📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಮಚ್ಚು ದಾಳಿ: ಕಾಲೇಜಿಗೆ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಹಲ್ಲೆ; ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಭೀಕರ ದಾಳಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ–ಮೋಂತಿಮಾರು ಬಸ್ ತಂಗುದಾಣದಲ್ಲಿ ಇಂದು ಬೆಳಿಗ್ಗೆ ಕಾಲೇಜಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಯೊಬ್ಬ ಮಾರಣಾಂತಿಕವಾಗಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಆತಂಕ ಸೃಷ್ಟಿಸಿದೆ. ದಾಳಿಯಿಂದ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಸ್ಥಳೀಯರು ಕೂಡಲೇ ಆಕೆಯನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಸಾಗಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳದ ಗೋಡೆ ಹಾಗೂ ನೆಲದ ತುಂಬಾ ರಕ್ತದ ಕಲೆಗಳು ಕಂಡುಬಂದಿದ್ದು, ದಾಳಿಯ ಭೀಕರತೆಗೆ ಸಾಕ್ಷಿಯಾಗಿದೆ. ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸ್ಥಳವನ್ನು ಪೊಲೀಸ್ ಟೇಪ್ ಹಾಗೂ ಬ್ಯಾರಿಕೇಡ್‌ಗಳಿಂದ ಸುತ್ತುವರಿದು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿಯಲ್ಲಿ ದಾಳಿಯ ಹಿಂದೆ ಭಗ್ನ ಪ್ರೇಮದ ಶಂಕೆ ವ್ಯಕ್ತವಾಗಿದ್ದರೂ, ಅದರ ಕುರಿತು ಪೊಲೀಸರು ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲ. ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

    Also Read  ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..

    ಘಟನೆ ವಿವರ..

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಭೀಕರ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಾಲೇಜಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ಏಕಾಏಕಿ ದಾಳಿ ನಡೆಸಿದ ಘಟನೆ ವರದಿಯಾಗಿದೆ.

    ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಥಳೀಯ ನಿವಾಸಿ ಹಾಗೂ ವ್ಯಾಪಾರಿ ಎಂದು ಗುರುತಿಸಲಾದ ಜವ್ವರ್ ಎಂಬಾತ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯಾರ್ಥಿನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ., “ಪ್ರೇಮ ಪ್ರಕರಣ”, “ವೈಯಕ್ತಿಕ ದ್ವೇಷ”ಕಾರಣ ಎನ್ನಲಾಗುತ್ತಿದ್ದು ಅಧಿಕೃತ ಪೊಲೀಸ್ ಪ್ರಕಟಣೆ ಅಥವಾ ಆಸ್ಪತ್ರೆಯ ವೈದ್ಯಕೀಯ ವರದಿ ಪ್ರಕಟವಾದ ಮೇಲೆಯೇ ಸ್ಪಷ್ಟ ಚಿತ್ರಣ ಸಿಗಲಿದೆ.

    Also Read  ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್

    ದಾಳಿಯ ತೀವ್ರತೆಗೆ ವಿದ್ಯಾರ್ಥಿನಿಯ ದೇಹದಿಂದ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗಿದ್ದು, ಬಸ್ ನಿಲ್ದಾಣದ ಸುತ್ತಮುತ್ತ ರಕ್ತದ ಕಲೆಗಳು ಕಂಡುಬಂದಿವೆ. ಘಟನೆ ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ತಕ್ಷಣ ಧಾವಿಸಿ ಗಾಯಾಳುವನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ವಿದ್ಯಾರ್ಥಿನಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದು, ಆಕೆಯ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ.

    ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ.

    ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ಹಾಗೂ ದಾಳಿಯ ಹಿಂದಿನ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ. ಸದ್ಯಕ್ಕೆ ದಾಳಿಯ ಉದ್ದೇಶ ಅಥವಾ ಕಾರಣ ಕುರಿತು ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    Also Read  ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR

    ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿದ್ದು, ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸಮರ್ಪಕ ಭದ್ರತೆ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನೆಯ ಸಂಪೂರ್ಣ ಸತ್ಯಾಂಶ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

    ##Bantwal #DakshinaKannada #CrimeNews #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಕರ್ನಾಟಕದ 177 ತಾಲೂಕು ಬರಪೀಡಿತ… ಪರಿಹಾರ ಕೇಳಲು ಹೊರಟ ಸರ್ಕಾರಕ್ಕೆ BJP–JDS ಸಾಥ್ ಇಲ್ಲ!ಸರ್ವಪಕ್ಷ ನಿಯೋಗಕ್ಕೆ ಗೈರು!
    ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
    ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾ ಅಪ್ಡೇಟ್: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿರೋ ಯಶ್ ಡೈಲಾಗ್!
    ಮಗಳ ಎಡವಟ್ಟಿಗೆ ಪಿಣರಾಯಿ ಬಲಿ…..ಕೇರಳ ರಾಜಕಾರಣದಲ್ಲಿ ಹೈವೋಲ್ಟೇಜ್ ಭೂಕಂಪ
    ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
    ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
    ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ಆಂಬುಲೆನ್ಸ್ ಡ್ರೈವರ್ ನ ಸಮಾಜ ಸೇವೆಯ ಕಾರ್ಯ ಶ್ಲಾಘನಿಯ – ಸುದೇಶ್ ಕುಮಾರ್
    ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.
    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
    ಬಂಗಾಳ ರಾಜಕೀಯದಲ್ಲಿ ಭಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್..! ಸುವೇಂದು ಪ್ರಮಾಣವಚನಕ್ಕೂ ಬ್ರೇಕ್ ಬೀಳುತ್ತಾ?ಸುಪ್ರೀಂ ಕೋರ್ಟ್ ಎಂಟ್ರಿ ಆಗುತ್ತಾ?
     “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
    ಡೆಲಿವರಿ ಬಾಯ್‌ಗೆ ಅಡ್ಡಗಟ್ಟಿ ಹಲ್ಲೆ – ಪ್ರಕರಣ ದಾಖಲು
    ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.
    ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
    ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
    ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ