📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ವಾಹನ ಸವಾರರಿಗೆ ಸರ್ಕಾರದ ಮತ್ತೆ 50% ಫೈನ್ ರಿಯಾಯಿತಿ!ಸಿಹಿ ಸುದ್ದಿ… ಆದರೆ ಜನ ಕೇಳುತ್ತಿರುವ ಕಹಿ ಪ್ರಶ್ನೆಗಳಿಗೂ ಉತ್ತರಿಸಿ… ಉಲ್ಲಂಘಿಸುವವರಿಗೆ ರಿಯಾಯಿತಿ…ಹಾಗೇ ನಿಯಮ ಪಾಲಿಸುವವರಿಗೆ ಬಹುಮಾನ ಉಂಟಾ…?!!!!

    “ಇಂದು ಬೇಡ, ನಾಳೆ ನೋಡೋಣ” ಎಂದು ಮುಂದೂಡಿದರೆ ಮತ್ತೆ ಪೂರ್ಣ ದಂಡ ಪಾವತಿಯ ಜೊತೆಗೆ ದುಪ್ಪಟ್ಟು ಕಟ್ಟುವ ಕಾನೂನು ಕಾರ್ಯರೂಪಕ್ಕೆ ಬರಲೂಬಹುದು…. ಯಾಕಂದ್ರೆ ಹೊಸ CM ಡಿಕೆಶಿ ಖಡಕ್ ರೂಲ್ಸ್ ತಂದರೇ….ಬೊಕ್ಕಸಕ್ಕೂ ಕಾಸು..! ದೊಡ್ಡ ಚಾನ್ಸ್ ಮಿಸ್ ಮಾಡ್ಬೇಡಿ ಬಾಕಿ ಇರುವ ಟ್ರಾಫಿಕ್ ದಂಡಗಳನ್ನು ಪರಿಶೀಲಿಸಿ, ರಿಯಾಯಿತಿ ಅವಧಿಯೊಳಗೆ ಪಾವತಿಸಿ ಕಾನೂನು ತೊಂದರೆಗಳಿಂದ ದೂರವಿರಿ.

    ರಾಜ್ಯ ಸರ್ಕಾರ ಬಾಕಿ ಇರುವ ಟ್ರಾಫಿಕ್ ದಂಡಗಳಿಗೆ 50% ರಿಯಾಯಿತಿ ಘೋಷಿಸಿರುವುದು ಲಕ್ಷಾಂತರ ವಾಹನ ಸವಾರರಿಗೆ ಖಂಡಿತವಾಗಿಯೂ ನೆಮ್ಮದಿ ತಂದಿದೆ. ಆದರೆ ಇದರ ಜೊತೆಗೆ ಮತ್ತೊಂದು ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ – “ಕಾನೂನು ಎಂದರೆ ನಿಯತ್ತಿನಿಂದ ಕೇವಲ ನಿಯಮ ಪಾಲಿಸುವವರಿಗೆ ಮಾತ್ರವೇ?”

    ಕಾನೂನು ನಿಮ್ಮ ಕಡೆಯೇ ಇದೆ… ಆದರೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತಿದೆಯೇ?ನಿಯಮಗಳು.. ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಾಗಲೇ ಬದಲಾವಣೆ ಸಾಧ್ಯ..!

    ಹೆಲ್ಮೆಟ್ ಇಲ್ಲದೆ ಟ್ರಿಪಲ್ ರೈಡ್, ನಂಬರ್ ಪ್ಲೇಟ್ ಇಲ್ಲದ ವಾಹನಗಳು, ಡಾರ್ಕ್ ಟಿಂಟ್ ಗ್ಲಾಸ್‌ಗಳು, ಸೈಲೆನ್ಸರ್ ಮಾರ್ಪಾಡು, ಸಿಗ್ನಲ್ ಜಂಪ್ – ಕರ್ಕಶ ಹಾರ್ನ್…ಇವೆಲ್ಲವೂ ಪ್ರತಿದಿನ ರಸ್ತೆಗಳಲ್ಲಿ ಕಾಣುವ ದೃಶ್ಯಗಳು. ಕೆಲವೊಮ್ಮೆ ಪೊಲೀಸ್ ಠಾಣೆ ಎದುರೇ ಇಂತಹ ಉಲ್ಲಂಘನೆಗಳು ನಡೆದರೂ ಕ್ರಮ ಕಾಣುವುದಿಲ್ಲ ಎಂಬ ಆರೋಪ ಜನರಿಂದ ಕೇಳಿಬರುತ್ತದೆ. ಆದರೆ ದಂಡದ ಸಂದೇಶ ಕ್ಷಣಾರ್ಧದಲ್ಲಿ ತಲುಪುತ್ತದೆ ಎಂಬ ಬೇಸರವೂ ಇದೆ.

    Also Read  ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ... ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!

    HSRP ಕಡ್ಡಾಯ ಮಾಡಿ…ಕಥೆ ಏನಾಯಿತು?

    HSRP ನಂಬರ್ ಪ್ಲೇಟ್ ಕಡ್ಡಾಯ ಎಂದು ಸರ್ಕಾರ ಹಲವು ಬಾರಿ ಗಡುವು ಘೋಷಿಸಿತು. ನಂತರ ಸಾರ್ವಜನಿಕ ಒತ್ತಡ, ತಾಂತ್ರಿಕ ಸಮಸ್ಯೆಗಳು ಹಾಗೂ ಕಡಿಮೆ ನೋಂದಣಿ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಅವಧಿ ವಿಸ್ತರಿಸಲಾಯಿತು. ಇದರಿಂದ ನಿಯಮ ಪಾಲಿಸಿದವರು ಹೆಚ್ಚುವರಿ ವೆಚ್ಚ ಭರಿಸಿದರೆ, ಕಾಯುತ್ತಿದ್ದವರಿಗೆ ಮತ್ತಷ್ಟು ಸಮಯ ಸಿಕ್ಕಿತು. ಇನ್ನು ಲಕ್ಷಾಂತರ ಗಾಡಿಗಳ ಮಾಲಕರು ಅದರ ಗೊಡವೆಗೆ ಹೋಗಿಲ್ಲಾ…ಈಗಲೂ ಬಿಂದಾಸ್ ಆಗಿ ಗಾಡಿಗಳು ಓಡಾಡ್ತಾ ಇವೆ..ಆಗ ಪ್ರಶ್ನೆ – ನಿಯಮವನ್ನು ಮೊದಲೇ ಸಮಯಕ್ಕೆ ಸರಿಯಾಗಿ ಪಾಲಿಸಿದವರಿಗೆ ಸಿಕ್ಕ ಪ್ರತಿಫಲವೇನು??

    ಸಾರಿಗೆ ಮತ್ತು ಟ್ರಾಫಿಕ್ ಇಲಾಖೆಗಳು ಹಲವು ಬಾರಿ ಕಠಿಣ ಕ್ರಮಗಳ ಘೋಷಣೆ ಮಾಡಿವೆ. ಆದರೆ ಸಾರ್ವಜನಿಕ ವಿರೋಧ, ರಾಜಕೀಯ ಒತ್ತಡ ಅಥವಾ ಅನುಷ್ಠಾನದ ಸಮಸ್ಯೆಗಳ ಕಾರಣ ಕೆಲವು ನಿಯಮಗಳು ಸಡಿಲಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ. ಇದರಿಂದ ಕಾನೂನಿನ ಬಗ್ಗೆ ಜನರಲ್ಲಿ ಗೊಂದಲ ಮೂಡಿರುವುದು ವಾಸ್ತವ.

    Also Read  🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!

    ದಂಡವೇ ಗುರಿ? ಅಥವಾ ರಸ್ತೆ ಸುರಕ್ಷತೆಯೇ?

    ಪ್ರತಿ ಬಾರಿ ವಿಶೇಷ ಅಭಿಯಾನ, ದಂಡ, ಇ-ಚಲನ್, ರಿಯಾಯಿತಿ… ಇವೆಲ್ಲವೂ ನಡೆಯುತ್ತಿವೆ. ಆದರೆ ಅಪಘಾತಗಳು ಕಡಿಮೆಯಾಗುತ್ತಿವೆಯೇ? ಟ್ರಾಫಿಕ್ ಶಿಸ್ತು ಹೆಚ್ಚಾಗುತ್ತಿದೆಯೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಕಾನೂನಿನ ಉದ್ದೇಶ ಆದಾಯ ಸಂಗ್ರಹವಲ್ಲ, ಸುರಕ್ಷಿತ ಸಮಾಜ ನಿರ್ಮಾಣ ಎಂಬುದನ್ನು ಸರ್ಕಾರವೂ ಜನರೂ ನೆನಪಿಸಿಕೊಳ್ಳಬೇಕಿದೆ.

    ಏನೇ ಆದರೂ…..ಫೈನ್ ಕಟ್ಟಬೇಕಿರುವ ಬುದ್ಧಿವಂತರು ಈಗ ಸದ್ಯದ ವಿಷಯಕ್ಕೆ ಗಮನ ಕೊಡಿ.ಸರ್ಕಾರದ ಆದೇಶದ ಪ್ರಕಾರ 2026ರ ಜೂನ್ 21ರಿಂದ ಜುಲೈ 10ರವರೆಗೆ ಈ ವಿಶೇಷ ರಿಯಾಯಿತಿ ಜಾರಿಯಲ್ಲಿರಲಿದೆ. ಈ ಅವಧಿಯೊಳಗೆ ಪಾವತಿ ಮಾಡಿದರೆ ಮಾತ್ರ 50% ರಿಯಾಯಿತಿ ಸಿಗಲಿದೆ.ಮೇ 2026ರವರೆಗೆ ಪೊಲೀಸ್ ಇಲಾಖೆಯಿಂದ ದಾಖಲಾದ ಬಾಕಿ ಟ್ರಾಫಿಕ್ ಇ-ಚಲನ್ ಪ್ರಕರಣಗಳು ಹಾಗೂ ಹಳೆಯ ಕೆಲವು ಸಾರಿಗೆ ಇಲಾಖೆ ದಂಡ ಪ್ರಕರಣಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ.

    Also Read  ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ 'ನೋ-ಫ್ಲೈ ಲಿಸ್ಟ್' ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..

    ವಾಹನ ಸವಾರರು ಅಧಿಕೃತ ಇ-ಚಲನ್ ಪೋರ್ಟಲ್, KSP App, BTP ASTraM App, ಟ್ರಾಫಿಕ್ ಪೊಲೀಸ್ ಠಾಣೆ ಅಥವಾ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಮೂಲಕ ದಂಡ ಪಾವತಿಸಬಹುದು.

    ವಂಚಕರ ಬಗ್ಗೆ ಎಚ್ಚರ!

    ಇತ್ತೀಚಿನ ದಿನಗಳಲ್ಲಿ ನಕಲಿ ಟ್ರಾಫಿಕ್ ಚಲನ್ ಲಿಂಕ್‌ಗಳು, WhatsApp ಮೆಸೇಜ್‌ಗಳು ಹಾಗೂ ಖಾಸಗಿ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಹಣ ಪಾವತಿಸಲು ಒತ್ತಾಯಿಸುವ ವಂಚನೆಗಳು ಹೆಚ್ಚಾಗಿವೆ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಯಾವುದೇ ಹಣ ಪಾವತಿಸುವ ಮೊದಲು ಅಧಿಕೃತ ಸರ್ಕಾರದ ವೆಬ್‌ಸೈಟ್ ಅಥವಾ ಅಧಿಕೃತ ಆ್ಯಪ್‌ನಲ್ಲಿ ನಿಮ್ಮ ವಾಹನ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿ. ವೈಯಕ್ತಿಕ ಸಂಖ್ಯೆಗೆ ಡಿಎಲ್, ಆಧಾರ್ ಅಥವಾ ಬ್ಯಾಂಕ್ ಮಾಹಿತಿ ಕಳುಹಿಸಬೇಡಿ.

    ##TrafficFine #EChallan #KarnatakaNews #TrafficPolice #VehicleOwners #RoadSafety #KarnatakaGovernment #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
    ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ
    ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
    ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
    ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
    ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
    MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
    ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ಸ್ಪೇನ್‌ಗೆ 2ನೇ FIFA ವಿಶ್ವಕಪ್ ಕಿರೀಟ!ನ್ಯೂಯಾರ್ಕ್‌ನಲ್ಲಿ ಮೆಸ್ಸಿಯ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ನ ಲಾ ರೋಜಾ ಗೆ ಐತಿಹಾಸಿಕ ಜಯ! 
    Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
    ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
    ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!
    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
    Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
    ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!
    ಮೋದಿ ವಿಡಿಯೋ ಡಿಲೀಟ್ ವಿವಾದ: ಭಾರತಕ್ಕೆ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್!
    ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್‌ಗೆ ನಕಲಿ ಸಹಿ! ನಕಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದ ಮಾಜಿ ಸಿಬ್ಬಂದಿ…
    ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
    ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
    ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
    ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
    “ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …
    ಚೀನಾಗೆ ಮಾತುಕತೆ, ರಷ್ಯಾ–ಉಕ್ರೇನ್‌ಗೆ ಸಂಧಾನ; ವಿಶ್ವ ವೇದಿಕೆಯಲ್ಲಿ ಭಾರತದ ಡಬಲ್ ಡಿಪ್ಲೊಮಸಿ!
    ಕರಾವಳಿಯ ಭವಿಷ್ಯ ರೂಪಿಸಲು ಸಿಎಂನ ಮಾಸ್ಟರ್ ಪ್ಲಾನ್! ಹೆಲಿ ಟೂರಿಸಂನಿಂದ ಹಿಡಿದು ಸಾವಿರಾರು ಉದ್ಯೋಗಗಳವರೆಗೆ…ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಕಣ್ಣು.
    ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ