📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯನನ್ನು ಅಮಾನತ್ತು ಮಾಡಿದರೆ ಸಾಕೆ?

    ಕುಂದಾಪುರ ಪತ್ರಕರ್ತರೊಬ್ಬರ ಮೇಲೆ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯ ಮಹೇಂದ್ರ ಶೆಟ್ಟಿ ಎಂಬಾತ ಏಕಾಏಕಿ ನಗರದ ಹೋಟೆಲ್ ಒಂದರಲ್ಲಿ ಹಲ್ಲೆ ನಡೆಸುತ್ತಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ವೈದ್ಯರನ್ನು ಸರ್ಕಾರಿ ಸೇವೆಯಿಂದ ಅಮಾನತ್ತು ಗೊಳಿಸಲಾಗಿದೆ.

    ಇದರಿಂದ ಆ ವೈದ್ಯ ಪಾಠ ಕಲಿಯುತ್ತಾನಾ? ಸಂತ್ರಸ್ತ ಪತ್ರಕರ್ತ, ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಹಾರ ಹಾಗೂ ನಿಯಮಬಾಹಿರ ಚಟುವಟಿಕೆಯನ್ನು ಅದ್ಯಯನ ನಡೆಸಿ ವರದಿ ಮಾಡಿರುತ್ತಾರೆ. ಈ ವರದಿಯಿಂದ ಕುಪಿತಗೊಂಡ ಡಾಕ್ಟರ್ ಶೆಟ್ಟಿ, ತನ್ನ ಜೊತೆಗೆ ಇನ್ನೊಬ್ಬ ಆಯುರ್ವೇದ  ವೈದ್ಯೆಯನ್ನು ಕರೆದುಕೊಂಡು ಬಂದು, ಹೋಟೆಲ್ ಒಂದರಲ್ಲಿ ಪತ್ನಿ ಹಾಗೂ ಸ್ನೇಹಿತರೊಂದಿಗೆ ತಿಂಡಿ ತಿನ್ನುತ್ತಿರುವಾಗ ಏಕಾ ಏಕಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದಾನೆ ಈ ಒಂದು ಪ್ರಕರಣವು ಹೋಟೆಲಿನ ಸಿಸಿ ಕ್ಯಾಮೆರಾದಲ್ಲೂ ದಾಖಲಾಗಿದೆ.  ಜನರ ಕಾಪಾಡುವ ದೇವರು ಎಂದು ಕರೆಯಲಾಗುವ ಡಾಕ್ಟರ್ ಶೆಟ್ಟಿಯ ಈ ನಡವಳಿಕೆ ವೈದ್ಯಕೀಯ ಸಮುದಾಯಕ್ಕೆ ಕಪ್ಪು ಚುಕ್ಕೆ.

    Also Read  ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ

    ಇಂತಹ ಕಪ್ಪು ಚುಕ್ಕೆ ವ್ಯಕ್ತಿಯನ್ನು ಕೇವಲ ಅಮಾನತ್ತು ಮಾಡಿದರೆ ಸಾಕೆ? ಈ ವ್ಯಕ್ತಿಯ ನಡವಳಿಕೆ ಅತ್ಯಂತ ಕ್ರೂರತನದಿಂದ ಕೂಡಿದೆ ಎಂಬ ಆರೋಪವು ಬಹಳ ಸಮಯದಿಂದ ಇದೆ. ಆತ ಕೆಲಸ ಮಾಡಿದ ಕಡೆಯಲ್ಲೆಲ್ಲಾ, ಕೆಟ್ಟ ಹೆಸರು ಸಂಪಾದಿಸಿದ್ದಾನೆ ಹೊರತು ಒಳ್ಳೆಯ ಹೆಸರು ಕಿಂಚಿತ್ತು ಇಲ್ಲ. ಅವನ ಕೈಗೆ ವೈದ್ಯಕೀಯ ಸಲಕರಣೆ ಸಿಕ್ಕರೆ ಏನಾಗಬಹುದು? ಸರ್ಕಾರ ಯೋಚಿಸಬೇಕಿದೆ. ವೈದ್ಯಕೀಯ ಕ್ಷೇತ್ರ ಯೋಚಿಸಬೇಕಿದೆ. ಸಂಭಂಧಪಟ್ಟ ಅಧಿಕಾರಿಗಳು, ಯೂನಿಯನ್ ನವರು ಯೋಚಿಸಬೇಕಿದೆ.

    ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಡಾಕ್ಟರ್ಸ್ಗಳಿದ್ದಾರೆ. ರೋಗಿಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಶಾಂತವಾಗಿ ಅಷ್ಟೇ ಸoಯಮದಿಂದ ಪ್ರತಿಕ್ರಿಯೆ ನೀಡುತ್ತಾ, ಅವರನ್ನು ಗುಣಮುಖ ಮಾಡುವ ನಿಟ್ಟಿನಲ್ಲಿ ಕಾರ್ಯಚರಿಸುತ್ತಿರುವ ವೈದ್ಯರುಗಳ ಮಧ್ಯೆ ಈ ಮಹೇಂದ್ರ ಶೆಟ್ಟಿ ಎಂಬ ರೌಡಿ ವೈದ್ಯ ವೃತ್ತಿಗೆ ಅಪಕ್ಯಾತಿ ಯಾಗಿದ್ದಾನೆ ಎಂಬ ಮಾತು ಕುಂದಾಪುರದಿಂದ ಕೇಳಿ ಬರುತ್ತಿದೆ.

    Also Read  Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”

    ತಕ್ಷಣವೇ, ಈತನಿಗೆ ನೀಡಲಾಗಿರುವ ವೈದ್ಯಕೀಯ ಸೇವೆಯನ್ನು ನೀಡಲು ಅರ್ಹವಾಗಿದ್ದ ಸರ್ಟಿಫಿಕೇಟ್ ಅನ್ನು ಹಿಂದಕ್ಕೆ ಪಡೆಯುವ ಕೆಲಸ ಆಗಬೇಕು. ಆದರಿಂದ ಮಾತ್ರ ಈತ ಬುದ್ಧಿ ಕಲಿಯಬಹುದು. ಅಹಂಕಾರ ಹಾಗೂ ಹಣದ ಹಪಾಹಪಿ ಬಿಟ್ಟರೆ ಬೇರೆನೂ ಇಲ್ಲ. ಸೇವೆ ಅನ್ನುವುದಕ್ಕೆ ಈತನ ಬಳಿ ಜಾಗವೇ ಇಲ್ಲ. ಅಂತಹ ಮನಸ್ಥಿತಿಯ ವ್ಯಕ್ತಿಯ ಕೈಗೆ ವೈದ್ಯಕೀಯ ಸರ್ಟಿಫಿಕೇಟ್ ಸಿಕ್ಕರೆ ಇನ್ನೇನಾಗುತ್ತದೆ? ಅದೇ ಇಲ್ಲಾಗಿದೆ ಅನ್ನೋದು ಸಾರ್ವಜನಿಕರ ಆಕ್ರೋಶದ ನುಡಿಯಾಗಿದೆ. ಹಾಗಾಗಿ ಕೇವಲ ಅಮಾನತ್ತು ಶಿಕ್ಷೆಯಿಂದ ಆತ ಪಾಠವನ್ನು ಕಲಿಯುವುದಿಲ್ಲ, ತನ್ನನ್ನು ತಾನು ತಿದ್ದಿಕೊಳ್ಳುವುದು ಇಲ್ಲ. ಖಾಸಗಿ ಕ್ಷೇತ್ರದಲ್ಲಿ ಸುಲಿಗೆಯನ್ನು ಮುಂದುವರಿಸುತ್ತಾನೆ ಅಷ್ಟೇ ಎಂದು, ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಆತನಿಗೆ ನೀಡಲಾಗಿರುವಂತಹ ಸರ್ಟಿಫಿಕೇಟ್ ಹಿಂಪಡೆಯುವ ಕೆಲಸ ಸಂಬಂಧ ಪಟ್ಟ ಇಲಾಖೆಯಿಂದ ಆಗಬೇಕಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
    ವಿಜಯ್ vs ಡಿಕೆಶಿ ಅಲ್ಲ… ಅಮಿತ್ ಶಾ ಮುಂದೆ ಸೌತ್ ಪವರ್!ದಕ್ಷಿಣದ ಹಕ್ಕಿಗಾಗಿ ಒಂದೇ ಧ್ವನಿ!
    NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
    ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!
    “ಜೈ ಶ್ರೀರಾಮ್” ಘೋಷಣೆಯಿಂದ ನಡುಗಿದ ಢಾಕಾ! 
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
    Old Monk, Royal Challengeಗೆ ಭಾರೀ ಶಾಕ್..! FSSAI ಲ್ಯಾಬ್ ವರದಿಯಲ್ಲಿ ಬಯಲಾಯ್ತಾ ದೊಡ್ಡ ರಹಸ್ಯ?
    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
    ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
    ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
    2047ರ ಕನಸಿನ ಭಾರತಕ್ಕಾಗಿ ದೆಹಲಿಯಲ್ಲಿ ಮೆಗಾ ಮಂಥನ… ಏನಿದೆ ಈ ಮಾಸ್ಟರ್ ಪ್ಲಾನ್‌ನಲ್ಲಿ?
    ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
    ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
    ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    “ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ರಾಷ್ಟ್ರಪತಿ ಮುರ್ಮು ಅವರ ADC…ನ್ಯಾಷನಲ್ ಕ್ರಶ್ ಆಗಿದ್ದ ಮೇಜರ್ ರಿಷಭ್ ಸಂಬ್ಯಾಲ್ ಸೇನೆಗೆ ಗುಡ್‌ಬೈ!
    “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
    ಪರಿಸರ ಕಾಪಾಡುವವರೇ ನಿಜವಾದ ಹೀರೋಗಳು! ‘ಇಕೋಪ್ರಿನ್ಯೂರ್ ಅವಾರ್ಡ್ಸ್ 2026’ ಮೂಲಕ ಹಸಿರು ಸಾಧಕರಿಗೆ ಗೌರವ
    ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….