📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ

    ಮಂಗಳೂರು, ಜುಲೈ 4: ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸಲು ಮುಂದಾಗಿದೆ ಎಂಬ ಪ್ರಸ್ತಾವನೆಗೆ ಆಮ್ ಆದ್ಮಿ ಪಕ್ಷ (ಆಪ್) ದಕ್ಷಿಣ ಕನ್ನಡ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರು ಸರ್ಕಾರದ ನಿರ್ಧಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಅವರು, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣಗೊಂಡ ಸರ್ಕಾರಿ ಆಸ್ಪತ್ರೆಗಳು ಬಡವರು, ಮಧ್ಯಮ ವರ್ಗದವರು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಜೀವನಾಡಿಯಾಗಿವೆ. ಇಂತಹ ಆಸ್ಪತ್ರೆಗಳ ಆಡಳಿತವನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಒಪ್ಪಿಸುವ ಯಾವುದೇ ಕ್ರಮ ಸಾರ್ವಜನಿಕ ಆರೋಗ್ಯ ಸೇವೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂದು ಹೇಳಿದರು.

    Also Read  ಬ್ಯಾಂಕಿಂಗ್ ಸೇವೆ ಸ್ಮಾರ್ಟ್‌ಫೋನ್ ನೇ ಬೇಕಂತಿಲ್ಲ .ಕೀಪ್ಯಾಡ್ ಫೋನ್ ಸಾಕು ಈಗ “ಸ್ಮಾರ್ಟ್” ಆಗಿದ್ದರೆ ಸಾಕು! 

    ಈ ಹಿಂದೆ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರು ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಕುರಿತು ಹೇಳಿಕೆ ನೀಡಿದ್ದರು. ಇದೀಗ ಪ್ರಸ್ತುತ ಆರೋಗ್ಯ ಸಚಿವರೂ ಇದೇ ನಿಲುವಿಗೆ ಬೆಂಬಲ ಸೂಚಿಸಿರುವುದು ಸರ್ಕಾರದ ನಿಜವಾದ ಉದ್ದೇಶಗಳ ಬಗ್ಗೆ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

    ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಆದರೆ ಅದಕ್ಕೆ ಬದಲಾಗಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸಲು ತಿಳುವಳಿಕಾ ಒಪ್ಪಂದ (MoU) ಮಾಡಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆಪ್ ತಿಳಿಸಿದೆ.

    ಈ ಪ್ರಸ್ತಾವಿತ ಒಪ್ಪಂದದ ಕರಡನ್ನು ಸರ್ಕಾರ ಇದುವರೆಗೆ ಸಾರ್ವಜನಿಕರ ಮುಂದೆ ಬಹಿರಂಗಪಡಿಸಿಲ್ಲ. ಒಪ್ಪಂದದ ಷರತ್ತುಗಳು, ಆಸ್ಪತ್ರೆಗಳ ಆಡಳಿತ, ವೈದ್ಯಕೀಯ ಸೇವೆಗಳ ಗುಣಮಟ್ಟ, ಬಡ ರೋಗಿಗಳಿಗೆ ಸಿಗುವ ಚಿಕಿತ್ಸೆಯ ಭದ್ರತೆ, ಸಿಬ್ಬಂದಿಯ ಹಿತಾಸಕ್ತಿ ಹಾಗೂ ಸಾರ್ವಜನಿಕರಿಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಿಲ್ಲ ಎಂದು ಪಕ್ಷ ಪ್ರಶ್ನಿಸಿದೆ.

    Also Read  🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!

    ಇಂತಹ ಮಹತ್ವದ ನೀತಿ ನಿರ್ಧಾರವನ್ನು ಜನರಿಂದ ಮುಚ್ಚಿಟ್ಟು ಜಾರಿಗೆ ತರಬಾರದು. ಯಾವುದೇ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಮೊದಲು ಅದರ ಸಂಪೂರ್ಣ ಕರಡನ್ನು ಸಾರ್ವಜನಿಕರ ಮುಂದಿಡಬೇಕು. ವೈದ್ಯರು, ಆರೋಗ್ಯ ತಜ್ಞರು, ಆಸ್ಪತ್ರೆ ಸಿಬ್ಬಂದಿ, ನಾಗರಿಕ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಪಾರದರ್ಶಕ ಚರ್ಚೆ ನಡೆಸಿದ ಬಳಿಕವೇ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಆಪ್ ಒತ್ತಾಯಿಸಿದೆ.

    ಸರ್ಕಾರಿ ಆಸ್ಪತ್ರೆಗಳು ಜನರ ಆಸ್ತಿಯಾಗಿದ್ದು, ಅವುಗಳ ಮೂಲ ಉದ್ದೇಶ ಎಲ್ಲ ವರ್ಗದ ಜನರಿಗೆ ಕೈಗೆಟುಕುವ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದಾಗಿದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗುವ ಯಾವುದೇ ಕ್ರಮದಿಂದ ಸರ್ಕಾರ ಹಿಂದೆ ಸರಿದು, ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ, ವೈದ್ಯರ ನೇಮಕಾತಿ ಹಾಗೂ ಆರೋಗ್ಯ ಸೇವೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಪ್ ಪಕ್ಷ ಆಗ್ರಹಿಸಿದೆ.

    ##Mangalore #DakshinaKannada #GovernmentHospitals #AAPKarnataka #HealthPolicy

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ₹5.85 ಕೋಟಿ ಯೋಜನೆಯ ಜಪ್ಪು ಮಂಗಳಾದೇವಿ ಬಸ್ ಟರ್ಮಿನಲ್ ಉದ್ಘಾಟನೆಗೆ ಎರಡು ಬಾರಿ ಗೌಜಿ ಸಮಾರಂಭ; ಬಸ್ ಸಂಚಾರಕ್ಕೆ ಮಾತ್ರ ಇನ್ನೂ ಮೀನ ಮೇಷ !
    ”ಮೋದಿ ಭರವಸೆ ಪೊಳ್ಳು” : ನೀಟ್ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಕೇಜ್ರಿವಾಲ್ ವಾಗ್ದಾಳಿ
    ಅಜ್ಜಿಯ ಚಿನ್ನಕ್ಕೇ ಕನ್ನ! ಮೊಮ್ಮಗ ಅರೆಸ್ಟ್….
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    ಕರ್ನಾಟಕದಲ್ಲಿ 2,222 KEO AI, PCಗಳ ಲೋಕಾರ್ಪಣೆ
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಬೈಂದೂರಿನಲ್ಲಿ ಹಳೆ ವೈಷಮ್ಯದಿಂದ ಮನೆಗೆ ನುಗ್ಗಿ ಹಲ್ಲೆಗೆ ಯತ್ನ
    ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
    “ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
    ಕಾರಿನೊಳಗೆ ಇಬ್ಬರು ಪೊಲೀಸರ ಮೃತದೇಹ ಪತ್ತೆ
    “ಮಹಿಳೆಯರು ಮನೆಯಲ್ಲೇ ಇರಬೇಕೇ? AP ಅಬೂಬಕರ್ ಕಾಂತಪುರಂ ಹೇಳಿಕೆ ಭಾರಿ ಚರ್ಚೆ!”
    ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    “ಜೈ ಶ್ರೀರಾಮ್” ಘೋಷಣೆಯಿಂದ ನಡುಗಿದ ಢಾಕಾ! 
    ಅಮ್ಮನ ಅಂತ್ಯಕ್ರಿಯೆಯಲ್ಲಿ ಗಳಗಳನೇ ಕಣ್ಣೀರಿಟ್ಟು,ಚಿತೆಯ ಮುಂದೆ ಕುಸಿದುಬಿದ್ದ ಚಿನ್ಮಯ್ ದಾಸ್!ಐದು ಗಂಟೆಯ ಪೆರೋಲ್… ಜೈಲಿನಿಂದ ಬಂದ ಸನ್ಯಾಸಿ ಮಗ…
    ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
    ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಪುಟ್ಟ ಜೀವವೊಂದು ಬಲಿ.. ಕೆಲವು ಮಕ್ಕಳಿಗೆ ಗಾಯ..
    ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!
    ಗೃಹಲಕ್ಷ್ಮಿಗೆ ಬ್ರೇಕ್? ₹2,000 ಹಣ ನೀರಾವರಿಗೆ ಬಳಸಿ ಎಂದ ಕಾಂಗ್ರೆಸ್‌ ಎಂಎಲ್‌ಸಿ!
    ಮೊಬೈಲ್‌ಗಾಗಿ ಅಣ್ಣ-ತಮ್ಮನ ಜಗಳ; ಚಾಕುವಿನಿಂದ ಇರಿದು ಅಣ್ಣನನ್ನೇ ಕೊಂದ ತಮ್ಮ!