📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ

    ನವದೆಹಲಿ: ಎನ್‌ಸಿಪಿ ಎನ್‌ಡಿಎ ಜೊತೆ ವಿಲೀನವಾಗಲಿದೆ ಎಂಬ ಅಂತೆ ಕಂತೆಗಳು ಹರಿದಾಡುತ್ತಿರುವ ಹೊತ್ತಿನಲ್ಲೇ ಶರದ್ ಪವಾರ್ ಹಾಗೂ ಸುಪ್ರಿಯಾ ಸುಳೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.

    ಸಂಸತ್ತಿನಲ್ಲಿ ನೀಟ್ ಅಕ್ರಮ ಮತ್ತು ಇತರ ವಿಷಯಗಳ ಕುರಿತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ.

    ಸಮಾಲೋಚನೆ ನಡೆಸಿದ ನಾಯಕರು

    ಎನ್‌ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಹಾಗೂ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಸಂಸತ್ ಭವನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

    Also Read  ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು

    ಸಭೆಯ ವೇಳೆ ಪ್ರಧಾನಿ ಮೋದಿ ಹಾಗೂ ಶರದ್ ಪವಾರ್ ಅತ್ಯಂತ ಆತ್ಮೀಯವಾಗಿ ನಗುಮುಖದಿಂದ ಮಾತುಕತೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಭೇಟಿಗೆ ಕಾರಣವೇನು?

    ಕ್ಷೇತ್ರ ಪುನರ್ವಿಂಗಡಣೆ ಮಸೂದೆ: ಸಂಸತ್ತಿನ ಮಳಿಗಾಲದ ಅಧಿವೇಶನದಲ್ಲಿ ‘ಕ್ಷೇತ್ರ ಪುನರ್ವಿಂಗಡಣೆಗೆ ಮಸೂದೆ’ಯನ್ನು ತರಲು ಯೋಜಿಸುತ್ತಿದ್ದು, ಇದನ್ನು ಅಂಗೀಕರಿಸಲು ಸಂಸತ್ತಿನಲ್ಲಿ 2/3 ಬಹುಮತದ ಅಗತ್ಯವಿದೆ. ಲೋಕಸಭೆಯಲ್ಲಿ ಶರದ್ ಪವಾರ್ ಬಣದ 8 ಸಂಸದರು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

    1. ಮಸೂದೆ ಬಗ್ಗೆ ಬೆಂಬಲ: ಶೇಕಡಾ 50 ರಷ್ಟು ಸಂಸತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸರ್ಕಾರ ಲಿಖಿತ ಭರವಸೆ ನೀಡಿದರೆ ಬೆಂಬಲ ನೀಡುವ ಸುಳಿವನ್ನು ಎನ್‌ಸಿಪಿ ನೀಡಿದೆ. “ನಿಮ್ಮ ನಿಲುವನ್ನು ಕಾಗದ ಮೇಲೆ ಸ್ಪಷ್ಟಪಡಿಸಿ, ನಂತರ ಚರ್ಚಿಸೋಣ” ಎಂದು ಸುಪ್ರಿಯಾ ಸುಳೆ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಎನ್‌ಡಿಎ ವಿಲೀನ ವದಂತಿ: ಮಹಾರಾಷ್ಟ್ರ ರಾಜಕೀಯ ಮತ್ತು ಎನ್‌ಸಿಪಿ ಪುನರ್ ಏಕೀಕರಣದ ವದಂತಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಶರದ್ ಪವಾರ್ ಬಣದ ನಡುವೆ ಮತ್ತೆ ಒಂದಾಗುವ ಚರ್ಚೆಗಳು ಮಹಾರಾಷ್ಟ್ರದಲ್ಲಿ ತೀವ್ರವಾಗಿ ನಡೆಯುತ್ತಿವೆ. ಶರದ್ ಪವಾರ್ ಅವರ ಬಣ ಎನ್‌ಡಿಎ ಮೈತ್ರಿಕೂಟ ಸೇರಲಿದೆ ಎಂಬ ವದಂತಿಗಳೂ ಇವೆ.
    Also Read  ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್' ಮೇ 22 ರಂದು ತೆರೆಗೆ

    ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ

    ಶರದ್ ಪವಾರ್ ಅಥವಾ ಅವರ ನಾಯಕರನ್ನು ವೈಯಕ್ತಿಕವಾಗಿ ಎನ್‌ಡಿಎ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿಗೆ ಆಸಕ್ತಿಯಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಅವರ ಎರಡೂ ಎನ್‌ಸಿಪಿ ಬಣಗಳು ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಸಂಪೂರ್ಣವಾಗಿ ಒಂದಾದರೆ ಮಾತ್ರ ಎನ್‌ಡಿಎ ಜೊತೆಗಿನ ನಿಕಟ ಮೈತ್ರಿ ಬಗ್ಗೆ ಪರಿಗಣಿಸಲಾಗುವುದು ಎನ್ನಲಾಗಿದೆ.

    ಸಂಸತ್ತಿನಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಸರಣಿ ಹೋರಾಟ ನಡೆಸುತ್ತಿರುವ ಮಧ್ಯೆಯೇ, ವಿಪಕ್ಷಗಳ ಪ್ರಮುಖ ರೂವಾರಿಯಾದ ಶರದ್ ಪವಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರುವುದು ಮುಂಬರುವ ದಿನಗಳಲ್ಲಿ ಭಾರಿ ರಾಜಕೀಯ ಬದಲಾವಣೆಯ ಮುನ್ಸೂಚನೆ ಎನ್ನಲಾಗಿದೆ.


    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಹೊಸ ಸಂಸತ್ ಭವನದ ವಿನ್ಯಾಸಕ್ಕೆ ಶಶಿ ತರೂರ್ ಅಸಮಾಧಾನ: “ಆತ್ಮ ರಹಿತ ಸಮಾವೇಶ ಕೇಂದ್ರ”
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!
    ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
    ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌
    ಕೇವಲ ₹7ರ ದುರಾಸೆ… ₹7 ಲಕ್ಷದ ಹೊರೆ!ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಅಂಗಡಿಗೆ ಭಾರೀ ದಂಡ; ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    “ಪತ್ನಿ ಮನೆಗೆಲಸದ ಸೇವಕಿ ಅಲ್ಲ!” — ಮದುವೆ ಎಂದರೆ ಹೆಂಡತಿಯ ಸ್ವಾತಂತ್ರ್ಯ ಕಸಿಯುವ ಪರವಾನಗಿ ಅಲ್ಲ: ಹೈಕೋರ್ಟ್
    “ಮಾರಿಕೊಂಡ ಮಾಧ್ಯಮದವರು ಯಾರು?” ಪ್ರಶ್ನೆಗೆ ಪ್ರಕಾಶ್ ರಾಜ್ ನಿರುತ್ತರ”ಪತ್ರಿಕಾಗೋಷ್ಠಿಯಲ್ಲೇ ಶುರುವಾದ ಭಾರೀ ವಿವಾದ ಏನು?
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
    TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
    ದಾವಣಗೆರೆ ಬೆಚ್ಚಿಬಿದ್ದಿದೆ! 41 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್!
    ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
    146 ವರ್ಷಗಳಲ್ಲೇ ಅತ್ಯಂತ ಒಣ ಜೂನ್..ದೇಶಾದ್ಯಂತ 46% ಮಳೆ ಕೊರತೆ!
    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ
    ಉಡುಪಿಯ ಹಲವು ಉದ್ಯಮಿಗಳು ಹಾಗೂ ಪುಡಿ ರಾಜಕಾರಣಿಗಳ ಎದೆಯಲ್ಲಿ ಭಯ ಸೃಷ್ಟಿಸಿದ ಹನಿಟ್ರ್ಯಾಪ್, ವಂಚನೆ ಆರೋಪಿ ಜೀನತ್ ಬಂಧನ ….!
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
    ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ