📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪಂಜಿಮೊಗರುವಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ, ಗಂಡ ಫಿನಿಶ್!

    ಕೊಪ್ಪಳ ಮೂಲದ ದಂಪತಿಗಳಿಬ್ಬರು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮಗುರುವಿನಲ್ಲಿ ವಾಸವಾಗಿದ್ದರು. ಹೆಂಡತಿಯ ಅಕ್ರಮ ಸಂಬಂಧ ವಿಚಾರದಲ್ಲಿ ನಡೆದಿರುವಂತಹ ಘಟನೆಯಲ್ಲಿ ಗಂಡ ಬಲಿಯಾಗಿದ್ದಾನೆ ಎಂದು ಹೇಳಲಾದ ಘಟನೆ ನಡೆದಿದೆ.

    ಗಣೇಶ್ ಎಂಬ ಕೂಲಿ ಕಾರ್ಮಿಕನೇ ಈಗ, ಹೆಂಡತಿಯ ಅನೈತಿಕ ಚಟಕ್ಕೆ ಬಲಿಯಾದವರಾಗಿದ್ದಾರೆ ಎಂದು ದೂರಲಾಗುತ್ತಿದೆ.. ಹೆಂಡತಿ ಶಿಲ್ಪ ಮತ್ತು ಲಿಂಗಪ್ಪ ಎನ್ನುವವರ ಮಧ್ಯೆ ಅನೈತಿಕ ಸಂಬಂಧ ಏರ್ಪಟ್ಟಿತ್ತು, ಗಣೇಶನಿಗೆ ವಿಪರೀತವಾಗಿ ಕುಡಿಸಿ ಶಿಲ್ಪನ ಜೊತೆಗೆ ಲಿಂಗಪ್ಪ ಸತತವಾಗಿ ಮೋಜು ಮಸ್ತಿ ಮಾಡಿಕೊಂಡು ಬಂದಿದ್ದಾನೆ ಎನ್ನುವುದು ಈಗ ಕೇಳಿ ಬರುತ್ತಿರುವ ಆರೋಪವಾಗಿದೆ.

    ಮಧ್ಯದ ಅಮಲಿನಲ್ಲಿ ಮಲಗುತ್ತಿದ್ದ ಗಣೇಶಗೆ ತೀರ ಇತ್ತೀಚೆಗೆ ಹೆಂಡತಿ ಶಿಲ್ಪ ಮತ್ತು ಲಿಂಗಪ್ಪನ ನಡುವಿನ ಅಕ್ರಮ ಸಂಬಂಧದ ವಿಚಾರ ತಿಳಿದು ಬಂದಿದೆ ಎಂದು ಅವರ ಸಂಬಂಧಿಕರು ಹೇಳುತ್ತಿದ್ದಾರೆ. ಅಲ್ಲಿಂದ ಈ ವಿಚಾರವಾಗಿ ಹೆಂಡತಿಯನ್ನು ಪ್ರಶ್ನೆ ಮಾಡಿದ್ದಾನೆ. ಹಾಗೆಯೇ ಲಿಂಗಪ್ಪನನ್ನು ಮನೆಯಿಂದ ದೂರ ಇಡುವ ಪ್ರಯತ್ನ ಮಾಡಿದ್ದಾನೆ. ಆದರೆ, ಅವರ ನಡುವಿನ ಸಂಬಂಧ ದೂರ ಸಾಗಿದ್ದರಿಂದಲೋ ಏನೋ, ಅವರಿಬ್ಬರೂ ಪ್ಲಾನ್ ಮಾಡಿ ಗಣೇಶನ ಮೇಲೆ ಹಲ್ಲೆ ನಡೆಸಿ ನಾಲ್ಕು ಅಡಿ ಕೆಳಗೆ ಬೀಳಿಸಿದ್ದಾರೆ ಎನ್ನುವುದು ಗಣೇಶನ ಸಂಬಂಧಿಕರ ಆರೋಪವಾಗಿದೆ. ಅಲ್ಲಿನ ದೃಶ್ಯ ನೋಡಿದರೆ, ಆತ ಹೇಗೆ ಬಿದ್ದರೂ ಈ ರೀತಿಯ ಪೆಟ್ಟು ಆಗುವುದಿಲ್ಲ ಎಂದು ಗಣೇಶನ ಸಂಬಂಧಿಕರು ಗಟ್ಟಿಯಾಗಿ ಹೇಳುತ್ತಿದ್ದಾರೆ. ಇಲ್ಲಿನ ಪೊಲೀಸರು ಅವಳಿಗೆ ಸಪೋರ್ಟ್ ಮಾಡುತ್ತಿದ್ದಾರೆ ಯಾಕೆ ಅನ್ನುವುದು ಗೊತ್ತಾಗುತ್ತಿಲ್ಲ ಎನ್ನುವುದು ಅವರ ಅಳಲಾಗಿದೆ

    Also Read  ನಾಲ್ಕು ದಶಕಗಳ ಕಾಲ ರೋಗಿಗಳಿಗೆ ಜೀವ ನೀಡಿದ ವೈದ್ಯನೇ ಇಂದು ಯಾಕೆ ತನ್ನ ಜೀವ ತಾನೇ ತೆಗೆದುಕೊಂಡರು …

    ಆದರೆ ಶಿಲ್ಪ ಮಾತ್ರ, ಗಂಡ ಕುಡಿದಿದ್ದ. ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಅವನನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಚಿಕಿತ್ಸೆ ಫಲಕಾರಿಯಾಗಿಲ್ಲ ಅನ್ನೋದು ಅವಳ ಸ್ಟೇಟ್ಮೆಂಟ್. ತನ್ನ ಮತ್ತು ಲಿಂಗಪ್ಪನ ನಡುವಿನ ಸಂಬಂಧದ ವಿಚಾರವನ್ನಾಗಲಿ ಗಲಾಟೆ ನಡೆದಿದ್ದ ವಿಚಾರವನ್ನಾಗಲಿ ಶಿಲ್ಪ ಎಲ್ಲಿಯೂ ಬಾಯಿ ಬಿಟ್ಟಿಲ್ಲ ಎನ್ನಲಾಗುತ್ತಿದೆ. ಶಿಲ್ಪಳ ಸಹೋದರ ಈ ವಿಚಾರದಲ್ಲಿ ಶಿಲ್ಪಗಳಿಂದ ಅಂತರ ಕಾಪಾಡಿಕೊಂಡಿದ್ದಾನೆ. ಶಿಲ್ಪ ಅನೈತಿಕ ಸಂಬಂಧ ಇಟ್ಟುಕೊಂಡು ಕುಟುಂಬದ ಮರ್ಯಾದೆ ತೆಗೆದಿದ್ದಾಳೆ ಅನ್ನುವ ರೀತಿಯಲ್ಲಿ ಅವರು ಮಾತನಾಡಿದ್ದು, ಏನಾದರೂ ಮಾಡಿಕೊಳ್ಳಲಿ ಅವಳಿಗೂ ನಮಗೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

    ಗಣೇಶನಿಗೆ ಇನ್ನು 30 ವರ್ಷ, ವೆನ್ಲಾಕ್ ಆಸ್ಪತ್ರೆಯ ವೈದ್ಯರು ಗಣೇಶನ ಸಂಬಂಧಿಕರಿಗೆ ಹೇಳಿದ ಪ್ರಕಾರ ಇದು ಬಿದ್ದ ಪೆಟ್ಟಲ್ಲ ಬಲವಾಗಿ ಹೊಡೆದಿರುವಂತಹ ಪೆಟ್ಟಾಗಿದೆ ಅಂತ ಹೇಳಿದ ಮೇಲೆಯೇ, ಆ ಸಂಬಂಧಿಕರಿಗೆ ಶಿಲ್ಪಾಳ ಮೇಲೆ ಅನುಮಾನ ಬಂದಿದೆ. ಡಾಕ್ಟರ್ ಹೇಳದಿದ್ದರೆ ಅವರು ಶಿಲ್ಪಾಳ ಮಾತೊಂದೇ ನಂಬುತ್ತಿದ್ದರೇನೋ.

    Also Read  ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!

    ಈಗ, ಶಿಲ್ಪ ಮತ್ತು ಲಿಂಗಪ್ಪನ ಮೇಲೆ ದೂರನ್ನು ಗಣೇಶನ ಅಣ್ಣ ಮುತ್ತಪ್ಪನ ಕೈನಿಂದ ಕೊಡಿಸಲಾಗಿದೆ. ಒಂದು ದಿನದ ಮೊದಲು, ಮುತ್ತಪ್ಪ ನಿಂದ ಬಲವಂತವಾಗಿ ಮೆಟ್ಟಿಲಿನಿಂದ ಬಿದ್ದು ಸತ್ತಿದ್ದಾನೆ ಎಂಬಂತೆ ಪೊಲೀಸರಿಗೆ  ದೂರು ಕೊಡಿಸಿದ್ದರು ಅಂತ ಆರೋಪಿಸಿರುವ ಗಣೇಶನ ಸಂಬಂಧಿಕರು, ಹಾಗಾಗಿಯೇ ಊರಿನಿಂದ ಹಿರಿಯರನ್ನು ಕರೆಸಿಕೊಂಡು ಇಂದು ಮತ್ತೆ ದೂರನ್ನು ನೀಡಲಾಗಿದೆ. ಆ ಕಾರಣ ಎರಡನೆಯ ಬಾರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕಾವೂರು ಪೊಲೀಸ್ ಠಾಣೆಗೆ ಕೊಟ್ಟಂತಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮೃತ ಗಣೇಶನ ಸಂಬಂಧಿಕರು ಪತ್ರಿಕೆಯ ಜೊತೆಗೆ ಮಾತನಾಡುತ್ತಾ, ನಮಗೆ ನ್ಯಾಯ ಬೇಕು. ಗಣೇಶನ ಕೊಲೆಯಾಗಿದೆ. ಅದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕು ಎಂಬ ಆಗ್ರಹವನ್ನು ಮಾಡಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಮನವಿ ನೀಡುವುದಾಗಿಯೂ ಅವರು ಪತ್ರಿಕೆಗೆ ತಿಳಿಸಿದ್ದಾರೆ.

    Also Read  ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢

    ಏನೇ ಇರಲಿ, ಇದು ಕೊಲೆ ಮಾಡಿದ್ದು ಅಥವಾ ಬಿದ್ದು ಊಟ ಮಾಡಿಕೊಂಡಿದ್ದಾನೋ ಅನ್ನುವುದು ತನಿಖೆಯ ಮೂಲಕವೇ ಗೊತ್ತಾಗಬೇಕಿದೆ. ಈ ಬಗ್ಗೆ  ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

    ವರದಿ- ರಾಜೇಶ್

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
    ನೀವೂ ತಿಳಿದಿರಬೇಕಾದ ವಿಷಯ:ಬರುವ ಆರ್ಥಿಕ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ!
    ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
    ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
    ಪಹಲ್ಗಾಂಮ್ ದಾಳಿಯ ಒಂದು ವರ್ಷ: ಇನ್ನೂ ಮುಗಿಯದ ನೋವು, ಮರೆಯಲಾಗದ ನೆನಪುಗಳು
    ರಾಹುಲ್ ಗಾಂಧಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್!
    ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಸಿಂಗ್‌ಗೆ ದೆಹಲಿ ಕೋರ್ಟ್‌ನಿಂದ ಖುಲಾಸೆ
    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
    ಉಡುಪಿಯ ಸಾಯಿ ರಾಜ್ ಕೋ ಆಪರೇಟಿವ್ ಸೊಸೈಟಿ ಸಿಇಒ ಆತ್ಮ ಹತ್ಯೆಗೆ ಯಾರು ಕಾರಣ?
    5 ದಿನಗಳ ಬಿಡದಿ ಹೋರಾಟಕ್ಕೆ ಪೊಲೀಸರ ಬ್ರೇಕ್! ರೈತರು ವಶಕ್ಕೆ,“ಭೂಮಿ ಉಳಿಸಲು ಜೈಲಿಗೂ ಸಿದ್ಧ” ಎಂದ ದೇವೇಗೌಡ…!
    ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
    ನೂತನ ಸಚಿವ ಲಕ್ಷ್ಮಣ ಸವದಿ ಎದುರು ಹೈಡ್ರಾಮಾ: ಸಮಸ್ಯೆ ಹೇಳಿಕೊಳ್ಳುತ್ತಿದ್ದ ವ್ಯಕ್ತಿಗೆ ಶಾಸಕರಿಂದ ಬೆದರಿಕೆ ಆರೋಪ
    ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
    ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    ಮಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್!ಯಾವೆಲ್ಲ ಬದಲಾವಣೆ ಬರಲಿದೆ?
    ದೆಹಲಿ ಕೆಂಪುಕೋಟೆ ಸ್ಫೋಟಕ್ಕೆ AQIS ಸಂಪರ್ಕ: UNSC ವರದಿಯಿಂದ ಬೆಚ್ಚಿಬಿದ್ದ ಭದ್ರತಾ ವಲಯ
    ಮಂಗಳೂರು ಕಾಲೇಜು ರ‍್ಯಾಗಿಂಗ್: ಬಟ್ಟೆ ಬಿಚ್ಚಿಸಿ ಬೆಲ್ಟ್ ನಿಂದ ಹಲ್ಲೆ …! 9 ವಿದ್ಯಾರ್ಥಿಗಳ ವಿರುದ್ಧ FIR….
    ಕೋವಿಡ್ ಶೀಲ್ಡ್ ಸೈಡ್ ಎಫೆಕ್ಟ್ ಒಪ್ಪಿಕೊಂಡ ಕಂಪನಿ
    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    90 ನಿಮಿಷದ ರೋಚಕ ರಕ್ಷಣಾ ಕಾರ್ಯಾಚರಣೆ – 6 ಮೀನುಗಾರರ ಜೀವ ಉಳಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಾಹಸ!ಪ್ರಕ್ಷುಬ್ಧ ಸಮುದ್ರಕ್ಕೂ ಸವಾಲು
    ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
    ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳಿಗೆ ಸಮಸ್ಯೆ ಇಲ್ಲ – ನಿತಿನ್ ಗಡ್ಕರಿ
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    ಪುತ್ತೂರಿನ ಜಾತ್ರೆಯಲ್ಲಿ ಸುಡುಮದ್ದು ದುರಂತ-ಹಲವರಿಗೆ ಗಾಯ..
    ಬೆಂಗಳೂರಿಗರಿಗೆ BIG TRAFFIC ALERT! ಸೆ.4ರಿಂದ ಫ್ಲೈಓವರ್‌ಗಳಲ್ಲಿ ಹೊಸ ರೂಲ್ಸ್… ಬೈಕ್, ಆಟೋ ಸವಾರರು ಈ ಮಾಹಿತಿ ತಪ್ಪದೇ ಓದಿ!
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!