📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..

    ಅಮೆರಿಕದ ಜಾರ್ಜಿಯಾದಲ್ಲಿ ನಡೆದಿರುವ ಈ ಘಟನೆ ಕೇವಲ ಒಂದು ಅಪಘಾತವಲ್ಲ, ಕೇಳುಗರ ಕಣ್ಣಾಲಿಗಳನ್ನು ಒದ್ದೆ ಮಾಡುವ ಅತ್ಯಂತ ಕರುಣಾಜನಕ ಹಾಗೂ ಭೀಕರ ದುರಂತ. ನವದಂಪತಿಗಳಾಗಿ ನೂರಾರು ಕನಸುಗಳೊಂದಿಗೆ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಟ್ಟ ಕೆಲವೇ ಗಂಟೆಗಳಲ್ಲಿ, ಮದುಮಗ ಸಾವಿನ ಮಡಿಲು ಸೇರಿದರೆ, ಮದುಮಗಳು ಹೆಣಗಾಡಿ ಬದುಕುಳಿದಿದ್ದಾಳೆ.

    ಕೇರಳ ಮೂಲದ ಈ ಅನಿವಾಸಿ ಭಾರತೀಯ ಕುಟುಂಬದಲ್ಲಿ ನಡೆದ ಆ ಕಪ್ಪು ದಿನದ ಕಣ್ಣೀರಿನ ಕಥೆ

    ಸ್ವರ್ಗದಂತಿದ್ದ ಮದುವೆ ಮನೆ

    ಕೇರಳದ ಎರ್ನಾಕುಲಂ ಜಿಲ್ಲೆಯ ಮೂವಾಟ್ಟುಪುಳ ಮೂಲದ ಜಾರ್ಜ್ ಮತ್ತು ಫೀಬಾ ಫಿಜಿ ದಂಪತಿಯ 25 ವರ್ಷದ ಮಗ ಡೇವ್ ಫಿಜಿ (Dave Fiji), ಅಮೆರಿಕದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಚರ್ಚ್ ಒಂದರಲ್ಲಿ ಪರಿಚಯವಾದ ಜಿಸ್ನಿ (Jessni) ಎಂಬ ಶುಶ್ರೂಷಕಿ (Nurse) ಜೊತೆ ಡೇವ್ ಅವರ ಪ್ರೀತಿ ಚಿಗುರಿತ್ತು. ಜಾರ್ಜಿಯಾದ ‘ದಿ ರವೆರೆ’ ಎಂಬ ಸುಂದರ ಕಲ್ಯಾಣ ಮಂಟಪದಲ್ಲಿ ಸುಮಾರು 400ಕ್ಕೂ ಹೆಚ್ಚು ಅತಿಥಿಗಳ ಸಮ್ಮುಖದಲ್ಲಿ ಇವರಿಬ್ಬರ ವಿವಾಹ ಅತ್ಯಂತ ವೈಭವದಿಂದ ನೆರವೇರಿತ್ತು. “ಅದು ಅತ್ಯಂತ ಪರಿಪೂರ್ಣವಾದ ಮದುವೆಯಾಗಿತ್ತು. ನನ್ನ ಮಗ ವರನ ಉಡುಪಿನಲ್ಲಿ ದೇವಕುಮಾರನಂತೆ ಕಂಗೊಳಿಸುತ್ತಿದ್ದ” ಎಂದು ಡೇವ್ ತಂದೆ ಆ ಕ್ಷಣವನ್ನು ನೆನೆದು ಕಣ್ಣೀರಿಡುತ್ತಾರೆ.

    Also Read  ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!

    ಹವಾಮಾನದ ಆತಂಕ ಮತ್ತು ಎಚ್ಚರಿಕೆ

    ಮದುವೆಯ ಸಂಭ್ರಮಾಚರಣೆ ಮುಗಿದು ರಾತ್ರಿ 9:30ರ ಸುಮಾರಿಗೆ ನವದಂಪತಿಗಳು ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಏರಬೇಕಿತ್ತು. ಆದರೆ, ಆ ಸಮಯದಲ್ಲಿ ಜಾರ್ಜಿಯಾದ ಡಾಸನ್‌ವಿಲ್ಲೆ ಭಾಗದಲ್ಲಿ ಭಾರಿ ಮಳೆ ಮತ್ತು ದಟ್ಟವಾದ ಮಂಜು ಆವರಿಸಿತ್ತು. ಸ್ವತಃ ಕಮರ್ಷಿಯಲ್ ಪೈಲಟ್ ಆಗಿದ್ದ ಡೇವ್‌ಗೆ ವಾತಾವರಣ ಸರಿಯಿಲ್ಲ ಎಂಬುದು ತಕ್ಷಣವೇ ಅರ್ಥವಾಗಿತ್ತು. “ಇಷ್ಟು ಕಡಿಮೆ ವಿಸಿಬಿಲಿಟಿ (ಕಾಣುವಿಕೆ) ಇದ್ದಾಗ ನಾವು ಎಂದಿಗೂ ವಿಮಾನ ಹಾರಿಸುವುದಿಲ್ಲ” ಎಂದು ಡೇವ್ ಹೆಲಿಕಾಪ್ಟರ್ ಚಾಲಕನಿಗೆ ಎಚ್ಚರಿಸಿದ್ದರು. ಆದರೆ, ‘ನಾವು ಎತ್ತರದಲ್ಲಿ ಹಾರೋಣ’ ಎಂದು ಹೇಳಿದ ಹೆಲಿಕಾಪ್ಟರ್ ಪೈಲಟ್, ರಾತ್ರಿ 10:30ರ ಸುಮಾರಿಗೆ ರಾಬಿನ್ಸನ್ R66 ಹೆಲಿಕಾಪ್ಟರ್ ಅನ್ನು ಆಕಾಶಕ್ಕೆ ಹಾರಿಸಿದ. ಅದೇ ಅವರು ಮಾಡಿದ ಕಡುದೊಡ್ಡ ತಪ್ಪಾಯಿತು.

    Also Read  ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!

    ಕಗ್ಗತ್ತಲಲ್ಲಿ ಸಂಭವಿಸಿದ ಭೀಕರ ದುರಂತ

    ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್, ಡಾಸನ್‌ವಿಲ್ಲೆಯ ದಟ್ಟವಾದ ಕಾಡು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿತು. ಭಾರಿ ಮರಗಳ ನಡುವೆ ಹೆಲಿಕಾಪ್ಟರ್ ನುಜ್ಜುಗುಜ್ಜಾಗಿ ಬಿದ್ದಿತ್ತು. ಕಗ್ಗತ್ತಲು, ಮಳೆ ಮತ್ತು ದುರ್ಗಮ ಹಾದಿಯಾಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಅಪಘಾತ ನಡೆದ ಸ್ಥಳವನ್ನು ಪತ್ತೆ ಹಚ್ಚುವುದಕ್ಕೇ ಸತತ 5 ರಿಂದ 6 ಗಂಟೆಗಳು ಬೇಕಾದವು.

    ಎಚ್ಚರಗೊಂಡ ನರ್ಸ್ ಕಂಡ ಭೀಕರ ದೃಶ್ಯ

    ಸುಮಾರು ಐದು ಗಂಟೆಗಳ ಕಾಲ ಆ ತೀವ್ರ ಚಳಿಯಲ್ಲಿ, ನಜ್ಜುಗುಜ್ಜಾದ ಹೆಲಿಕಾಪ್ಟರ್‌ನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮದುಮಗಳು ಜಿಸ್ನಿಗೆ ಪ್ರಜ್ಞೆ ಬಂದಾಗ ಇಡೀ ಜಗತ್ತೇ ಶೂನ್ಯವಾಗಿತ್ತು. ಆಕೆ ಕಣ್ಣು ಬಿಟ್ಟಾಗ ಅವಳ ಎದೆಯ ಮೇಲೆ ಅವಳ ಪ್ರೀತಿಯ ಪತಿ ಡೇವ್ ಬಿದ್ದಿದ್ದ. ಮೈಮೇಲೆ ರಕ್ತ ಹರಡಿತ್ತು. ವೃತ್ತಿಯಿಂದ ನರ್ಸ್ ಆಗಿದ್ದ ಜಿಸ್ನಿ, ತಕ್ಷಣವೇ ಪತಿಯ ದೇಹವನ್ನು ಮುಟ್ಟಿ ಧ್ವನಿ ನೀಡಲು ಯತ್ನಿಸಿದಳು. ಆದರೆ, ಡೇವ್ ದೇಹ ಸಂಪೂರ್ಣವಾಗಿ ತಣ್ಣಗಾಗಿತ್ತು. ತನ್ನ ಕೈ ಹಿಡಿದು ಕೆಲವೇ ಗಂಟೆಗಳ ಮುನ್ನ ಸಪ್ತಪದಿ ತುಳಿದ ಪತಿ ಇನ್ನಿಲ್ಲ ಎಂಬ ಕಟು ಸತ್ಯ ಆಕೆಗೆ ಆ ಕತ್ತಲಲ್ಲೇ ಅರಿವಾಯಿತು.

    Also Read  ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL

    ಮರುಕಳಿಸದ ಮದುಮಗ, ಕಣ್ಣೀರಲ್ಲಿ ಮುಳುಗಿದ ಪೋಷಕರು

    ರಕ್ಷಣಾ ಸಿಬ್ಬಂದಿ ಜೆಸ್ನಿಯನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್ ಆಕೆಯ ಮೂಳೆಗಳಿಗೇನು ಮುರಿತವಾಗಿಲ್ಲ, ಆದರೆ ಮನಸ್ಸಿಗೆ ಆಗಿರುವ ಗಾಯ ಎಂದಿಗೂ ವಾಸಿಯಾಗದಂತದ್ದು. ಇತ್ತ ಮಗನ ಮದುವೆಯ ಸಂಭ್ರಮದಲ್ಲಿದ್ದ ಪೋಷಕರು ಈಗ ಹೆಣದ ಮುಂದೆ ಕೂತು ಕಣ್ಣೀರು ಹಾಕುತ್ತಿದ್ದಾರೆ. “ದೇವರು ನಮಗೆ ಅತ್ಯಂತ ಸುಂದರವಾದ ಮದುವೆ ನೀಡಿದ, ಆದರೆ ಕೆಲವೇ ಗಂಟೆಗಳಲ್ಲಿ ಎಲ್ಲವೂ ದುರಂತವಾಗಿ ಬದಲಾಯಿತು. ಈಗ ನಮಗೆ ಆ ದೇವರಷ್ಟೇ ನೆಮ್ಮದಿ ನೀಡಬೇಕು” ಎಂದು ತಂದೆ ಜಾರ್ಜ್ ಬಿಕ್ಕಳಿಸುತ್ತಿದ್ದಾರೆ.

    ಹಸೆಮಣೆ ಏರಿದ್ದ ಜೋಡಿ ಹಕ್ಕಿಗಳಲ್ಲಿ ಒಂದು ಹಕ್ಕಿ ಜೀವ ಕಳೆದುಕೊಂಡರೆ, ಮತ್ತೊಂದು ಹಕ್ಕಿ ರೆಕ್ಕೆ ಮುರಿದು ಆಸ್ಪತ್ರೆಯ ಹಾಸಿಗೆಯ ಮೇಲೆ ಅನಾಥವಾಗಿ ಬಿದ್ದಿರುವ ಈ ಘಟನೆ ಅಮೆರಿಕದ ಮಲಯಾಳಿ ಸಮುದಾಯ ಸೇರಿದಂತೆ ಇಡೀ ಭಾರತೀಯರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

    ##HeartbreakingNews #HelicopterCrash #RestInPeace #DaveFiji #TragicIncident

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    ಚುನಾವಣೆಯವರೆಗೆ ಮೌನ, ನಂತರ LPG ದರ ಭಾರಿ ಏರಿಕೆ –ಇದು ರಾಜಕೀಯ ಅಜೆಂಡಾನಾ?
    ಉಡುಪಿಯ ಸಾಯಿ ರಾಜ್ ಕೋ ಆಪರೇಟಿವ್ ಸೊಸೈಟಿ ಸಿಇಒ ಆತ್ಮ ಹತ್ಯೆಗೆ ಯಾರು ಕಾರಣ?
    ಉತ್ತರ ಕನ್ನಡಕ್ಕೆ ₹6,925 ಕೋಟಿ ಬಂದರು ಯೋಜನೆ: 15 MTPA ಸಾಮರ್ಥ್ಯದ ಮಂಕಿ ಬಂದರಿಗೆ ಸಚಿವ ಸಂಪುಟ ಒಪ್ಪಿಗೆ
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    24 ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕಾ ದಾಳಿ: 3 ನಾವಿಕರ ಜೀವ ಬಲಿ
    ಫುಟ್‌ಪಾತ್ ಬೇಕು, ಆದರೆ ಬದುಕಿಗೂ ಜಾಗ ಬೇಕಲ್ಲವೇ?ಮಂಗಳೂರಿನಲ್ಲಿ ಬೀದಿಬದಿ ಹೂವಿನ ವ್ಯಾಪಾರಕ್ಕೆ ‘ಶಾಕ್’ ವ್ಯಾಪಾರಿಗಳ ತೆರವು ನಿಯಮ ಸರಿ… ಪರ್ಯಾಯ ವ್ಯವಸ್ಥೆ ಎಲ್ಲಿ?
    ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ‘ಈದ್’ ರಜಾ ತೀರ್ಮಾನ ಕೈಗೊಳ್ಳಲು ಜಿಲ್ಲಾಡಳಿತ ಸಂಜೆ 6.30ರ ವರೆಗೂ ವಿಫಲ!
    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    ವಿದ್ಯಾರ್ಥಿ ಪ್ರತಿಭಟನೆಗೆ ಬಿಗ್ ವಿಕ್ಟರಿ:ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ಕೊನೆಗೂ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಸರ್ಕಾರ…!?
    ಸರ್ಕಾರಕ್ಕೆ CJP ಸವಾಲು…ದೆಹಲಿ ಪ್ರತಿಭಟನೆಗೆ ಹಿಂಸಾತ್ಮಕ ತಿರುವು..ಲಾಠಿಚಾರ್ಜ್, ಅಶ್ರುವಾಯು, ಇಂಟರ್ನೆಟ್ ಶಟ್‌ಡೌನ್..
    ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
    ಅಲ್ಲಿ ಸೌಮೆಂದು ಅಧಿಕಾರಿ…. ಇಲ್ಲಿ ಸಾಮ್ರಾಟ್ ಚೌದರಿ, ಹೆಲ್ತ್ ಮಿನಿಸ್ಟರ್ ನಿಶಾಂತ್….
    ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
    MRPL ಸ್ಫೋಟ FIR… ದಾಖಲು…MRPL ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ…!
    Golden Hour ಉಳಿಸುವತ್ತ ಗ್ರಾಮದಿಂದ ನಗರವರೆಗೆ – ಕರ್ನಾಟಕ ಹೆಲ್ತ್ ಸಿಸ್ಟಮ್ ಮಹತ್ವದ ಹೆಜ್ಜೆ
    ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    “ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
    ಸಿವಿಲ್ ಕೇಸ್‌ನಲ್ಲಿ ಬಂಧನ..!ಎಸ್‌ಐಗೆ ₹3 ಲಕ್ಷ ದಂಡ — ACP, DCP ವಿರುದ್ಧವೂ ತನಿಖೆ!
    ವೃಷಣಗಳಿಗೆ ₹6 ಕೋಟಿ? ನಾ ರೀಲ್ ನಂಬಿ  16ರ ಬಾಲಕ ಹತ್ಯೆ!ಇದು ₹6 ಕೋಟಿ ಆಸೆಗೆ ನಡೆದ ಭೀಕರ ಕೃತ್ಯ…!
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
    ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
    ₹6,695 ಕೋಟಿಯ ಮೆಗಾ ಪ್ರಾಜೆಕ್ಟ್‌ಗೆ ಮಳೆಯ ಅಗ್ನಿಪರೀಕ್ಷೆ-ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ