📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮೊಬೈಲ್ ನಂಬರ್ ದುರ್ಬಳಕೆ; ನಿವೃತ್ತ ಉದ್ಯೋಗಿಯ ವಿವಿಧ ಬ್ಯಾಂಕ್ ಖಾತೆಗಳಿಂದ ₹2.12 ಕೋಟಿ ಆನ್‌ಲೈನ್ ವಹಿವಾಟು

    ಮಂಗಳೂರು: ಮೊಬೈಲ್ ಸಿಮ್‌ಕಾರ್ಡ್‌ನ ನೆಟ್‌ವರ್ಕ್ ಪ್ರವೇಶವನ್ನು ದುರ್ಬಳಕೆ ಮಾಡಿಕೊಂಡು 78 ವರ್ಷದ ನಿವೃತ್ತ ಉದ್ಯೋಗಿಯ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಬರೋಬ್ಬರಿ ₹2,12,95,500 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿರುವ ಗಂಭೀರ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

    ಮುಂಬೈನಲ್ಲಿ ಸುಮಾರು 50 ವರ್ಷಗಳ ಕಾಲ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾದ 78 ವರ್ಷದ ಪಿರ್ಯಾದಿದಾರರು ಬಳಿಕ ಮಂಗಳೂರಿನಲ್ಲಿ ನೆಲೆಸಿದ್ದರು. ಸುಮಾರು 10 ವರ್ಷಗಳಿಂದ ತಮ್ಮ ಹೆಸರಿನಲ್ಲಿ ಪಡೆದ ವೊಡಾಫೋನ್ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿದ್ದು, ಅದನ್ನು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿದ್ದರು. ತಮ್ಮ ಜೀವನಪೂರ್ತಿ ಗಳಿಸಿದ ಹಣವನ್ನು ಬ್ಯಾಂಕ್ ಖಾತೆಗಳು ಹಾಗೂ ಫಿಕ್ಸ್ಡ್ ಡೆಪಾಸಿಟ್‌ಗಳಲ್ಲಿ ಇರಿಸಿದ್ದರು.

    Also Read  ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ... ನಿಶ್ಯಕ್ತವಾದ ವಿರೋಧ ಪಕ್ಷಗಳು

    ಕಳೆದ ಜುಲೈನಲ್ಲಿ ಏಕಾಏಕಿ ಅವರ ಮೊಬೈಲ್ ಸಂಖ್ಯೆಯ ನೆಟ್‌ವರ್ಕ್ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ವೊಡಾಫೋನ್ ಕಚೇರಿಗೆ ತೆರಳಿ ವಿಚಾರಿಸಿದಾಗ, ತಮ್ಮ ಹೆಸರಿನಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಏರ್‌ಟೆಲ್ ಸಂಸ್ಥೆಯ ಮೂಲಕ ಬೇರೊಬ್ಬರಿಗೆ ನೀಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ಪಿರ್ಯಾದಿದಾರರು ಏರ್‌ಟೆಲ್ ಕಚೇರಿಗೆ ತೆರಳಿ ಆ ಸಂಖ್ಯೆಯನ್ನು ಬ್ಲಾಕ್ ಮಾಡುವಂತೆ ದೂರು ನೀಡಿದ್ದರು.

    ಆದರೆ, ಇದರ ಬೆನ್ನಲ್ಲೇ ನಡೆದಿರುವುದು ಮತ್ತಷ್ಟು ಆತಂಕಕಾರಿ ಬೆಳವಣಿಗೆ. ಆಗಸ್ಟ್ 17ರಂದು ಐಡಿಎಫ್‌ಸಿ ಬ್ಯಾಂಕ್‌ಗೆ ತೆರಳಿದಾಗ, ತಮ್ಮ ಖಾತೆಯಲ್ಲಿ ಹಲವು ಅನುಮಾನಾಸ್ಪದ ವಹಿವಾಟುಗಳು ನಡೆದಿರುವುದನ್ನು ಬ್ಯಾಂಕ್ ಅಧಿಕಾರಿಗಳು ಪಿರ್ಯಾದಿದಾರರ ಗಮನಕ್ಕೆ ತಂದಿದ್ದಾರೆ. ನೆಟ್ ಬ್ಯಾಂಕಿಂಗ್ ಮೂಲಕ ಅಪರಿಚಿತರು ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದು ತಿಳಿದುಬಂದಿದೆ.

    ತಕ್ಷಣ ಖಾತೆಯನ್ನು ಬ್ಲಾಕ್ ಮಾಡಿಸಿದ ಪಿರ್ಯಾದಿದಾರರು ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಇದೇ ರೀತಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗಳಿಂದಲೂ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

    Also Read  ಬಿಹಾರ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 7 ಭಕ್ತರು ಸಾವು

    ಪಿರ್ಯಾದಿದಾರರು ಎಲ್ಲಾ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿಸಿ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿದಾಗ, 2026ರ ಜುಲೈ 16ರಿಂದ ಆಗಸ್ಟ್ 18ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹2,12,95,500 ಹಣವನ್ನು ತಮ್ಮ ಗಮನಕ್ಕೆ ಬಾರದಂತೆ ಆನ್‌ಲೈನ್ ನೆಟ್ ಬ್ಯಾಂಕಿಂಗ್ ಮೂಲಕ ಅಪರಿಚಿತರು ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ.

    ವಿಶೇಷವೆಂದರೆ, ಈ ಅವಧಿಯಲ್ಲಿ ಹಣ ವರ್ಗಾವಣೆಯಾಗುತ್ತಿದ್ದರೂ ಬ್ಯಾಂಕ್‌ನಿಂದ ಪಿರ್ಯಾದಿದಾರರಿಗೆ ಯಾವುದೇ ಎಸ್‌ಎಂಎಸ್ ಅಥವಾ ಕರೆಗಳ ಮೂಲಕ ಎಚ್ಚರಿಕೆ ಬಂದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಇದಲ್ಲದೆ, ‘ಹೇಮಂತ್’ ಎಂಬ ವ್ಯಕ್ತಿಯೊಬ್ಬರು 7827590552 ಸಂಖ್ಯೆಯಿಂದ ನಿರಂತರವಾಗಿ ಕರೆ ಮಾಡುತ್ತಿದ್ದರು ಎಂದು ಪಿರ್ಯಾದಿದಾರರು ಆರೋಪಿಸಿದ್ದಾರೆ. ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗಲೂ ‘ಹೇಮಂತ್’ ಎಂಬ ಹೆಸರಿನ ವ್ಯಕ್ತಿಗೆ ಹಣ ವರ್ಗಾವಣೆಯಾಗಿರುವ ಮಾಹಿತಿ ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    Also Read  ಬಾಲಗರ್ಭಿಣಿಯರ ಸಂಖ್ಯೆ 5975….!!

    ತಮ್ಮ ಮೊಬೈಲ್ ಸಂಖ್ಯೆಯ ನೆಟ್‌ವರ್ಕ್ ಪ್ರವೇಶವನ್ನು ಅಕ್ರಮವಾಗಿ ಪಡೆದುಕೊಂಡು, ಅದರ ದುರ್ಬಳಕೆ ಮೂಲಕ ಬ್ಯಾಂಕ್ ಖಾತೆಗಳಿಗೆ ಪ್ರವೇಶಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿರುವ ಪಿರ್ಯಾದಿದಾರರು, ಈ ಕೃತ್ಯದ ಹಿಂದೆ ಇರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಅಮೆರಿಕ–ಇರಾನ್ ಸಂಘರ್ಷಕ್ಕೆ ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ! ಕದನ ವಿರಾಮ ಸಂಪೂರ್ಣ ವಿಫಲ..
    ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ
    AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
    ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ಸೆ.18ಕ್ಕೆ..!
    ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
    ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
    ಸಿಟಿ ಬಸ್ ಫೋಲ್ಡಿಂಗ್ ಬಾಗಿಲು ಕಡ್ಡಾಯ: ಸುರಕ್ಷತೆಗೆ ಹೆಜ್ಜೆ, ಆದರೆ ಸವಾಲುಗಳೇನು? ಪರಿಹಾರ ಹೇಗೆ?
    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ! 
    ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
    ಅಕ್ರಮ ಕಸಾಯಿ ಖಾನೆಗೆ ದಾಳಿ ಇಬ್ಬರನ್ನು ಬಂಧಿಸಿದ ಬಂಟ್ವಾಳದ ಪೊಲೀಸರು
    ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ
    ಧರ್ಮಸ್ಥಳ-ಚಿಕ್ಕಮಗಳೂರು ಟ್ರಿಪ್‌ಗೆ ಹೊರಟ ಸ್ವಿಗ್ಗಿ ಡೆಲಿವರಿ ಬಾಯ್ಸ್… ಅರಬೈಲ್ ಘಾಟ್‌ನಲ್ಲಿ ಭೀಕರ ಅಪಘಾತ, 6 ಜೀವಗಳು ಅಂತ್ಯ!
    ಡಿಜಿಟಲ್ ಡಿಟಾಕ್ಸ್‌ಗೆ ಮಾದರಿಯಾದ ಸಿಇಒ: ಯುವಜನತೆಗೆ ಹೊಸ ಸಂದೇಶ!
    ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
    ”ಮೋದಿ ಭರವಸೆ ಪೊಳ್ಳು” : ನೀಟ್ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಕೇಜ್ರಿವಾಲ್ ವಾಗ್ದಾಳಿ
    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
    ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
    PTCL ಕಾಯ್ದೆ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ – ಕಂದಾಯ ಸಚಿವರಿಗೆ ದಲಿತ ನಾಯಕರ ಮನವಿ