📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತುಳು ವಿಕಿಪೀಡಿಯಾಗೆ ದಶಮಾನೋತ್ಸವ ಸಂಭ್ರಮ

    ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಡಿಜಿಟಲ್ ಜಗತ್ತಿನಲ್ಲಿ ದಾಖಲಿಸುತ್ತಿರುವ ತುಳು ವಿಕಿಪೀಡಿಯಾ ತನ್ನ ಲೈವ್ ಆವೃತ್ತಿಯ 10ನೇ ವರ್ಷವನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ವತಿಯಿಂದ ಸೆಪ್ಟೆಂಬರ್ 12 ಮತ್ತು 13ರಂದು ನಗರದ ಎ.ಜೆ. ಗ್ರಾಂಡ್ ಹೋಟೆಲ್‌ನಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ರೂಪ್ ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ತಿಳಿಸಿದ್ದಾರೆ.

    ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಆರಂಭವಾದ ತುಳು ವಿಕಿಪೀಡಿಯಾ ಎಂಟು ವರ್ಷಗಳ ಕಾಲ ಇಂಕ್ಯುಬೇಟರ್ ಹಂತದಲ್ಲಿದ್ದು, 2016ರ ಆಗಸ್ಟ್ 6ರಂದು ಲೈವ್ ಆವೃತ್ತಿಯಾಗಿ ಹೊರಹೊಮ್ಮಿತು. ಇದರೊಂದಿಗೆ ತುಳು ಭಾರತೀಯ ಭಾಷೆಗಳ ವಿಕಿಪೀಡಿಯಾ ಆವೃತ್ತಿಗಳಲ್ಲಿ 23ನೇ ಸ್ಥಾನ ಪಡೆದಿದೆ.

    Also Read  ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.

    ಪ್ರಸ್ತುತ ತುಳು ವಿಕಿಪೀಡಿಯಾದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 3,800ಕ್ಕೂ ಹೆಚ್ಚು ಲೇಖನಗಳಿವೆ. ತುಳುನಾಡಿನ ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ, ಕಲೆ, ಸಾಹಿತ್ಯ, ಪ್ರಕೃತಿ, ಆಚರಣೆ ಹಾಗೂ ಸಾಂಸ್ಕೃತಿಕ ಪರಂಪರೆಯ ಕುರಿತ ಮಾಹಿತಿಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ.

    ಡಾ. ಯು.ಬಿ. ಪವನಜ ಅವರ ಮಾರ್ಗದರ್ಶನದೊಂದಿಗೆ ಪ್ರೊ. ಬಿ.ಎ. ವಿವೇಕ ರೈ, ಪ್ರೊ. ಎ.ವಿ. ನಾವಡ, ಕೆ.ಪಿ. ರಾವ್, ವಾಮನ ನಂದಾವರ ಸೇರಿದಂತೆ ಹಲವು ವಿದ್ವಾಂಸರು ಹಾಗೂ ಸ್ವಯಂಸೇವಕರ ಸಹಕಾರದಿಂದ ತುಳು ವಿಕಿಪೀಡಿಯಾ ಬೆಳೆದು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಯಗಳನ್ನು ದಾಖಲಿಸಿ, ಹೊಸ ಸಂಪಾದಕರನ್ನು ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಡಾ. ವಿಶ್ವನಾಥ ಬದಿಕಾನ ತಿಳಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಭರತೇಶ ಅಲಸಂಡೆಮಜಲು, ಕಿಶೋರ್ ಕುಮಾರ್ ರೈ ಶೇಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    40 ವರ್ಷದ ಹಳೆಯ ಕೊಲೆಕೇಸ್‌ಗೆ ಅಂತಿಮ ಕೀ ಆಗಿ ಸಾಕ್ಷಿ ಆಗಿದ್ದು ತಿಂದು ಉಗುಳಿದ ಚೂಯಿಂಗ್ ಗಮ್ …!ಏನಿದು realstory..
    “ಮಹಿಳೆಯರು ಮನೆಯಲ್ಲೇ ಇರಬೇಕೇ? AP ಅಬೂಬಕರ್ ಕಾಂತಪುರಂ ಹೇಳಿಕೆ ಭಾರಿ ಚರ್ಚೆ!”
    ಸಿವಿಲ್ ಕೇಸ್‌ನಲ್ಲಿ ಬಂಧನ..!ಎಸ್‌ಐಗೆ ₹3 ಲಕ್ಷ ದಂಡ — ACP, DCP ವಿರುದ್ಧವೂ ತನಿಖೆ!
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
    ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತ್ತೊಂದು ಸೌಹಾರ್ದದ ಹೆಜ್ಜೆ
    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ
    ಮೀನು ಮಾರುವ ಮಹಿಳೆಯರ ಮೇಲೆ ಹಲ್ಲೆ :ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಭರ್ಜರಿ ಒದೆ
    ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ
    ರಷ್ಯಾ–ಉಕ್ರೇನ್ ಯುದ್ಧ ಡ್ರೋನ್ ದಾಳಿಗೆ ರಾಜೀವ್ ಗುಪ್ತಾರ “ಕುಸುಮ್ ಗ್ರೂಪ್‌-ಔಷಧ ಘಟಕ “ಧ್ವಂಸ….!
    ಬ್ರಿಜ್‌ಭೂಷಣ್ ಸಿಂಗ್ ಖುಲಾಸೆಗೆ ಸವಾಲ್; ನಾಲ್ವರು ಮಹಿಳಾ ಕುಸ್ತಿಪಟುಗಳಿಂದ ಮೇಲ್ಮನವಿ—ಸೆ.28ಕ್ಕೆ ವಿಚಾರಣೆ
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಮಂಗಳೂರು, ಮೈಸೂರಿಗೂ ‘Amazon Now’ 2,800 ಕೋಟಿ ಹೂಡಿಕೆ-
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?
    KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
    ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
    ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
    ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!
    ದಾವಣಗೆರೆ ಬೆಚ್ಚಿಬಿದ್ದಿದೆ! 41 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
    UPಯಲ್ಲಿ ಮಳೆಯ ರುದ್ರಾವತಾರ: 81 ಸಾವು, 2,254 ಮನೆಗಳು ಜಲಾವೃತ!
    ಕೊಪ್ಪ ತಹಸಿಲ್ದಾರ್ ಲಿಖಿತಾ ಮೋಹನ್, ಅಧಿಕಾರ ದುರುಪಯೋಗ ಮಾಡಿಕೊಂಡರಾ?
    ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ
    ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?