📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ

    ಮಂಗಳೂರು: ಇಎಸ್ಐ ವ್ಯಾಪ್ತಿಯ ರೋಗಿಗಳಿಗೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಕರ್ನಾಟಕದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಮೂಲಕ ನಡೆಯುತ್ತಿರುವ ಇಎಸ್ಐ ಚಿಕಿತ್ಸಾ ವ್ಯವಸ್ಥೆಯಲ್ಲಿ ಇಲಾಖಾಧಿಕಾರಿಗಳ ಗೊಂದಲದ ನಿಲುವಿನಿಂದ ರೋಗಿಗಳು ತೊಂದರೆ ಅನುಭವಿಸುತ್ತಿರುವ ಕುರಿತು ಕೇಂದ್ರ ಕಾರ್ಮಿಕ ಇಲಾಖೆಯ ಗಮನಕ್ಕೆ ತರಲಾಗಿತ್ತು. ವಿಶೇಷವಾಗಿ ಹೃದಯಾಘಾತ, ಮೆದುಳು ಶಸ್ತ್ರಚಿಕಿತ್ಸೆ ಸೇರಿದಂತೆ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅನುಮತಿ ಅಥವಾ ಸಂವಾದ ನಡೆಸಬೇಕೆಂಬ ಸೂಚನೆಯಿಂದ ಚಿಕಿತ್ಸೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು.

    Also Read  ಇಂದು ಮಂಗಳೂರಲ್ಲಿ ತಲೆಮೇಲೆ ಸುತ್ತು ಹೊಡೆದಂತೆ ಬಾರಿ ಶಬ್ದದೊಂದಿಗೆ ಹೆಲಿಕಾಪ್ಟರ್‌..!ಆಶ್ಚರ್ಯ ಮತ್ತು ಆತಂಕದ ಹಿಂದಿದೆ ಭದ್ರತಾ ‘ಮೆಗಾ ಡ್ರಿಲ್’ ..!ಅಸಲಿ ಕಾರಣವೇನು

    ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಇಎಸ್ಐ ಅಧಿಕಾರಿಗಳು ಸಂಪರ್ಕಕ್ಕೆ ಸಿಗದಿರುವುದರಿಂದ ತುರ್ತು ಚಿಕಿತ್ಸೆಗೆ ಅಡಚಣೆ ಉಂಟಾಗುತ್ತಿತ್ತು. ಐಸಿಯು ಹಾಗೂ ಆಪರೇಷನ್ ಥಿಯೇಟರ್‌ನಲ್ಲಿರುವ ರೋಗಿಗಳು ವಿಡಿಯೋ ಕರೆಗೆ ಹಾಜರಾಗಲು ಸಾಧ್ಯವಾಗದ ಪರಿಸ್ಥಿತಿಯೂ ಎದುರಾಗಿತ್ತು. ಕೆಲವು ಆಸ್ಪತ್ರೆಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ವಿಡಿಯೋ ಸಂಪರ್ಕ ಸಾಧ್ಯವಾಗದೆ ಚಿಕಿತ್ಸೆ ಪ್ರಕ್ರಿಯೆ ವಿಳಂಬವಾಗುತ್ತಿದ್ದುದಾಗಿ ತಿಳಿಸಲಾಗಿತ್ತು.

    ಈ ಸಮಸ್ಯೆಗಳ ಕುರಿತು ತಕ್ಷಣ ಸ್ಪಂದಿಸಿದ ಕೇಂದ್ರ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರು ಇಎಸ್ಐ ಡೈರೆಕ್ಟರ್ ಜನರಲ್ ಅಶೋಕ್ ಕುಮಾರ್ ಸಿಂಗ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿ, ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ, ಅನಗತ್ಯ ಗೊಂದಲ ಸೃಷ್ಟಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಲಾಗಿದೆ.

    Also Read  ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..

    ಕೇಂದ್ರ ಸಚಿವರ ತ್ವರಿತ ಸ್ಪಂದನೆ ಹಾಗೂ ರೋಗಿಗಳ ಹಿತದೃಷ್ಟಿಯಿಂದ ಕೈಗೊಂಡ ಕ್ರಮಕ್ಕೆ ಕ್ಷೇತ್ರದ ಜನತೆ ಮತ್ತು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕ್ಲೌಡ್ ಮಾರುಕಟ್ಟೆಗೆ ಮಾರ್ಕ್ ಜುಕರ್‌ಬರ್ಗ್ ಎಂಟ್ರಿ!?ಇಡೀ ಟೆಕ್ ಪ್ರಪಂಚವೇ ಬೆಚ್ಚಿಬೀಳುವಂತಿದೆ ಜುಕರ್‌ಬರ್ಗ್ ಮುಂದಿನ ನಡೆ!
    ಮಕ್ಕಳಿಗೆ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    ಜನಪ್ರಿಯ “ಶಕ್ತಿ ಯೋಜನೆ” ವಿಫಲಗೊಳಿಸಲು ಸಂಚು!
    ಸಚಿವ ಜಮೀರ್ ಕಥೆ ಗೋವಿಂದ!!!?
    Train Travel ಇಷ್ಟನಾ? ಹಾಗಾದ್ರೆ ಈ ಸುದ್ದಿ ತಿಳ್ಕೊಳ್ಳಿ!ಬೆಂಗಳೂರು–ಮಂಗಳೂರು ಗೋವಾ ವಂದೇ ಭಾರತ್….!?
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
    ವಾಹನ ಸವಾರರಿಗೆ ಸರ್ಕಾರದ ಮತ್ತೆ 50% ಫೈನ್ ರಿಯಾಯಿತಿ!ಸಿಹಿ ಸುದ್ದಿ… ಆದರೆ ಜನ ಕೇಳುತ್ತಿರುವ ಕಹಿ ಪ್ರಶ್ನೆಗಳಿಗೂ ಉತ್ತರಿಸಿ… ಉಲ್ಲಂಘಿಸುವವರಿಗೆ ರಿಯಾಯಿತಿ…ಹಾಗೇ ನಿಯಮ ಪಾಲಿಸುವವರಿಗೆ ಬಹುಮಾನ ಉಂಟಾ…?!!!!
    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
    ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
    ಪಂಜಾಬ್‌ನಲ್ಲಿ ಮಹಿಳೆಗೆ ಒಂದೇ ಹೆರಿಗೆಗೆ ಆರು ಮಕ್ಕಳು….!!ನಿಜವೇನು?
    ಸಿಖ್ ವಿರೋಧಿ ದಂಗೆಯ ಆರೋಪಿ, ಸಜ್ಜನ್ ಕುಮಾರ್ ಜೈಲಿನಲ್ಲಿ ನಿಧನ
    ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
    ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ಅಧಿಕಾರಕ್ಕಿಂತ ಕೆಲಸ ಮುಖ್ಯ ಎನ್ನುವ ನಾಯಕ? ಕೃಷ್ಣ ಬೈರೇಗೌಡರ ನಡೆ, ಕೆಲಸ ಈಗ ಎಲ್ಲರ ಗಮನ ಸೆಳೆತಿದೆ..
    ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
    “ಕುನಾಲ್ ಶಾ ವಾಟ್ಸಾಪ್ ಗ್ಲೋಬಲ್ ಹೆಡ್! ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸಾಲಿಗೆ ಮತ್ತೊಬ್ಬ ಭಾರತೀಯನ ಸೇರ್ಪಡೆ.
    ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
    ಕರ್ನಾಟಕದಲ್ಲಿ 2,222 KEO AI, PCಗಳ ಲೋಕಾರ್ಪಣೆ
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
    ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
    ಕೋರ್ಟ್ ವಿಡಿಯೊ ವೈರಲ್‌ಗೆ ಬ್ರೇಕ್: ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಜನಾಭಿಪ್ರಾಯ ಏನು?