📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಇನ್‌ಸ್ಟಾಗ್ರಾಮ್ ವ್ಯಾಮೋಹಕ್ಕೆ ಹೆತ್ತ ತಾಯಿಗೇ ವಿಷವಿಕ್ಕಿದ ಮಗಳು..ಪ್ರೀತಿಯ ಹೆಸರಲ್ಲಿ ಹಾದಿ ತಪ್ಪಿದ ಹದಿಹರೆಯ ಮುಂದೇನಾಯತು?

    ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಈ ಘಟನೆ ಇಂದಿನ ಡಿಜಿಟಲ್ ಯುಗದ ಕರಾಳ ಮುಖ ಹಾಗೂ ಹದಿಹರೆಯದ ಮಕ್ಕಳ ಹಾದಿ ತಪ್ಪುತ್ತಿರುವ ರೀತಿಗೆ ಕನ್ನಡಿ ಹಿಡಿದಿದೆ.

    ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ತಾಯಿ ಎಂದರೆ ಜೀವ. ಆದರೆ ಉತ್ತರ ಪ್ರದೇಶದ ಲಕ್ನೋದ ಕೃಷ್ಣಾನಗರದಲ್ಲಿ ನಡೆದ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇನ್‌ಸ್ಟಾಗ್ರಾಮ್ ಪ್ರಿಯಕರನ ಜೊತೆ ತಡರಾತ್ರಿಯವರೆಗೆ ಗುಟ್ಟಾಗಿ ಚಾಟಿಂಗ್ ಮಾಡಲು, ೧೫ ವರ್ಷದ ಅಪ್ರಾಪ್ತ ಮಗಳೊಬ್ಬಳು ಹೆತ್ತ ತಾಯಿಯ ಊಟದಲ್ಲಿ ದಿನವೂ ನಿದ್ದೆ ಮಾತ್ರೆ ಬೆರೆಸುತ್ತಿದ್ದ ಘೋರ ಸತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ದ್ರೋಹವನ್ನು ಕಂಡು ಹೆತ್ತ ಕರುಳು ಕಣ್ಣೀರು ಹಾಕಿದೆ.

    ಮೂರು ತಿಂಗಳ ಕರಾಳ ಕೃತ್ಯ: ಬುಟಿಕ್ ಹಾಗೂ ಟಿಫಿನ್ ಸರ್ವೀಸ್ ನಡೆಸಿ ಕಷ್ಟಪಟ್ಟು ಸಂಸಾರ ತೂಗಿಸುತ್ತಿದ್ದ ಆ ತಾಯಿಗೆ ಕಳೆದ ಮೂರು ತಿಂಗಳಿಂದ ತೀವ್ರ ನಿಶ್ಯಕ್ತಿ, ಅತಿಯಾದ ನಿದ್ದೆ ಹಾಗೂ ತಲೆಸುತ್ತು ಕಾಣಿಸಿಕೊಳ್ಳುತ್ತಿತ್ತು. ಕಷ್ಟಪಟ್ಟು ದುಡಿಯುತ್ತಿರುವುದರಿಂದಲೇ ಆಯಾಸವಾಗುತ್ತಿದೆ ಎಂದು ಅವರು ಭಾವಿಸಿದ್ದರು. ಆದರೆ ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದಾಗ ಅನುಮಾನಗೊಂಡು ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿದಾಗ, ಅವರ ರಕ್ತದಲ್ಲಿ ಅತಿಯಾದ ನಿದ್ದೆ ಮಾತ್ರೆಯ (Sleeping Pills) ಅಂಶಗಳು ಪತ್ತೆಯಾಗಿ ವೈದ್ಯರೇ ದಿಗ್ಭ್ರಮೆಗೊಂಡಿದ್ದರು.

    Also Read  ಬಂಟ್ವಾಳದಲ್ಲಿ ವ್ಯಕ್ತಿಗಳ ಆರೋಪ–ಪ್ರತ್ಯಾರೋಪಕ್ಕಿಂತ “ರಾಜಕೀಯದೊಳಗಿನ ರಾಜಕೀಯ”ಬಿಸಿ…!ಲಾಭ ಯಾರಿಗೆ?

    ಪ್ರೀತಿಯ ಜಾಲ ಮತ್ತು ಸಂಚು: ವೈದ್ಯರ ವರದಿ ಬಂದ ನಂತರ ಮನೆಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಅಪರಾಧಿ ಸ್ವಂತ ಮಗಳೇ ಎಂಬುದು ಬಯಲಾಗಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಪಕ್ಕದ ಮನೆಯ ಹುಡುಗನ ಜೊತೆ ರಾತ್ರಿ ಇಡೀ ಮಾತನಾಡಲು, ಅಮ್ಮ ತನಗೆ ತಡೆಯಾಗಬಾರದು ಎಂದು ಈ ಕೃತ್ಯ ಎಸಗಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ, ಆ ಹುಡುಗನೇ ತನಗೆ ನಿದ್ದೆ ಮಾತ್ರೆಗಳನ್ನು ತಂದುಕೊಟ್ಟು, ಈ ಹಾದಿ ತಪ್ಪಿಸುವ ಐಡಿಯಾ ನೀಡಿದ್ದಾಗಿ ಹೆದರುತ್ತಲೇ ವಿವರಿಸಿದ್ದಾಳೆ.

    ಕೌನ್ಸೆಲಿಂಗ್ ಕೇಂದ್ರದಲ್ಲಿ ಬಾಲಕಿ: ವಿಷಯ ತಿಳಿಯುತ್ತಿದ್ದಂತೆ ಬಾಲಕಿಯನ್ನು ಲಕ್ನೋದ ಲೋಕಬಂಧು ಆಸ್ಪತ್ರೆಯ ‘ಒನ್ ಸ್ಟಾಪ್ ಸೆಂಟರ್’ಗೆ ಕೌನ್ಸೆಲಿಂಗ್‌ಗಾಗಿ ದಾಖಲಿಸಲಾಗಿದೆ. ಸೆಂಟರ್ ಮ್ಯಾನೇಜರ್ ಅರ್ಚನಾ ಸಿಂಗ್ ಅವರ ಪ್ರಕಾರ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಸನದಿಂದ ಬಾಲಕಿ ಇಂತಹ ಕ್ರೂರ ನಿರ್ಧಾರ ತಳೆದಿದ್ದಾಳೆ. ಸದ್ಯ ಆಕೆಗೆ ತಜ್ಞರಿಂದ ಮಾನಸಿಕ ತಿಳುವಳಿಕೆ ಮೂಡಿಸಲಾಗುತ್ತಿದ್ದು, ನಡವಳಿಕೆಯಲ್ಲಿ ಸುಧಾರಣೆ ಕಂಡುಬರುತ್ತಿದೆ.

    Also Read  ಮೊಬೈಲ್ ನಂಬರ್ ದುರ್ಬಳಕೆ; ನಿವೃತ್ತ ಉದ್ಯೋಗಿಯ ವಿವಿಧ ಬ್ಯಾಂಕ್ ಖಾತೆಗಳಿಂದ ₹2.12 ಕೋಟಿ ಆನ್‌ಲೈನ್ ವಹಿವಾಟು

    ಕ್ಷಮಿಸಿದ ತಾಯಿ – ಸಮಾಜಕ್ಕೆ ದೊಡ್ಡ ಪಾಠ: ತನ್ನ ಮಗಳು ತನಗೆ ನಿಧಾನವಾಗಿ ವಿಷ ನೀಡುತ್ತಿದ್ದಳು ಎಂಬ ಸತ್ಯ ತಿಳಿದರೂ, ಆ ತಾಯಿ ಕರುಳಿನ ಕುಡಿತಿನ ಮೇಲೆ ಯಾವುದೇ ಪೊಲೀಸ್ ಕೇಸ್ ಜರುಗಿಸಲು ನಿರಾಕರಿಸಿದ್ದಾರೆ. ಮಗಳನ್ನು ಜೈಲಿಗೆ ಕಳುಹಿಸುವ ಬದಲು, ಆಕೆಯನ್ನು ತಿದ್ದಿ ಬುದ್ಧಿ ಕಲಿಸಿ ಒಳ್ಳೆಯ ದಾರಿಗೆ ತರುವುದೇ ಸರಿಯಾದ ಮಾರ್ಗ ಎಂದು ತಾಯಿ ನಿರ್ಧರಿಸಿದ್ದಾರೆ. ಸದ್ಯ ಬಾಲಕಿಗೆ ಮೊಬೈಲ್‌ನಿಂದ ದೂರವಿರಲು ಸೂಚಿಸಲಾಗಿದ್ದು, ಇಂದಿನ ಡಿಜಿಟಲ್ ಯುಗದಲ್ಲಿ ಪೋಷಕರು ತಮ್ಮ ಮಕ್ಕಳ ಮೊಬೈಲ್ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

    ##FamilyFirst #ParentingAlert #DigitalAddiction##TeensMentalHealth #LucknowIncident

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರಲ್ಲಿ ಮಳೆಯ ಅಬ್ಬರ… ಗುಡುಗು-ಮಿಂಚಿನ ಆಟ ದಕ್ಷಿಣ ಕನ್ನಡದಲ್ಲಿ ಮತ್ತೆ pre-ಮಾನ್ಸೂನ್ ಮ್ಯಾಜಿಕ್!?
    Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    ದೆಹಲಿ ಕೆಂಪುಕೋಟೆ ಸ್ಫೋಟಕ್ಕೆ AQIS ಸಂಪರ್ಕ: UNSC ವರದಿಯಿಂದ ಬೆಚ್ಚಿಬಿದ್ದ ಭದ್ರತಾ ವಲಯ
    ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
    NEET ಕಿಚ್ಚಿನ ನಡುವೆ ಶಿಕ್ಷಣ ಖಾತೆ ಪ್ರಹ್ಲಾದ್ ಜೋಶಿಗೆ…!ಈದ್ಗಾ ಹೋರಾಟದ ಮೈದಾನದಿಂದ ಕೇಂದ್ರದ ಮಹತ್ವದ ಹೊಣೆಗಾರಿಕೆಯವರೆಗೆ!
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    ದಿಶಾ ಸಾಲಿಯನ್ ಕೇಸ್‌ ರೀಓಪನ್‌…ಸುಶಾಂತ್ ಸಿಂಗ್ ಸಾವಿನ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ?
    ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
    ಇನ್ನೂ ಏಳು ದಿನ ಕರ್ನಾಟಕದ ಸಿಎಂ ಕುರ್ಚಿ ಕಾಲಿ… ಜೂನ್ 5 ರಂದು ಡಿಕೆ ಶಿವಕುಮಾರ್ ಪ್ರಮಾಣ ವಚನ!
    🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
    24 ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕಾ ದಾಳಿ: 3 ನಾವಿಕರ ಜೀವ ಬಲಿ
    ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ
    ಕಾಕ್ರೋಜ್ ಎಫೆಕ್ಟ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಮುಖ  ಬದಲಾವಣೆ.
    ವೋಟರ್ಸ್ ಗಮನಕ್ಕೆಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ: ಸಾರ್ವಜನಿಕರು ತಿಳಿಯಲೇಬೇಕಾದ ಪ್ರಮುಖ ವರದಿ
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
    ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
    ಕರಾವಳಿಯಲ್ಲಿ ವಾಪಸ್ ಆದ ಮುಂಗಾರು: ಜುಲೈ 6ರವರೆಗೆ ಆರೆಂಜ್ ಅಲರ್ಟ್ – ಜನರಿಗೆ ಎಚ್ಚರಿಕೆ
    ಪಂಜಾಬ್‌ನಲ್ಲಿ ಮಹಿಳೆಗೆ ಒಂದೇ ಹೆರಿಗೆಗೆ ಆರು ಮಕ್ಕಳು….!!ನಿಜವೇನು?
    ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
    ಪ್ರತಿಭಟನೆಯ ಹಕ್ಕು ಸಂವಿಧಾನ ನೀಡಿದೆ… ಆದರೆ ಅದರ ಹೆಸರಿನಲ್ಲಿ ನಡೆದ ಎಲ್ಲವನ್ನೂ ತನಿಖೆ ಮಾಡುವುದು ಸರ್ಕಾರದ ಕರ್ತವ್ಯ!
    ಬೆಳ್ತಂಗಡಿಯಲ್ಲಿ ಮಧುಮಗ ಜೈಲಿಗೆ-ಅಪ್ರಾಪ್ತೆಯ ಮೇಲೆ ದೌರ್ಜನ್ಯ – ಇಬ್ಬರು ಆರೋಪಿಗಳ ಬಂಧನ..!
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
    ಫುಟ್‌ಪಾತ್ ಬೇಕು, ಆದರೆ ಬದುಕಿಗೂ ಜಾಗ ಬೇಕಲ್ಲವೇ?ಮಂಗಳೂರಿನಲ್ಲಿ ಬೀದಿಬದಿ ಹೂವಿನ ವ್ಯಾಪಾರಕ್ಕೆ ‘ಶಾಕ್’ ವ್ಯಾಪಾರಿಗಳ ತೆರವು ನಿಯಮ ಸರಿ… ಪರ್ಯಾಯ ವ್ಯವಸ್ಥೆ ಎಲ್ಲಿ?
    ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?