📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು

    ಯಾವ ಮುಲಾಜಿಲ್ಲದೆ ಪೆಟ್ರೋಲ್ ಹಾಗೂ ಡಿಸೈಲ್ ಬೆಲೆಯನ್ನು ಲೀಟರಿಗೆ ಮೂರು ರೂಪಾಯಿಗೂ ಹೆಚ್ಚು ಹೆಚ್ಚಿಸಲಾಗಿದೆ. ಅಡುಗೆ ಅನಿಲದ ದರವನ್ನು ಹೆಚ್ಚಿಸಿ ಕೆಲವು ಸಮಯವೇ ಆಯ್ತು. ತೀರಾ ಇತ್ತೀಚೆಗೆ, ಬೇಸಿಗೆಯ ಈ ವಾತಾವರಣದಲ್ಲಿ ವಿದ್ಯುತ್ ದರವನ್ನೂ ರಾಜ್ಯ ಸರ್ಕಾರವು ಹೆಚ್ಚಿಸಿದೆ. ಇದರಿಂದಾಗಿ ಎಲ್ಲಾ ವಸ್ತುಗಳು ಸಹ ದುಬಾರಿಯಾಗುತ್ತಿವೆ. ತೈಲಬೆಲೆಯ ಜೊತೆಗೆ ಲಿಂಕ್ ಆಗಿರುವ ಕಾರಣ ಸಹಜವಾಗಿ ಆ ಎಲ್ಲಾ ವಸ್ತುಗಳ ದರವು ಏರಿಕೆ ಕಂಡಿವೆ. ಇಂತಹ ಸಂದರ್ಭದಲ್ಲಿ ಯೋಚಿಸಬೇಕಾದ್ದು ಜನಸಾಮಾನ್ಯರ ಆದಾಯವನ್ನು. ಈ ಬೆಲೆ ಏರಿಕೆಗೆ ಕಾರಣರಾದವರು, ಜನಸಾಮಾನ್ಯರ ಆದಾಯವನ್ನು ಹೆಚ್ಚಿಸಿದ್ದಾರ ಅನ್ನುವುದರ ಕಡೆ  ನೋಡಬೇಕು.

    ನೋ ಚಾನ್ಸ್…. ಬೆಲೆ ಏರಿಕೆ ಮಾಡಿದವರಿಗೆ, ಜನಸಾಮಾನ್ಯರ ಆದಾಯದ ಬಗ್ಗೆ ಕಿಂಚಿತ್ತೂ ಯೋಚನೆ ಇಲ್ಲ. ಆ ವಿಷಯ ತಮಗೆ ಸಂಬಂಧ ಪಡದ್ದು ಎಂಬಂತಿದ್ದಾರೆ. ಕೇವಲ ಚುನಾವಣಾ ಸಂದರ್ಭದಲ್ಲಿ ಘೋಷಿಸುವ ಭರವಸೆಗಳಿಗಷ್ಟೇ ಜನಸಾಮಾನ್ಯರ ನೆನಪಾಗುವುದು ಉಳಿದ ಸಂದರ್ಭದಲ್ಲಿ ,ಆ ಯಾವ ನೆನಪೂ ಇರುವುದಿಲ್ಲ. ನಿಜ, ಪೆಟ್ರೋಲ್ ಡಿಸೈಲ್ ಬೆಲೆ ಹೆಚ್ಚಾಗಿದೆ. ಅದಕ್ಕೆ ಕಾರಣ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಎಂಬ ಹಳಸಲು ಹೇಳಿಕೆ. ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು, ಇವತ್ತು ನಿನ್ನೆ ಪ್ರಾರಂಭವಾಗಿದ್ದಲ್ಲ ಕೆಲವು ತಿಂಗಳಾದವು. ಆಗ ಪೆಟ್ರೋಲ್ ಡೀಸೆಲ್ ದರ ಏರಿಸಿಲ್ಲ ಯಾಕೆ ಗೊತ್ತಾ? ಈ ಬಗ್ಗೆ ಯಾವ ಮಾಧ್ಯಮದಲ್ಲೂ ಚರ್ಚೆಯಾಗಿಲ್ಲ, ಡಿಬೇಟ್ಸ್ ಗಳಾಗಿಲ್ಲ. ಈ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಅಥವಾ ಇನ್ಯಾವುದೋ ಪಕ್ಷ ಮುಖ್ಯವಾಗಬಾರದು. ಯಾವುದೇ ಸರ್ಕಾರ, ಅವೈಜ್ಞಾನಿಕವಾಗಿ ಜನರ ಮನಸ್ಥಿತಿಯನ್ನು ಅರಿಯದೆ ಜನರ ಪರಿಸ್ಥಿತಿಯನ್ನು ನೋಡದೆ ತನಗೆ ಬೇಕಾದಹಾಗೆ ಬೆಲೆ ಹೆಚ್ಚಿಸುವುದನ್ನು ವಿರೋಧಿಸುವ, ಪ್ರತಿಭಟಿಸುವ ಹಕ್ಕನ್ನು ಸಾಮಾನ್ಯ ಜನರು ತನ್ನಲ್ಲಿಟ್ಟುಕೊಳ್ಳಬೇಕಿತ್ತು. ಇವತ್ತು ಅದು ಜನಸಾಮಾನ್ಯರಲ್ಲಿ ಸತ್ತು ಹೋಗುತ್ತಿದೆ. ಕಾರಣ ಇಷ್ಟೇ, ಜನಸಾಮಾನ್ಯರು ಒಂದೊಂದು ಪಕ್ಷದ ಬಕೆಟ್ ಗಳಾಗಿ ಬದಲಾಗಿದ್ದಾರೆ. ಆ ಪಕ್ಷದ ತಪ್ಪುಗಳನ್ನು ಸಮರ್ಥಿಸಿಕೊಳ್ಳುವಷ್ಟು ಅವರು ಬಕೆಟ್ಗಳಾಗಿರುವಂಥದ್ದು. ಈ ಕಾರಣದಿಂದಾಗಿಯೇ ತಮ್ಮದೇ ಹಕ್ಕನ್ನು ಪಡೆಯುವ ತಾಕತ್ತನ್ನು ಕಳೆದುಕೊಂಡಿರುವಂತದು.

    Also Read   "ತಪ್ಪು ಮಾಡಿದ್ರೆ ಕೈ-ಕಾಲು ಕತ್ತರಿಸ್ಬೇಕು, ಆಗಲೇ ಕಾನೂನಿನ ಭಯ ಬರೋದು! "ಗಲ್ಫ್ ದೇಶಗಳ ಮಾದರಿ ಶಿಕ್ಷೆ ಜಾರಿಯಾಗ್ಬೇಕು ಅನ್ನೋ ನ್ಯಾಯಮೂರ್ತಿಗಳ ನಿಲುವಿಗೆ ಇಡೀ ರಾಜ್ಯವೇ ಜೈ ಅಂತಿದೆ!

    ಪಂಚ ರಾಜ್ಯದ ಚುನಾವಣೆ ನಡೆಯುತ್ತಿತ್ತು. ಇದೇ ಕಾರಣಕ್ಕಾಗಿ ಪೆಟ್ರೋಲ್ ಡೀಸೆಲ್ ಗ್ಯಾಸ್ ದರಗಳನ್ನು ಏರಿಕೆಯಾಗದಂತೆ ತಡೆ ಹಿಡಿದು ಕೂತಿತ್ತು ಸರ್ಕಾರ. ಯಾವಾಗ ಚುನಾವಣೆಯು ಮುಗಿದು ಜನರ ಮತಗಳು ಬಾಕ್ಸಿನ್ ಒಳಗೆ ಬಂದು ಕೂರುತ್ತದೆಯೋ ಅಲ್ಲಿಂದ ಶುರುವಾಗುತ್ತದೆ ಬೆಲೆ ಏರಿಕೆಯ ಪರ್ವ.

    ಈ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದರೂ, ಜನರು ಸರ್ಕಾರದ ನೀತಿಯ ವಿರುದ್ಧ ತಿರುಗಿ ಬೀಳಲಿಲ್ಲ. ಹೋರಾಟಕ್ಕೆ ನಿಲ್ಲಲಿಲ್ಲ. ಈ ಹಿಂದೆ ಕೇವಲ ಒಂದು ರೂ, ಏರಿಕೆ ಕಂಡಿದ್ದರೂ ಇಡೀ ದೇಶವೆ ಬಂದ್ ಆಗುತ್ತಿತ್ತು. ಪ್ರತಿಭಟನೆಯು ಸರ್ಕಾರವನ್ನು ನಡುಗುವಂತೆ ಮಾಡುತ್ತಿದ್ದವು. ಆದರೆ ಈಗ,  ಪ್ರತಿಭಟನೆ  ಅಸಂಭದ್ಧ ವಿಚಾರಕ್ಕೆ ಸೀಮಿತವಾಗಿದೆ. ಜಾತಿ- ಧರ್ಮ ಇಂತಹ ವಿಚಾರಗಳಿಗೆ ಆ ಪ್ರತಿಭಟನೆಗಳು ಸೀಮಿತವಾಗುತ್ತಿವೆ. ಜನರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ಅನಾಗರಿಕ ವರ್ತನೆ, ಸರ್ಕಾರದ ಅವೈಜ್ಞಾನಿಕವಾದಂತಹ ಬೆಲೆ ಏರಿಕೆ, ಅಧಿಕಾರ ದುರುಪಯೋಗ ಈ ಯಾವ ವಿಚಾರಗಳಿಗೂ ಜನರು ಪ್ರತಿಭಟಿಸುವ ಹಕ್ಕನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳು ಸಹ, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ವಿಫಲಗೊಳ್ಳುತ್ತಿವೆ. ಜನರ ಧ್ವನಿಯಾಗಿ ನಿಲ್ಲುವಲ್ಲಿ, ಜನರ ಹಿತ ಕಾಪಾಡುವ ಬಗ್ಗೆ ಯೋಚಿಸುವಲ್ಲಿ ದೇಶದ ಬಹುತೇಕ ವಿರೋಧ ಪಕ್ಷಗಳು ವಿಫಲಗೊಂಡಿವೆ. ಅಂತಹ ಯೋಚನೆಗಳು ಕೂಡ ಅವರಲ್ಲಿ ಇದ್ದಂತೆ ಕಾಣುತ್ತಿಲ್ಲ ಅನ್ನುವುದಕ್ಕೆ ಇವತ್ತಿನ ಈ ಸಿಚುವೇಶನ್ ಸಾಕ್ಷಿಯಾಗಿ ನಿಂತಿದೆ ನೋಡಿ.

    Also Read  ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ

    ಜನರ ಪರವಾಗಿ ಗಟ್ಟಿಯಾದ ಧ್ವನಿ ಬಾರದಿರುವುದು, ಜನರ ಜೊತೆಗೆ ದೊಡ್ಡ ಸಂಖ್ಯೆಯ ಜನರು ಕಾಣದಿರುವುದು ಆಡಳಿತ ನಡೆಸುವವರ ಪಾಲಿಗೆ ಖುಷಿಯ ಹಾಗೂ ನೆಮ್ಮದಿಯ ವಿಚಾರವಾಗಿದೆ. ಈ ಕಾರಣಕ್ಕಾಗಿಯೇ ಆಡಳಿತ ನಡೆಸುವವರು, ಧೈರ್ಯವಾಗಿ ಯಾವ ಸಂಕೋಚವೂ ಇಲ್ಲದೆ ಅವೈಜ್ಞಾನಿಕವಾಗಿ ದರ ಏರಿಕೆ ಮಾಡುತ್ತಿವೆ. ಅವರಿಗೆ ಸ್ಪಷ್ಟವಾಗಿ ಗೊತ್ತಿದೆ, ಜನರು ಮೊದಲಿನ ಹಾಗೆ ಪ್ರತಿಭಟಿಸುವ ಹಾಗೂ ಹೋರಾಟ ಮಾಡುವ ಶಕ್ತಿಯನ್ನು ಹೊಂದಿಲ್ಲ ಅನ್ನೋದು. ಆ ಶಕ್ತಿಯನ್ನು ಆಡಳಿತ ನಡೆಸುವವರು ಹಂತ ಹಂತವಾಗಿ ಕುಗ್ಗಿಸಿದ್ದಾರೆ. ಈ ಕಾರಣಕ್ಕಾಗಿ ಧೈರ್ಯವಾಗಿ ತಮಗೆ ಬೇಕಾದ ಹಾಗೆ ದರ ಏರಿಕೆ ಮಾಡುತ್ತಿದ್ದಾರೆ.

    ಪೆಟ್ರೋಲ್ ಡೀಸೆಲ್ ದರ ಕೇವಲ ರೂ.3 ಏರಿಕೆಯಾಗಿದೆ ಅಂತ ಕೆಲವರು ಹೇಳುತ್ತಾರೆ. ಗ್ಯಾಸ್ ದರದಲ್ಲೂ ವಿಪರೀತ ಏರಿಕೆ ಕಂಡಿದೆ. ದೇಶಕ್ಕೋಸ್ಕರ ಅದನ್ನು ಬರಿಸಬೇಕು ಅಂತಲೂ ಎಮೋಷನಲ್ ಡೈಲಾಗ್ ಬಿಡುತ್ತಾರೆ. ಈ ಮೂರು ರೂ ಪೆಟ್ರೋಲ್ ಡಿಸೈಲ್ ಏರಿಕೆಯ ಪರಿಣಾಮದಿಂದ, ಅದಕ್ಕೆ ರಿಲೇಟೆಡ್ ಆಗಿ ಇರುವಂತಹ ಎಲ್ಲಾ ಪದಾರ್ಥಗಳ ಬೆಲೆಯೂ ಹೆಚ್ಚಾಗುವುದರಿಂದಾಗಿ, ಜನಸಾಮಾನ್ಯರ ತಿಂಗಳ ಬಜೆಟ್ ನಲ್ಲಿ ಕಡಿಮೆ ಎಂದರು ರೂ. ಒಂದರಿಂದ ಎರಡು ಸಾವಿರದಷ್ಟು ವೆಚ್ಚ ಹೆಚ್ಚಾಗಲಿದೆ. ಆದರೆ ಜನಸಾಮಾನ್ಯರ ಆದಾಯದಲ್ಲಿ ಒಂದೇ ಒಂದು ರೂಪಾಯಿಯಷ್ಟು ಏರಿಕೆ ಕಂಡಿಲ್ಲ. ಖರ್ಚು ಹೆಚ್ಚಾದಂತೆ ಆದಾಯವೂ ಹೆಚ್ಚಾದರೆ ಮಾತ್ರ ಸಮತೋಲನ ದಲ್ಲಿರಲು ಸಾಧ್ಯ. ಅದಿಲ್ಲ ಅಂದರೆ ಆರ್ಥಿಕ ಸ್ಥಿತಿಗತಿಯಲ್ಲಿ ಏರುಪೇರು ಆಗುತ್ತದೆ. ಈಗ ಬಡ ಹಾಗೂ ಮಧ್ಯಮ ವರ್ಗದವರ ಸ್ಥಿತಿಯಲ್ಲಿ ಇಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಹಾಗೂ ವಿರೋಧ ಪಕ್ಷ ಎರಡಕ್ಕೂ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನರು ತಮ್ಮ ಮೇಲಿನ ದೌರ್ಜನ್ಯ ಅನ್ಯಾಯವನ್ನು ಪ್ರತಿಭಟಿಸುವ ಹಕ್ಕನ್ನು ಹೊಂದಿರಬೇಕಿತ್ತು. ಆ ತಾಕತ್ತನ್ನು ಇವತ್ತಿನ ರಾಜಕಾರಣವ ಹಂತಹಂತವಾಗಿ ಕಿತ್ತುಕೊಳ್ಳುತ್ತಾ ಬಂದಿರುವ ಪರಿಣಾಮ, ಜನಸಾಮಾನ್ಯರು ಬಲಹೀನರಾದಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಪರವಾಗಿ ಗಟ್ಟಿ ಧ್ವನಿಯಾಗಿ ನಿಲ್ಲಬೇಕಿದ್ದ ಮಾಧ್ಯಮ ಸಮುದಾಯ ಕೂಡ ಸಂಪೂರ್ಣವಾಗಿ  ಬದಲಾದಂತೆ ಕಾಣುತ್ತಿದೆ ಅನ್ನುವುದು ದುರ್ದೈವದ ವಿಚಾರ.

    Also Read  ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…

                            –ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
    “ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
    ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ
    ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಇ.ಡಿ. ಶಾಕ್: 21 ಕಡೆ ಏಕಕಾಲದ ದಾಳಿ
    ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
    ‘ಸೈಯಾರಾ’ ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ
    ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
    ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
    ಭಾರತೀಯರ ಟ್ರಾವೆಲ್ ಲಿಸ್ಟ್‌ನಿಂದ ಯುರೋಪ್ ಔಟ್.. ಲಂಡನ್, ಪ್ಯಾರಿಸ್ ಬಿಟ್ಟು ಥೈಲ್ಯಾಂಡ್, ಮಲೇಷ್ಯಾ ಜಪಾನ್‌ನತ್ತ ಪ್ರವಾಸಿಗರ ದಂಡು ..
    ತೇಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅತ್ಯಾಚಾರ ಪ್ರಕರಣಕ್ಕೆ 13 ವರ್ಷಗಳ ಬಳಿಕ ಗೋವಾ ಹೈಕೋರ್ಟ್ ಮಹತ್ವದ ತೀರ್ಪು….!
    5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
    ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
    ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
    Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
    TVKಗೆ ಟಕ್ಕರ್? ಅಜಿತ್ ಫ್ಯಾನ್ಸ್‌ TMMK ಎಂಟ್ರಿ!ದಳಪತಿಗೆ ಎದುರಾಗಿ ಅಜಿತ್ ಫ್ಯಾನ್ಸ್‌ ಪಕ್ಷ!
    79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!
    8 ಹೈಕೋರ್ಟ್‌ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳು: ರಾಷ್ಟ್ರಪತಿ ಮುರ್ಮು ಅಂಕಿತಕ್ಕೆ ನೇಮಕಾತಿ ಆದೇಶ
    ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್
     ಮಗಳ ಗಂಡನೇ …ಅತ್ತೆಯ ಗಂಡ! ಹೌದು…ಅಳಿಯ-ಅತ್ತೆಯ ಪ್ರೇಮಕಥೆ ವೈರಲ್!ಕುಟುಂಬ ಸಂಬಂಧಗಳೇ ತಲೆಕೆಳಗು! ಉತ್ತರ ಪ್ರದೇಶದ ಈ ಮದುವೆ ಹಿಂದಿನ ರಹಸ್ಯ ಏನು?
    ಮಣಿಪಾಲ KMC ಆಸ್ಪತ್ರೆಯ 4ನೇ ಮಹಡಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಒಳರೋಗಿ ಬಿದ್ದು ಗಂಭೀರ ಗಾಯ…ವೀಡಿಯೋ ವೈರಲ್
    ಉಡುಪಿಯ ಸಾಯಿ ರಾಜ್ ಕೋ ಆಪರೇಟಿವ್ ಸೊಸೈಟಿ ಸಿಇಒ ಆತ್ಮ ಹತ್ಯೆಗೆ ಯಾರು ಕಾರಣ?
    ಶಾರ್ಜಾದಲ್ಲಿ ಉಡುಪಿ ಮೂಲದ ಪ್ರಕಾಶ್ ಕುಂದರ್ ಕೊಲೆ…!ಪತ್ನಿ, 10ನೇ ತರಗತಿ ಪುತ್ರ ನಾಪತ್ತೆ.?
    “ಪತ್ನಿ ಮನೆಗೆಲಸದ ಸೇವಕಿ ಅಲ್ಲ!” — ಮದುವೆ ಎಂದರೆ ಹೆಂಡತಿಯ ಸ್ವಾತಂತ್ರ್ಯ ಕಸಿಯುವ ಪರವಾನಗಿ ಅಲ್ಲ: ಹೈಕೋರ್ಟ್
    PG ಊಟದ ಮೇಲೆ FDA ಕಣ್ಣು; 64 ಕಡೆ ತಪಾಸಣೆ, 23ಕ್ಕೆ ನೋಟಿಸ್!
    ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ