಲಿ ಮರಗಳ್ಳತನ ಆರೋಪ:  ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹ
    ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
    ಕೆತ್ತಿಕಲ್‌ನಿಂದ ಚಾರ್ಮಾಡಿವರೆಗೆ ಅಪಾಯದ ಗಂಟೆ! ಭೂಕುಸಿತ ಭೀತಿಯಲ್ಲಿ ಕರಾವಳಿ ರಸ್ತೆಗಳು !ಮಳೆ ಬಂದ ಮೇಲೆ ಸಭೆ, ಪರಿಶೀಲನೆ… ಆದರೆ ಮುನ್ನೆಚ್ಚರಿಕೆ ಎಲ್ಲಿದೆ?
    ಕುಂದಾಪುರ ಗಂಗೊಳ್ಳಿಯಲ್ಲಿ ಕತ್ತಿ  ದೊಣ್ಣೆಗಳಿಂದ ಮಾರಾಮಾರಿ; ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು?
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಆಸ್ಪತ್ರೆಗಳಲ್ಲಿ ಔಷಧ ಬೆಲೆ ಸುಲಿಗೆ? ಸುಪ್ರೀಂ ಕೋರ್ಟ್ ಗರಂ
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    “ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಾನು ಅಧ್ಯಕ್ಷ ಸ್ಥಾನ ಬಿಡಲು ಸಿದ್ಧ”!-ಉದ್ಧವ್ ಠಾಕ್ರೆ ಕಣ್ಣೀರಿನ ಮನವಿ.
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    ನಾಹೀದಾ( ‘ರಾಮಕ್ಕ’)ಗೆ ಧರ್ಮ ಮೀರಿದ ಸೀಮಂತ! ಹಾರೈಸಿದ ಮುಸ್ಲಿಂ ಸಮುದಾಯ!ಜನರ ಪ್ರೀತಿಯ ಉಡುಗೊರೆ…
    ಕಾಕ್ರೋಜ್ ಎಫೆಕ್ಟ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಮುಖ  ಬದಲಾವಣೆ.
    ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
    ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಕ್ಕೆ ಬ್ರೇಕ್? ರೋಗಿಗಳ ಹಕ್ಕು ರಕ್ಷಣೆಗೆ 24×7 ನೇರ ಹೆಲ್ಪ್‌ಲೈನ್ – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
    ಬಂಟ್ವಾಳದಲ್ಲಿ ವ್ಯಕ್ತಿಗಳ ಆರೋಪ–ಪ್ರತ್ಯಾರೋಪಕ್ಕಿಂತ “ರಾಜಕೀಯದೊಳಗಿನ ರಾಜಕೀಯ”ಬಿಸಿ…!ಲಾಭ ಯಾರಿಗೆ?
    ಬೆಳಗಾವಿ ಮಾಜಿ ಯೋಧನ ಸಾವಿನ ಹಿಂದೆ ಬೆಚ್ಚಿಬೀಳಿಸುವ ಸತ್ಯ ₹2 ಕೋಟಿ ವಿಮೆ..!? ಸಿನೆಮಾವನ್ನೂ ಮೀರಿಸಿದ ಕ್ರೈಂ ಸ್ಟೋರಿ!
    ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್